Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Feature Article

ನಾರಿಯ ಮುಡಿ ಏರುವುದಿಲ್ಲ, ದೇವರ  ಪೂಜಿಗೂ ಬಳಸಲ್ಲ, ಪ್ರಕೃತಿ ಸೌದರ್ಯಕ್ಕೆ ಮನಸೋಲದವರಿಲ್ಲ! ಗುಲ್ ಮೊಹರ್ ಚಿತ್ತಾರ ಮನಮೋಹಕ



ಹೊಸಕೋಟೆ, ಮೆ 22: ಗುಲ್ ಮೊಹರ್. ನಾರಿಯ ಮುಡಿಗೆರುವುದಿಲ್ಲ, ದೇವರ ಪೂಜೆಗೂ ಬಳಸುವುದಿಲ್ಲ, ನೋಡುಗರ ಮನ ಅರಳಿಸಿ ಮುದ ನೀಡುವುದಷ್ಟೆ ಆದರ ಕೆಲಸ. ಕೆಲ ಗಂಟೆಗಳ ಕಾಲ ಮಂದಹಾಸ ಮೂಡಿಸಿ ಮುದುಡಿಕೊಳ್ಳುತ್ತದೆ. ಆದರೆ, ಹೂವುಗಳು ಆರಳಿ ಸೃಷ್ಟಿಸುವ ಚಿತ್ತಾರ ಮಾತ್ರ ಮನಮೋಹಕ!





ವಾರೆವ್ಹಾ..! ಯಾವ ಕಲಾವಿದನ ಕುಂಚದಲ್ಲಿ ಆರಳಿದ ಪ್ರಕೃತಿ ಸೌಂದರ್ಯವಿದು ಎಂದನಿಸುತ್ತಿದೆಯೇ? ಪ್ರಕೃತಿ ಮಾತೆ ಸಿಂಗರಿಸಿಕೊಂಡ ಮನಮೋಹಕ ದೃಶ್ಯವಿದು. ಪ್ರಕೃತಿಯ ಮಡಿಲಲ್ಲಿ ಸಾವಿರಾರು ಗಿಡಮರ ಗಳಿದ್ದರೂ ಅಲ್ಲೊಂದು ಇಲ್ಲೊಂದು ಉಳಿದಿರುವ ಹಚ್ಚಹಸಿರಿನ ಗಿಡಮರಗಳ ನಡುವೆ ಕೆಂಪು ಬಣ್ಣವೋ ಬಣ್ಣ. "

ಪ್ರಕೃತಿ ಮಾತೆ ತನ್ನ ಕೇಶರಾಶಿಗೆ ಹೂವು ಮುಡಿದುಕೊಂಡಂತೆ, ಜೀರುಂಡೆಯ ಗಿಜಿ ಗಿಜಿ. ಜೇನುನೊಣಗಳ ಝೇಂಕಾರ ಹಬ್ಬದ ವೈಭವದಂತಿದೆ. ನಿಸರ್ಗದ ಚೆಲುವನ್ನು ಇಮ್ಮುಡಿಗೊಳಿಸಿದೆ.

ಇಷ್ಟೆಲ್ಲಾ ಪೀಠಿಕೆ ಯಾಕೆನ್ನುವಿರಾ? ಹೊಸಕೋಟೆ  ತಾಲೂಕಿನ ನೆಗೆರೇನಹಳ್ಳಿ  ಮುಖ್ಯರಸ್ತೆ ಬದಿ,  ಗುಳ್ಳಹಳ್ಳಿ ಸರಕಾರಿ ಶಾಲಾ ಅವರಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳು ಹಾಗೂ ಕೆರೆ ಕಟ್ಟೆಯ ದಡಗಳು ಹಾಗೂ ಗುಡಿಬಂಡೆ ಪಟ್ಟಣದ ಹಲವು ಕಡೆ ಹಾಗೂ ಸುತ್ತಲ ಗ್ರಾಮಗಳ ರಸ್ತೆಗಳ ಬದಿ ಗುಲ್‌ಮೊಹರ್ ಕಂದರಳಿನ ತೇರಿನಂತೆ ಕಂಗೊಳಿಸುತ್ತಿವೆ.

