LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ನವೀಕರಣಗೊಂಡ ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಾಂಗಣ ಶಾಸಕ ಕೃಷ್ಣಪ್ಪ ಉದ್ಘಾಟನೆ

ಬೆಂಗಳೂರು: ವಿಜಯನಗರ ವಿಧಾನಸಭಾ ಕ್ಷೇತ್ರದ RPC ಲೇಔಟ್ ನಲ್ಲಿ ನವೀಕರಣಗೊಂಡ ಇಂದಿರಾ ಗಾಂಧಿ ಬ್ಯಾಡ್ಮಿಂಟನ್ ಒಳಾಂಗಣ  ಕ್ರೀಡಾಂಗಣ ಉದ್ಘಾಟನೆಯನ್ನು ಕ್ಷೇತ್ರದ ಶಾಸಕರಾದ ಎಂ ಕೃಷ್ಣಪ್ಪ ಅವರು ಉದ್ಘಾಟನೆ ಮಾಡಿದರು.

ಉದ್ಘಾಟನೆ ಮಾಡಿ ಮಾತನಾಡಿದ ಅವರು ಯುವಕರಿಗೆ ಕ್ರೀಡೆಯಲ್ಲಿ ಉತ್ಸಾಹ ಕೊಟ್ಟರೆ ಯಾವುದೇ ಕಾರಣಕ್ಕೂ ಓದುವುದರಲ್ಲಿ ವಿಚಲಿತರಾಗುವುದಿಲ್ಲ, ಕ್ರೀಡಾಂಗಣದ ಪಕ್ಕದಲ್ಲಿಯೇ ಈಜುಕೊಳ ಇದ್ದು ಇನ್ನೆರಡು ಈಜುಕೊಳವನ್ನು  ಕ್ಷೇತ್ರದಲ್ಲಿ ಮಾಡಲಾಗುತ್ತದೆ.  ಕ್ಷೇತ್ರದಲ್ಲಿ ಸಾಕಷ್ಟು ಪಾರ್ಕುಗಳಿದ್ದು  ಕ್ರೀಡಾಂಗಣ ಮಾಡಲು ಜಾಗ ಇಲ್ಲದಂತಾಗಿದೆ, ಆದರೂ ಇರುವ ಜಾಗದಲ್ಲಿ ಮಕ್ಕಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬ್ಯಾಡ್ಮಿಂಟನ್ ಕೋರ್ಟು ನಿರ್ಮಣ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಹೊಸಹಳ್ಳಿಯಲ್ಲಿ,ಗಾಂಧಿಬಜಾರ್ ಸೇರಿದಂತೆ ಮೂರು ನಾಲ್ಕು ಕಡೆ ಬ್ಯಾಡ್ಮಿಂಟನ್ ಕ್ರೀಡಾಂಗಣ ಮಾಡುವ ಯೋಚನೆ ಇದೆ ಎಂದರು.

ಕ್ಷೇತ್ರದಲ್ಲಿ ಅಭಿವೃದ್ದಿಯ ಮಹಾಪರ್ವ

ವಿಜಯನಗರ ಕ್ಷೇತ್ರದಲ್ಲಿ ಇಲ್ಲಿನ ಸ್ಥಳಿಯರಿಗೆ  ಮೂಲಭೂತ ಸೌಕಭ್ಯ ಸೇರಿದಂತೆ ಮಕ್ಕಳಿಗೆ ಅನುಕೂಲವಾಗಲಿ ಎಂಬ ನಿಟ್ಟಿನಲ್ಲಿ ಈಗಾಗಲೇ ವಾಲಿಬಾಲ್ ಕೋರ್ಟುಗಳನ್ನು ಸಹ ಮಾಡಲಾಗಿದೆ. ಯುವಕರಿಗೆ ಆಸಕ್ತಿ ಕ್ರೀಡೆಯಲ್ಲಿ ಹೆಚ್ಚಾಗಲಿ ಎಂಬ ಉದ್ದೇಶದಿಂದ ಮಾಡಲಾಗುತ್ತದೆ, ನಾವು ಚಿಕ್ಕವರಾಗಿದ್ದಾಗ ಸಾಕಷ್ಟು ಮೈದಾನವಿತ್ತು ಹಾಗಾಗಿ ವಾಲಿಬಾಲ್, ಕ್ರಿಕೆಟ್, ಕಬಡಿ, ಚಿನ್ನಿದಂಡ ಆಟಗಳನ್ನು  ಹೆಚ್ಚಾಗಿ ಆಟುತ್ತಿದ್ದೇವು. ಅವೆಲ್ಲವೂ ಸಹ ಈಗ ಮಾಯವಾಗಿವೆ ಅಂತಹ ಆಟಗಳನ್ನು ಹಿಂದಿನ ಯುವ ಪೀಳಿಗೆಗೆ ನೆನಪಿಸುವ ನಿಟ್ಟಿನಲ್ಲಿ ಹಾಗೂ ಮಕ್ಕಳು ಕ್ರೀಡೆಯಲ್ಲಿ ಹೆಚ್ಚು ಉತ್ಸಾಹ ತೋರಲಿ ಎಂಬ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಕ್ರೀಡೆಗೆ ಹೆಚ್ಚು ಆದ್ಯತೆ ಕೊಡಲಾಗುತ್ತದೆ ಎಂದರು.

