Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
National News

ತಾಯಿ ಮಕ್ಕಳಿಗಾಗಿ ಬದುಕುವುದನ್ನೇ ಆಯ್ಕೆ ಮಾಡಿಕೊಳ್ಳಬೇಕು- ಡಿ.ಶಬ್ರಿನಾ

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಂಕಟ ಎಷ್ಟೇಯಿದ್ದರೂ ಒಬ್ಬ ' ತಾಯಿ' ಮಕ್ಕಳಿಗಾಗಿ ಬದುಕುವುದನ್ನೇ ಆಯ್ಕೆ ಮಾಡಿಕೊಳ್ಳಬೇಕು-ಡಿ.ಶಬ್ರಿನಾ ಮಹಮದ್ ಅಲಿ
'
ಮಾನವ ಜನ್ಮ ದೊಡ್ಡದು'. ಈ ದೊಡ್ಡ ಜೀವನದಲ್ಲಿ ಸಾವು,ನೋವು,ಸುಖದುಃಖ,ಏಳು ಬೀಳು,ಆತ್ಮೀಯರ ಅಗಲಿಕೆ,ಅವಮಾನ ಅಪಮಾನ,ಸನ್ಮಾನ ಎಲ್ಲವೂ ಇಲ್ಲಿ ಸಹಜ. ನಾವು ಊಹಿಸಲಾರದಂತಹ ತಿರುವುಗಳು ನಮ್ಮನ್ನು ಹಾದುಹೋಗಿಬಿಡುತ್ತವೆ. ಇಂದು ನಾಳೆಯಂತೆ,,ನಾಳೆ ನಾಡಿದ್ದಂತೆ ಇರಲು ಸಾಧ್ಯವಿಲ್ಲ! ಕಣ್ ಮುಚ್ಚಿ ಕಣ್ ಬಿಡುವುದರೊಳಗೆ ಏನ್ ಬೇಕಾದರೂ ಆಗಬಹುದು! ಇದೆಲ್ಲವೂ ನಾವು ಒಪ್ಪಿಕೊಳ್ಳಲೇಬೇಕಾದ ಮಾನವ ಜೀವನದ ವಾಸ್ತವಿಕತೆ!.

             ಒಂದು ಹೆಣ್ಣು  ಹುಟ್ಟಿನಿಂದ ತಾನು ನಿರ್ವಹಿಸುವ ಪಾತ್ರಗಳಲ್ಲಿ 'ತಾಯಿ' ಪಾತ್ರ ಬಹಳ ಮಹತ್ವದ್ದಾಗಿದೆ. ಮಕ್ಕಳ ಭವಿಷ್ಯದ ದಿನಗಳಿಗಿಂತ  ವರ್ತಮಾನದ ದಿನಗಳು ತಮ್ಮ ತಾಯಿಯನ್ನು ಅತ್ಯಂತ ಅಗತ್ಯವಾಗಿ ಬಯಸುತ್ತವೆ. ತಂದೆಯಿಲ್ಲದೆ ಇದ್ದರೂ ಪರವಾಗಿಲ್ಲ ಮಕ್ಕಳ ಪಾಲಿಗೆ ತಾಯಿ ನಿಜಕೂ ಅತೀ ಅವಶ್ಯಕ ಅನಿಸುತ್ತದೆ. ತಂದೆಯ ಅನುಪಸ್ಥಿತಿಯನ್ನು ತಾಯಿ ತಾನೇ ಎಲ್ಲಾ ಆಗಿ ತನ್ನ ಸ್ಥಾನದ ಜವಾಬ್ದಾರಿ ಜೊತೆಗೆ ತಂದೆಯ ಪಾತ್ರವನ್ನು ನಿಭಾಯಿಸಬಲ್ಲ ಶಕ್ತಿ ಸಾಮರ್ಥ್ಯಗಳು ಪ್ರತಿ ಹೆಣ್ಣಿಗಿರುತ್ತದೆ.  ಹೆಣ್ಣಿನ ಆತ್ಮಸ್ಥೈರ್ಯವೇ ಅಂತಹದ್ದು!

