LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ವಕ್ಸ್ ಮಂಡಳಿಯಲ್ಲಿ ಅಕ್ರಮದ ವಾಸನೆ, ಭ್ರಷ್ಟಾಚಾರದ ನಡೆದಿರುವ ತನಿಖೆಗೆ ಮುಸ್ಲಿಮ ಸಂಘಟನೆಗಳಿಂದ ಆಗ್ರಹ

ಬೆಂಗಳೂರು : ಕರ್ನಾಟಕ ರಾಜ್ಯ ವಕ್ಸ್ ಮಂಡಳಿಯಲ್ಲಿ ಇತ್ತೀಚೆಗೆ ನಡೆದ ಮುತುವಲ್ಲಿ ಚುನಾವಣೆಯಲ್ಲಿ ನಡೆದಿರುವ ಅಕ್ರಮ ಹಾಗೂ ಅಧಿಕಾರ ದುರ್ಬಳಕೆ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಅನುದಾನ ದುರ್ಬಳಕೆ ಮತ್ತು ಅಗಸನಕಲ್ಲು ಬಡಾವಣೆಯ ಖಬ್ರಾಸ್ಥಾನ್‌ನಿನ ಜಮೀನನ್ನು ಕಬಳಿಸಿಕೊಂಡು ತಮ್ಮ ಸಂಸ್ಥೆಯ ವತಿಯಿಂದ (ರಮೀಜಾ ಮೈನಾರಿಟಿ ವೆಲ್ಟ್ವೇರ್ ಟ್ರಸ್ಟ್) ಯಿಂದ ಬೃಹತ್ ಶಾಲಾ ಕಟ್ಟಡವನ್ನು ನಿರ್ಮಿಸಿಕೊಂಡಿದ್ದು, ಈ ಅಕ್ರಮಗಳಲ್ಲಿ ತಾವು ನೇರವಾಗಿ ಭಾಗಿಯಾಗಿದ್ದು, ಅನ್ವರ್‌ ಪಾಷ ರವರ ವಿರುದ್ಧ ಉನ್ನತ ಮಟ್ಟದ ತನಿಖಾ ಸಮಿತಿಯನ್ನು ರಚಿಸಿ ತನಿಖೆಯನ್ನು ನಡೆಸುವುದಲ್ಲೆ ಇವರ ಸದಸ್ಯತ್ವವನ್ನು ರದ್ದುಪಡಿಸಲು ಆದೇಶಿಸುವಂತೆ ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಮುಸ್ಲಿಂ ಯುವ ಸಂಘದ ಅಧ್ಯಕ್ಷ ಅಜ್ಮಲ್ ಅಹಮದ್ ಅವರು ತಿಳಿಸಿದರು.

ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಇತ್ತೀಚೆಗೆ ನಡೆದಂತಹ ವಕ್ಸ್ ಮಂಡಳಿಯ (ಮುತವಲ್ಲಿ) ಸದಸ್ಯರ ಚುನಾವಣೆಯಲ್ಲಿ ಭಾರೀ ಅಕ್ರಮವೇ ನಡೆದಿದ್ದು, ಕರ್ನಾಟಕ ರಾಜ್ಯದಲ್ಲಿ ಸುಮಾರು 32 ಸಾವಿರ ವಕ್ಸ್‌ಗೆ ಸೇರಿದ ನೋಂದಾಯಿತಿ ಸಂಸ್ಥೆಗಳಿದ್ದು, ಈ ನೋಂದಾಯಿತ ಸಂಸ್ಥೆಗಳ ಮುತುವಲ್ಲಿಗಳು ಮತದಾನ ಮಾಡುವ ಮೂಲಕ ಇಬ್ಬರು ಸದಸ್ಯರನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿದ್ದು, ಈ ಸದಸ್ಯರನ್ನು ಆಯ್ಕೆ ಮಾಡಲು ಮತದಾನದ ಹಕ್ಕು ವುಳ್ಳವರು 1024 ಸಂಸ್ಥೆಗಳ ಮುತುವಲ್ಲಿಗಳು ಹಕ್ಕು ವುಳ್ಳವರಾಗಿರುತ್ತಾರೆ. ಇನ್ನು ಬಾಕಿ ಉಳಿದ 31 ಸಾವಿರ ಸಂಸ್ಥೆಗಳ ಸದಸ್ಯರಿಗೆ ಅವಕಾಶ ಇಲ್ಲದೇ ಇರುವುದು ಸಂಶಯಸ್ಪದವಾಗಿದೆ.

