ಕುಷ್ಟಗಿ :- ತಾಲೂಕಿನ ಗುಮಗೇರಾ ಗ್ರಾಮದ ಹತ್ತಿರವಿರುವ ಸೋಲಾರ್ ಘಟಕದಲ್ಲಿ ಕುಷ್ಟಗಿ ಅಗ್ನಿಶಾಮಕ ಠಾಣಾ ವತಿಯಿಂದ 82ನೇ ಅಗ್ನಿಸೇವಾ ಸಪ್ತಾಹ ಕಾರ್ಯಕ್ರಮ ಜರುಗಿತು.
ತುರ್ತು ಪರಿಸ್ಥಿತಿಯಲ್ಲಿ ಬೆಂಕಿ ನಂದಿಸುವ ಹಾಗೂ ಬೆಂಕಿಯಲ್ಲಿ ಸುಟ್ಟು ಗಾಯಗೊಂಡ ಕಾರ್ಮಿಕರನ್ನು ಹೇಗೆ ರಕ್ಷಣೆ ಮಾಡಬೇಕೆಂಬ ಬಗ್ಗೆ ಮತ್ತು ಎಲೆಕ್ಟ್ರಿಕಲ್ ಶಾರ್ಟ್ ಸರ್ಕ್ಯೂಟ್ ನಿಂದ ಆಗಬಹುದಾದ ಅವಘಡ ಹೇಗೆ ತಪ್ಪಿಸಬಹುದು, ತುರ್ತು ಸಂದರ್ಭದಲ್ಲಿ ಅಗ್ನಿಶಾಮಕ ಠಾಣೆಯ ಸೇವೆಯನ್ನು ಪಡೆದುಕೊಳ್ಳಬೇಕು. ಸಾರ್ವಜನಿಕರು ಅಗ್ನಿ ಅವಘಡ ಆಗದಂತೆ ಮುನ್ನೆಚ್ಚರಿಕೆ ಕ್ರಮವನ್ನು ವಹಿಸಿಕೊಳ್ಳಬೇಕು,ಎಂದು ಅಗ್ನಿಶಾಮಕ ಠಾಣಾಧಿಕಾರಿ ಮಾಳಿಂಗರಾಯ ಸುದೀರ್ಘವಾಗಿ ಹೇಳಿದರು.
ತದನಂತರದಲ್ಲಿ ಬೆಂಕಿ ನಂದಿಸುವ ಮತ್ತು ಬೆಂಕಿಯಲ್ಲಿ ಗಾಯಗೊಂಡವರನ್ನು ರಕ್ಷಣೆ ಮಾಡುವ ಅಣುಕು ಪ್ರದರ್ಶನ ನಡೆಯಿತು. ಸೋಲಾರ್ ಘಟಕದಲ್ಲಿ ಈ ಕಾರ್ಯಕ್ರಮವನ್ನು ಮಾಡಿದ್ದಕ್ಕೆ ಅಗ್ನಿಶಾಮಕ ಠಾಣಾಧಿಕಾರಿಗಳಿಗೆ ಕಿರು ಕಾಣಿಕೆ ನೀಡಿ ಸೋಲಾರ ಘಟಕದ ಸಿಬ್ಬಂದಿಗಳು ಅಭಿನಂದನೆಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಕುಷ್ಟಗಿ ಅಗ್ನಿಶಾಮಕ ಸಹಾಯಕ ಠಾಣಾಧಿಕಾರಿ ಅಸ್ಮಾo ಪುಣೆಕರ್, ಅಧಿಕಾರಿಗಳಾದ ನಾಗಪ್ಪ ಗಂಗನಾಳ, ಚಾಲಕ ಬಸವರಾಜ, ಸಿಬ್ಬಂದಿಗಳಾದ ಪ್ರವೀಣ್,ಬಸವರಾಜ ಹೊರಕೇರಿ, ಮಲ್ಲಿಕಾರ್ಜುನ, ಸೋಲಾರ್ ಘಟಕದ ಅಧಿಕಾರಿಗಳಾದ ಆನಂದ ಹೊಸಮನಿ, ಆನಂದ ಆರ್ ಕೆ., ಮಹಬೂಬ ಕಾರಜೋಳ, ಸೆಕ್ಯೂರಿಟಿ ಸೂಪರ್ವೈಸರ್ ಬಸನಗೌಡ, ಸಿಬ್ಬಂದಿಗಳಾದ ವಿಶ್ವನಾಥ, ಕಲ್ಲಯ್ಯ, ಮಹಾಂತೇಶ, ಬಸನಗೌಡ, ಶಾಮಿದ್, ಟೆಕ್ನಿಷಿಯನ್ ವಿಭಾಗದ ಸಿಬ್ಬಂದಿಗಳಾದ ಪರಸಪ್ಪ ಅಳ್ಳಳ್ಳಿ, ಶಿವಶರಣು , ಸಂತೋಷ ಕಾರ್ಮಿಕರಾದ ಮಾರುತಿ, ಶರಣಪ್ಪ, ಬೀರಪ್ಪ ಸೇರಿದಂತೆ ಇನ್ನಿತರ ಎಲ್ಲಾ ಸಿಬ್ಬಂದಿಗಳು ಭಾಗವಹಿಸಿದ್ದರು.