ಬೆಂಗಳೂರು: ರವೀಂದ್ರ ಕಲಾಕ್ಷೇತ್ರದಲ್ಲಿ ದೇವಾಂಗ ಸಂಘದಿಂದ 2025ನೇ ಸಾಲಿನ SSLC,PUC ಹಾಗೂ ಎಂಜನಿಯರಿಂಗ್ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗು ಸನ್ಮಾನ ಮಾಡಿ ಗೌರವಿಲಾಯಿತು.
ಸಮುದಾಯದ ಎಸ್ ಎಸ್ ಎಲ್ ಸಿ, ಪಿಯುಸಿ, ಹಾಗು ಎಂಜಿನಿಯರಿಂಗ್ ವಿಭಾಗದಲ್ಲಿ ಸುಮಾರು 300ಕ್ಕಿಂತ ಹೆಚ್ಚು ಅಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಜೊತೆಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು.
ಸಂಘದ ಅಧ್ಯಕ್ಷ ಸಂಘದ ಅಧ್ಯಕ್ಷ. ಹಾಗೂ ನಿವೃತ್ತ IPS ಅಧಿಕಾರಿ, ಡಾ.ಜಿ ರಮೇಶ್ ಮಾತನಾಡಿ, ಪ್ರತಿ ವರ್ಷ ಸಮುದಾಯದ ಮಕ್ಕಳಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಪ್ರತಿಭಾ ಪುರಸ್ಕಾರ ನೀಎಇ ಗೌರವಿಸಲಾಗುತ್ತದೆ. ಆರ್ಥಿಕವಾಗಿ ಹಿಂದುಳಿದ ಮಕ್ಕಳನ್ನು ಗುರುತಿಸಿ ಶೈಕ್ಷಣಿಕವಾಗಿ ಮುಂದೆ ಬರಲು ಸಹಕಾರಿಯಾಗಿದೆ. ಇಡೀ ರಾಜ್ಯದಲ್ಲಿ ಸಮುದಾಯದ ಜನರನ್ನು ಗುರುತಿಸುವ ಕೆಲಸ ಮಾಡಲಾಗುತ್ತದೆ. ಸಂಘದ ವತಿಯಿಂದ ಸಮುದಾಯಕ್ಕೆ ಅನುಕೂಲವಾಗಲು ಹತ್ತು ಹಲವು ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದೇವೆ.
ಅಲ್ಲದೆ ದೇವಾಂಗ ಸಮುದಾಯದವರು ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರನ್ನು ಗುರುತಿಸಿ ಸಂಘದ ವತಿಯಿಂದ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ ಎಂದರು.
ದೇವಾಂಗ ಸಮುದಾಯದ ಮಕ್ಕಳು, ಮಹಿಳೆಯರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ವೇದಿಕೆ ಮೇಲೆ ಅದ್ಬುತವಾಗಿ ನಡೆಸಿಕೊಟ್ಟರು. ಇಡೀ ದಿನ ವಿವಿಧ ಸಂಗೀತ ಕಾರ್ಯಕ್ರಮಗಳು ಸಾಂಗವಾಗಿ ನಡೆದವು.
ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ. ಹಾಗೂ ನಿವೃತ್ತ IPS ಅಧಿಕಾರಿ, ಡಾ.ಜಿ ರಮೇಶ್, ಉಪಾಧ್ಯಕ್ಷ ವಿಜಯ ಕುಮಾರ್, ಆರ್ ಭಾಸ್ಕಾರ್, ಊರುಕೆರೆ ದಯಾನಂದ್, ಎಂ ಲಕ್ಷ್ಮೀ ನಾರಾಯಣ, ಮಹಿಳಾ ಘಟಕದ ರಂಗನಾಯಕಿ ಪಾರ್ವತಿ, ಸಂಘದ ಕಾರ್ಯನಿರ್ವಹಕ ಸಮಿತಿ ಸದಸ್ಯರು ಸೇರಿದಂತೆ ಸಮಯದಾಯದ ನೂರಾರು ಮಂದಿ ಉಪಸ್ಥಿತರಿದ್ದರು.