                   ಹೀಗಿರುವಾಗ ಒಬ್ಬ ಪ್ರಜ್ಞಾವಂತ: ಲೇಖಕಿ,ಆರ್ಥಿಕವಾಗಿ,ಸಾಮಾಜಿಕವಾಗಿ,ಶೈಕ್ಷಣಿಕವಾಗಿ,ಸಾಹಿತ್ಯಿಕವಾಗಿ ಸಬಲರಾಗಿದ್ದು,ಆತ್ಮಹತ್ಯೆ ಮಾಡಿಕೊಂಡದ್ದು ಕೇಳಿ ಅವರ ಸಾವಿಗೆ ಸಂತಾಪ ಸೂಚಿಸುವುದಕ್ಕಿಂತ ಹೆಚ್ಚು  ಅವರ ನಿರ್ಧಾರದ ಬಗ್ಗೆ ಬೇಸರವಾಯಿತು. ಅವರ ನಿರ್ಧಾರವನ್ನು ಪ್ರಶ್ನಿಸುವ ಹಕ್ಕು ನಮಗ್ಯಾರಿಗೂ ಇಲ್ಲವಾದರೂ,ತಂದೆ ಕಳೆದುಕೊಂಡ ಮಕ್ಕಳಿರುವ ಒಬ್ಬ ತಾಯಿಯಾಗಿ ಅವರು ಹೀಗೆ ಮಾಡಿಕೊಂಡದ್ದು ಕ್ಷಮಿಸಲಾರದ ತಪ್ಪು ಅನ್ನುವುದು ನನ್ನ ಅಭಿಪ್ರಾಯ.

       ಏಕೆಂದರೆ, ನಾವೆಲ್ಲರೂ ನಮ್ಮ ನಮ್ಮ ಜೀವನದ ಬಾಲ್ಯದ ದಿನಗಳನ್ನು ನೆನಪಿಸಿಕೊಳ್ಳೋಣಾ. ಹಸಿವು ಬಡತನ ಅವಮಾನ,ಅಪಮಾನ ಎಲ್ಲವೂ ತಪ್ಪದ ದಿನಚರಿಯಾಗಿದ್ದಂತಹ ಕಡುಕಷ್ಟದ ದಿನಗಳನ್ನು ನಾವು ಕಲಕೆದಿದ್ದೇವಲ್ಲವೇ? ಒಂದುವೇಳೆ ಆಗ ನಮ್ಮ ನಮ್ಮ ತಾಯಿಯಂದಿರು ಧೈರ್ಯ ಕಳೆದುಕೊಂಡು ಸಾವನ್ನು ಆಯ್ಕೆಮಾಡಿಕೊಂಡಿದ್ದಿದ್ದರೆ ಇಂದು ನಾವು ಹೀಗೆ ಸುಶಿಕ್ಷಕಿತರಾಗಿ,ಸುವ್ಯವಸ್ಥಿತ ಬದುಕು ಕಟ್ಡಿಕೊಳ್ಳಲಾಗುತಿತ್ತೆ? ಒಮ್ನೆ ಯೋಚಿಸಿ ನೋಡಿ. ಕೊರತೆಗಳಿಂದ,ಸಮಸ್ಯೆಗಳಿಂದ,ಸವಾಲುಗಳಿಂದ ಕೂಡಿದ್ದ ದಿನಗಳನ್ನು ಅದೆಷ್ಟು ಧೈರ್ಯದಿಂದ ಎದುರುಸಿದ್ದಾರಲ್ಲವೆ ಅವರೆಲ್ಲಾ!ನೆನೆದರೆ ಎಲ್ಲಾ ತಾಯಂದಿರಿಗೆ ಸೆಲ್ಯುಟ್ ಮಾಡಬೇಕೆನಿಸುತ್ತದೆ.

