LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮಡಿವಾಳ ಸಂಘದಿಂದ ಮಾ.16ಕ್ಕೆ ಫ್ರೀಡಂ ಪಾರ್ಕಿನಲ್ಲಿ ಧರಣಿ

ಬೆಂಗಳೂರು: ಸವಿತಾ ಜನಾಂಗದ ಸಮುದಾಯವನ್ನು ಪ್ರವರ್ಗ 2 ರಿಂದ ಪರಿಶಿಷ್ಟ ಪಂಗಡ ಅಥವಾ ಪ್ರವರ್ಗ 1ಕ್ಕೆ ಮತ್ತು ಜಾತಿ ನಿಂದನೆ ನಿಬರ್ಂಧ, ಸವಿತಾಕ್ಷೌರಿಕ ಕಾರ್ಮಿಕರಿಗೆ ಮಾಸಾಸನ ನೀಡಬೇಕೆಂದು ಸರ್ಕಾರಕ್ಕೆ ಅಖಿಲ ಕರ್ನಾಟಕ ಕನ್ನಡ ಸವಿತಾ ಮಹಾಮಂಡಳಿ ಅಧ್ಯಕ್ಷರಾದ ಟಿ ವೆಂಕಟೇಶ್ ಒತ್ತಾಯ ಮಾಡಿದರು.

ಬೆಂಗಳೂರಿನ ಪ್ರಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದವರು, ಸವಿತಾ ಜನಾಂಗವು ಗ್ರಾಮೀಣ ಭಾಗಗಳಲ್ಲಿ ಸೇವಾ ವೃತ್ತಿ ಕ್ಷೌರಿಕ ವೃತ್ತಿಯನೇ ಆಧಾರವಾಗಿ ನಂಬಿಕೊಂಡು ಜೀವನವನ್ನು ಸಾಗಿಸುತ್ತಿದ್ದಾರೆ. ನಮ್ಮ ಜನಾಂಗದಲ್ಲಿ ಕೆಲವರು ಮಂಗಳವಾದ್ಯ ನುಡಿಸುತ್ತಿದ್ದಾರೆ. ಈ ವಿಧವಾಗಿ ಜೀವನ ನಿರ್ವಹಣೆ ಮಾಡುತ್ತಿರುತ್ತಾರೆ. ನಮ್ಮ ಜನಾಂಗದಲ್ಲಿ ಬಹುತೇಕ ಜನರಿಗೆ ಯಾವುದೇ ತರಹದ ಆಸ್ತಿಪಾಸ್ತಿ ಇರೋದಿಲ್ಲ ಕುಲ ಕಸುಬನ್ನೆ ನಂಬಿಕೊಂಡಿರುತ್ತಾರೆ.

ಇಂತರಿವೆ ಯಾವುದೇ ರಾಷ್ಟ್ರೀಕೃತ ಬ್ಯಾಂಕುಗಳು ಸಹ ಇಂದಿನ ದಿನಮಾನಗಳಿಗೆ ತಕ್ಕಂತೆ ಅಂಗಡಿಗಳನ್ನು ಇಡಲು ಶಕ್ತರಾಗಿರುವುದಿಲ್ಲ. ಹೀಗಾಗಿ ಬ್ಯಾಂಕುಗಳು ಸಮುದಾಯದ ಜನರಿಗೆ ಸಾಲ ಸೌಲಭ್ಯ ನೀಡಲು ಹಿಂಜರಿಯುತ್ತಿದ್ದಾರೆ . ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಡಾ.ಸಿ.ಎಸ್.ದ್ವಾರಕನಾಥ್ ರವರ 2010ರ ವರದಿಯಂತೆ ಅನುಷ್ಠಾನಗೊಳಿಸಿ ಘನ ಸರ್ಕಾರವು ಈ ಕೆಳಗಿನ ಸವಲತ್ತುಗಳನ್ನು ದೊರೆಯುವಂತೆ ಕಾನೂನು ಜಾರಿಗೊಳಿಸಬೇಕಾಗಿ ಕನ್ನಡ ಸವಿತಾ ಮಹಾಮಂಡಲವು ತಮ್ಮಲ್ಲಿ ಸರ್ಕಾರಕ್ಕೆ ಒತ್ತಡ ತರುವ ಸಲುವಾಗಿ ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿಕೊಂಡರು.

