LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಪೊಲೀಸ್ ಅಧಿಕಾರಿಗಳಿಂದ ಅಪ್ಪೆನ್ ಕುಟುಂಬಕ್ಕೆ ಸುಖ ಸುಮ್ಮನೇ ಬೆದರಿಕೆ

ಬೆಂಗಳೂರು:  ಪೊಲೀಸರು ಸುಖ ಸುಮ್ಮನೆ ಚಿನ್ನವನ್ನು ಯಾರಾದರೂ ನಿನಗೆ ಕೊಟ್ಟಿರುವುದಾಗಿ ತೋರಿಸು ಎಂದು ಬೆದರಿಕೆ ಹಾಕುವ ರೀತಿ  ವಿನಾ ಕಾರಣ ಕೆಜಿಎಫ್ ನ ಆಂಡ್ರಸನ್‌ ಪೇಟೆ ಅಪರಾದ ವಿಭಾಗದ ಪೊಲೀಸ್ ಗೋಪಿ ಮತ್ತು ರಾಬರ್ಟ್‌ನ್‌ಪೇಟೆ ಪೊಲೀಸ್ ಮುರಳಿ ನಾಯಕ ರವರು ನಮಗೆ ಇನ್ನಿಲ್ಲದ ತೊಂದರೆ ಕೊಡುತ್ತಿದ್ದಾರೆ ಎಂದು ಸಂತ್ರಸ್ತ ಅಪ್ಪೇನ್ ಅವರು ಬೆಂಗಳೂರಿನ ಮಾನವ ಹಕ್ಕುಗಳ ಆಯೋಗಕ್ಕೆ ದೂರನ್ನು ಸಲ್ಲಿಸಿದರು.

ಪ್ರಕರಣ ಸಂಭದ HRCಗೆ ದೂರು

ಈ ಸಂಬಂಧ ಬೆಂಗಳೂರಿನ MS ಕಟ್ಟಡದಲ್ಲಿರುವ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಿ ಮಾತನಾಡಿದ ದೂರುದಾರ ಹಾಗೂ ಸಂತ್ರಸ್ತ ಅಪ್ಪೇನ್ ಮಾತನಾಡಿ, ನಾನು ಕಳೆದ 5 ವರ್ಷಗಳಿಂದ ಯಾವುದೇ ತಂಟೆ ತಕರಾರುಗಳಿಗೆ ಹೋಗದೇ ನನ್ನ ಜೀವನವನ್ನು ನಡೆಸಿಕೊಂಡಿರುತ್ತೇನೆ. ಕೆ.ಜಿ.ಎಫ್. ಹಾಗೂ ಇತರೇ ಯಾವುದೇ ಊರುಗಳಲ್ಲಿ ಠಾಣೆಯಲ್ಲಿ ನನ್ನ ವಿರುದ್ದ ಯಾವುದೇ ಪ್ರಕರಣಗಳು ದಾಖಲೆಯಾಗಿರುವುದಿಲ್ಲ. ಆದರೆ ಮುರಳಿ, ಗೋಪಿ ಅಪರಾಧಿಗಳೆಂದು ಬಿಂಬಿಸಿ ಸುಳ್ಳು ಸುಳ್ಳು ಕೇಸ್ ಗಳನ್ನು ಹಾಕುವುದಾಗಿ ಹೆದರಿಸಿದ್ದಾರೆ ಎಂದು ಹೇಳಿದರು.

ಸಮಾಜದಲ್ಲಿ ಗೌರವದೊಂದಿಗೆ ಜೀವಿಸಬೇಕೆಂಬ ಉದ್ದೇಶದಿಂದ, ನನ್ನ ಕುಟುಂಬದವರೊಂದಿಗೆ ಜೀವನವನ್ನು ನಡೆಸುತ್ತಿದ್ದೇನೆ. ನನ್ನ ಮಗಳು ಐ.ಎ.ಎಸ್. ಶಿಕ್ಷಣವನ್ನು ಪಡೆಯುತ್ತಿದ್ದಾಳೆ. ನನ್ನ ಮಗನು ಕಾನೂನು ಶಿಕ್ಷಣವನ್ನು ಅಭ್ಯಾಸಮಾಡಿಕೊಂಡಿರುತ್ತಾನೆ. ಇದೇ ಉದ್ದೇಶವನ್ನು ಇಟ್ಟುಕೊಂಡು ನಾನು ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ ನನ್ನ ನನ್ನ ಪತ್ನಿ ಒಂಟಿಯಾಗಿ ಇರುವುದನ್ನೇ ಕಾದು ಮನೆಯಲ್ಲಿ ಹುಡುಕಾಟ ನಡೆಸುವ ಸಂಭವವನ್ನು ಹೇಳಿಕೊಂಡು ಬೆದರಿಸುವ ಕೆಲಸವನ್ನು ಮಾಡುತ್ತಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ ಎಂದರು.

