LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ತೆರೆದ ಬಾವಿಗೆ ಬಿದ್ದಿದ್ದ ಹಸು ರಕ್ಷಿಸಿದ ಅಗ್ನಿ ಶಾಮಕದಳ ಸಿಬ್ಬಂದಿ

ಶಿವಮೊಗ್ಗ,ಜೂ.20 : ತೆರೆದ ಬಾವಿಗೆ ಬಿದ್ದಿದ್ದ ಹಸುವನ್ನು ಅಗ್ನಿಶಾಮಕ ದಳದ ಸಿಬ್ಬಂದಿಗಳು ರಕ್ಷಿಸಿದ್ದಾರೆ. ಶಿವಮೊಗ್ಗದ ಹೊರ ವಲಯ ಹರಿಗೆಯ ಹಾಥಿ ನಗರದಲ್ಲಿ ತೆರೆದ ಬಾವಿಗೆ ಹಸವೊಂದು ಬಿದ್ದಿತ್ತು.  ಹಸು ಬಾವಿಗೆ ಬಿದ್ದು ಮೇಲಕ್ಕೆ ಏರಲು ಆಗದೆ ಒದ್ದಾಡುತ್ತಿತ್ತು.

ಇದನ್ನು ಕಂಡ ಸ್ಥಳೀಯರು ಅಗ್ನಿ ಶಾಮಕದಳದವರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಸಿಬ್ಬಂದಿಗಳು ಮೊದಲು ಹಸುವನ್ಜು ಶಾಂತವಾಗಿಸಿ, ಸಿಬ್ಬಂದಿಯೊಬ್ಬರು ಕೆಳಗೆ ಇಳಿದು ಅದರ ಹೊಟ್ಟೆ ಭಾಗಕ್ಕೆ ಬೆಲ್ಟ್ ಗಳನ್ನು ಕಟ್ಟಿ ಮೇಲಕ್ಕೆ ಎತ್ತಿದ್ದಾರೆ. ಮೇಲಕ್ಕೆ ಬಂದ ಹಸು ಬದುಕಿದೆಯ ಬಡ ಜೀವವೆ ಎಂಬಂತೆ ಅಲ್ಲಿಂದ ಓಡಿ ಹೋಗಿದೆ.

ಕಾರ್ಯಾಚರಣೆಯ ವೇಳೆ ಡಿಎಫ್ಓ ಅಶೋಕ್ ಕುಮಾರ್,  ಎಎಫ್ಎಸ್ ಟಿ ಓ ಮುಕುದಂ, ಎಲ್. ಎಫ್. ಚೇತನ್, ಡಿ.ಎಂ. ಗಣೇಶ್, ಎಫ್ .ಡಿ. ಶರತ್ ಕುಮಾರ್ , ಎಫ್.ಎಂ.ಯರ್ರಿಸ್ವಾಮಿ, ನಾಯರಿ, ಪ್ರಸಾದನ್ ಹಾಗೂ ಯಶವಂತ್ ಹಾಜರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST