ಬೆಳಗಾವಿ ; ಲಿಂಗೈಕ್ಯ ಡಾ. ಶಿವಬಸವ ಮಹಾಸ್ವಾಮಿಗಳು ಬಸವ ಮಾರ್ಗದಲ್ಲಿ ಸಾಗಿ ಶಿವಬಸವ ಮಹಾಮಾರ್ಗವನ್ನು ನಿರ್ಮಿಸಿದ ಮಹಾನ್ ಯೋಗಿಗಳು ಎಂದು ಹಿರಿಯ ಸಾಹಿತಿ ಡಾ.ಬಸವರಾಜ ಜಗಜಂಪಿ ಬಣ್ಣಿಸಿದರು.
ಅವರಿಂದು ನಾಗನೂರು ರುದ್ರಾಕ್ಷಿ ಮಠದ ಲಿಂಗೈಕ್ಯ ಡಾ. ಶಿವಬಸವ ಮಹಾಸ್ವಾಮಿಗಳವರ 136 ನೇ ಜಯಂತಿ ಮಹೋತ್ಸವದ ಎರಡನೇ ದಿನವಾದ ಇಂದು ಹಳೆಯ ವಿದ್ಯಾರ್ಥಿಗಳ ಸಮಾವೇಶ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಬೆಳಗಾವಿಗೆ ಸಾಂಸ್ಕೃತಿಕವಾಗಿ ಮತ್ತು ಭಾಷಿಕವಾಗಿ ಶಿವಬಸವ ಶ್ರೀಗಳ ಕೊಡುಗೆ ಅದ್ವಿತೀಯ, ಮುಗ್ಧ ನಗೆ, ಮಗುವಿನಂಥ ಮುಖ, ಮಿತಭಾಷಿ ಮಾತೃ ಹೃದಯದ ಶ್ರೀಗಳು ಬಡವರ ಬಾಳಿಕೆ ಬೆಳಕಾದ ಮಹಾತ್ಮರು, ಬಡವರಿಗಾಗಿ ಸದ್ದಿಲ್ಲದೆ ದುಡಿದ ಯೋಗಿ ಪದವಿ ಪ್ರಶಸ್ತಿ ಪುರಸ್ಕಾರಗಳಿಂದ ದೂರವಿದ್ದು ನಾಡಿನ ಗಣ್ಯಾತಿ ಗಣ್ಯರನ್ನು, ಜ್ಞಾನಪೀಠಿಗಳನ್ನು ರೂಪಿಸಿದ ಮಹಾನ್ ಸಂತ ಎಂದರು.
1974 ರಲ್ಲಿ ಮೊದಲ ಬಾರಿಗೆ ಶ್ರೀಗಳ ಸಾನಿಧ್ಯದಲ್ಲಿ ಎಸ್.ಡಿ. ಇಂಚಲ ಸ್ಮಾರಕ ಉಪನ್ಯಾಸವನ್ನು ತಾವು ನೀಡಿದ್ದನ್ನು ಜಗಜಂಪಿ ಅವರು ಸ್ಮರಿಸಿಕೊಂಡರು. 1978 ರಲ್ಲಿ "ವಚನಗಳಲ್ಲಿ ಜೀವನ ಮೌಲ್ಯಗಳು"ಎಂಬ ವಿಷಯದ ಕುರಿತು ಶ್ರೀಗಳ ಸಾನಿಧ್ಯದಲ್ಲಿ ಉಪನ್ಯಾಸ ನೀಡುವಾಗ ಬೇಗನೆ ತೆರಳುವುದಾಗಿ ಹೇಳಿದ್ದ ಶ್ರೀಗಳು ಸಂಪೂರ್ಣ 40 ನಿಮಿಷಗಳ ಕಾಲ ಉಪನ್ಯಾಸ ಕೇಳಿ ಕೊನೆಗೆ ಅತ್ಯುತ್ತಮ ಉಪನ್ಯಾಸಕ ನಾಗು ಎಂದು ಆಶೀರ್ವದಿಸಿ ತೆರಳಿದ್ದನ್ನು ಅವರು ನೆನಪಿಸಿಕೊಂಡರು. ಕಾರ್ಯಕ್ರಮದ ದಿವ್ಯ ಸಾನಿಧ್ಯದಲ್ಲಿ ಗದುಗಿನ ತೋಂಟದಾರ್ಯ ಮಠದ ಜಗದ್ಗುರು ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಉಪಸ್ಥಿತರಿದ್ದರು.

