Press ID & Credential Portal
Apply / Verify  ➔
LIVE TV LocalKarnatakaCrimeIndiaWorldFilmNationalLife StyleInternationalBusinessPoliticsSportsBusinessEducationTechnology
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Karnataka

ಸ್ಟಿಂಗ್ ಆಪರೇಶನ್ ಗಂಭೀರ ವಿಷಯ; ತನಿಖೆಗೆ ಹೆಚ್.ಡಿ.ಕುಮಾರಸ್ವಾಮಿ ಆಗ್ರಹ

ಹಾಸನ: ರಾಜ್ಯದಲ್ಲಿ ಸ್ಟಿಂಗ್ ಆಪರೇಶನ್ ವಿಷಯ ಅತ್ಯಂತ ಗಂಭೀರ ವಿಷಯ ಎಂದು ಹೇಳಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು; ಸಿದ್ದರಾಮಯ್ಯ ವಿಚಾರದಲ್ಲಿ ಹರಿದಾಡುತ್ತಿರುವ ಮಾಹಿತಿಯನ್ನು ಲೀಕ್ ಮಾಡಿದವರು ಯಾರು? ಅದಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಏನು ಹೇಳುತ್ತಾರೆ ಎಂದು ಪ್ರಶ್ನಿಸಿದರು.

ಹೊಳೆನರಸೀಪುರ ತಾಲೂಕಿನ ಹರದನಹಳ್ಳಿಯ ಮಾವಿನಕೆರೆ ಶ್ರೀ ರಂಗನಾಥ ಸ್ವಾಮಿ ದರ್ಶನ ಪಡೆದ ನಂತರ ಮಾಧ್ಯಮಗಳ ಜತೆ ಮಾತನಾಡಿದ ಕೇಂದ್ರ ಸಚಿವರು; ಮಾಜಿ ಸಿಎಂ ಸಿದ್ದರಾಮಯ್ಯ ಸೇರಿ ರಾಜ್ಯದಲ್ಲಿ ನಡೆಯುತ್ತಿರುವ ಸ್ಟಿಂಗ್ ಚರ್ಚೆ ವಿಚಾರದ ಬಗ್ಗೆ ಪ್ರಸ್ತಾಪಿಸಿದರು.

ಕೆಲ ದಿನಗಳಿಂದ ಒಂದು ವಿಷಯ ಹರಿದಾಡ್ತಾ ಇದೆ. ಅದನ್ನು ಮತ್ತೆ ನಿಲ್ಲಿಸಿಕೊಂಡಿದ್ದಾರೆ, ಯಾರು ಅದನ್ನು ಮಾಡಿದ್ದು? ಅದನ್ನು ಯಾರು ಸ್ಟಿಂಗ್ ಮಾಡಿದ್ದು, ಇದೆಲ್ಲಾ ಹುಡುಗಾಟಿಕೆನಾ? ಇದನ್ನು ಹುಡುಗಾಟಿಕೆ ರಾಜಕಾರಣ ಮಾಡಿಕೊಂಡಿದ್ದೀರಾ? ಸಿದ್ದರಾಮಯ್ಯನವರು ಎಂಟು ವರ್ಷ ಮುಖ್ಯಮಂತ್ರಿ ಆಗಿದ್ದರು. ದೇವರಾಜ ಅರಸು ಅವರ ದಾಖಲೆ ಮೀರಿಸಿ ಆಡಳಿತ ನಡೆಸಿದವರು. ಜನಸಾಮಾನ್ಯರ ಕೆಲಸ ಮಾಡಿ, ಅವರದೇ ಆದ ಹೆಸರು ಗಳಿಸಿದವರು. ತಮ್ಮದೇ ಆದಂತಹ ವರ್ಚಸ್ಸು ಹೊಂದಿರುವ ವ್ಯಕ್ತಿಯ ಮಾನಹರಣ ಮಾಡುವ ಕೆಲಸ ಯಾಕೆ ಮಾಡಿದಿರಿ? ಎಂದು ಕೇಂದ್ರ ಸಚಿವರು ಪ್ರಶ್ನಿಸಿದರು.

ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಮಾಡಿದವನು ಯಾರು? ಯಾರು ಅವನು? ಅವನ ವೃತ್ತಿ ಏನು? ಇವತ್ತಿನವರೆಗೂ ಅವನ ವಿರುಧ್ಧ ಏನು ಕ್ರಮ ಕೈಗೊಂಡಿದ್ದೀರಿ? ಮೀಡಿಯಾ ಮುಸುಕು ಹಾಕಿಕೊಂಡಿರುವ ಅವನ ಹಿಂದೆ ಯಾರಿದ್ದಾರೆ? ಅಂಥವನಿಗೆ ರಕ್ಷಣೆ ಕೊಡುತ್ತಿರುವವರು ಯಾರು? ಇದೆಲ್ಲಾ ಯಾವ ಉದ್ದೇಶಕ್ಕೆ, ಏನಕ್ಕಾಗಿ ಮಾಡುತ್ತಿದ್ದೀರಿ? ಆ ವಿಡಿಯೋವನ್ನು ಹೊರಗಡೆ ಬಿಟ್ಟವರು ಯಾರು? ಇಂತಹ ಕೆಟ್ಟ ಪರಿಸ್ಥಿತಿ ಕರ್ನಾಟಕದಲ್ಲಿ ಬರುತ್ತದೆ ಎಂದು ಯಾರೂ ಅಂದುಕೊಂಡಿರಲಿಲ್ಲ. ಕಾಂಗ್ರೆಸ್ ಪಕ್ಷ ಸರಿಪಡಿಸಿಕೊಳ್ಳಬೇಕು, ನಾವಲ್ಲ ಎಂದು ಕೇಂದ್ರ ಸಚಿವರು ಹೇಳಿದರು.

ರಾಜ್ಯದಲ್ಲಿ ಸೃಷ್ಟಿ ಆಗಿರುವುದು ಅತ್ಯಂತ ಕೆಟ್ಟ ವಾತಾವರಣ. ಇದಕ್ಕೆ ಕಾಂಗ್ರೆಸ್ ಹೈಕಮಾಂಡ್, ಕಾಂಗ್ರೆಸ್ ಪಕ್ಷವೇ ಕಾರಣ. ವಿಧಾನಸಭೆಯ ಅಧಿವೇಶನದಲ್ಲಿ ಒಬ್ಬ ಮುಖ್ಯಮಂತ್ರಿ ಉತ್ತರ ಕರ್ನಾಟಕ, ಕರಾವಳಿ ಭಾಗದ ಶಾಸಕರುಗಳು ಬೆಂಗಳೂರಿಗೆ ಬಂದು ಎರಡನೇ ಮದುವೆ ಆಗುತ್ತಾರೆ. ಆಮೇಲೆ ಅವರು ತಮ್ಮ ಊರುಗಳಿಗೆ ವಾಪಸ್ಸು ಹೋಗುವುದೇ ಇಲ್ಲ. ಅದರ ವಿವರ ನನ್ನ ಬಳಿ ಇದೆ ಎಂದು ಮಾಡಿಕೊಂಡು ಊರಿಗೇ ಹೋಗಲ್ಲ ಎಂದು ಒಬ್ಬ ಮುಖ್ಯಮಂತ್ರಿ ಹೇಳುತ್ತಾರೆ ಎಂದರೆ ಅದನ್ನು ಸಹಿಸಿಕೊಂಡು ಕಾಂಗ್ರೆಸ್ ನವರು ಇದ್ದಾರೆ ಎಂದರೆ ಅವರ ಪರಿಸ್ಥಿತಿ ಎಲ್ಲಿಗೆ ತಂದು ನಿಲ್ಲಿಸಿಕೊಂಡಿದ್ದಾರೆ ಎಂಬುದು ಅರ್ಥವಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪಾಪ.. ನನ್ನನ್ನು ಕಾಪಿ ಮಾಡುತ್ತಿದ್ದಾರೆ:

