LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

 

ಬೀದರ್ ಜಿಲ್ಲೆ ಬಸವ ಕಲ್ಯಾಣದ ಬಸವ ಮಹಾ ಮನೆ ಟ್ರಸ್ಟ್ ನ ಅಧ್ಯಕ್ಷರಾದ ಪೂಜ್ಯ ಡಾ.ಸಿದ್ದರಾಮ ಶರಣರು ಚೆಲ್ಲಾಳ ರವರು ಯೋಗಜೀವನ ಮಾಡುತ್ತಾ 12ನೇ ಶತಮಾನದ ಶಿವಶರಣರ ತತ್ವ ಸಿದ್ಧಾಂತಗಳನ್ನು ಅಧ್ಯಯನ ಮತ್ತು ಅನುಷ್ಠಾನ ಮಾಡುತ್ತಾ ಶರಣರ ಇತಿಹಾಸವನ್ನು ಸಂಶೋಧನೆ ಮಾಡುತ್ತಾ ಬಂದಿದ್ದಾರೆ. ವಚನಗಳನ್ನು ನಿರ್ವಚನ ಮಾಡುವ ಮಹಾನ್ ತತ್ವಜ್ಞಾನಿಗಳಾಗಿದ್ದಾರೆ. ಷಟಸ್ಥಲ ಮಾರ್ಗದ ವಚನಗಳನ್ನು ಮತ್ತು ಅಲ್ಲಮಪ್ರಭುಗಳ ಬೆಳಗಿನ ವಚನಗಳನ್ನು ಸುಸೂತ್ರವಾಗಿ ಬಿಡಿಸಿ ಅರ್ಥಪೂರ್ಣವಾಗಿ ಬರೆಯುತ್ತಾರೆ. ಆಧ್ಯಾತ್ಮಿಕ ಜೀವಿಗಳಾದ ಶರಣರು ಈ ವರೆಗೆ ಅನೇಕ ಗ್ರಂಥಗಳನ್ನು ಬರೆದು ಬಸವ ತತ್ವವನ್ನು ಶ್ರೀಮಂತ ಗೊಳಿಸಿದ್ದಾರೆ.