ಮತದಾನ ಹಕ್ಕು ಚಲಾಯಿಸಲು ಆ ಸಂಸ್ಥೆಯ ವಾರ್ಷಿಕ ಆದಾಯವು 2 ಲಕ್ಷ ಮೇಲಟ್ಟಿರಬೇಕಾಗುತ್ತದೆ. ಆದರೆ ಯಾವುದೇ ಆದಾಯವಿಲ್ಲದ ಸಂಸ್ಥೆಗಳು ಹಾಗೂ ವಾರ್ಷಿಕ ಆದಾಯ ವರದಿಯನ್ನು ಸಂಬಂಧಪಟ್ಟ ಇಲಾಖೆಯ ಆಡಿಟರ್‌ಗಳಿಂದ ಸುಮಾರು 7-8 ವರ್ಷಗಳಿಂದಲೂ ಸಹ ಮಾಡಿಸದೇ ಇರುವ ಸಂಸ್ಥೆಗಳ ಅಧ್ಯಕ್ಷರುಗಳು (ಮುತುವಲ್ಲಿ)ಗಳು ಮತದಾನ ಮಾಡಲು ಅರ್ಹರು ತಂದು ದೃಢೀಕರಿಸಿರುತ್ತಾರೆ. ಇದು ವಕ್ಸ್ ಕಾಯ್ದೆಯ ವಿರುದ್ಧವಾಗಿ ಕಾನೂನು ಬಾಹಿರವಾಗಿರುತ್ತದೆ. ತುವಲ್ಲಿಗಳ ಚುನಾವಣೆಯಲ್ಲಿ ಸ್ಪರ್ಧಿಸಿ ಜಯಗಳಿಸುವ ಮುಂದಾಲೋಚನೆಯನ್ನು ಇಟ್ಟುಕೊಂಡು ನ್ವರ್ ಬಾಷ ಷಡ್ಯಾಂತ್ರ ರಚಿಸಿ ಅರ್ಹ ಮತದಾರರನ್ನು ಕೈಬಿಟ್ಟಿರುತ್ತಾರೆ ಎಂಬು ಆರೋಪವು ಆ ಬಾಷ ರವರ ಮೇಲಿದ್ದು, ಈಗಾಗಲೇ ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಆರು -ಜನಿಕ ಹಿತಾಸಕ್ತಿ ಅರ್ಜಿಗಳು ದಾಖಲಾಗಿರುತ್ತವೆ.

ಕರ್ನಾಟಕ ರಾಜ್ಯ ವಕ್ಫ್ ಮಂಡಳಿಗೆ  ಸೇರಿದ ಸಂಸ್ಥೆಗಳಿಂದ ವಾರ್ಷಿಕ ಶೇ.7ರಷ್ಟು ಸೇವಾ ಶುಲ್ಕವನ್ನು  ಪಡೆದು ವಕ್ಫ್ ವತಿಯಿಂದ ಸೌಲಭ್ಯಗಳಿಂದ ವಂಚಿತರಾಗಿರುವ ಸುಮಾರು ಸಂಸ್ಥೆಗಳಿದ್ದು, ಗ್ರಾಮೀಣ ಪ್ರದೇಶದಲ್ಲಿ ಇರುವಂತಹ ವಕ್ಫ್ ಮಂಡಳಿಗೆ ಸೇರಿದ ಮಸೀದಿ, ಖಬ್ರುಸ್ವಾನ್, ಮದರಸ ಗಳ ರಕ್ಷಣೆಯ ಬಗ್ಗೆ ಕಿಂಚಿತ್ತು ವಕ್ಸ್ ಅಧಿಕಾರಿಗಳಿಗೆ ಜವಾಬ್ದಾರಿ ಇರುವುದಿಲ್ಲ. ಇದರ ಬಗ್ಗೆ ಹಲವಾರು ಬಾರಿ ಅರ್ಜಿಗಳನ್ನು ಕೆ.ಅನ್ವರ್ ಬಾಷ ರವರಿಗೆ ನೀಡಿದ್ದರೂ ಸಹ ಇದರ ಬಗ್ಗೆ ಗಮನವನ್ನು ಹರಿಸದೇ ನಿರ್ಲಕ್ಷತನವನ್ನು ತೋರಿದ್ದಲ್ಲದೆ. ತಮ್ಮ ಹಿಂಬಾಲಕರ ಬೆಂಬಲಕ್ಕಾಗಿ ಆನೇಕ ಅಕ್ರಮಗಳನ್ನು ವೆಸಗಿರುತ್ತಾರೆ.

