LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸಂಧ್ಯಾ ಜನ ಸಂಸ್ಕೃತಿ ಟ್ರಸ್ಟ್ ನಿಂದ 8ನೇ ವರ್ಷದ ವಾರ್ಷಿಕೋತ್ಸವ

ಬೆಂಗಳೂರು: ಸಂಧ್ಯಾ ಜನ ಸಂಸ್ಕೃತಿ ಟ್ರಸ್ಟ್ ವತಿಯಿಂದ ಎಂಟನೇ ವರ್ಷದ ವಾರ್ಷಿಕ ಉತ್ಸವದ ಅಂಗವಾಗಿ ಗೀತ ಗಾಯನ ಹಾಗೂ ಪೋಸ್ಟ್ ಮ್ಯಾನ್ ಪಜೀತಿ ಎಂಬ ನಾಟಕವನ್ನು ಕಲಾವಿದರು ಉತ್ಸಾಹವಾಗಿ ಅಭಿನಯಿಸಿದರು.


ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದ ಅಕ್ಕಮಹಾದೇವಿ ಸಭಾಂಗಣದಲ್ಲಿ ಕಾರ್ಯಕ್ರಮವನ್ನು ಚಲನಚಿತ್ರ ನಿರ್ಮಾಪಕರು ಹಾಗೂ ರಂಗಭೂಮಿ ಕಲಾವಿದರು ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ದೊಡ್ಡ ಮನೆ ವೆಂಕಟೇಶ್ ಅವರು ಚಾಲನೆ ನೀಡಿ ಮಾತನಾಡಿದರು, ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿಯಾದ ಪಿ ರುದ್ರಪ್ಪ ಅವರು ಕಳೆದ ಎಂಟು ವರ್ಷಗಳಿಂದ ಟ್ರಸ್ಟ್ ಅನ್ನು ಸಮಾಜಮುಖಿಯಾಗಿ ಬೆಳೆಸಿಕೊಂಡು ಬರುತ್ತಿದ್ದಾರೆ ಇದು ಕೇವಲ ಮನೋರಂಜನೆಗೆ ಸೀಮಿತವಲ್ಲದೆ ಸಾಮಾಜಿಕ ಕಳಕಳಿಯನ್ನು ಇಟ್ಟುಕೊಂಡು ಟ್ರಸ್ಟ್ ನಡೆದು ಬಂದಿದೆ.  ರುದ್ರಪ್ಪ ಅವರು ರಂಗಭೂಮಿ ಕಲಾವಿದರಾಗಿದ್ದು ರಂಗಭೂಮಿ ಕಲೆಯನ್ನು ಉಡಿಸುವ ಬೆಳೆಸುವ ಹಾಗೂ ಮಕ್ಕಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನಿರಂತರವಾಗಿ ಹತ್ತು ಹಲವು ಚಟುವಟಿಕೆಗಳನ್ನು ಮಾಡಿಕೊಂಡು ಇದ್ದಾರೆ ಎಂದರು.


ಇನ್ನು ಕಾರ್ಯಕ್ರಮಕ್ಕೆ ಉದ್ದೇಶಿಸಿ ಅಖಿಲ ಕರ್ನಾಟಕ ರಂಗಭೂಮಿ ಕಲಾವಿದರ ಒಕ್ಕೂಟದ ರಾಜ್ಯಾಧ್ಯಕ್ಷರು ಹಾಗೂ ಕಲಾವಿದರಾದ ಆರ್ ರಾಮಚಂದ್ರ (ಜಲಮಂಡಳಿ) ಅವರು ಮಾತನಾಡಿ ಸಂಧ್ಯಾ ಜನ ಸಂಸ್ಕೃತಿ ಟ್ರಸ್ಟ್ ಕಳೆದ ಎಂಟು ವರ್ಷಗಳಿಂದ ಹಲವು ಮಜಲುಗಳಲ್ಲಿ ಹಾಗೂ ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಯಾವುದೇ ಫಲಾಪೇಕ್ಷೆ ಇಲ್ಲದೆ ಟ್ರಸ್ಟ್ ಅನ್ನು ನಡೆಸಿಕೊಂಡು ಬಂದಿರುವುದು ಸಾಮಾನ್ಯವಾಗಿ ಸಂಗತಿಯಲ್ಲ ಅದರಲ್ಲಿಯೂ ರಂಗಭೂಮಿ ಕಲೆಯನ್ನು ಉಳಿಸುವ ನಿಟ್ಟಿನಲ್ಲಿ ಅವಿರತವಾಗಿ ಶ್ರಮವನ್ನು ವಹಿಸಿದ್ದಾರೆ ಅದೇ ರೀತಿ ಮಕ್ಕಳಲ್ಲಿ ಕಲೆಯನ್ನು ಬೆಳೆಸುವ ನಿಟ್ಟಿನಲ್ಲಿ ಪಣವನ್ನು ಸಹ ಕೊಟ್ಟು ಮಕ್ಕಳನ್ನು ಪ್ರೋತ್ಸಾಹ ಮಾಡುತ್ತಿರುವುದು ಹೆಗ್ಗಳಿಕೆಯ ವಿಚಾರ.