ಸವಿತಾ ಮಹಾಮಂಗಳದಿಂದ ಸರ್ಕಾರಕ್ಕೆ ಕೆಲ ಹಕ್ಕಿನ ಒತ್ತಾಯಗಳು:


1. ಅಸಂಘಟಿತ ಕ್ಷೌರಿಕ ಜನಾಂಗದ ರಾಜ್ಯದ ಎಲ್ಲಾ 50 ವರ್ಷ ತುಂಬಿದ ಮಂಗಳವಾದ್ಯದ ಕಲಾವಿದರಿಗೆ ಅನಾರೋಗ್ಯ ಪೀಡಿತ ಕ್ಷೌರಿಕ ಕಾರ್ಮಿಕರಿಗೆ ಮಾಸಾಸನ ಮತ್ತು ಆರೋಗ್ಯ ವಿಮೆ ನಿವೇಶನ, ವಸತಿ ಸೌಲಭ್ಯ ಅವರ ಮಕ್ಕಳಿಗೆ ಶಿಕ್ಷಣ ಸೌಲಭ್ಯ, ಮಕ್ಕಳ ಮದು ಇನ್ನಿತರ ತುರ್ತು ಸಂದರ್ಭಗಳಲ್ಲಿ ಸಾಲ ಸೌಲಭ್ಯಗಳಾದಂತಹ ಸಹಾಯ ಮಾಡುವುದು

2. ಜಾತಿ ನಿಂದನೆ "ಅಜಾಮ" ಪದವನ್ನು ನಿಂದನೆಯ ಪದವಾಗಿ ಬಳಕೆ ಮಾಡುವುದರಿಂದ ಆ ಪದವನ್ನು ಜಾತಿ ನಿಂದನೆಯ ಅಡಿಯಲ್ಲಿ ತಂದು ಶಿಕ್ಷಾರ್ಹ ಕಾನೂನು ಜಾರಿಗೆ ತರುವುದು.

3. ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಸವಿತ ಜನಾಂಗದ ಸಂಘಟನೆಗೆ ಒತ್ತು ನೀಡಿ ಅಸಂಘಟಿತರಾಗಿರುವುದರಿಂದ ಸಂಘದ ಕಾರ್ಯ ಚಟುವಟಿಕೆಗಳಿಗಾಗಿ ನಿವೇಶನ ನೀಡಿ ಭವನ ನಿರ್ಮಿಸಿಕೊಡುವುದು.

4. ಜಿಲ್ಲಾ ಕೇಂದ್ರಗಳಲ್ಲಿ ಸವಿತಾ ಜನಾಂಗದ ಮಂಗಳವಾದ್ಯ ಕಲಾವಿದರಿಗೆ ಮತ್ತು ಕೇಶ ವಿನ್ಯಾಸ ತರಬೇತಿಗಾಗಿ ಮಹಿಳೆಯರಿಗೆ ಮತ್ತು ಪುರುಷರಿಗೆ ತರಬೇತಿ ನೀಡಲು ಮಕ್ಕಳಿಗೆ ಸಂಗೀತ ತರಬೇತಿಗಾಗಿ ಜಿಲ್ಲಾ ಕೇಂದ್ರಗಳಲ್ಲಿ ಕಲಾಭವನ ನಿರ್ಮಿಸಿ ಕೊಡುವುದು

5. ರಾಜ್ಯದ ಗ್ರಾಮೀಣ ಭಾಗದಲ್ಲಿ ವಲಸೆ ಪ್ರಮಾಣ ತಗ್ಗಿಸಲು ಗ್ರಾಮೀಣವಾಸಿಗಳ ಯುವಕ ಯುವತಿಯರಿಗೆ, ಊರುಗಳಲ್ಲಿ ಬಾಡಿಗೆಗೆ ಅಂಗಡಿ ಮಳಿಗೆಗಳನ್ನು ನೀಡದೇ ಇರುವುದರಿಂದ ಪ್ರತಿ ಗ್ರಾಮದ 1000 ಜನಸಂಖ್ಯೆ ಮೇಲ್ಪಟ್ಟ ಗ್ರಾಮದಲ್ಲಿ ಗ್ರಾಮ ಪಂಚಾಯ್ತಿವತಿಯಿಂದ ಮಳಿಗೆಗಳನ್ನು ಗ್ರಾಮದಲ್ಲಿ ಸೇವಾವೃತ್ತಿ ಕ್ಷೌರಿಕರಿಗೆ ನೀಡುವುದು. ಗ್ರಾಮೀಣ ಪ್ರದೇಶದಲ್ಲಿ ದಲಿತರಿಗೆ ಕ್ಷೌರಮಾಡುವ ವಿಷಯಗಳಲ್ಲಿ ತಾರತಮ್ಯ ಮೇಲ್ವರ್ಗದ ಜನರ ಹಿಡಿತದಿಂದ ಕ್ಷೌರ ಮಾಡಲು ನಿರಾಕರಿಸುವ ದೃಷ್ಟಿಯಿಂದ ಕಲಹ ದೌರ್ಜನ್ಯ ತಪ್ಪಿಸಲು ಸಾಮರಸ್ಯದಿಂದಿರಲು ಎಲ್ಲಾ ಗ್ರಾಮ ಮತ್ತು ಹೋಬಳಿ ಕೇಂದ್ರಗಳಲ್ಲಿ ಗ್ರಾಮ ಪಂಚಾಯ್ತಿವತಿಯಿಂದ ಮಳಿಗೆಗಳನ್ನು ನಿರ್ಮಿಸಿಕೊಡುವುದು.