           ಗಂಡ ಬಿಟ್ಟರೂ, ಸತ್ತರೂ ಎದೆಗುಂದದೆ ಮಕ್ಕಳಿಗಾಗಿ ಹೆಬ್ಬಂಡೆಯಂತೆ ನಿಂತು ನೋವನೆಲ್ಲಾ ನುಂಗಿಕೊಂಡು ಬೇರೆಯವರ ಮನೆಯ ಮುಸುರೆ ತೊಳೆದಾದರೂ ಜೀವನ ಸಾಗಿಸಿದ್ದಾರೆ, ಅತ್ತೆ ಮನೆಯ ಕಿರುಕುಳಕ್ಕೆ ಬೇಸತ್ತರೂ ಮುಂದೆ ನಮಗಾಗಿ ಒಳ್ಳೆಯ ದಿನಗಳು ಬರಬಹುದೆಂದು ತಮಗೆ ತಾವೇ ಧೈರ್ಯ ಹೇಳಿಕೊಂಡು ಮಕ್ಕಳಿಗಾಗಿ ಬದುಕಿ ತೋರಿಸಿದ್ದಾರೆ, ಅಷ್ಡೇಯೇಕೆ ದೈಹಿಕ ನ್ಯೂನತೆಯಿದ್ದರೂ ಅದನ್ನ ಮೆಟ್ಟಿ ಮಕ್ಕಳ ಭವಿಷ್ಯ ರೂಪಿಸಿದವರು ಸಾಕಷ್ಟು ಮಂದಿ ಇದ್ದಾರೆ. ಒಂದು ಆಶ್ಚರ್ಯದ ಸಂಗತಿ ಅಂದರೆ,ಅವರಲ್ಲಿ ಹೆಚ್ಚಿನವರು ಅನಕ್ಷರಸ್ತರೇ ಆಗಿದ್ದಾರೆ. ಇಂದು ನಾವು ಡಬಲ್ ಡಿಗ್ರಿ,ಮಾಸ್ಟರ್ ಡಿಗ್ರಿ,ಡಾಕ್ಟರೇಟ್ ಸಾಲು ಸಾಲು ಪಡೆದರೂ ಅವರ ಆ ಧೈರ್ಯಕೆ, ಬದುಕಿನ ಆ ಬದ್ಧತೆಗೆ ಸಾಟಿಯಾಗಲಾಗುತ್ತಿಲ್ಲ ಎಂಬುದೇ ವಿಪರ್ಯಾಸ.

               ದಯಮಾಡಿ ನನ್ನ ಗೆಳತಿಯರಲ್ಲಿ,ಓದುಗರಲ್ಲಿ,ನೆರೆಹೊರೆಯವರಲ್ಲಿ ನಾನು ಕೇಳಿಕೊಳ್ಳುವುದಿಷ್ಡೇ.... ಬದುಕಿನಲ್ಲಿ ಎಂತಹದೇ ಕಷ್ಟ ಬರಲಿ,ಅವಮಾನ ಆಗಲಿ, ನಿಮ್ಮಿಂದ ಆದ,ಆಗದ ತಪ್ಪಿಗೆ ಸಮಾಜ ಛೀ ಥೂ ಅನಲಿ ಜೀವ ಕಳೆದುಕೊಳ್ಳುವ ನಿರ್ಧಾರ ಎಂದೂ ಮಾಡಬೇಡಿ. ಮಕ್ಕಳಿಗಾಗಿ ಬದುಕುವುದನ್ನೆ ಆಯ್ಕೆ ಮಾಡಿಕೊಳ್ಳಿ. ಇಲ್ಲಿ ಯಾವುದು ಶಾಶ್ವತ ಅಲ್ಲಾ. ವಾಸ್ತವವನ್ಜು ಅರ್ಥಮಾಡಿಕೊಳ್ಳಿ. ಮಹಿಳೆಯರಿಗೆ ಸರ್ವೆ ಸಾಮಾನ್ಯವಾಗಿ ಸಮಸ್ಯೆಗಳು ಶುರುವಾಗೋದು ಹದಿಹರೆಯದ ಪ್ರೇಮದ ನಂತರ,ಮದುವೆಯ ನಂತರ, ಇತ್ತೀಚಿಗೆ ವೃತ್ತಿ ಸಲ್ಲಿಸುವ ಕಡೆಯೂ ಸಹ. ಅಲ್ಲಲ್ಲಿ ಆಗುವ ಸಮಸ್ಯೆಗಳನ್ನು, ಸವಾಲುಗಳನ್ನು ಬದುಕಿದ್ದುಕೊಂಡೆ ಎದುರಿಸಿ, ಸುಲಭವಲ್ಲವಾದರೂ ಸತತ ಪ್ರಯತ್ನ ಮಾಡಿನೋಡಿ ಗೆಲುವು ನಿಮ್ಮದೇ ಆಗಿರುತ್ತದೆ.