ಆಟ ಆಡಲು  ದೊಡ್ಡ ದೊಡ್ಡ ಮೈದಾನವಿತ್ತು ಸಾಕಷ್ಟು ಆಟವಾಡುತ್ತಿದ್ದೆವು, ಆದರೆ ನಗರ ಬೆಳೆದಂತೆ, ಜನಸಂಖ್ಯೆ ಹೆಚ್ಚಾಗಿ ಎಲ್ಲೆಡೆ  ಪಾರ್ಕ್ ಗಳ ಸಂಖ್ಯೆ ಹೆಚ್ಚಾಗಿದ್ದೇವೆ. ಆಟಗಳ ಕಡೆ ಸ್ವಲ್ಪಮಟ್ಟಿಗೆ ಉತ್ಸಾಹ ಕಡಿಮೆಯಾದಂತೆ ಕಾಣುತ್ತಿದ್ದು ಮಕ್ಕಳಿಗೆ ಕ್ರೀಡೆಯಲ್ಲಿ ಉತ್ಸಾಹ ಬರಲಿ ಓದುವ ಜೊತೆ ಆಟಪಾಠಗಳಲ್ಲಿ ತೊಡಗಿಸಿಕೊಳಲ್ಲಿ ಎಂಬ ಉದ್ದೇಶದಿಂದ ಕ್ರೀಡೆಗೆ ಹೆಚ್ಚು ಗಮನ ಕೊಡಲಾಗಿದೆ ಎಂದರು.

ಸ್ಥಳೀಯರ ಬೇಡಿಕೆಗಳಿಗೂ ಸ್ಫಂದನೆ

ಕ್ಷೇತ್ರದಲ್ಲಿ ಕೇವಲ ಕ್ರೀಡೆಗೆ ಮಾತ್ರವಲ್ಲದೆ ಸ್ಥಳೀಯರ ಸಮುದಾಯಗಳ ಬೇಡಿಕೆಗಳಾದ ಅಂಬೇಡ್ಕರ್ ಭವನ, ವಾಲ್ಮೀಕಿ ಭವನ, ಕನಕ ಭವನ, ಅನುಭವ ಮಂಟಪ 61 ಕೋಟಿ ರೂ ವೆಚ್ಚದಲ್ಲಿ  ಮೈಸೂರು ರಸ್ತೆಯಲ್ಲಿ ಹೆರಿಗೆ ಆಸ್ಪತ್ರೆ ನಿರ್ಮಾಣಕ್ಕೆ ಮುಂದಾಗಿದ್ದೇವೆ. ಇವೆಲ್ಲವೂಗಳಿಗೂ ನೂರಾರು ಕೋಟಿ ರೂಪಾಯಿ ಖರ್ಚು ಮಾಡಿ ನಿರ್ಮಾಣ ಮಾಡಲಾಗುತ್ತಿದೆ. ಮಕ್ಕಳು ಆಟವಾಡಲು ಎಲ್ಲಿಗೂ ತೆರಳದೆ ಕ್ಷೇತ್ರದಲ್ಲಿ ಚೆನ್ನಾಗಿ ಕಲಿತು ದೊಡ್ಡ ದೊಡ್ಡ ಸಾಧನೆ ಮಾಡಲಿ ಎಂದು ಹಾರೈಸಿದರು.

ಇಂದಿರಾಗಾಂಧಿ ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಾಂಗಣ ಸಮಿತಿಯ ಅಧ್ಯಕ್ಷರು ಪ್ರದೀಪ್ ಕೃಷ್ಣಪ್ಪ, ಸದಸ್ಯರಾದ ಆನಂದ್, ಶಿಲ್ಪಾ,ವೆಂಕಟೇಶ್, ಮಂಜುನಾಥ್, ಸೇರಿ ಸಮಿತಿ ಪದಾಧಿಕಾರಿಗಳು, ಕ್ರೀಡಾಳುಗಳು, ಸ್ಥಳೀಯರು ಕಾಂಗ್ರೆಸ್ ಮುಖಂಡರು,ಬಿಬಿಎಂಪಿ ಕಾರ್ಯಪಾಲಕ ಅಭಿಯಂತರ ಜಯಶಂಕರ್,  ಲತಾ, ಕಾಂಗ್ರೆಸ್ ಮುಖಂಡರು ಗೋವಿಂದರಾಜು, ವೆಂಕಟೇಶ್, ಮಂಜುನಾಥ್ , ನಂಜಪ್ಪ ಉಪಸ್ಥಿತರಿದ್ದರು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಚುನಾವಣಾನಿರತ ಸಿಬ್ಬಂದಿಗಳು, ರಾಜಕೀಯ ಪಕ್ಷಗಳ ಸಮರ್ಪಕ ಸಮನ್ವಯತೆಯಿಂದ ಪಾರದರ್ಶಕ ಚುನಾವಣೆ ಸಾಧ್ಯ: ಪೊಮ್ಮಲ ಸುನೀಲ್ ಕುಮಾರ್ಬಾಗಲೂರು ಹಾರ್ಡ್‌ವೇರ್ ಪಾರ್ಕ್‌ನಲ್ಲಿ ಜೆಟ್ವರ್ಕ್ ಉತ್ಪಾದನಾ ಸ್ಥಾವರಕ್ಕೆ ಚಾಲನೆ260 ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಸ್ವಚ್ಛತೆ ಕಾರ್ಯದಲ್ಲಿ ಭಾಗಿಆನ್ ಲೈನ್ ಮೂಲಕ ಎಂಎಸ್ಐಎಲ್ ಚಿಟ್ ವ್ಯವಹಾರಕ್ಕೆ ಸಿಎಂ ಚಾಲನೆಬೆಂಗಳೂರು-ಮುಂಬೈ ಹೈಸ್ಪೀಡ್ ರೈಲು, ಬೆಂಗಳೂರು- ವಿಜಯಪುರ ವಂದೇ ಭಾರತ್ ರೈಲು ಮತ್ತು ದಿನವಹಿ ವಿಶೇಷ ರೈಲಿಗೆ ಕೋರಿಕೆಉಡಾನ್' ಯೋಜನೆ ಮೂಲಕ ಭಾರತದ ಭವಿಷ್ಯದ ವೈದ್ಯಕೀಯ ಕಾರ್ಯಪಡೆಯನ್ನು ನಿರ್ಮಿಸುವ ಬದ್ಧತೆಯನ್ನು ಸಾರಿದ ನಾರಾಯಣ ಹೆಲ್ತ್ಮೆಟ್ರೋ ಟಿಕೆಟ್ ದರ: ಕೇಂದ್ರದತ್ತ ಬೊಟ್ಟು ಮಾಡಿದ ರಾಜ್ಯ ಸರ್ಕಾರಕ್ಕೆ ದಾಖಲೆ ಸಮೇತ ಟಾಂಗ್ ಕೊಟ್ಟ ನಿಖಿಲ್ಬಿಜೆಪಿ ಜಾಹೀರಾತಿನ ವಿರುದ್ಧ ಎಎಪಿ ದೂರುಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣ, 20 ವರ್ಷ ಕಳೆದರೂ ರೈತರಿಗೆ ಸಿಗತ ಪರಿಹಾರಕಾಂಗ್ರೆಸ್ ಪಕ್ಷ ಪಾರ್ಕಿಂಗ್ ವಿಚಾರದಲ್ಲಿ ಅಂದಾ ದರ್ಬಾರ್ ಮಾಡಲು ಹೊರಟಿದೆ