ಪೆನ್ ಡ್ರೈವ್ ಪ್ರದರ್ಶಿಸಿದ ಮಂಡ್ಯ ಶಾಸಕರ ಬಗ್ಗೆ ವ್ಯಂಗ್ಯವಾಡಿದ ಸಚಿವ ಕುಮಾರಸ್ವಾಮಿ ಅವರು; ನಾನು ತೋರಿಸಿದ ಪೆನ್ ಡ್ರೈವ್ ಬೇರೆ. ಅವರೇನೋ ನನ್ನ ಸ್ಟೈಲ್ ಮಾಡೋದಕ್ಕೆ ಹೋಗಿದ್ದಾರೆ. ಅವರು ನನ್ನ ಸ್ಟೈಲ್ ಮಾಡೋದಕ್ಕೆ ಆಗೋದಿಲ್ಲ. ಯಾವುದೇ ಕಾರಣಕ್ಕೂ ಅಗೋದಿಲ್ಲ. ಒಂದು ವಾರ ಅಲ್ಲ ಒಂದು ವರ್ಷ ಆದರೂ ಬಿಡ್ತಾರಾ ನೋಡೋಣ ಬನ್ನಿ ಎಂದು ಟಾಂಗ್ ಕೊಟ್ಟರು.

ಅಂದು ನಾನು ತೋರಿಸಿದ ಪೆನ್ ಡ್ರೈವ್ ಅಂದಿನ ನೀರಾವರಿ ಇಲಾಖೆಯಲ್ಲಿ ಆಗಿರುವ ವರ್ಗಾವಣೆ ಅಕ್ರಮದ ಬಗ್ಗೆ. ಇವತ್ತಿನ ಮುಖ್ಯಮಂತ್ರಿಗೆ ಸಂಬಂಧಿಸಿದ ವರ್ಗಾವಣೆ ವಿಷಯ ಇದು. ಈ ಮಹಾನುಭಾವರು ನೀರಾವರಿ ಮಂತ್ರಿ ಆಗಿದ್ದಾಗ ನಡೆದಿದ್ದ ವಿಷಯ ಅದು. ಎಂಜಿನಿಯರ್ ಗಳ ವರ್ಗಾವಣೆ ಹಗರಣಕ್ಕೆ ಸಂಬಂಧಿಸಿದ್ದು. ಬೇಕಾದರೆ ಈಗಲೂ ಕೊಡುತ್ತೇನೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ನೈಸ್ ವಿಚಾರದಲ್ಲಿ ಹಿಂದೆ ಸರಿಯುವುದಿಲ್ಲ:

ನೈಸ್ ಕಂಪನಿ ನಡೆಸಿರುವ ಅಕ್ರಮಗಳ ವಿರುದ್ಧ ನನ್ನ ಹೋರಾಟ ನಿಲ್ಲುವುದಿಲ್ಲ ಎಂದು ಸ್ಪಷ್ಟಪಡಿಸಿದ ಕೇಂದ್ರ ಸಚಿವ ಕುಮಾರಸ್ವಾಮಿ ಅವರು; ನಾನು ಬಿಡುಗಡೆ ಮಾಡಿರುವ ದಾಖಲೆಗಳಿಗೆ ಒಂದಕ್ಕೂ ಇವರು ಉತ್ತರ ಕೊಟ್ಟಿಲ್ಲ. ನೈಸ್ ವಿಷಯದಲ್ಲಿ ಕೋರ್ಟ್ ಆದೇಶ ಕೊಟ್ಟಿದ್ದಾರೆ. ಆ ಆದೇಶದ ಹಿನ್ನೆಲೆಯಲ್ಲಿ ಹೇಳಿದ್ದೇನೆ, ಇಲ್ಲದೇ ಇದ್ರೆ ಆ ನೈಸ್ ವಿಷಯ ತರ್ತಾನೆ ಇರಲಿಲ್ಲ. ಕೋರ್ಟ್ ನಲ್ಲಿ ಬಂದ ಆದೇಶಗಳು ಯಾವ ರೀತಿ ಉಲ್ಲಂಘನೆಯಾಗಿವೆ. ಆ ಫ್ರೇಮ್ ವರ್ಕ್ ಅಗ್ರಿಮೆಂಟ್ ಉಲ್ಲಂಘನೆಯಾಗುವುದಕ್ಕೆ ಕಾರಣ ಯಾರಿದ್ದಾರೆ, ಅದರ ಎಲ್ಲಾ ಮಾಹಿತಿಯನ್ನು ನೀಡಿದ್ದೇನೆ. ಈ ಕ್ಷಣದವರೆಗೂ ಸಿಎಂ ಆಗಲಿ, ಕಂಪನಿ ಆಗಲಿ ಯಾರೂ ಅದಕ್ಕೆ ಉತ್ತರ ಕೊಡಲಿಲ್ಲ. ರೈತರ ಭೂಮಿಯನ್ನು ಲೂಟಿ ಮಾಡಿ ಆ ಕಂಪನಿ ಅನ್ಯಾಯ ಮಾಡಿದೆ. ಆ ಕಂಪನಿಯ ಗುತ್ತಿಗೆದಾರನಿಗೆ ರಕ್ಷಣೆ ಕೊಡಲು ಸರಕಾರ ಹೊರಟಿದೆ ಎಂದು ಅವರು ಹರಿಹಾಯ್ದರು.