         ಉದಾ: ನೀವು ನಂಬಿ ಪ್ರೀತಿಸಿ ಮದುವೆಯಾದ ಗಂಡನ ಅಕಾಲಿಕ ಸಾವಾದರೆ, ವಾಸ್ತವವನ್ನ ಒಪ್ಪಿಕೊಂಡು ಮಕ್ಕಳ ವರ್ತಮಾನದ ದಿನಗಳಿಗಾಗಿ ಧೈರ್ಯವಾಗಿ ಬದುಕುವುದರತ್ತ ಹೆಜ್ಜೆ ಹಾಕಿ. ಒಂದುವೇಳೆ ಬದುಕು ನಿಮಗೆ ಕೊಟ್ಟ ನಿಮ್ಮ ಬಾಳಸಂಗಾತಿ ನೀವು ಅಂದುಕೊಂಡಂತೆ ಇಲ್ವಾ,ಅವರೊಟ್ಟಿಗೆ ನಿಮಗೆ ಇರಲು ಸಾಧ್ಯವೇ ಇಲ್ವಾ, ಬೇಡ ಅಂದೆನಿಸಿದಾಗ ಆ ಬಂಧದಿಂದ ಬೇರಾಗಿ ಮಕ್ಕಳಿಗಾಗಿ ಬದುಕಿ. ಆ ಕಾರಣದಿಂದ ಸಾವನ್ನು ಎಂದಿಗೂ ಆಯ್ಕೆ ಮಾಡಿಕೊಳ್ಳಬೇಡಿ. ಬಂಧು ಬಳಗದ ಚುಚ್ಚುಮಾತುಗಳಿಗೆ ತಲೆಕೆಡಿಸಿಕೊಳ್ಳಬೇಡಿ ಕಿವುಡರಾಗಿಬಿಡಿ.  ಏಕೆಂದರೆ,ನೀವು ಸತ್ತರೆ ಅವರ್ಯಾರು ನಿಮ್ಮ ಮಕ್ಕಳ ಕಷ್ಟಕ್ಕೆ ಆಗರು!

         ಹೆಣ್ಣುಮಕ್ಕಳಿದ್ದರಂತೂ ದಯಮಾಡಿ ಸಾವಿನ ಯೋಚನೆಯೇ ಮಾಡಬೇಡಿ. ಏಕೆಂದರೆ ಹೆಣ್ಮನಕೆ ತಾಯಿಯ ಅಪ್ಪುಗೆ,ಸಲಹೆ,ಸಹಕಾರ,ಮಾರ್ಗದರ್ಶನ ಅತಿ ಅಗತ್ಯವಾಗಿ ಬೇಕಾಗಿರುತ್ತದೆ. ಉದಾ: ಮಗಳು ಋತುಮತಿಯಾದಾಗ ತಾಯಿಯ ಇರುವಿಕೆ ಅವಳಿಗೆ ಧೈರ್ಯ ನೀಡುತ್ತದೆ, ಉಳಿದವರು ಅದೆಷ್ಟೇ ಜಾಗೂರುಕರಾಗಿ ನೋಡಿಕೊಂಡರೂ ನಿಮ್ಮ ಸ್ಥಾನವನ್ನ ಅವರಿಂದ ತುಂಬಲಾಗುವುದಿಲ್ಲ!