ಅಪ್ಪೇನ್ ಕುಟುಂಬಕ್ಕೆ ಬೆದರಿಕೆ

ಈ ಪರಿಸ್ಥಿತಿಯಲ್ಲಿ ಆಂಡ್ರಸನ್‌ ಪೇಟೆ ಪೊಲೀಸ್ ಠಾಣೆಯ ಗೋಪಿ ಹಾಗೂ ರಾಬರ್ಟ್‌ನ್‌ಪೇಟೆ ಪೊಲೀಸ್ ಠಾಣೆಯ ಮುರಳಿ ನಾಯಕ ರವರು ಆಗಾಗ್ಗೆ ನನ್ನ ಬಳಿ ಬಂದು, ನಮ್ಮನ್ನು ಏಕೆ ಗಮನಿಸುವುದಿಲ್ಲ? ನೀನು ಚಿನ್ನವನ್ನು ಕೊಟ್ಟಿರುವುದಾಗಿ ಯಾರಾದರೂ ಮಾರ್ವಾಡಿ ಅಂಗಡಿಗಳನ್ನು ಅಥವಾ ಆಚಾರಿಗಳನ್ನು ತೋರಿಸು ಎಂದು ಪದೇ ಪದೇ ಬೆದರಿಕೆ ಹಾಕುತ್ತಿದ್ದಾರೆ.

ನಾನು ಯಾರಿಗೂ ಯಾವುದೇ ಬಂಗಾರವನ್ನು ಕೊಡದ ಸ್ಥಿತಿಯಲ್ಲಿ, ನಾನು ಯಾರನ್ನು ತೋರಿಸುವುದು? ಎಂದು ಕೇಳುವಾಗ, ನೀನು ಸುಮ್ಮನೆ ಯಾರನ್ನಾದರೂ ತೋರಿಸು... ನಾವು ನೋಡಿಕೊಳ್ಳುತ್ತೇವೆ ಎಂದು ನೇರವಾಗಿ ನನಗೆ ಹೇಳುತ್ತಾರೆ.

ನನ್ನ ಪ್ರಾಣಕ್ಕೆ ತೊಂದರೆಯಾಗಿ ಗೋಪಿ,ಮುರಳಿ ಕಾರಣ!

ಪೊಲೀಸ್ ಅಧಿಕಾರಿಗಳ ದುಂಡಾವರ್ತನೆ ಹಾಗೂ ಬೆದರಿಕೆಗಳಿಂದ ನಮ್ಮ ಕುಟುಂಬದಲ್ಲಿ ಶಾಂತಿ ನೆಮ್ಮದಿ ಹಾಳಾಗಿದೆ ಮಕ್ಕಳ ವಿದ್ಯಾಭ್ಯಾಸಕ್ಕೂ ತೊಂದರೆಯಾಗುತ್ತಿದೆ. ಸಂಬಂಧ ನನ್ನ ಪ್ರಾಣ ರಕ್ಷಣೆಗೆ ಹಾಗೂ ಪೊಲೀಸ ಅಧಿಕಾರಿಗಳಿಂದ ಆಗುತ್ತಿರುವ ತೊಂದರೆಯನ್ನು ಸೂಕ್ಷ್ಮವಾಗಿ ಗಮನಿಸಿ ನಮಗೆ ನ್ಯಾಯ ಕೊಡಿಸಬೇಕೆಂದು ಬೆಂಗಳೂರು ಮಾನವ ಹಕ್ಕುಗಳ ಆಯೋಗಕ್ಕೆ ದೂರ ನಡೆದಿದ್ದೇನೆ ಒಂದು ವೇಳೆ ನನ್ನ ಪ್ರಾಣಕ್ಕೆ ಏನಾದರೂ ಅಪಾಯ ಬಂದಲ್ಲಿ ಮುರುಳಿ ಹಾಗೂ ಗೋಪಿ ಇಬ್ಬರೇ ನನ್ನ ಸಾವಿಗೆ ಕಾರಣ ಎಂದು ಈ ಮೂಲಕ ತಿಳಿಸಿದರು.