ಸಾನಿಧ್ಯವನ್ನು ನಿಡಸೋಶಿ ಸಿದ್ಧ ಸಂಸ್ಥಾನ ಮಠದ ಜಗದ್ಗುರು ಡಾ.ಪಂಚಮ ಶಿವಲಿಂಗೇಶ್ವರ ಮಹಾ ಸ್ವಾಮಿಗಳು ವಹಿಸಿದ್ದರು. ನೇತೃತ್ವವನ್ನು ಹುಲಸೂರಿನ ವಿರಕ್ತಮಠದ ಶ್ರೀ. ಶಿವಾನಂದ ಮಹಾಸ್ವಾಮಿಗಳು ವಹಿಸಿದ್ದರು, ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು, ಶೆಗುಣಶಿ ವಿರಕ್ತಮಠದ ಡಾ. ಮಹಾಂತ ಪ್ರಭು ಮಹಾಸ್ವಾಮಿಗಳು ಸಮ್ಮುಖದಲ್ಲಿ ಉಪಸ್ಥಿತರಿದ್ದರು.
ನಾಗನೂರು ರುದ್ರಾಕ್ಷಿ ಮಠದ ಪ್ರಸಾದ ನಿಲಯಗಳ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಬಸವರಾಜ ರೊಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಶ್ರೀಮಠದಿಂದ ಕೊಡ ಮಾಡುವ "ಪ್ರಸಾದ ಶ್ರೀ"ಪ್ರಶಸ್ತಿಯನ್ನು ಚೊಳಚಗುಡ್ಡದ ಹಿರಿಯವೈದ್ಯ ಡಾ. ಲಿಂಗಪ್ಪ ಮಹಾಗುಂಡಪ್ಪ ಹಾದಿಮನಿ, ಬೆಳಗಾವಿ ವಿಮಾನ ಪ್ರಾಧಿಕಾರದ ಅಧಿಕಾರಿ ಸುಭಾಷ್ ಪಾಟೀಲ್, ಅನಿಗೋಳದ ನಾಗೇಶ್ ಮರಕುಂಬಿ ಅವರುಗಳಿಗೆ ಪ್ರದಾನ ಮಾಡಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಶಿಕ್ಷಣ ಸಂಸ್ಥೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಬೆಳಗಾವಿ ಕಾರಂಜಿ ಮಠದ ಡಾ.ಶಿವಯೋಗಿ ದೇವರು ಸೇರಿದಂತೆ ಹಲವಾರು ಮಠದ ಮಠಾಧೀಶರು ಉಪಸ್ಥಿತರಿದ್ದರು. ಶ್ರೀಮಠದ ಕಾರ್ಯದರ್ಶಿ ಎಸ್ ಪಿ ಹಿರೇಮಠ್ ಉಪಸ್ಥಿತರಿದ್ದರು.
ಚಂದ್ರಗಿರಿ ಮಹಿಳಾ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಎ.ಎಲ್. ಪಾಟೀಲ್ ಸ್ವಾಗತಿಸಿದರು. ಕಾರ್ಯಕ್ರಮವನ್ನು ಎ.ಕೆ. ಪಾಟೀಲ್ ಮತ್ತು ರಾಜಶೇಖರ ಪಾಟೀಲ್ ನಿರ್ವಹಿಸಿದರು.
ಬಸವ ಮಾರ್ಗದಲ್ಲಿ ಸಾಗಿ ಶಿವಬಸವ ಮಹಾಮಾರ್ಗ ನಿರ್ಮಿಸಿದ ಶಿವಬಸವ ಶ್ರೀಗಳು ; ಡಾ.ಬಸವರಾಜ ಜಗಜಂಪಿ
ಬೆಳಗಾವಿ ; ಲಿಂಗೈಕ್ಯ ಡಾ. ಶಿವಬಸವ ಮಹಾಸ್ವಾಮಿಗಳು ಬಸವ ಮಾರ್ಗದಲ್ಲಿ ಸಾಗಿ ಶಿವಬಸವ ಮಹಾಮಾರ್ಗವನ್ನು ನಿರ್ಮಿಸಿದ ಮಹಾನ್ ಯೋಗಿಗಳು ಎಂದು ಹಿರಿಯ ಸಾಹಿತಿ ಡಾ.ಬಸವರಾಜ ಜಗಜಂಪಿ ಬಣ್ಣಿಸಿದರು.
