Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ಚಿಂಚೋಳಿ ; ಕಾಂಗ್ರೆಸ್‌ ಭದ್ರಕೋಟೆಯಲ್ಲಿ ಮತ್ತೆ ಅರಳುತ್ತಾ "ಕಮಲ"





ಸುದ್ದಿಮೂಲ ವಾರ್ತೆ,

ಚಿಂಚೋಳಿ ಏ.8: ವಿಧಾನಸಭಾ  ಮತಕ್ಷೇತ್ರಕ್ಕೆ ತನ್ನದೇಯಾದ  ಇತಿಹಾಸ ಹೊಂದಿದ್ದು ಎಲ್ಲರ ಕಣ್ಣು ಚಿಂಚೋಳಿ ಕ್ಷೇತ್ರದ ಕಡೆಗಿದೆ. ಇಲ್ಲಿ ಯಾವ ಪಕ್ಷ ಗೆಲ್ಲತ್ತೆಯೋ ಆ ಪಕ್ಷ ಕರ್ನಾಟಕದಲ್ಲಿ ಅಧಿಕಾರದ ಗದ್ದುಗೆ ಹಿಡಿಯುತ್ತೆ ಎಂಬುದು ವಾಡಿಕೆ. ಕಟು ಸತ್ಯ ಇದಕ್ಕೆ ಪ್ರತಿ ಚುನಾವಣೆಯೇ ಸಾಕ್ಷೀ ಕಳೆದ 2019 ಉಪ ಚುನಾಣೆಯಲ್ಲಿ ಬಿಜೆಪಿ ಅಭ್ಯರ್ಥಿ ಜಯಶಾಲಿಯಾದಾಗ ಕಾಂಗ್ರೆಸ್ ಜೆಡಿಎಸ್ ಸಮಿಶ್ರ ಸರಕಾರ ಪತನಾವಾಗಿ ಕಾಕತಾಳಿಯಂತೆ ಬಿಜೆಪಿ ಸರಕಾರ ರಚನೆಯಾಯಿತು.
ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ: ಅವಿನಾಶ್ ಜಾದವ ರವರು ಗೆಲ್ಲಲು ಕೋಲಿ ಸಮಾಜದ ಮತಗಳು ನಿರ್ಣಾಯಕ ವಾಗಿದ್ದು. ಲಕ್ಷ್ಮಣ ಆವುಂಟಿ ಹಾಗೂ ಅವರ ತಂಡ ಪ್ರಮುಖ ಪಾತ್ರವಹಿಸಿದ್ದು ಅಭ್ಯರ್ಥಿಯ ಚುನಾವಣಾ ಎಜೆಂಟರಾಗಿ ಹಾಗೂ ಪ್ರಚಾರ ಪ್ರಮುಖರಾಗಿ ಲಕ್ಷ್ಮಣ ಆವುಂಟಿ ರವರು ಪ್ರತಿ ಭೂತಗೆ ಅಭ್ಯರ್ಥಿ ಯೊಂದಿಗೆ ಮುಖಂಡರೊಂದಿಗೆ ತೆರಳಿ ಕೋಲಿ ಸಮುದಾಯ ಹಾಗೂ ಹಿಂದುಳಿದ ಸಮುದಾಯದ ಮತ ಸೆಳೆಯಲು ಯಶಸ್ವಿಯಾಗಿದ್ದಾರು.


