ಕೆ.ಎಲ್. ಇ. ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ವಿಜ್ಞಾನ ಮಾದರಿ ಪ್ರದರ್ಶನ ಯಶಸ್ವಿ
ಜನಜೀವಾಳ ಜಾಲ : ಬೆಳಗಾವಿ : ವಿಜ್ಞಾನ ಜೀವನದ ಹಾಸು ಹೊಕ್ಕಾಗಿದೆ. ವಿಜ್ಞಾನ ವಿಲ್ಲದೆ ಜಗತ್ತೇ ಇಲ್ಲ ಎಂಬಂತ ಸ್ಥಿತಿ ಈಗ ನಿರ್ಮಾಣವಾಗಿದೆ. ಯಶಸ್ಸು ಕಾಣಬೇಕಾದರೆ ಮೂರು ಮಜಲುಗಳಾದ ನಿರ್ದಿಷ್ಟ ಗುರಿ, ಸತತ ಪ್ರಯತ್ನ, ನಿರ್ದಿಷ್ಟ ಛಲ ಇವೆಲ್ಲ ಇರಲೇಬೇಕು ಎಂದು ಜಿ ಎ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ಮಹಾಂತೇಶ ಮಗದುಮ್ಮ ಹೇಳಿದರು.
ಕೆ.ಎಲ್. ಇ. ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯ ವಿಜ್ಞಾನ ಮಾದರಿಗಳ ಪ್ರದರ್ಶನ ಅಗಸ್ತ್ಯ ಫೌಂಡೆಶನ್ ಅವರ ಸಹಯೋಗದೊಂದಿಗೆ ಯುವಆಚಾಯ೯ ಕಾರ್ಯಕ್ರಮದಡಿಯಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ, ವಿಜ್ಞಾನ ಶಿಕ್ಷಕರು ಅನೇಕ ಸವಾಲುಗಳನ್ನು ಅರಿತುಕೊಂಡು ಪ್ರಾಯೋಗಿಕವಾಗಿ ತಮ್ಮನ್ನು ತಾವು ವೃತ್ತಿಯಲ್ಲಿ ತೊಡಗಿಸಿಕೊಳ್ಳಬೇಕು. ಮಕ್ಕಳ ಮನೋಮಟ್ಟಕ್ಕೆ ಅನುಗುಣವಾಗಿ ಶಿಕ್ಷಕರು ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಶಿಕ್ಷಕ ತಪ್ಪು ಮಾಡಿದರೆ ಈ ಜನಾಂಗವೇ ತೊಂದರೆ ಅನುಭವಿಸಬೇಕಾಗುತ್ತದೆ ಈ ನಿಟ್ಟಿನಲ್ಲಿ ಶಿಕ್ಷಕರಾದವರು ಯೋಚಿಸಬೇಕಾಗಿದೆ ಮಾರ್ಮಿಕವಾಗಿ ಶಿಕ್ಷಣಾರ್ಥಿಗಳಿಗೆ ಕಿವಿಮಾತು ಹೇಳಿದರು.
ಈ ಸ್ಪಧೆ೯ಯಲ್ಲಿ ಭಾಗವಹಿಸಿ ಗೆದ್ದಂತಹ ವಿದ್ಯಾಥಿ೯ಗಳಿಗೆ ಬಹುಮಾನವನ್ನು ಪ್ರಾಚಾರ್ಯ ಡಾ. ವಿ. ಪಿ. ಕುರಿ ವಿತರಿಸಿದರು. ಮುಖ್ಯ ಅಥಿತಿಗಳಾದ ಸಂಗಮೇಶ ಅಂಗಡಿ, ಕಾಯ೯ಕ್ರಮದ ಸಂಯೋಜಕಿ ಭುವನೇಶ್ವರಿ ಪಾಟೀಲ ಹಾಗೂ ಎಲ್ಲ ಸಿಬ್ಬಂದಿ ವಗ೯ದವರು ಹಾಗೂ ಪ್ರಶಿಕ್ಷಣಾಥಿ೯ಗಳು ಹಾಜರಿದ್ದರು.
ವಿಜ್ಞಾನ ವಿಭಾಗದ ಶಿಕ್ಷಣಾರ್ಥಿಗಳು ತಯಾರಿಸಿದಂತಹ ಮಾದರಿಗಳನ್ನು ಬಿ. ಎಸ್. ಹಂಚಿನಾಳ ಪ್ರಾಥಮಿಕ ಶಾಲಾ ವಿದ್ಯಾಥಿ೯ಗಳು ವಿಕ್ಷಿಸಿ ಜ್ಞಾನವನ್ನು ಪಡೆದುಕೊಂಡರು.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.