ಹುಣಸೂರು :
ಹುಣಸೂರು ತಾಲೂಕಿನ ಕಡೇಮನುಗನಹಳ್ಳಿಯಲ್ಲಿ ಫಸಲಿಗೆ ಬಂದಿದ್ದ ಅಡಿಕೆ ತೋಟವನ್ನು ನಾಶ ಮಾಡಲಾಗಿದೆ. ಮದುವೆಗೆ ನಡೆದ ಒಪ್ಪಂದದಂತೆ ಹೆಣ್ಣು ಕೊಡಲಿಲ್ಲ ಎಂದು ಆಕ್ರೋಶಗೊಂಡ ಯುವಕ ಹುಡುಗಿಯ ಮನೆಗೆ ಸೇರಿದ ಅಡಕೆ ಮತ್ತು ಶುಂಠಿ ಬೆಳೆಯನ್ನು ನಾಶ ಮಾಡಿ ಸೇಡು ತೀರಿಸಿಕೊಂಡಿದ್ದಾನೆ. ಕಡೇ ಮನುಗನಹಳ್ಳಿ ಗ್ರಾಮದ ಅಶೋಕ ಎಂಬಾತ ಈ ಕೃತ್ಯವನ್ನು ಎಸಗಿದ್ದಾನೆ. ಗ್ರಾಮದ ವೆಂಕಟೇಶ್ ಅವರಿಗೆ ಸೇರಿದ ಅಡಕೆ ತೋಟ ಹಾಗೂ ಶುಂಠಿ ಬೆಳೆ ನಾಶವಾಗಿದೆ. ವೆಂಕಟೇಶ ಅವರ ಪುತ್ರಿಯನ್ನು ಅಶೋಕನಿಗೆ ಮದುವೆ ಮಾಡಿಕೊಡಲು ಮಾತುಕತೆಯಾಗಿತ್ತು. ಆದರೆ ಅಶೋಕನ ನಡವಳಿಕೆಯಿಂದ ಬೇಸರಗೊಂಡ ಯುವತಿ ಮದುವೆಗೆ ನಿರಾಕರಿಸಿದಳು. ಇದರಿಂದ ಸಿಟ್ಟುಗೊಂಡ ಅಶೋಕನು ವೆಂಕಟೇಶ್ ಅವರ ಅರ್ಧ ಎಕರೆ ಶುಂಠಿ ಬೆಳೆ ನಾಶ ಮಾಡಿದ್ದಾನೆ. ಈ ಬಗ್ಗೆ ಪೊಲೀಸರಿಗೆ ದೂರು ದಾಖಲು ಮಾಡಿದ್ದರು.
ಆದರೆ ಮತ್ತೆ ಮಂಗಳವಾರ ರಾತ್ರಿ ಫಸಲಿಗೆ ಬಂದಿದ್ದ 800 ಅಡಕೆ ಮರಗಳನ್ನು ತುಂಡು ತುಂಡು ಮಾಡಿ ಅವುಗಳನ್ನು ನಾಶ ಮಾಡಿದ್ದಾನೆ ಎಂದು ವೆಂಕಟೇಶ ಪೊಲೀಸರಿಗೆ ದೂರು ನೀಡಿದ್ದಾರೆ.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.