ಧರ್ಮ ಪತ್ನಿ  ನರಸಮ್ಮ ಆವುಂಟಿ ರವರು ಕೂಡಾ ಸ್ತ್ರೀ ಶಕ್ತಿ ಒಕ್ಕೂಟದ ಅದ್ಯಕ್ಷರಾಗಿದ್ದು ಸಾವಿರಾರು  ಮಹಿಳೆಯರನ್ನು  ಮನವೊಲಿಸಿ  ಡಾ: ಅವಿನಾಶ್ ಜಾದವರವರನ್ನು ಗೆಲ್ಲಿಸಲು ಶ್ರಮವಹಿಸಿದರು.ಅಷ್ಟೇ ಯಲ್ಲ ಕಲಬುರ್ಗಿ ಹಾಗೂ ಬೀದರ್ ಲೋಕಸಭೆ ಚುನಾವಣೆಯಲ್ಲಿ ಮಾಜಿ ಸಚಿವ ಬಾಬುರಾವ ಚಿಂಚನಸೂರ್ ಜೊತೆಗೂಡಿ ಕೋಲಿ ಸಮಾಜದ ಮತಗಳು ಬಿಜೆಪಿ ಪಕ್ಷಕ್ಕೆ ಬರಲು ಪ್ರಮುಖ ಪಾತ್ರ ವಹಿಸಿದರು ಲಕ್ಷ್ಮಣ ಆವುಂಟಿ ರವರು ಬೀದರ ಲೋಕ ಸಭಾ ಕ್ಷೇತ್ರದ ಚಿಂಚೋಳಿ ಮಂಡಲದ ಸಂಚಾಲಕರಾಗಿಯು ಕೆಲಸ ಮಾಡಿದರು. ಪಕ್ಷ ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ದುಡಿದ ಇವರನ್ನು ಬಿಜೆಪಿ ಪಕ್ಷ ಹಾಗೂ ಶಾಸಕರು ಸಂಸದರು ಯಾವುದೇ  ಸ್ಥಾನ ಮಾನ ನೀಡದೆ ಸಂಪೂರ್ಣವಾಗಿ ಮುಲೆಗುಂಪು ಮಾಡಲಾಗಿತ್ತು ಅಲ್ಲದೇ  ಸಮಾಜದ ಪ್ರಮುಖ ಬೇಡಿಕೆಯಾದ ಎಸ್ ಟಿ ಸೇರ್ಪಡೆಯ ಕುರಿತು ಬಿಜೆಪಿ ಪಕ್ಷ ಹಾಗೂ ಸಂಸದರುಗಳ ಮೃದು ಧೋರಣೆಗೆ ಸುಳ್ಳು ಭರವಸೆಗೆ ಬೇಸತ್ತು ಜನರ ಒತ್ತಾಯದ ಮೇರೆಗೆ ಬಾಬುರಾವ ಚಿಂಚನಸೂರ್ ಜೊತೆಗೆ ಬಿಜೆಪಿ ತ್ಯಜಿಸಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಾಗಿನಿಂದ ಚಿಂಚೋಳಿ ಕ್ಷೇತ್ರದ ಹಳ್ಳಿ ಹಳ್ಳಿಗು ತೆರಳಿ ಬಿಜೆಪಿ ಮತ್ತು ಸಂಸದರು ಕೋಲಿ ಸಮಾಜಕ್ಕೆ ಮಾಡಿದ ಅನ್ಯಾಯವನ್ನು ಸಮಾಜದ ಬಂದುಗಳಿಗೆ ತಿಳಿಸಿ ಸಾವಿರಾರು ಕಾರ್ಯಕರ್ತರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಗೊಳಿಸಿ ಸುಭಾಷ್ ರಾಠೋಡ ರವರನ್ನು ಬೆಂಬಲಿಸಲು ಮನವಿ ಮಾಡಿಕೊಳ್ಳುತ್ತಿದ್ದು ಕಾಂಗ್ರೆಸ್ ಪಕ್ಷದ ಪ್ರಚಾರದ ಸಾರತ್ಯ ಕುಡಾ ಪಕ್ಷ ವಹಿಸಿದೆ.
ಇವರಂತೆ ಇವರ ಧರ್ಮ ಪತ್ನಿ ಕೂಡಾ ಇಂದು ಸಾವಿರಾರು ಮಹಿಳೆಯರು ಬೆಂಬಲಿಗರೊಂದಿಗೆ ಬಿಜೆಪಿ ತ್ಯಜಿಸಿ ಸುಭಾಷ್ ರಾಠೋಡ ಹಾಗೂ ಡಾಃ ಶರಣ ಪ್ರಕಾಶ ಪಟೀಲ್ ರವರ ನಾಯಕತ್ವ ದಲ್ಲಿ ಪಕ್ಷದ ಅದ್ಯಕ್ಷರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಯಾದರು.

ಇದರಿಂದ ಚಿಂಚೋಳಿ ಸೇಡಂ ಕ್ಷೇತ್ರದಲ್ಲಿ ಕಾಂಗ್ರೆಸ್ ಹೆಚ್ಚಿನ ಬಲ ಬಂತಾಗಿದೆ ಇವರ ಜೊತೆಗೆ ಇವರೊಂದಿಗಿರು ಕೋಲಿ ಸಮಾಜದ ಬಂದುಗಳು ಕಾರ್ಯಕರ್ತರು ಮಹಿಳಾ ಪಡೆ ಪಕ್ಷದಲ್ಲಿ ಸಕ್ರಿಯವಾಗಿ ಕೆಲಸ ಮಾಡುಲಾಗುತ್ತಿದೆ.

ಇದಕ್ಕೆ ಸಾಕ್ಷಿ ಲಕ್ಷ್ಮಣ ಆವುಂಟಿ ರವರು ಕಾಂಗ್ರೆಸ್ ಪಕ್ಷಕ್ಕೆ ಸೆರ್ಪಡೆ ಯಾದಾಗಿನಿಂದ ಕೋಲಿ ಸಮಾಜದ ಬಂದುಗಳು ಅವರ ಅಬಿಮಾನಿಗಳು ತಂಡೋಪ ತಂಡವಾಗಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಕಾಂಗ್ರೆಸ್ ನತ್ತ ವಲವು ವ್ಯಕ್ತ ಪಡಿಸುತ್ತಿದ್ದಾರೆ. ನರಸಮ್ಮ ಆವುಂಟಿ ರವರೊಂದಿ ಸಾವಿರಾರು ಮಹಿಳೆಯರು ಜೊತೆಗಿದ್ದಿರುವದು ಸಾಕ್ಷಿಯಾಗಿದೆ.







Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