ಚಿತ್ರದುರ್ಗ ಜಿಲ್ಲೆಯಲ್ಲಿರುವ ವಕ್ಸ್ ಸಂಸ್ಥೆಗೆ ಸೇರಿರುವಂತಹ ಸುಮಾರು ಸಂಸ್ಥೆಗಳ ಸುಮಾರು 8-10 ವರ್ಷಗಳಿಂದಲೂ ಆದಾಯ ವರದಿ ಆಡಿಟ್‌ನ್ನು ಮಾಡಿಸದೇ ಇಂತಹ ಸಂಸ್ಥೆಗಳ ಸಮಿತಿ ರಚನೆ ಮಾಡಿ ಅನುಮೋದನೆಯನ್ನು ಅಕ್ರಮವಾಗಿ ನೀಡಿರುತ್ತಾರೆ. ಇದರ ಬಗ್ಗೆ ಸುಮಾರು ಬಾರಿ ದೂರು ಅರ್ಜಿಗಳನ್ನು ನೀಡಿದ್ದರೂ ಸಹ ಅಧಿಕಾರಿಗಳು ಕರ್ತವ್ಯ ಲೋಪವನ್ನು ವ್ಯಸಗಿರುತ್ತಾರೆ. ಇಂತಹ ಸಂಸ್ಥೆಗಳ ಆಡಳಿತ ಮಂಡಳಿ ಅನುಮೋದನೆಯನ್ನು ಕರ್ನಾಟಕ ರಾಜ್ಯ ವಕ್ಸ್ ಮಂಡಳಿಯ ಅಧಿಕಾರಿಗಳು ನೀಡಿದ್ದು, ಈ ಅಧಿಕಾರಿಗಳು ಕಾನೂನು ಬಾಹಿರವಾಗಿ వర్షా కాCయన్ను అల్లం ನೀಡಿರುವಂತಹ ಅನುಮೋದನೆಯನ್ನು ರದ್ದುಪಡಿಸಿ ತಪ್ಪಿತ್ತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ರೀತಿ ಶಿಸ್ತಿನ ಕ್ರಮ ಜರುಗಿಸಲು ಈ ಮೂಲಕ ಮನವಿ ಮಾಡಿಕೊಳ್ಳುತ್ತೇವೆ.

ಚಿತ್ರದುರ್ಗ ನಗರದ ಹೊಳಲ್ಕೆರೆ ರಸ್ತೆಯಲ್ಲಿರುವ ಮುಸ್ಲಿಂ ಹಾಸ್ಟೆಲ್‌ ಚುನಾವಣೆಯನ್ನು ನಡೆಸುತ್ತೇವೆಂದು ಸುಮಾರು 2040 ಸದಸ್ಯರಿಂದ 2 ಲಕ್ಷದ 4 ಸಾವಿರ ರೂ.ಗಳನ್ನು ಪಡೆದು ಸುಮಾರು 10 ವರ್ಷಗಳಿಂದಲೂ ಸಹ ಚುನಾವಣೆಯನ್ನು ನಡೆಸಿರುವುದಿಲ್ಲ ಹಾಗೂ ಈ ಸಂಸ್ಥೆಯ ವಾರ್ಷಿಕ ಆದಾಯ (ಆಡಿಟ್) ವರದಿಯನ್ನು ಸಹ ಮಾಡಿಸಿರುವುದಿಲ್ಲ. ಇದರ ಬಗ್ಗೆ ಸುಮಾರು ಬಾರಿ ದೂರು ಅರ್ಜಿಗಳನ್ನು ನೀಡಿದ್ದರೂ ಸಹ ಯಾವುದೇ ರೀತಿಯಾದ ಕ್ರಮ ಕೈಗೊಳ್ಳದೇ ಈ ಸಂಸ್ಥೆಯ ವತಿಯಿಂದ ವಾಣಿಜ್ಯ ಸಂಕೀರ್ಣಕ್ಕಾಗಿ ಸುಮಾರು 40 ಲಕ್ಷ ಗಳನ್ನು 20 ವರ್ಷಗಳ ಹಿಂದೆಯೇ ಪಡೆದು ಹಾಗು ಬಾಡಿಗೆದಾರರಿಂದ ಒಂದು ಕೋಟಿ ರೂ. ಅಡ್ವಾನ್ಸ್ ಹಣವನ್ನು ಸಹ ಪಡೆದು ಬಾಡಿಗೆದಾರರಿಗೆ ದೊರಕಬೇಕಾದಂತಹ ಸೌಲಭ್ಯಗಳನ್ನು ಒದಗಿಸಿರುವುದಿಲ್ಲ. ಹಾಗೂ ವಾಣಿಜ್ಯ ಸಂಕೀರ್ಣಗಳನ್ನು ಅಪೂರ್ಣಗೊಳಿಸಿರುತ್ತಾರೆ. ಆದರೆ ಈ ಸಂಸ್ಥೆಗೆ ತಮಗೆ ಬೇಕಾದಂತಹ ತಮ್ಮ ಹಿಂಬಾಲಕರನ್ನು ಅಧ್ಯಕ್ಷರನ್ನಾಗಿ ಸದಸ್ಯರನ್ನಾಗಿ ಮಾಡಿಕೊಂಡು ಅಕ್ರಮವನ್ನು ವ್ಯಸಗಿರುತ್ತಾರೆ.

ತಾವು 2004-15 ರಲ್ಲಿ ಜಿಲ್ಲಾ ವಕ್ಸ್ ಮಂಡಳಿಯ ಅಧ್ಯಕ್ಷರಾದಂತಹ ಸಮಯದಲ್ಲಿ ಕರ್ನಾಟಕ ರಾಜ್ಯ ವಕ್ಸ್ ಉಮೇನ್ ಪೌಂಡೇಷನ್ ವತಿಯಿಂದ ಮುಸ್ಲಿಂ ಸಮಾಜದ ಬಡ ಹೆಣ್ಣು ಮಕ್ಕಳಿಗೆ ನಾನಾ ತರಬೇತಿಗಳನ್ನು ಒದಗಿಸುವ ಸಲುವಾಗಿ ಸಹಾಯಧವನ್ನು ಎನ್.ಜಿ.ಓ. ಸಂಸ್ಥೆಗಳ ಮುಖಾಂತರ ಸುಮಾರು ಒಂದು ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದು, ಕೆ.ಅನ್ವರ್ ಬಾಷ ರವರು ತಮ್ಮ ವಂಶಸ್ಥರು, ಹಾಗೂ ತಮ್ಮ ಹಿಂಬಾಲಕರಿಗೆ ಎನ್.ಜಿ.ಓ.ಗಳ ಮುಖಾಂತರ ಹಣವನ್ನು ಬಿಡುಗಡೆ ಮಾಡಿಸಿ ತಮ್ಮ ಸ್ವಂತಕ್ಕಾಗಿ ಈ ಹಣವನ್ನು ದುರ್ಬಳಕ್ಕೆ ಮಾಡಿಕೊಂಡು ಯಾವುದೇ ರೀತಿಯಾದಂತಹ ರಬೇತಿ ಕೇಂದ್ರಗಳನ್ನು ತೆರೆದಿರುವುದಿಲ್ಲ.