ಹಾಸನ ಜಿಲ್ಲಾಧಿಕಾರಿಯನ್ನು ಸಸ್ಪೆಂಡ್ ಮಾಡಬೇಕಿತ್ತು:

ಹಾಸನ ಜಿಲ್ಲಾಧಿಕಾರಿ ಹುದ್ದೆಯಲಿರುವ ಮಹಿಳೆಯ ಕೆಪಿಎಸ್ಸಿಯಲ್ಲಿ ಏನೇನು ಮಾಡಿದ್ದಾರೆ ಎಂಬುದು ದಾಖಲೆ ಸಮೇತ ಸಾಬೀತಾಗಿದೆ. ಆದರೂ ಅಲ್ಲಿ ಅಕ್ರಮ ಎಸಗಿದ ಇವರನ್ನು ಇಲ್ಲಿ ಜಿಲ್ಲಾಧಿಕಾರಿ ಸ್ಥಾನದಲ್ಲಿ ಕೂರಿಸಿದ್ದಾರೆ. ಅವತ್ತೇ ಅವರನ್ನು ರಜೆಯ ಮೇಲೆ ಕಳಿಸಿ ಸಸ್ಪೆಂಡ್ ಮಾಡಬೇಕಾಗಿತ್ತು ಎಂದು ಕೇಂದ್ರ ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಗಣಪತಿ ವಿಸರ್ಜನೆ ಹಲವಾರು ವರ್ಷಗಳಿಂದ  ಯಾವ ರೀತಿ ನಡೆದುಕೊಂಡು ಬಂದಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಅವರು ಬೀಗ ಹಾಕಿ ಗಣಪತಿ ವಿಸರ್ಜನೆ ಮಾಡಬಾರದು ಎಂದರೆ ಹೇಗೆ? ಎಷ್ಟು ವರ್ಷಗಳಿಂದ ಇದೆಲ್ಲಾ ನಡೆದುಕೊಂಡು ಬಂದಿದೆ, ಜಿಲ್ಲಾ ಪೊಲೀಸ್ ಪೊಲೀಸ್ ವರಿಷ್ಠಾಧಿಕಾರಿಗೆ ಇವರು ನೋಟಿಸ್ ಕೊಡುತ್ತಾರೆ ಎಂದರೆ ಏನರ್ಥ? ಅಧಿಕಾರಿಗಳನ್ನು ಜಿಲ್ಲಾಧಿಕಾರಿ ಆದವರು ಒಟ್ಟಿಗೆ ಕರೆದುಕೊಂಡು ಹೋಗಬೇಕು. ಅದು ಬಿಟ್ಟು ಉದ್ಧಟತನ ತೋರಿಸಿದರೆ ಹೇಗೆ? ಎಂದು ಅವರು ಪ್ರಶ್ನಿಸಿದರು.

