LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

6 ಎಸೆತಕ್ಕೆ 6 ವಿಕೆಟ್ ಉಡೀಸ್! 42ರ ಹರೆಯದ ಈ ಬೌಲರ್ ಬರೆದೇಬಿಟ್ಟ ವಿಶ್ವದಾಖಲೆ

ಜುಲೈ 20 ರಿಂದ ಜಿಂಬಾಬ್ವೆಯಲ್ಲಿ ಆಫ್ರೋ T10 ಲೀಗ್ ಆರಂಭವಾಗಿದೆ. ಈ ಟೂರ್ನಿಯಲ್ಲಿ ಶುಕ್ರವಾರ ಜೋಹಾನ್ಸ್‌ಬರ್ಗ್ ಬಫಲೋಸ್ ಮತ್ತು ಬುಲವಾಯೊ ಬ್ರೇವ್ಸ್ ನಡುವೆ ಅಮೋಘ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ 42ರ ಹರೆಯದ ಆಟಗಾರನೊಬ್ಬ ಕೇವಲ 2 ಓವರ್ ಗಳಲ್ಲಿ 6 ವಿಕೆಟ್ ಕಬಳಿಸಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ.

ಟಿ10 ಕ್ರಿಕೆಟ್‌ನಲ್ಲಿ ಇದೇ ಮೊದಲ ಬಾರಿಗೆ ಇಂಥಾ ಸಾಧನೆ ಮಾಡಲಾಗಿದೆ. ಈ ಆಟಗಾರ ಕಳೆದ ವರ್ಷವಷ್ಟೇ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದರು ಎಂಬುದನ್ನು ಇಲ್ಲಿ ಉಲ್ಲೇಖಿಸಲೇಬೇಕು.

42 ವರ್ಷದ ಬೌಲರ್ ವಿಶ್ವದಾಖಲೆ:

ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಮೊಹಮ್ಮದ್ ಹಫೀಜ್ ಪ್ರಸ್ತುತ ಆಫ್ರೋ ಟಿ10 ಲೀಗ್‌ ನಲ್ಲಿ ಆಡುತ್ತಿದ್ದಾರೆ. ಜೋಬರ್ಗ್ ಬಫಲೋಸ್ ತಂಡದ ನಾಯಕ ಮೊಹಮ್ಮದ್ ಹಫೀಜ್ ಬುಲವಾಯೊ ಬ್ರೇವ್ಸ್ ವಿರುದ್ಧ ಪ್ರಬಲ ಬೌಲಿಂಗ್ ಮಾಡಿದ್ದಾರೆ. ಆಫ್ ಸ್ಪಿನ್ನರ್ ಹಫೀಜ್ 2 ಓವರ್ ಗಳಲ್ಲಿ 4 ರನ್ ನೀಡಿ 6 ವಿಕೆಟ್ ಪಡೆದಿದ್ದಾರೆ. ತಮ್ಮ ಕೋಟಾದ ಮೊದಲ ಓವರ್‌ನ ಮೊದಲ ಎರಡು ಎಸೆತಗಳಲ್ಲಿ ಎರಡು ವಿಕೆಟ್ ಪಡೆದರು. ಇದಾದ ಬಳಿಕ ಓವರ್‌ನ ಐದನೇ ಎಸೆತದಲ್ಲಿ ವಿಕೆಟ್ ಪಡೆದರು. ಆ ನಂತರ ಎರಡನೇ ಓವರ್‌ನಲ್ಲಿಯೂ 3 ವಿಕೆಟ್ ಪಡೆದರು. ಈ ಮಾದರಿಯಲ್ಲಿ 6 ವಿಕೆಟ್ ಪಡೆದ ಮೊದಲ ಬೌಲರ್ ಎನಿಸಿಕೊಂಡರು.

ಮೊಹಮ್ಮದ್ ಹಫೀಜ್‌ಗಿಂತ ಮೊದಲು ಟಿ10 ಕ್ರಿಕೆಟ್‌ ನಲ್ಲಿ ವನಿಂದು ಹಸರಂಗ, ಪ್ರವೀಣ್ ತಾಂಬೆ ಮತ್ತು ಮರ್ಚಂತ್ ಡೆಲಾಂಗೆ ತಲಾ 5 ವಿಕೆಟ್ ಕಬಳಿಸಿದ್ದ ದಾಖಲೆ ಹೊಂದಿದ್ದರು. ಆದರೆ 6 ವಿಕೆಟ್‌ಗಳ ಸಾಧನೆಯನ್ನು ಇದೇ ಮೊದಲ ಬಾರಿಗೆ ಹಫೀಜ್ ಮಾಡಿದ್ದಾರೆ. ಮೊಹಮ್ಮದ್ ಹಫೀಜ್ ತಮ್ಮ ಅದ್ಭುತ ಪ್ರದರ್ಶನದ ಆಧಾರದ ಮೇಲೆ ಜೋಬರ್ಗ್ ಬಫಲೋಸ್‌ಗೆ ಜಯವನ್ನು ತಂದುಕೊಟ್ಟಿದ್ದಾರೆ.