ಕೆ.ಅನ್ವರ್ ಬಾಷ ರವರು ಚಿತ್ರದುರ್ಗ ನಗರದ ಅಗಸನಕಲ್ಲು ಬಡಾವಣೆಯಲ್ಲಿರುವ ಮುಸ್ಲಿಂ ಸಮಾಜದ ಖಟಸ್ವಾನ್‌ನ ಜಮೀನನ್ನು ತಮ್ಮ ಸ್ವಂತಕ್ಕಾಗಿ ಅಂದರೆ (ರೇಮಿಜಾ ಮೈನಾರಿಟಿ ವೆಕ್ಟರ್ ಟ್ರಸ್ಟ್ ವತಿಯಿಂದ ನಿರ್ಮಿಸಿರುವ ಬೃಹತ್ ಶಾಲಾ ಕಟ್ಟಡಕ್ಕಾಗಿ ಕಬಳಿಕೆಯನ್ನು ಮಾಡಿಕೊಂಡಿದ್ದು, ಈಗಾಗಲೇ ಗೌರವಾನ್ವಿತ ಲೋಕಾಯುಕ್ತದಲ್ಲಿ ಈ ದೂರು ದಾಖಲಾಗಿದ್ದು, ಮಾನ್ಯ ಜಿಲ್ಲಾಡಳಿಕ್ಕೆ ಹಲವು ಬಾರಿ ಮನವಿಯನ್ನು ಸಲ್ಲಿಸಿದ್ದರೂ ಇನ್ನುವರೆವಿಗೂ ಸಹ ಯಾವುದೇ ರೀತಿಯಾದಂತಹ ಕ್ರಮವನ್ನು ಕೈಗೊಂಡಿರುವುದಿಲ್ಲ.

ಗ್ರಾಮೀಣ ಪ್ರದೇಶಗಳಲ್ಲಿ ಮದರಸ ಮಸೀದಿ ಮತ್ತು ಖಬ್ರ ಸ್ಟಾನ್‌ನ ಆಸ್ತಿ ಸಂರಕ್ಷಣೆ ಯೋಜನೆಯಡಿಯಲ್ಲಿ ಅನುದಾವನ್ನು ಬಿಡುಗಡೆಗೊಳಿಸಲು ಸ್ಥಳೀಯ ಶಾಸಕರು ಜಿಲ್ಲಾ ಉಸ್ತುವಾರಿ ಲೋಕಸಭಾ ಸದಸ್ಯರು ನೀಡಿದಂತಹ ಪ್ರಸ್ತಾವನೆಯಗಳನ್ನು ತಿರಸ್ಕರಿಸಿ ತಮಗೆ ಎಲ್ಲಿ ಅನುಕೂಲವಾಗುತ್ತದೆಯೋ ಅಂತಹ ಸ್ಥಳಗಳನ್ನು ಗುರುತಿಸಿ ಅನುದಾನವನ್ನು ಬಿಡುಗಡೆ ಮಾಡುವಲ್ಲಿ ಮಾನ್ಯ ಕೆ.ಅನ್ವರ್ ಬಾಷ ರವರು ಸಫಲರಾಗರುತ್ತಾರೆ. ಸಚಿವರು.

ಕರ್ನಾಟಕ ರಾಜ್ಯ ಸಲ್ಪಸಂಖ್ಯಾತರ ಇಲಾಖೆಯ ವತಿಯಿಂದ ಅಲ್ಪಸಂಖ್ಯಾತರ ಕಾಲೋನಿಯ ಅಭಿವೃದ್ಧಿಗಾಗಿ ಬಿಡುಗಡೆಯಾಗಿರುವ ಅನುದಾನವನ್ನು ತಮ್ಮ ಸ್ವಂತ ಶಾಲಾ ಕಾಲೇಜು, ಹಾಗೂ ಮನೆಗೆ ಸಂಪರ್ಕ ಕಲ್ಪಿಕೊಡುವ ರಸ್ತೆಗಳನ್ನು ಅಭಿವೃದ್ಧಿ ಪಡಿಸಿಕೊಂಡಿದ್ದು, ಈ ಬಡಾವಣೆಯು ಹೊಸ ಬಡಾವಣೆಯಾಗಿದ್ದು, ಖಾಸಗಿ ವ್ಯಕ್ತಿಗಳಿಗೆ ಸೇರಿದ ಹೊಸ ಬಡಾವಣೆಯ ಅಭಿವೃದ್ಧಿಗಾಗಿ ಈ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿದ್ದಲ್ಲದೆ ಕೆ.ಅನ್ವರ್ ಬಾಷ ಹಾಗೂ ವಕ್ಸ್ ಸಚಿವರ ಆಪ್ತರಿಗೆ ಸೇರಿದ ಎನ್.ಜಿ.ಓ. ಸಂಸ್ಥೆಗೆ ನೂರಾರು ಕೋಟಿ ರೂ.