6. ಕ್ಷೌರಿಕ ಜನಾಂಗವನ್ನು ಪ್ರವರ್ಗ 2 ರಿಂದ ಪರಿಶಿಷ್ಟ ಪಂಗಡ ಅಥವಾ ಪ್ರವರ್ಗ 1ಕ್ಕೆ ಸೇರ್ಪಡೆ ಮಾಡುವ ಮೂಲಕ ಜನಾಂಗಕ್ಕೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಹಾಗೂ ರಾಜಕೀಯದಲ್ಲೂ ಮೀಸಲಾತಿಗೆ ಅವಕಾಶ ಕಲ್ಪಿಸುವುದು.

7. ಕಡಿಮೆ ಬಡ್ಡಿ ದರಗಳ ಮತ್ತು ಸಬ್ಸಿಡಿಗಳ ಮೂಲಕ ಸರ್ಕಾರದ ವತಿಯಿಂದ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳ ಮೂಲಕ ನೀಡುವುದು ಬಂಡವಾಳ ವಾಹಿಗಳ ಸ್ಪರ್ಧೆ ಎದುರಿಸಲು ವೃತ್ತಿಯನ್ನು ಮೇಲ್ದರ್ಜೆ ಗೇರಿಸಲು ಮಧ್ಯವದಿ ಮತ್ತು ದೀರ್ಘಾವಧಿ ಸಾಲ ಸೌಲಭ್ಯಗಳನ್ನು ನೀಡಲು ಕಡಿಮೆ ಬಡ್ಡಿದರ ಮತ್ತು ಪ್ರೋತ್ಸಾಹ ಧನ ನೀಡಲು ಒತ್ತು ನೀಡಬೇಕಾಗಿ ಮನವಿ.

8. ಜನಾಂಗದ ಮಂಗಳವಾದ್ಯ ಕಲಾವಿದರಿಗೆ ಮಾಸಾಸನ ಆರೋಗ್ಯ ವಿಮೆ ಮತ್ತು ಕಲಾವಿದರಿಗೆ ಗೌರವ ಪ್ರತಿಭಾ ಪುರಸ್ಕಾರಗಳನ್ನು ನೀಡಿ ಗೌರವಿಸುದು. ಮಂಗಳವಾದ್ಯ ಉಳಿವಿಗಾಗಿ ಸಂಗೀತಗಾರರಲ್ಲಿ ಆಸಕ್ತಿ ಇರುವ ಮಕ್ಕಳಿಗೆ ಪ್ರೋತ್ಸಾಹಿಸಿ ಮಂಗಳವಾದ್ಯ ಕಲಿಕೆಗೆ ಆದ್ಯತೆ ನೀಡುವುದು.

9. ವೈದ್ಯ ವೃತ್ತಿಗೆ ಸಮಾನವಾದಂತಹ ಕ್ಷೌರಿಕ ವೃತ್ತಿ ಮಾಡುವ ಕಾರ್ಮಿಕರಿಗೆ ವೈದ್ಯಕೀಯ ವೃತ್ತಿಯ ನಿಯಮಗಳಂತೆ ಅಂಟು ರೋಗಿಗಳಿಂದ ರಕ್ಷಿಸಿಕೊಳ್ಳಲು ಪರಿಕರಗಳನ್ನು ನಾನಾ ವಿಧದ ಕಾಯಿಲೆಯ ರೋಗಿಗಳಿಗೂ ಸಹ ಕ್ಷೌರ ಮಾಡುವುದರಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಪರಿಕರಗಳನ್ನು ಕೊಡಬೇಕು ಹಾಗೂ ಪಿ.ಎಫ್, ಇ.ಎಸ್.ಐ ಸೌಲಭ್ಯಗಳನ್ನು ಸರ್ಕಾರದ ವತಿಯಿಂದ ನೀಡಬೇಕು.