ಅವರಿಂದು ನಾಗನೂರು ರುದ್ರಾಕ್ಷಿ ಮಠದ ಲಿಂಗೈಕ್ಯ ಡಾ. ಶಿವಬಸವ ಮಹಾಸ್ವಾಮಿಗಳವರ 136 ನೇ ಜಯಂತಿ ಮಹೋತ್ಸವದ ಎರಡನೇ ದಿನವಾದ ಇಂದು ಹಳೆಯ ವಿದ್ಯಾರ್ಥಿಗಳ ಸಮಾವೇಶ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಬೆಳಗಾವಿಗೆ ಸಾಂಸ್ಕೃತಿಕವಾಗಿ ಮತ್ತು ಭಾಷಿಕವಾಗಿ ಶಿವಬಸವ ಶ್ರೀಗಳ ಕೊಡುಗೆ ಅದ್ವಿತೀಯ, ಮುಗ್ಧ ನಗೆ, ಮಗುವಿನಂಥ ಮುಖ, ಮಿತಭಾಷಿ ಮಾತೃ ಹೃದಯದ ಶ್ರೀಗಳು ಬಡವರ ಬಾಳಿಕೆ ಬೆಳಕಾದ ಮಹಾತ್ಮರು, ಬಡವರಿಗಾಗಿ ಸದ್ದಿಲ್ಲದೆ ದುಡಿದ ಯೋಗಿ ಪದವಿ ಪ್ರಶಸ್ತಿ ಪುರಸ್ಕಾರಗಳಿಂದ ದೂರವಿದ್ದು ನಾಡಿನ ಗಣ್ಯಾತಿ ಗಣ್ಯರನ್ನು, ಜ್ಞಾನಪೀಠಿಗಳನ್ನು ರೂಪಿಸಿದ ಮಹಾನ್ ಸಂತ ಎಂದರು.
1974 ರಲ್ಲಿ ಮೊದಲ ಬಾರಿಗೆ ಶ್ರೀಗಳ ಸಾನಿಧ್ಯದಲ್ಲಿ ಎಸ್.ಡಿ. ಇಂಚಲ ಸ್ಮಾರಕ ಉಪನ್ಯಾಸವನ್ನು ತಾವು ನೀಡಿದ್ದನ್ನು ಜಗಜಂಪಿ ಅವರು ಸ್ಮರಿಸಿಕೊಂಡರು. 1978 ರಲ್ಲಿ "ವಚನಗಳಲ್ಲಿ ಜೀವನ ಮೌಲ್ಯಗಳು"ಎಂಬ ವಿಷಯದ ಕುರಿತು ಶ್ರೀಗಳ ಸಾನಿಧ್ಯದಲ್ಲಿ ಉಪನ್ಯಾಸ ನೀಡುವಾಗ ಬೇಗನೆ ತೆರಳುವುದಾಗಿ ಹೇಳಿದ್ದ ಶ್ರೀಗಳು ಸಂಪೂರ್ಣ 40 ನಿಮಿಷಗಳ ಕಾಲ ಉಪನ್ಯಾಸ ಕೇಳಿ ಕೊನೆಗೆ ಅತ್ಯುತ್ತಮ ಉಪನ್ಯಾಸಕ ನಾಗು ಎಂದು ಆಶೀರ್ವದಿಸಿ ತೆರಳಿದ್ದನ್ನು ಅವರು ನೆನಪಿಸಿಕೊಂಡರು.