ಅಲ್ಲಂದೇ ಸಂಬಂಧಪಟ್ಟ ಇಲಾಖೆಗೆ ಮಾನವ ಹಕ್ಕುಗಳ ಆಯೋಗದ ಆಯುಕ್ತರು ನಮ್ಮ ಕುಟುಂಬದ ಪಂಚಾಯತ್ಕಾರರುಗಳಿಗೆ ಬರಬಾರದು ಎಂದು ಸೂಚನೆ ನೀಡಿ ಕ್ರಮ ಕೈಗೊಳ್ಳಬೇಕೆಂಎಂದು ಇದೇ ವೇಳೆ ಆಯೋಗಕ್ಕೆ ಮನವಿ ಮಾಡಿದರು.

ಇನ್ನು ಇದೇ ವೇಳೆ ಮಾನವ ಹಕ್ಕುಗಳ ಹೋರಾಟಗಾರರು ಹಾಗೂ ದಲಿತ ನಾಯಕರು ಅಪ್ಪೇನ್ ಅವರ ಬೆಂಬಲಕ್ಕೆ ನಿಂತು ಹೋರಾಟ ಮಾಡುವುದಾಗಿ ಇದೇ ವೇಳೆ ಆತನ ಬೆಂಬಲಿಗರು ಬೆಂಬಲ ವ್ಯಕ್ತಪಡಿಸಿದರು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಚುನಾವಣಾನಿರತ ಸಿಬ್ಬಂದಿಗಳು, ರಾಜಕೀಯ ಪಕ್ಷಗಳ ಸಮರ್ಪಕ ಸಮನ್ವಯತೆಯಿಂದ ಪಾರದರ್ಶಕ ಚುನಾವಣೆ ಸಾಧ್ಯ: ಪೊಮ್ಮಲ ಸುನೀಲ್ ಕುಮಾರ್ಬಾಗಲೂರು ಹಾರ್ಡ್‌ವೇರ್ ಪಾರ್ಕ್‌ನಲ್ಲಿ ಜೆಟ್ವರ್ಕ್ ಉತ್ಪಾದನಾ ಸ್ಥಾವರಕ್ಕೆ ಚಾಲನೆ260 ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಸ್ವಚ್ಛತೆ ಕಾರ್ಯದಲ್ಲಿ ಭಾಗಿಆನ್ ಲೈನ್ ಮೂಲಕ ಎಂಎಸ್ಐಎಲ್ ಚಿಟ್ ವ್ಯವಹಾರಕ್ಕೆ ಸಿಎಂ ಚಾಲನೆಬೆಂಗಳೂರು-ಮುಂಬೈ ಹೈಸ್ಪೀಡ್ ರೈಲು, ಬೆಂಗಳೂರು- ವಿಜಯಪುರ ವಂದೇ ಭಾರತ್ ರೈಲು ಮತ್ತು ದಿನವಹಿ ವಿಶೇಷ ರೈಲಿಗೆ ಕೋರಿಕೆಉಡಾನ್' ಯೋಜನೆ ಮೂಲಕ ಭಾರತದ ಭವಿಷ್ಯದ ವೈದ್ಯಕೀಯ ಕಾರ್ಯಪಡೆಯನ್ನು ನಿರ್ಮಿಸುವ ಬದ್ಧತೆಯನ್ನು ಸಾರಿದ ನಾರಾಯಣ ಹೆಲ್ತ್ಮೆಟ್ರೋ ಟಿಕೆಟ್ ದರ: ಕೇಂದ್ರದತ್ತ ಬೊಟ್ಟು ಮಾಡಿದ ರಾಜ್ಯ ಸರ್ಕಾರಕ್ಕೆ ದಾಖಲೆ ಸಮೇತ ಟಾಂಗ್ ಕೊಟ್ಟ ನಿಖಿಲ್ಬಿಜೆಪಿ ಜಾಹೀರಾತಿನ ವಿರುದ್ಧ ಎಎಪಿ ದೂರುಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣ, 20 ವರ್ಷ ಕಳೆದರೂ ರೈತರಿಗೆ ಸಿಗತ ಪರಿಹಾರಕಾಂಗ್ರೆಸ್ ಪಕ್ಷ ಪಾರ್ಕಿಂಗ್ ವಿಚಾರದಲ್ಲಿ ಅಂದಾ ದರ್ಬಾರ್ ಮಾಡಲು ಹೊರಟಿದೆ