10. "ಸ್ವಾವಲಂಭಿ ಸಾರಥಿ" ಯೋಜನೆಗೆ ಒಳಪಡಿಸಿ ಎಲ್ಲಾ ಕ್ಷೌರಿಕ ವರ್ಗದವರ ಆರ್ಥಿಕ ಭದ್ರತೆಗೆ ಕಡಿಮೆ ಬಡ್ಡಿಯಲ್ಲಿ ಸಾಲ ಸಿಗುವಂತೆ ಕ್ರಮ ವಹಿಸುವುದು.

ಹೀಗೆ ಮಂಡಲದ ವತಿಯಿಂದ ಸರ್ಕಾರಕ್ಕೆ 10 ಹಲವು ಬೇಡಿಕೆಗಳನ್ನು ಈಡೇರಿಸುವ ಸಲುವಾಗಿ ಮನವಿಯನ್ನು ಸಲ್ಲಿಸಲಾಗಿದೆ ಈ ಸಂಬಂಧ ಮಾರ್ಚ್ 16 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಹಾಮಂಡಲದ ಪ್ರಧಾನ ಕಾರ್ಯದರ್ಶಿ ರಮೇಶ್ ಉಪಾಧ್ಯಕ್ಷರಾದ ಮಾದಪ್ಪ ಖಜಾಂಚಿಯಾದ ನರಸಿಂಹಯ್ಯ ಸಂಘಟನಾ ಕಾರ್ಯದರ್ಶಿ ಮುನಿರಾಮು ಸೇರಿದಂತೆ ಸಮುದಾಯದ ಜನರು ಹಾಗೂ ಸಂಘದ ಪದಾಧಿಕಾರಿಗಳು ಇದೆ ವೇಳೆ ಉಪಸ್ಥಿತರಿದ್ದರು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಚುನಾವಣಾನಿರತ ಸಿಬ್ಬಂದಿಗಳು, ರಾಜಕೀಯ ಪಕ್ಷಗಳ ಸಮರ್ಪಕ ಸಮನ್ವಯತೆಯಿಂದ ಪಾರದರ್ಶಕ ಚುನಾವಣೆ ಸಾಧ್ಯ: ಪೊಮ್ಮಲ ಸುನೀಲ್ ಕುಮಾರ್ಬಾಗಲೂರು ಹಾರ್ಡ್‌ವೇರ್ ಪಾರ್ಕ್‌ನಲ್ಲಿ ಜೆಟ್ವರ್ಕ್ ಉತ್ಪಾದನಾ ಸ್ಥಾವರಕ್ಕೆ ಚಾಲನೆ260 ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಸ್ವಚ್ಛತೆ ಕಾರ್ಯದಲ್ಲಿ ಭಾಗಿಆನ್ ಲೈನ್ ಮೂಲಕ ಎಂಎಸ್ಐಎಲ್ ಚಿಟ್ ವ್ಯವಹಾರಕ್ಕೆ ಸಿಎಂ ಚಾಲನೆಬೆಂಗಳೂರು-ಮುಂಬೈ ಹೈಸ್ಪೀಡ್ ರೈಲು, ಬೆಂಗಳೂರು- ವಿಜಯಪುರ ವಂದೇ ಭಾರತ್ ರೈಲು ಮತ್ತು ದಿನವಹಿ ವಿಶೇಷ ರೈಲಿಗೆ ಕೋರಿಕೆಉಡಾನ್' ಯೋಜನೆ ಮೂಲಕ ಭಾರತದ ಭವಿಷ್ಯದ ವೈದ್ಯಕೀಯ ಕಾರ್ಯಪಡೆಯನ್ನು ನಿರ್ಮಿಸುವ ಬದ್ಧತೆಯನ್ನು ಸಾರಿದ ನಾರಾಯಣ ಹೆಲ್ತ್ಮೆಟ್ರೋ ಟಿಕೆಟ್ ದರ: ಕೇಂದ್ರದತ್ತ ಬೊಟ್ಟು ಮಾಡಿದ ರಾಜ್ಯ ಸರ್ಕಾರಕ್ಕೆ ದಾಖಲೆ ಸಮೇತ ಟಾಂಗ್ ಕೊಟ್ಟ ನಿಖಿಲ್ಬಿಜೆಪಿ ಜಾಹೀರಾತಿನ ವಿರುದ್ಧ ಎಎಪಿ ದೂರುಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣ, 20 ವರ್ಷ ಕಳೆದರೂ ರೈತರಿಗೆ ಸಿಗತ ಪರಿಹಾರಕಾಂಗ್ರೆಸ್ ಪಕ್ಷ ಪಾರ್ಕಿಂಗ್ ವಿಚಾರದಲ್ಲಿ ಅಂದಾ ದರ್ಬಾರ್ ಮಾಡಲು ಹೊರಟಿದೆ