ಸಮ್ಮುಖದಲ್ಲಿ ಉಪಸ್ಥಿತರಿದ್ದ ಶೇಗುಣಸಿ ವಿರಕ್ತಮಠದ ಡಾ. ಮಹಾಂತ ಪ್ರಭು ಮಹಾಸ್ವಾಮಿಗಳು ಆಶೀರ್ವಚನ ನೀಡಿ ಸಮಸ್ತ ಭಾರತವನ್ನು ಮತ್ತು ಒಳ್ಳೆಯ ಭಕ್ತರನ್ನು ಕಾಣಬೇಕಾದರೆ ನಾಗನೂರು ರುದ್ರಾಕ್ಷಿ ಮಠಕ್ಕೆ ಬರಬೇಕು, ಭಾರತದ ಭಾಗ್ಯವಿದಾತನಾಗಿ ಬರಬೇಕೆಂದು ಬಸವಣ್ಣನಿಗಾಗಿ ಅಲ್ಲಮಪ್ರಭುಗಳು ಕಾಯುತ್ತಿದ್ದರು ಅದರಂತೆ ಬೆಳಗಾವಿಯ ಭಾಗ್ಯವಿಧಾತರಾಗಿ ಶಿವಬಸವ ಶ್ರೀಗಳು ಬಂದರು. ಒಟ್ಟು ವಚನಗಳ ಸಂಖ್ಯೆ 165 ಕೋಟಿ ಗೂ ಅಧಿಕ ಎನ್ನಲಾಗುತ್ತದೆ ಅದರಲ್ಲಿ ನಮಗೆ ಸಿಕ್ಕಿದ್ದೇ 23 ಸಾವಿರ ವಚನಗಳು ಅಷ್ಟಕ್ಕೆ ನಾವು ಲಂಡನ್ ಸೇರಿ ಹಲವು ದೇಶಗಳನ್ನು ತಲುಪಿದ್ದೇವೆ ಇನ್ನು ಅಷ್ಟೆಲ್ಲ ವಚನಗಳು ಸಿಕ್ಕಿದ್ದರೆ ನಾವು ಇಡೀ ಜಗತ್ತನ್ನೇ ತಲುಪುತ್ತಿದ್ದೆವು ಬಸವಣ್ಣನವರು ಹೇಳಿದ ಅತಿ ದೊಡ್ಡ ಸಿದ್ದಾಂತ ಶಿವಯೋಗ ಸಿದ್ಧಾಂತ ಅದನ್ನು ಸಾಧಿಸಿ ಶಿವಬಸವ ಶ್ರೀಗಳು ಸ್ವತಹ ಲಿಂಗವಾದರು ಅನ್ನ ಮತ್ತು ಅಕ್ಷರ ದೊಂದಿಗೆ ಸಂಸ್ಕಾರವನ್ನು ನೀಡಿದ ಶ್ರೀಗಳು ಅಪಾರ ಪ್ರಭಾವಳಿ ಹೊಂದಿದ್ದರು, ಇಷ್ಟ ಲಿಂಗದ ಆರಾಧನೆಯೊಂದಿಗೆ ಮರಣವೇ ಮಹಾನವಮಿ ಆಗಬೇಕು ಎಂಬಂತೆ ಬದುಕಿದವರು ಈ ನಾಡಿಗೆ ಬೆಳಕಾದರು ಎಂದವರು ನುಡಿದರು. ಕಾರ್ಯಕ್ರಮದ ದಿವ್ಯ ಸಾನಿಧ್ಯದಲ್ಲಿ ಗದುಗಿನ ತೋಂಟದಾರ್ಯ ಮಠದ ಜಗದ್ಗುರು ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಉಪಸ್ಥಿತರಿದ್ದರು. ಸಾನಿಧ್ಯವನ್ನು ನಿಡಸೋಶಿ ಸಿದ್ಧ ಸಂಸ್ಥಾನ ಮಠದ ಜಗದ್ಗುರು ಡಾ.ಪಂಚಮ ಶಿವಲಿಂಗೇಶ್ವರ ಮಹಾ ಸ್ವಾಮಿಗಳು ಆಶೀರ್ವಚನ ನೀಡಿ ಲಿಂಗೈಕ್ಯ ಶಿವಬಸವ ಶ್ರೀಗಳ ಅಭೂತಪೂರ್ವ ವಾದ ಕಾರ್ಯವನ್ನು ಕೊಂಡಾಡಿದರು ಶಿವಬಸವ ಶ್ರೀಗಳು ಮಾಡಿದ ಪುಣ್ಯದ ಫಲದಿಂದ ಇಂದು ಈ ನಾಡು ಬೆಳಗುತಿದೆ ಎಂದರು. ನೇತೃತ್ವವನ್ನು ವಹಿಸಿದ್ದ ಹುಲಸೂರಿನ ವಿರಕ್ತಮಠದ ಶ್ರೀ. ಶಿವಾನಂದ ಮಹಾಸ್ವಾಮಿಗಳು ಆಶೀರ್ವಚನ ನೀಡಿ ಲಿಂಗಾಯತರು ಸನಾತನ ಧರ್ಮದ ವಿರೋಧಿಗಳಲ್ಲ ಲಿಂಗಾಯತರು ಹಿಂದೂ ಧರ್ಮದ ವಿರೋಧಿಗಳು ಅಲ್ಲ ನಾವು ಲಿಂಗಾಯತರು ನಾವು ಸ್ವತಂತ್ರ ಧರ್ಮವನ್ನು ಕೇಳುತ್ತಿದ್ದೇವೆ ಒಂದಿಲ್ಲ ಒಂದು ದಿವಸ ನಮಗೆ ಸಿಕ್ಕೇ ಸಿಗುತ್ತದೆ ಎಂಬ ನಂಬಿಕೆ ಇದೆ ನಾವು ಯಾರ ವಿರೋಧಿಗಳು ಅಲ್ಲ ಎಂದರು. ನಾಗನೂರು ರುದ್ರಾಕ್ಷಿ ಮಠದ ಪೀಠಾಧಿಕಾರಿ ಡಾ. ಅಲ್ಲಮಪ್ರಭು ಮಹಾ ಸ್ವಾಮಿಗಳು ಸಮ್ಮುಖದಲ್ಲಿ ಉಪಸ್ಥಿತರಿದ್ದರು. ಬೆಳಗಾವಿಯ ಹಿರಿಯ ಸಾಹಿತಿ ಶ್ರೀ.ಬಸವರಾಜ ಅವರಿಗೆ ಅಮೃತ ಗೌರವ ಅಭಿನಂದನೆ ಸಲ್ಲಿಸಲಾಯಿತು.
ಶ್ರೀ ಮಠವು ಬೆಳೆದು ಬಂದ ಬಗೆಯನ್ನು ಮತ್ತು ಶ್ರೀಮಠದ ಸಕಲ ಸಮಾಜಮುಖಿ ಕಾರ್ಯಗಳನ್ನು ಬಡವರಿಗಾಗಿ ಬಡ ವಿದ್ಯಾರ್ಥಿಗಳಿಗಾಗಿ ಶ್ರೀಮಠದ ಸೇವೆಯನ್ನು ನಾಗನೂರು ರುದ್ರಾಕ್ಷಿ ಮಠದ ಪ್ರಸಾದ ನಿಲಯಗಳ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಬಸವರಾಜ ರೊಟ್ಟಿ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ವಿವರಿಸಿದರು.
ಶ್ರೀಮಠದಿಂದ ಕೊಡ ಮಾಡುವ "ಪ್ರಸಾದ ಶ್ರೀ"ಪ್ರಶಸ್ತಿಯನ್ನು ಚೊಳಚಗುಡ್ಡದ ಹಿರಿಯವೈದ್ಯ ಡಾ. ಲಿಂಗಪ್ಪ ಮಹಾಗುಂಡಪ್ಪ ಹಾದಿಮನಿ, ಬೆಳಗಾವಿ ವಿಮಾನ ಪ್ರಾಧಿಕಾರದ ಅಧಿಕಾರಿ ಸುಭಾಷ್ ಪಾಟೀಲ್, ಅನಿಗೋಳದ ನಾಗೇಶ್ ಮರಕುಂಬಿ ಅವರುಗಳಿಗೆ ಪ್ರದಾನ ಮಾಡಿ ಗೌರವಿಸಲಾಯಿತು. ಚಂದ್ರಗಿರಿ ಮಹಿಳಾ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಎ.ಎಲ್. ಪಾಟೀಲ್ ಸ್ವಾಗತಿಸಿದರು. ಕಾರ್ಯಕ್ರಮವನ್ನು ಎ.ಕೆ. ಪಾಟೀಲ್ ಮತ್ತು ರಾಜಶೇಖರ ಪಾಟೀಲ್ ನಿರ್ವಹಿಸಿದರು.