ಇನ್ನೂ ಹದಿಹರೆಯಕೆ ಬಂದಾಗ ತನ್ನಲ್ಲಾದ ತುಮುಲಗಳಿಂದ ಎಡವಿದರೆ ಎಚ್ಚರಿಸಲು ಅಮ್ಮ ಇರಬೇಕಿತ್ತು ಅಂದೆನಿಸುತ್ತದೆ, ಮಗಳು ಓದಿ ದೊಡ್ಡವಳಾದ ಮೇಲೆ ಬದುಕಿನ ಸಂಗಾತಿ ಆಯ್ದುಕೊಂಡು ಸಂಭ್ರಮಿಸುವ ದಿನಗಳಲಿ ಭವಿಷ್ಯದ ಭರವಸೆಗಾಗಿ ಅಮ್ಮ ಇರಬೇಕೆನಿಸುತ್ತದೆ, ನಮ್ಮಂತೆ ಅವಳು ತಾಯಿಯಾಗುವ ಸಮಯದಲ್ಲಂತೂ ನಮ್ಮ ಉಪಸ್ಥಿತಿ ಅತೀ ಅತೀ ಅವಶ್ಯಕವಾಗಿದೆ. ಆದ್ದರಿಂದ ದಯಮಾಡಿ ಯಾರೂ ಸಾವನ್ನು ನೀವಾಗಿಯೇ ಆಯ್ಕೆಮಾಡಿಕೊಳ್ಳಬೇಡಿ. ಬೆಟ್ಟದಂತಹ ಕಷ್ಟ ಬರಲಿ ಬದುಕುವುದನ್ನೇ ಆಯ್ಕೆ ಮಾಡಿಕೊಳ್ಳಿ. ಕಾರಣ ಬದುಕೇ ದೊಡ್ಡದು!
ಲೇಖನ: ಡಿ.ಶಬ್ರಿನಾ ಮಹಮದ್ ಅಲಿ, ಚಳ್ಳಕೆರೆ.

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡಬೇಕು : ಜಿಲ್ಲಾ ಉಸ್ತುವಾರಿ ಸಚಿವರು ಟಿ ರಘುಮೂರ್ತಿಸಾಂಸ್ಕೃತಿಕ ನೆಲೆಗಟ್ಟಿನ ಮೇಲೆ ಕಾಡುಗೊಲ್ಲರ ಬದುಕು - ಸಣ್ಣಚಿತ್ತಯ್ಯ ಸಾರ್ವಜನಿಕ ಗಣೇಶೋತ್ಸವಕ್ಕೆ ಹಂದರಗಂಭ ಪೂಜೆನೂತನ ಬಸ್ ನಿಲ್ದಾಣ ಲೋಕಾರ್ಪಣೆ ನೆರವೇರಿಸಿದ ಸಚಿವ ಟಿ.ರಘುಮೂರ್ತಿ ನ್ಯಾಷನಲ್ ಪ್ರೈಡ್ ಶಾಲೆಯಲ್ಲಿ ಅತ್ಯಾಧುನಿಕ ಕ್ರೀಡಾ ಸೌಲಭ್ಯಗಳ ಉದ್ಘಾಟನೆಬೆಳೆ ಸಮೀಕ್ಷೆದಾರರ ಬೇಡಿಕೆ ಈಡೇರಿಕೆಗೆ ಕ್ರಮ: ಸರ್ಕಾರದೊಂದಿಗೆ ಚರ್ಚಿಸುವ ಭರವಸೆ ನೀಡಿದ ಸಚಿವ ರಘುಮೂರ್ತಿದೇವಾಲಯ ನಿರ್ಮಾಣ ಪವಿತ್ರ ಕಾರ್ಯ - ಟಿ. ರಘುಮೂರ್ತಿಡಾ.ಹೇಮಂತರಾಜು ರವರ ನಾನು ನೀನು ಮತ್ತು ಸ್ಕಿಜೋಫ್ರೇನಿಯಾ ಕವನ ಸಂಕಲನ ಲೋಕಾರ್ಪಣೆಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಇತಿಹಾಸ ಬರೆದ ಭಾರತದ ಶೂಟಿಂಗ್ ತಾರೆ ಮನು ಭಾಕರ್ಪ್ಯಾರಾ ಕಾಮನ್‌ವೆಲ್ತ್‌ನಲ್ಲಿ ಪದಕ ಗೆದ್ದು ಇತಿಹಾಸ ಬರೆದ ಕೆ.ಎಸ್. ಶಿಲ್ಪಾ