12 ನೇ ಶತಮಾನದ ಕಲ್ಯಾಣ ಕ್ರಾಂತಿಯ ನಂತರದಲ್ಲಿ ವಚನ ಸಾಹಿತ್ಯವನ್ನು ಅಭಿವೃದ್ಧಿಪಡಿಸಿ ಪ್ರಸಾರ ಮಾಡಿದ ಆಧುನಿಕ ವಚನಕಾರರು ವಿದ್ವಾಂಸರು, ಸಾಹಿತಿಗಳು, ತತ್ವಜ್ಞಾನಿಗಳು, ಕವಿಗಳು, ಪ್ರೌಢದೇವರಾಯ ಹೀಗೆ ವಚನ ಸಾಹಿತ್ಯವನ್ನು ಕೃಷಿ ಮಾಡಿ ಮುಂದಿನ ತಲೆಮಾರುಗಳಿಗೆ ತಲುಪಿಸಿದವರ ಬಗ್ಗೆ ಸತ್ಯಾ ಸತ್ಯಗಳ ಅಧ್ಯಯನ ಮತ್ತು ಸಂಶೋಧನೆಯನ್ನು ಮಾಡಿದ್ದಾರೆ. ಇವರ ಸುಮಾರು ಮೂರು ವರ್ಷಗಳ ನಿರಂತರ ಸಾಧನೆಯ ಫಲವಾಗಿ "ಸತ್ಯ ಶರಣರು ಸತ್ಯ ಶೋಧ" ಎನ್ನುವ ಬೃಹತ್ ಸಂಶೋಧನಾ ಗ್ರಂಥ ಬಿಡುಗಡೆಗೆ ಸಿದ್ದವಾಗಿದೆ. ಪೂಜ್ಯ ಡಾ. ಸಿದ್ದರಾಮಯ್ಯ ಶರಣರು ಬೆಲ್ಲಾಳ ರವರು ದಿನಾಂಕ 9-3-2025 ರಂದು ಭಾನುವಾರ ಬೆಳಿಗ್ಗೆ 11 ಗಂಟೆಗೆ ಬಸವ ಮಹಾಮನೆ ಟ್ರಸ್ಟ್ ಬಸವಕಲ್ಯಾಣ ಮತ್ತು ಬಸವ ಸಮಿತಿ ಬೆಂಗಳೂರು, ಇವರ ಸಂಯುಕ್ತ ಆಶ್ರಯದಲ್ಲಿ ಬೆಂಗಳೂರು ಬಸವ ಸಮಿತಿ ಅನುಭವ ಮಂಟಪದಲ್ಲಿ ಲೋಕಾರ್ಪಣೆ ಮಾಡಲು ಬಯಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ಪೂಜ್ಯ ಡಾ.ಶರತ್ ಚಂದ್ರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದು, ಶಿವರಾಜ್ ಪಾಟೀಲ ನಿವೃತ್ತ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರು ಗ್ರಂಥವನ್ನು ಲೋಕಾರ್ಪಣೆ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಎಂ. ಬಿ ಪಾಟೀಲರವರು ವಹಿಸಲಿದ್ದು ಮುಖ್ಯ ಅತಿಥಿಗಳಾಗಿ  ಡಾ. ಎಚ್. ಸಿ ಮಹದೇವಪ್ಪ ಸಮಾಜ ಕಲ್ಯಾಣ ಸಚಿವರು ಭಾಗವಹಿಸಲಿದ್ದು, ಬಸವ ಸಮಿತಿ ಅಧ್ಯಕ್ಷರಾದ ಅರವಿಂದ ಜತ್ತಿಯವರು ಸಹ ಅತಿಥಿಗಳಾಗಿ ಭಾಗವಹಿಸಲಿದ್ದು ಸ್ವಾಗತವನ್ನು ಶ್ರೀಕಾಂತ ಸ್ವಾಮಿ ಕರ್ನಾಟಕ ರಾಜ್ಯ ಲಿಂಗಾಯತ ಸಮನ್ವಯ ಸಮಿತಿ ಇವರು ಮಾಡಲಿದ್ದು, ಕಾರ್ಯಕ್ರಮದ ನಿರೂಪಣೆಯನ್ನು ಪೂಜ್ಯ ಸತ್ಯ ದೇವಿ ತಾಯಿಯವರು ಬಸವ ಮಹಾಮನೆ ಟ್ರಸ್ಟ್ ಇವರು ಮಾಡಲಿದ್ದಾರೆ. ಅನೇಕ ಪೂಜ್ಯರು ಬಸವಭಕ್ತರು ಸತ್ಯ ಚಿಂತಕರು ಭಾಗವಹಿಸಲಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಚುನಾವಣಾನಿರತ ಸಿಬ್ಬಂದಿಗಳು, ರಾಜಕೀಯ ಪಕ್ಷಗಳ ಸಮರ್ಪಕ ಸಮನ್ವಯತೆಯಿಂದ ಪಾರದರ್ಶಕ ಚುನಾವಣೆ ಸಾಧ್ಯ: ಪೊಮ್ಮಲ ಸುನೀಲ್ ಕುಮಾರ್ಬಾಗಲೂರು ಹಾರ್ಡ್‌ವೇರ್ ಪಾರ್ಕ್‌ನಲ್ಲಿ ಜೆಟ್ವರ್ಕ್ ಉತ್ಪಾದನಾ ಸ್ಥಾವರಕ್ಕೆ ಚಾಲನೆ260 ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಸ್ವಚ್ಛತೆ ಕಾರ್ಯದಲ್ಲಿ ಭಾಗಿಆನ್ ಲೈನ್ ಮೂಲಕ ಎಂಎಸ್ಐಎಲ್ ಚಿಟ್ ವ್ಯವಹಾರಕ್ಕೆ ಸಿಎಂ ಚಾಲನೆಬೆಂಗಳೂರು-ಮುಂಬೈ ಹೈಸ್ಪೀಡ್ ರೈಲು, ಬೆಂಗಳೂರು- ವಿಜಯಪುರ ವಂದೇ ಭಾರತ್ ರೈಲು ಮತ್ತು ದಿನವಹಿ ವಿಶೇಷ ರೈಲಿಗೆ ಕೋರಿಕೆಉಡಾನ್' ಯೋಜನೆ ಮೂಲಕ ಭಾರತದ ಭವಿಷ್ಯದ ವೈದ್ಯಕೀಯ ಕಾರ್ಯಪಡೆಯನ್ನು ನಿರ್ಮಿಸುವ ಬದ್ಧತೆಯನ್ನು ಸಾರಿದ ನಾರಾಯಣ ಹೆಲ್ತ್ಮೆಟ್ರೋ ಟಿಕೆಟ್ ದರ: ಕೇಂದ್ರದತ್ತ ಬೊಟ್ಟು ಮಾಡಿದ ರಾಜ್ಯ ಸರ್ಕಾರಕ್ಕೆ ದಾಖಲೆ ಸಮೇತ ಟಾಂಗ್ ಕೊಟ್ಟ ನಿಖಿಲ್ಬಿಜೆಪಿ ಜಾಹೀರಾತಿನ ವಿರುದ್ಧ ಎಎಪಿ ದೂರುಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣ, 20 ವರ್ಷ ಕಳೆದರೂ ರೈತರಿಗೆ ಸಿಗತ ಪರಿಹಾರಕಾಂಗ್ರೆಸ್ ಪಕ್ಷ ಪಾರ್ಕಿಂಗ್ ವಿಚಾರದಲ್ಲಿ ಅಂದಾ ದರ್ಬಾರ್ ಮಾಡಲು ಹೊರಟಿದೆ