ಗಳ ಹಣವನ್ನು ಬಿಡುಗಡೆ ಮಾಡಿದ್ದು, ಈ ಅನುದಾನವು ಸಂಪೂರ್ಣ ದುರ್ಬಳಕೆ ಆಗಿದ್ದು, ಅಧಿಕಾರಿಗಳು ಇದರ ಬಗ್ಗೆ ಯಾವುದೇ ರೀತಿಯಲ್ಲಿಯೂ ಸಹ ಗಮನ ಹರಿಸದೆ ಹಾಗೂ ಕಾನೂನಿನ ಚೌಕಟ್ಟಿನಡಿಯಲ್ಲಿ ಮಾರ್ಗ ಸೂಚಿಯನ್ನು ಪಾಲಿಸದೆ ಅಕ್ರಮವನ್ನು ವ್ಯಸಗಿದ್ದು, ಈ ಅಕ್ರಮಕ್ಕೆ ಸಂಬಂಧಪಟ್ಟಂತೆ ಉನ್ನತ ಮಟ್ಟದ ತನಿಖಾ ಸಮಿತಿ ರಚಿಸಿ ತನಿಖೆಯನ್ನು ನಡೆಸಬೇಕೆಂದು ಈ ಮೂಲಕ ಸರ್ಕಾರಕ್ಕೆ ಒತ್ತಾಯಿಸಿ ಮನವಿ ಸಲ್ಲಿಸಲಾಗುತ್ತಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಚುನಾವಣಾನಿರತ ಸಿಬ್ಬಂದಿಗಳು, ರಾಜಕೀಯ ಪಕ್ಷಗಳ ಸಮರ್ಪಕ ಸಮನ್ವಯತೆಯಿಂದ ಪಾರದರ್ಶಕ ಚುನಾವಣೆ ಸಾಧ್ಯ: ಪೊಮ್ಮಲ ಸುನೀಲ್ ಕುಮಾರ್ಬಾಗಲೂರು ಹಾರ್ಡ್‌ವೇರ್ ಪಾರ್ಕ್‌ನಲ್ಲಿ ಜೆಟ್ವರ್ಕ್ ಉತ್ಪಾದನಾ ಸ್ಥಾವರಕ್ಕೆ ಚಾಲನೆ260 ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಸ್ವಚ್ಛತೆ ಕಾರ್ಯದಲ್ಲಿ ಭಾಗಿಆನ್ ಲೈನ್ ಮೂಲಕ ಎಂಎಸ್ಐಎಲ್ ಚಿಟ್ ವ್ಯವಹಾರಕ್ಕೆ ಸಿಎಂ ಚಾಲನೆಬೆಂಗಳೂರು-ಮುಂಬೈ ಹೈಸ್ಪೀಡ್ ರೈಲು, ಬೆಂಗಳೂರು- ವಿಜಯಪುರ ವಂದೇ ಭಾರತ್ ರೈಲು ಮತ್ತು ದಿನವಹಿ ವಿಶೇಷ ರೈಲಿಗೆ ಕೋರಿಕೆಉಡಾನ್' ಯೋಜನೆ ಮೂಲಕ ಭಾರತದ ಭವಿಷ್ಯದ ವೈದ್ಯಕೀಯ ಕಾರ್ಯಪಡೆಯನ್ನು ನಿರ್ಮಿಸುವ ಬದ್ಧತೆಯನ್ನು ಸಾರಿದ ನಾರಾಯಣ ಹೆಲ್ತ್ಮೆಟ್ರೋ ಟಿಕೆಟ್ ದರ: ಕೇಂದ್ರದತ್ತ ಬೊಟ್ಟು ಮಾಡಿದ ರಾಜ್ಯ ಸರ್ಕಾರಕ್ಕೆ ದಾಖಲೆ ಸಮೇತ ಟಾಂಗ್ ಕೊಟ್ಟ ನಿಖಿಲ್ಬಿಜೆಪಿ ಜಾಹೀರಾತಿನ ವಿರುದ್ಧ ಎಎಪಿ ದೂರುಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣ, 20 ವರ್ಷ ಕಳೆದರೂ ರೈತರಿಗೆ ಸಿಗತ ಪರಿಹಾರಕಾಂಗ್ರೆಸ್ ಪಕ್ಷ ಪಾರ್ಕಿಂಗ್ ವಿಚಾರದಲ್ಲಿ ಅಂದಾ ದರ್ಬಾರ್ ಮಾಡಲು ಹೊರಟಿದೆ