LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಟ್ರೆಂಚ್ ಗೆ ಬಿದ್ದು ಲಯನ್ ಸಫಾರಿ ಬಳಿ ಕಾಡಾನೆ ಸಾವು

ಶಿವಮೊಗ್ಗ,ನ.05 : ಇಲ್ಲಿನ ಲಯನ್ ಸಫಾರಿ ಸಮೀಪದಲ್ಲಿ ಕಾಡಾನೆಯೊಂದು ಸಾವನ್ನಪ್ಪಿದೆ ಎಂಬ ಮಾಹಿತಿ ಲಭ್ಯವಾಗಿದೆ. ಶೆಟ್ಟಿಹಳ್ಳಿ ಅಭಯಾರಣ್ಯದ ವ್ಯಾಪ್ತಿಯಲ್ಲಿ ಬರುವ ಪುರದಾಳ್, ಅಗಸವಳ್ಳಿ, ಸಿರಿಗೆರೆ , ಆಯನೂರು ಕಾಡಂಚಿನ ಗ್ರಾಮಗಳಲ್ಲಿ ಕಾಣಿಸಿಕೊಂಡು ಉಪಟಳ ನೀಡುತ್ತಿದ್ದ ಆನೆ ಇದಾಗಿದೆ ಎಂದು ಹೇಳಲಾಗುತ್ತಿದೆ.

ಅರಕೆರೆ ವೈಲ್ಡ್ ಲೈಫ್ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಎಲಿಪೆಂಟ್ ಪ್ರೊಟೆಕ್ಟಿವ್ ಟ್ರಂಚ್ ಅಥವಾ ಆನೆ ಸಂರಕ್ಷಣಾ ಗುಂಡಿಯ ಒಳಗೆ ಕಾಡಾನೆ ಬಿದ್ದಿದೆ . ಅಲ್ಲಿ ಬಿದ್ದ ಕಾಡಾನೆಯು ಮೇಲಕ್ಕೆ ಏಳಲಾಗದೆ ಸಾವನ್ನಪ್ಪಿದೆ‌ .

ಎರಡು ದಿನಗಳ ಹಿಂದೆಯೇ ಕಾಡಾನೆ ಸಾವನ್ನಪ್ಪಿರುವ ಸಾದ್ಯತೆ ಇದೆ. ಕಾಡಾನೆ ಹಿಂದಿನ ಹಾಗು ಮುಂದಿನ ಕಾಲುಗಳು ಟ್ವಿಸ್ಟ್ ಆದಂತಿದೆ. ಈ ಬಗ್ಗೆ ಮರಣೋತ್ತರ ಪರೀಕ್ಷೆಯ ನಂತರ ಹೆಚ್ಚಿನ ಮಾಹಿತಿ ಸಿಗಲಿದೆ ಎಂದು ವನ್ಯಜೀವಿ ಡಿಎಫ್ ಓ ಪ್ರಸನ್ನ ಪಟಗಾರ ತಿಳಿಸಿದ್ದಾರೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST