LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಕುಡಿಯುವ ನೀರು ಅನಗತ್ಯ ಪೋಲು ಮಾಡಿದರೆ 5000 ದಂಡ

ಬೆಂಗಳೂರು : ಅಂತರ್ಜಲ ಕುಸಿತದಿಂದ ಮುಂಬರುವ ಬೇಸಿಗೆಯಲ್ಲಿ ಎದುರಾಗಬಹುದಾದ ನೀರಿನ ಸಮಸ್ಯೆಯನ್ನು ಸಮರ್ಪಕವಾಗಿ ನಿಭಾಯಿಸುವ ನಿಟ್ಟಿನಲ್ಲಿ ಲಭ್ಯವಿರುವ ಶುದ್ದ ನೀರನ್ನು ಸಮರ್ಪಕವಾಗಿ ಬಳಸುವುದು ಬಹಳ ಮುಖ್ಯವಾಗಿದೆ ಎಂದು BWSSB ಹೇಳಿದ್ದು, ಇನ್ಮುಂದೆ ಕುಡಿಯುವ ನೀರನ್ನು ಅನಗತ್ಯವಾಗಿ ಪೋಲು ಮಾಡಿದರೆ 5000 ದಂಡ ಎಂದು ಆದೇಶಿಸಿದೆ.

ವಾಹನಗಳ ಸ್ವಚ್ಚತೆ, ಕೈದೋಟಕ್ಕೆ, ಕಟ್ಟಡ ನಿರ್ಮಾಣಕ್ಕೆ - ರಸ್ತೆ ನಿರ್ಮಾಣ ಹಾಗೂ ಸ್ವಚ್ಚತೆಗೂ ಬಳಕೆಗೂ ನಿಷೇಧ - ಆದೇಶವನ್ನು ಉಲ್ಲಂಘನೆ ಮಾಡುವವರ ವಿರುದ್ದ ರೂ. 5000/- ಗಳ ದಂಡ ಪ್ರಸ್ತುತ ನಗರದಲ್ಲಿ ಪ್ರತಿದಿನ ಉಷ್ಣಾಂಶ ಏರುತ್ತಿದೆ. ಇತ್ತೀಚಿನ ದಿನಗಳಲ್ಲಿ ಮಳೆಯ ಕೊರತೆಯಿಂದ ಅಂತರ್ಜಲ ಕುಸಿತವಾಗಿದ್ದು, ಮುಂದಿನ ಬೇಸಿಗೆಯಲ್ಲಿ ಅಂತರ್ಜಲ ಕುಸಿತದಿಂದ ನೀರಿನ ಅಭಾವ ಎದುರಾಗಬಹುದು ಎಂದು ಐಐಎಸ್ಸ್‌ಸಿ ವಿಜ್ಞಾನಿಗಳು ತಮ್ಮ ವರದಿಯಲ್ಲಿ ತಿಳಿಸಿದ್ದಾರೆ. ಈಗಿನಿಂದಲೇ ಸಾರ್ವಜನಿಕರು ಕುಡಿಯುವ ನೀರನ್ನು ಸಮರ್ಪಕವಾಗಿ ಬಳಸುವುದು ಹಾಗೂ ಅನಗತ್ಯವಾಗಿ ಪೋಲು ಮಾಡುವುದನ್ನು ತಡೆಯುವುದು ಈ ಆದೇಶದ ಉದ್ದೇಶವಾಗಿದೆ.

ಈ ಆದೇಶವನ್ನು ಉಲ್ಲಂಘನೆ ಮಾಡುವವರ ವಿರುದ್ದ ಜಲಮಂಡಳಿಯ ಕಾಯ್ದೆ ಯ ಕಲಂ 109 ರಂತೆ ರೂ. 5000/- ಗಳ ದಂಡ ವಿಧಿಸಲಾಗುವುದು. ಈ ಉಲ್ಲಂಘನೆಯು ಮರುಕಳಿಸಿದಲ್ಲಿ ದಂಡ ಮೊತ್ತ ರೂ. 5000/- ಜೊತೆಯಾಗಿ ಹೆಚ್ಚುವರಿಯಾಗಿ ಪ್ರತಿದಿನ ರೂ. 500/- ದಂಡ ವಿಧಿಸಲಾಗುವುದು ಎಂದು ಅಧಿಕೃತ ಆದೇಶ ಹೊರಡಿಸಿದರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ.! 18-11-2025.!-ಬಳ್ಳೇಶ ಮಲ್ಲಯ್ಯ ಅವರ  ವಚನ.!ದೆಹಲಿ ಸ್ಪೋಟ ಪ್ರಕರಣ: ಹರಿಯಾಣದ ವೈದ್ಯೆ ಪ್ರಿಯಾಂಕಾ ಶರ್ಮಾ ವಿಚಾರಣೆಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ಆದೇಶ ರದ್ದು..!! ಹೈಕೋರ್ಟ್ಬಾಂಗ್ಲಾದೇಶದಲ್ಲಿ ನಿರಾಯುಧ ಪ್ರತಿಭಟನಾಕಾರರ ಕೊಲೆ, ಶೇಖ್ ಹಸೀನಾಗೆ ಮರಣದಂಡನೆ..!ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜೀನಾಮೆಸೌದಿ ಅರೇಬಿಯಾ ಬಸ್ ದುರಂತ- ಸಂತಾಪ ಸೂಚಿಸಿದ ಪ್ರಧಾನಿ ಮೋದಿದೆಹಲಿ ಸ್ಪೋಟ ಪ್ರಕರಣ: ಯಾವುದೇ ಪುರಾವೆಗಳಿಲ್ಲ; ಮೂವರು ವೈದ್ಯರು ಸೇರಿ ನಾಲ್ವರನ್ನು ಬಿಡುಗಡೆ ಮಾಡಿದ NIAಮಕ್ಕಾದಲ್ಲಿ ಭೀಕರ ಅಪಘಾತ : 42 ಭಾರತೀಯ ಉಮ್ರಾ ಯಾತ್ರಿಕರು ದುರ್ಮರಣಮಂಗಳೂರು ಪೊಲೀಸರ ಭರ್ಜರಿ ಕಾರ್ಯಾಚರಣೆ!! 250 ಸಿಮ್ ಬಳಸಿ 300 ಬ್ಯಾಂಕ್ ಖಾತೆಗಳನ್ನು ಹ್ಯಾಕ್ ಮಾಡಿದ್ದ ಖದೀಮರು ಅರೆಸ್ಟ್