ನಾಸಿಕ್: ಜಿಲ್ಲೆಯ ಸಪ್ತಶೃಂಗಿ ಗಡ್ ಬಳಿ ಸಾರಿಗೆ ಬಸ್ಸೊಂದು 400 ಅಡಿ ಆಳದ ಕಂದಕಕ್ಕೆ ಬಿದ್ದು, ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ. ಸಪ್ತಶೃಂಗಿ ಘಾಟಿಯಿಂದ ಖಮಗಾಂವ್ ಮಾರ್ಗವಾಗಿ ಸಂಚರಿಸುತ್ತಿದ್ದ ಬಸ್ ಇಂದು ಬೆಳಗ್ಗೆ ಗಣಪತಿ ಪಾಯಿಂಟ್‌ನಿಂದ ನೇರವಾಗಿ ಕಣಿವೆಗೆ ಉರುಳಿದೆ.
https://bcsuddi.com/%e0%b2%b6%e0%b2%be%e0%b2%b2%e0%b2%be-%e0%b2%ae%e0%b2%95%e0%b3%8d%e0%b2%95%e0%b2%b3%e0%b2%a8%e0%b3%8d%e0%b2%a8%e0%b3%81-%e0%b2%95%e0%b2%b0%e0%b3%86%e0%b2%a6%e0%b3%8a%e0%b2%af%e0%b3%8d%e0%b2%af%e0%b3%81/
ಬಸ್‌ನಲ್ಲಿ 20 ರಿಂದ 25 ಪ್ರಯಾಣಿಕರಿದ್ದು, ಓರ್ವ ಮಹಿಳೆ ಸಾವನ್ನಪ್ಪಿದ್ದು, 18 ಮಂದಿ ಗಾಯಗೊಂಡಿದ್ದಾರೆ. ಅಪಘಾತಕ್ಕೀಡಾದ ಬಸ್ ಖಮಗಾಂವ್ ಅಗರಕ್ಕೆ ಸೇರಿದ್ದು, ನಿನ್ನೆ ಬೆಳಗ್ಗೆ 8.30ಕ್ಕೆ ಸಪ್ತಶೃಂಗಿಗೆ ತೆರಳಿತ್ತು. ರಾತ್ರಿ ಅಲ್ಲಿಯೇ ತಂಗಿದ್ದು, ಇಂದು ಮುಂಜಾನೆ ಸಪ್ತಶೃಂಗಿ ಗಡ್‌ನಿಂದ ಖಮ್‌ಗಾಂವ್ (ಬುಲ್ಧಾನ) ಗೆ ಪ್ರಯಾಣ ಬೆಳೆಸಿದೆ. ವಾಣಿಯ ಸಪ್ತಶೃಂಗಿ ಕೋಟೆಯಿಂದ ಕೆಳಗಿಳಿಯುತ್ತಿದ್ದಂತೆ ಬಸ್ ಕಣಿವೆಗೆ ಬಿದ್ದಿದೆ.