ಇನ್ನು ವೇದಿಕೆ ಮೇಲೆ ವರ್ಷಿ ಎ, ವರ್ಷಿ ವೆಂಕಟೇಶ್ ಇಬ್ಬರು ಹೆಣ್ಣು ಮಕ್ಕಳು ಭರತನಾಟ್ಯ ಪ್ರಸ್ತುತಿಯನ್ನು ವೇದಿಕೆ ಮೇಲೆ ಮನೋಘ್ನವಾಗಿ ಪ್ರದರ್ಶನ ನೀಡಿ ನೆರದಿದ್ದವರಲ್ಲಿ ಹರ್ಷವನ್ನು ತಂದುೊಡ್ಡಿದರು. ಇನ್ನು ಪಿ ರುದ್ರಪ್ಪ ಮತ್ತು ತಂಡದವರಿಂದ ಸಮೂಹ ಗೀತ ಗಾಯನ ಹಚ್ಚುಕಟ್ಟಾಗಿ ನೆರವೇರಿತು ಹಾಗೂ ಖ್ಯಾತ ಹಾಸ್ಯ ಚಲನಚಿತ್ರ ನಟರು ಟಿಎನ್ ಬಾಲಕೃಷ್ಣ. ಹಾಗೂ ಪೋಸ್ಟ್ ಮ್ಯಾನ್ ಪಜೀತಿ ನಾಟಕದ ನಿರ್ದೇಶನ ಮಾಡಿರುವ ಫೋಟೋ ವೆಂಕಟೇಶ್ ಅವರ ನೇತೃತ್ವದ ತಂಡ ವೇದಿಕೆ ಮೇಲೆ ಮನೋಜ್ಞವಾಗಿ ನಾಟಕವನ್ನು ಪ್ರಸ್ತುತಿ ವ್ಯಕ್ತಪಡಿಸಿದರು.


ಇನ್ನು ಕಾರ್ಯಕ್ರಮಕ್ಕೆ ಮುಖ್ಯ ಅಧಿಧಿಗಳಾಗಿ ಸಮಾಜ ಸೇವಕರು ಹಾಗೂ ರಂಗಭೂಮಿ ಕಲಾವಿದರಾದ ಕೆ ಮುನಿರಾಜು ಕಲಾವಿದರು ಹಾಗೂ ಕೆ ಎಸ್ ಆರ್ ಪಿ ಉದ್ಯೋಗದಲ್ಲಿರುವ ಆರ್ ಮುನಿಸ್ವಾಮಿ ಹಾಗೂ ಸಮಾಜಸೇವಕರಾದ ಆರ್ ಕೇಶವಮೂರ್ತಿ ಕಲಾವಿದರಾದ ವೀರಭದ್ರಪ್ಪ ರಾಕೇಶ್ ಹರ್ಷಕುಮಾರ್ ಸಂಧ್ಯಾರಾಣಿ ಪ್ರವೀಣ್ ಸೇರಿದಂತೆ ಅನೇಕರು ಈ ಒಂದು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಚುನಾವಣಾನಿರತ ಸಿಬ್ಬಂದಿಗಳು, ರಾಜಕೀಯ ಪಕ್ಷಗಳ ಸಮರ್ಪಕ ಸಮನ್ವಯತೆಯಿಂದ ಪಾರದರ್ಶಕ ಚುನಾವಣೆ ಸಾಧ್ಯ: ಪೊಮ್ಮಲ ಸುನೀಲ್ ಕುಮಾರ್ಬಾಗಲೂರು ಹಾರ್ಡ್‌ವೇರ್ ಪಾರ್ಕ್‌ನಲ್ಲಿ ಜೆಟ್ವರ್ಕ್ ಉತ್ಪಾದನಾ ಸ್ಥಾವರಕ್ಕೆ ಚಾಲನೆ260 ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಸ್ವಚ್ಛತೆ ಕಾರ್ಯದಲ್ಲಿ ಭಾಗಿಆನ್ ಲೈನ್ ಮೂಲಕ ಎಂಎಸ್ಐಎಲ್ ಚಿಟ್ ವ್ಯವಹಾರಕ್ಕೆ ಸಿಎಂ ಚಾಲನೆಬೆಂಗಳೂರು-ಮುಂಬೈ ಹೈಸ್ಪೀಡ್ ರೈಲು, ಬೆಂಗಳೂರು- ವಿಜಯಪುರ ವಂದೇ ಭಾರತ್ ರೈಲು ಮತ್ತು ದಿನವಹಿ ವಿಶೇಷ ರೈಲಿಗೆ ಕೋರಿಕೆಉಡಾನ್' ಯೋಜನೆ ಮೂಲಕ ಭಾರತದ ಭವಿಷ್ಯದ ವೈದ್ಯಕೀಯ ಕಾರ್ಯಪಡೆಯನ್ನು ನಿರ್ಮಿಸುವ ಬದ್ಧತೆಯನ್ನು ಸಾರಿದ ನಾರಾಯಣ ಹೆಲ್ತ್ಮೆಟ್ರೋ ಟಿಕೆಟ್ ದರ: ಕೇಂದ್ರದತ್ತ ಬೊಟ್ಟು ಮಾಡಿದ ರಾಜ್ಯ ಸರ್ಕಾರಕ್ಕೆ ದಾಖಲೆ ಸಮೇತ ಟಾಂಗ್ ಕೊಟ್ಟ ನಿಖಿಲ್ಬಿಜೆಪಿ ಜಾಹೀರಾತಿನ ವಿರುದ್ಧ ಎಎಪಿ ದೂರುಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣ, 20 ವರ್ಷ ಕಳೆದರೂ ರೈತರಿಗೆ ಸಿಗತ ಪರಿಹಾರಕಾಂಗ್ರೆಸ್ ಪಕ್ಷ ಪಾರ್ಕಿಂಗ್ ವಿಚಾರದಲ್ಲಿ ಅಂದಾ ದರ್ಬಾರ್ ಮಾಡಲು ಹೊರಟಿದೆ