ಜಿಲ್ಲಾಧಿಕಾರಿ ಐಎಎಸ್ ಪಾಸ್ ಮಾಡಿದ್ದರೆ, ಎಸ್ ಪಿ ಐಪಿಎಸ್ ಪಾಸ್ ಮಾಡಿ ಬಂದಿರುತ್ತಾರೆ. ಇವರ ಹಾಗೆಯೇ ಅವರೂ ಪರೀಕ್ಷೆ ಬರೆದು ಪಾಸಾಗಿ ಬಂದಿರುತ್ತಾರೆ. ಪರಸ್ಪರ ಹೊಂದಾಣಿಕೆ ಇಲ್ಲದಿದ್ದರೆ ಹೇಗೆ ಕೆಲಸ ಮಾಡಲು ಆಗುತ್ತದೆ? ಇಂತಹ ವರ್ತನೆ ಸರಿಯಲ್ಲ ಎಂದು ಸಚಿವರು ಹೇಳಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿಜಯೇಂದ್ರ ಸಾರಥ್ಯದಲ್ಲೇ ಮುಂದಿನ ವಿಧಾನಸಭಾ ಚುನಾವಣೆ: ಬಿಜೆಪಿ ಹೈಕಮಾಂಡ್ ಮೆಗಾ ಪ್ಲಾನ್ಮದ್ದೂರಲ್ಲಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದ ಚಿರತೆ; ಗ್ರಾಮಸ್ಥರು ನಿಟ್ಟುಸಿರುಸಾಗರ ತಾಲ್ಲೂಕು ಅಂತಿಮ ಮತದಾರರ ಪಟ್ಟಿ ಪ್ರಕಟ: 1.94 ಲಕ್ಷಕ್ಕೆ ಇಳಿದ ಮತದಾರರ ಸಂಖ್ಯೆಮಲ್ಲಿಕಾರ್ಜುನ ಖರ್ಗೆ ವಿರುದ್ಧದ ವೈಯಕ್ತಿಕ ದಾಳಿ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆ: ಮಾಜಿ MLC ರಮೇಶ್ ಬಾಬು ಆಕ್ಷೇಪಮಹರ್ಷಿ ವಾಲ್ಮೀಕಿ ಆದರ್ಶಗಳು ಇಂದಿನ ಯಾಂತ್ರಿಕ ಜಗತ್ತಿಗೆ ಪ್ರಸ್ತುತ: ಮದ್ದೂರು ತಹಶೀಲ್ದಾರ್ ಶಿವಕುಮಾರ್ ಬಿರಾದಾರ್10 ಎಕರೆಯಲ್ಲಿ ಕೆಎಆರ್ ಫ್ಯೂಚರ್ ಅಕಾಡೆಮಿ ಕ್ಯಾಂಪಸ್: ನೇಗಿಲಯೋಗಿ ರೈತ ಮಾರಾಟ ಕೇಂದ್ರದ ಸ್ಥಾಪಕ ಯೋಗೇಶ್ ಅಪ್ಪಾಜಿಸ್ವ-ಉದ್ಯೋಗಾಕಾಂಕ್ಷಿಗಳ ಗಮನಕ್ಕೆ: ಉಚಿತ ಅಣಬೆ ಬೇಸಾಯ ತರಬೇತಿಗೆ ಅರ್ಜಿ ಆಹ್ವಾನBREAKING : ಕಲ್ಬುರ್ಗಿಯಲ್ಲಿ ತಡರಾತ್ರಿ ದರೋಡೆಗೆ ಬಂದಿದ್ದ ಗ್ಯಾಂಗ್ ನಿಂದ ಫೈರಿಂಗ್ : ಇಬ್ಬರು ಅರೆಸ್ಟ್!ಮಾಜಿ ಸಿಎಂ ಸಿದ್ದರಾಮಯ್ಯಗೆ ಬಿಗ್ ರಿಲೀಫ್ : ಗಣಿ ಗುತ್ತಿಗೆ ಪ್ರಕರಣದ PIL ವಜಾಗೊಳಿಸಿದ ಹೈಕೋರ್ಟ್SHOCKING : ಚಿಕ್ಕಬಳ್ಳಾಪುರ : ಮಾತನಾಡೋಕೆ ಅಂತ ಬಂದು ಹಿರಿಯ ವಕೀಲನ ಕತ್ತು ಸೀಳಿ ಕೊಲೆಗೆ ಯತ್ನ : ಆರೋಪಿ ಎಸ್ಕೇಪ್!