18 ವರ್ಷಗಳ ಅಂತರರಾಷ್ಟ್ರೀಯ ವೃತ್ತಿಜೀವನ:

ಪಾಕಿಸ್ತಾನಕ್ಕಾಗಿ 55 ಟೆಸ್ಟ್, 218 ODI ಮತ್ತು 119 T20 ಪಂದ್ಯಗಳನ್ನು ಆಡಿದ ಆಲ್ ರೌಂಡರ್ ಮೊಹಮ್ಮದ್ ಹಫೀಜ್, 3 ಜನವರಿ 2022 ರಂದು ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ಸಂಪೂರ್ಣವಾಗಿ ನಿವೃತ್ತಿ ಹೊಂದಲು ನಿರ್ಧರಿಸಿದರು. ಮೊಹಮ್ಮದ್ ಹಫೀಜ್ 2018 ರಲ್ಲಿ ಟೆಸ್ಟ್ ಕ್ರಿಕೆಟ್‌ ನಿಂದ ನಿವೃತ್ತರಾದರು. ಎಲ್ಲಾ ಮೂರು ಮಾದರಿಗಳಲ್ಲಿ ಪಾಕಿಸ್ತಾನ ತಂಡವನ್ನು ಮುನ್ನಡೆಸಿದ ಅವರು 3 ಏಪ್ರಿಲ್ 2003 ರಂದು ಶಾರ್ಜಾದಲ್ಲಿ ಜಿಂಬಾಬ್ವೆ ವಿರುದ್ಧ ತಮ್ಮ ಟೆಸ್ಟ್ ಚೊಚ್ಚಲ ಪಂದ್ಯವನ್ನು ಆಡಿದ್ದಾರೆ
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕೇಜ್ರಿವಾಲ್ ಬಂಧನದ ಸುಳುವು ಕೊಟ್ಟ ಎಎಪಿ ನಾಯಕರುಕರ್ನಾಟಕದಲ್ಲಿ 260 ಕೋವಿಡ್ ಪ್ರಕರಣ ದೃಢ - ಓರ್ವ ಮೃತ್ಯುಸ್ತ್ರೀ ಶಾಪ ಯಾವ ರೂಪದಲ್ಲಿ ಅಂಟಿಕೊಳ್ಳುತ್ತದೆ ಸ್ತ್ರೀ ಶಾಪದಿಂದ ಆಗುವಂತಹ ಸಮಸ್ಯೆಗಳನ್ನು ತಿಳಿದುಕೊಳ್ಳಿ ಸ್ತ್ರೀ ಶಾಪಕ್ಕೆ ಒಳಗಾದರೆ ನರಕ ಯಾಚನೆ ಖಂಡಿತ!ಹಸಿ ಕೊಬ್ಬರಿ ತಿನ್ನುವುದರಿಂದ ಆರೋಗ್ಯಕ್ಕೆ ಇಷ್ಟೊಂದು ಲಾಭವ?ಜನವರಿ 13ರಂದು ಕೆ-ಸೆಟ್ ಪರೀಕ್ಷೆ .!ಕಾಲುಂಗುರಕ್ಕೆ ಮುಕ್ತಿ.!ಅರಣ್ಯ ಭೂಮಿಯಲ್ಲಿ ಕೃಷಿ ಮಾಡುತ್ತಿರುವ ರೈತರಿಗೆ ಖುಷಿ ಸುದ್ದಿ.!ಪದವಿ ವಿದ್ಯಾರ್ಥಿಗಳಿಗೆ ಬಿಗ್ ಶಾಕ್‌!ಶುಲ್ಕ ಹೆಚ್ಚಳ ಇಷ್ಟು.!ರೈಲ್ವೆ ಪ್ರಯಾಣಿಕರಿಗೆ ಮುಖ್ಯವಾದ ಮಾಹಿತಿ.!ಗಿಗ್ ಕಾರ್ಮಿಕರ ವಿಮಾ ಯೋಜನೆ: ನೋಂದಾಯಿಸಲು ಸೂಚನೆಕೇಬಲ್ ಟೆವಿಲಿಷನ್ ಮೇಲ್ವಿಚಾರಣಾ ಸಮಿತಿ ಸಭೆ : ಜಾಹಿರಾತು ಸಂಹಿತೆ ಪಾಲನೆ ಮಾಡುವುದು ಕಡ್ಡಾಯ; ಜಿಲ್ಲಾಧಿಕಾರಿ ಡಾ: ವೆಂಕಟೇಶ್ ಎಂ.ವಿ