LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕೈವ್ ಮೇಲೆ ರಷ್ಯಾ ದಾಟಿ 41 ಮಂದಿ ಸಾವು

ಕೈವ್, 9 : ರಷ್ಯಾ ಮತ್ತು ಉಕ್ರೇನ್‌ ನಡುವಿನ ಯುದ್ದ ಸದ್ಯಕ್ಕೆ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಉಕ್ರೇನ್‌ನ ಕೈವ್‌ನ ಮುಖ್ಯ ಮಕ್ಕಳ ಆಸ್ಪತ್ರೆ ಮೇಲೆ ರಷ್ಯಾ ಕ್ಷಿಪಣಿ ದಾಳಿ ನಡೆಸಿದ ಪರಿಣಾಮ ಕನಿಷ್ಠ 41 ಮಂದಿ ಮೃತಪಟ್ಟಿದ್ದು 170ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.
ತಿಂಗಳುಗಳ ಕಾಲ ನಡೆದ ಅತ್ಯಂತ ಭೀಕರ ವಾಯು ದಾಳಿಯಲ್ಲಿ ಕನಿಷ್ಠ 41 ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್ ಹೇಳಿದೆ. ಆಸ್ಪತ್ರೆಯ ಮೇಲೆ ರಷ್ಯಾ ವೈಮಾನಿಕ ದಾಳಿಯ ನಂತರ ಮಕ್ಕಳನ್ನು ಹಿಡಿದುಕೊಂಡು ಪೋಷಕರು ಆಸ್ಪತ್ರೆಯ ಹೊರಗೆ ಓಡುತ್ತಿರುವ ದೃಶ್ಯ ಕಂಡುಬಂದಿದೆ. ಕಿಟಕಿಗಳನ್ನು ಒಡೆದು ಹಾಕಲಾಗಿದ್ದು ಫಲಕಗಳನ್ನು ಕಿತ್ತುಹಾಕಲಾಯಿತು ಮತ್ತು ನೂರಾರು ಕೈವ್ ನಿವಾಸಿಗಳು ಆತಂಕದಲ್ಲಿ
ಬದುಕುವ ವಾತಾವರಣ ನಿರ್ಮಾಣವಾಗಿದೆ.
ನ್ಯಾಟೋ ಶೃಂಗಸಭೆಗಾಗಿ ವಾಷಿಂಗ್ಟನ್‌ಗೆ ತೆರಳುವ ಮೊದಲು ಪೋಲೆಂಡ್‌ನಲ್ಲಿ ಪ್ರತಿಕ್ರಿಯೆ ನೀಡಿದ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝಲೆನ್ನಿ, ಮೂರು ಮಕ್ಕಳು ಸೇರಿದಂತೆ 41 ಮಂದಿ ಸಾವನ್ನಪ್ಪಿದ್ದಾರೆ. 170ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎನ್ನುವುದನ್ನು ಖಚಿತ ಪಡಿಸಿದ್ದಾರೆ ಮಕ್ಕಳ ಆಸ್ಪತ್ರೆ ಮತ್ತು ಕೈವ್‌ನಲ್ಲಿರುವ ಹೆರಿಗೆ ಕೇಂದ್ರ, ಮಕ್ಕಳ ನರ್ಸರಿಗಳು ಮತ್ತು ವ್ಯಾಪಾರ ಕೇಂದ್ರ ಮತ್ತು ಮನೆಗಳು ಸೇರಿದಂತೆ 100 ಕ್ಕೂ ಹೆಚ್ಚು ಕಟ್ಟಡಗಳು ಹಾನಿಗೊಳಗಾಗಿವೆ ಎಂದು ಹೇಳಿದ್ದಾರೆ."ರಷ್ಯಾದ ಭಯೋತ್ಪಾದಕರು ಇದಕ್ಕೆ ಉತ್ತರಿಸಬೇಕು” ಇದೊಂದು ಭಯೋತ್ಪಾದನೆ ಎಂದು ಅವರು ವಾಗ್ದಾಳಿ ನಡೆಸಿದ್ದು ಕೇಂದ್ರೀಯ ನಗರಗಳಾದ ಕ್ರಿವಿ ರಿಹ್ ಮತ್ತು ಡಿಪೊರ ಮತ್ತು ಎರಡು ಪೂರ್ವ ನಗರಗಳಲ್ಲಿಯೂ ಹಾನಿಯಾಗಿದೆ ಎಂದು ಆಂತರಿಕ ಸಚಿವಾಲಯ ತಿಳಿಸಿದೆ. ಪೋಷಕರಾದ ಸ್ವಿಟ್ಲಾನಾ ಕ್ರಾವೆಂಕೊ ಪ್ರತಿಕ್ರಿಯಿಸಿ “ಇದು ಭಯಾನಕ ದಾಳಿ, ಉಸಿರಾಡಲು ಸಾಧ್ಯವಾಗಲಿಲ್ಲ. ನನ್ನ ಮಗುವನ್ನು ರಕ್ಷಣೆ ಮಾಡಿಕೊಂಡು ಬರಲು ಪರದಾಡುವಂತಾಯಿತು. ಎಂದಿದ್ದಾರೆ.ಯುದ್ಧದ ಅತ್ಯಂತ ಕೆಟ್ಟ ವಾಯುದಾಳಿಗಾಗಿ ಸರ್ಕಾರ ಶೋಕಾಚರಣೆ ದಿನ ಘೋಷಿಸಿದೆ, ಇದು ಉಕ್ರೇನ್ ತನ್ನ ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳಿಂದ ತನ್ನ ವಾಯು ರಕ್ಷಣೆಯನ್ನು ತುರ್ತಾಗಿ ನವೀಕರಿಸುವ ಅಗತ್ಯವಿದೆ ಎಂದು ಹೇಳಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪ್ರೀಪೇಡ್ ಮರಣಬಳ್ಳಾರಿ: ವಸತಿ ನಿಲಯಗಳ ನೋಂದಣಿಗೆ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಆದೇಶಕೈಮಗ್ಗ ನೇಕಾರರಿಗೆ ರಾಜ್ಯ ಮಟ್ಟದ ಪ್ರಶಸ್ತಿ: ಅರ್ಜಿ ಆಹ್ವಾನಕೈಮಗ್ಗ ತಂತ್ರಜ್ಞಾನದಲ್ಲಿ ಮೂರು ವರ್ಷಗಳ ಡಿಪ್ಲೋಮಾ ಕೋರ್ಸ್ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಬಳ್ಳಾರಿ: ಮೇ ಮತ್ತು ಜೂನ್ ತಿಂಗಳ ಪಡಿತರ ಹಂಚಿಕೆಬಳ್ಳಾರಿ: ಭೂ ರಹಿತ ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಜಮೀನು ಖರೀದಿ - ಸಾರ್ವಜನಿಕ ಆಕ್ಷೇಪಣೆಗೆ ಆಹ್ವಾನಕನಕಗಿರಿ ಉತ್ಸವದಲ್ಲಿ ಸಾರ್ವಜನಿಕರಿಗಾಗಿ ವೈವಿದ್ಯಮಯ ಕಾರ್ಯಕ್ರಮಗಳು: ಡಾ.ಸುರೇಶ ಬಿ ಇಟ್ನಾಳಅಂಜನಾದ್ರಿ ದೇವಸ್ಥಾನಕ್ಕೆ ಅರ್ಪಿಸಿದ ಚಿನ್ನದ ಆಭರಣದಲ್ಲಿ ತಾಮ್ರ ಪತ್ತೆ2.30 ಕೋಟಿ ಮೌಲ್ಯದ ಕಾಣಿಕೆಯಲ್ಲಿ ಅನುಮಾನ; ಮೌಲ್ಯಮಾಪನ ವೇಳೆ ಬಹಿರಂಗಸುಕ್ಷೇತ್ರ ಹುಲಿಗಿಯಲ್ಲಿ ಹಬ್ಬದ ಸಡಗರ * ಭಕ್ತಗಣದಿಂದ ಉದೋ ಉದೋ ಘೋಷ *ವಿಜ್ರಂಭಣೆಯಿಂದ ಜರುಗಿದ ಲೋಕಮಾತೆ ಕೊಪ್ಪಳ ಜಿಲ್ಲೆಯ ಐತಿಹಾಸಿಕ ಶ್ರೀ ಹುಲಿಗೆಮ್ಮ ದೇವಿ ರಥೋತ್ಸವ*ಅಂಜನಾದ್ರಿಗೆ ಹೈದ್ರಾಬಾದ್ ದಾನಿ ದೇಣಿಗೆ ನೀಡಿದ ಲೋಹಗಳ ಬಿಲ್, ದಾಖಲೆಗಳನ್ನು ಪುನಃ ಪರಿಶೀಲಿಸಲಾಗುವುದು: ಜಿಲ್ಲಾಧಿಕಾರಿಗಳು