ಬೇಸಿಗೆ ಮುಕ್ತಾಯ ಮತ್ತು ಮಳೆಗಾಲ ಆರಂಭದ ಸಮಯದಲ್ಲಿ ಪಕ್ಷತೆಗೆ ಅದೇನು ಸಂಭ್ರಮ, ಒಂದೆಡೆ ವಿದಾಯಕ್ಕೆ ಸಿದ್ಧವಾದ ಉರಿ ಬಿಸಿಲಿನ ಕಾವು, ಇನ್ನೊಂದೆಡೆ ಧರೆಯ ಸಂಪರ್ಕಕ್ಕೆ ಹೊಂಚುಹಾಕಿ ಕಾದು ಕುಳಿತ ಮಳೆ, ಇವೆರಡರ ನಡುವಿನ ಕಾಲದಲ್ಲಿ ನಿಸರ್ಗದ ಋತುಮಾನದ ಮೊರೆ ಕಳಚುವ ಸಂಭ್ರಮದಲ್ಲಿರುತ್ತದೆ. ಆಗ ಹಲವು ಬಗೆಯ ಹೂವುಗಳು ಪಲ್ಲವಿಸುತ್ತವೆ .

ಗುಲ್ ಮೊಹರ್ ಹೂವುಗಳು ನಾರಿಯ ಮುಡಿ ಏರುವುದಿಲ್ಲ, ದೇವಾಲಯಗಳಲ್ಲಿ ದೇವರ ಪೂಜೆಗೂ ಬಳಕೆ ಆಗುವುದಿಲ್ಲವಾದರೂ ಪ್ರಕೃತಿಯ ಮಡಿಲ ಸೌಂದರ್ಯಕ್ಕೆ ಮನಸೋಲದವರಿಲ್ಲ, ಪ್ರತಿಯೊಬ್ಬರ ಮನಸ್ಸಿಗೂ ಸಂತೋಷ ಉಂಟುಮಾಡುತ್ತವೆ.

ಒಟ್ಟಿನಲ್ಲಿ ಸಸ್ಯಲೋಕ ತನ್ನ ಗರ್ಭದಲ್ಲಿ ಎಷ್ಟೊಂದು ಅತ್ಯದ್ಭುತ, ಆಶ್ಚರ್ಯಕರ ಬಣ್ಣ ವಿನ್ಯಾಸ, ಗುಣಗಳನ್ನು ಅಡಗಿಸಿಕೊಂಡಿ ದೆಯೋ ಏನೋ ಎಂದು ಭಾಸವಾಗುತ್ತದೆ. ಮಾರು ಹೋಗದವರಾರು? ಬೇಸಿಗೆಯ ಬಿಸಿಲ ತಾಪ ತಾಳಲಾರದ ನಾಗರೀಕರು, ವಾಹನ ಸವಾರರು ಮಾರು ಹೋಗುತ್ತಿದ್ದಾರೆ. ಬೇಸಿಗೆಯಲ್ಲಿ ನಳನಳಿಸುವ ಗುಲ್ ಮೊಹರ್ ಅರಳಿದಾಗ ಹೃನ್ಮನ ತಣಿಸುತ್ತಿದೆ.

ಮೂರು ತಿಂಗಳ ಅದ್ಭುತ ವಿಸ್ಮಯ...
ಇದು ಏಪ್ರಿಲ್ ಮೇ ಜೂನ್ ತಿಂಗಳಲ್ಲಿ ಕಂಡು ಬರುವ ವಿಶೇಷ. ನಿಸರ್ಗದಲ್ಲಿ ಈಗ ಪು‍‍ಷ್ಪೋತ್ಸವ, ಗಿಡ ಮರಗಳಲ್ಲಿ ಬಣ್ಣ ಬಣ್ಣದ ಹೂವುಗಳ ಹಬ್ಬದ ಕಾಲ. ನಿಸರ್ಗವೇ ಏರ್ಪಡಿಸಿರುವ ಪುಪ್ಪೋತ್ಸವ. ಸಾವಿರಾರು ವರ್ಷಗಳಿಂದ ನಿಸರ್ಗದಲ್ಲಿ ನಡೆಯುತ್ತಿರುವ ಪುಣೋತ್ಸವ, ಮಳೆಗಾಲಕ್ಕೆ ದಿನಗಣನೆ ಆರಂಭವಾಗಿದೆ. ರಸ್ತೆ ಬದಿಯ ಮರಗಳಲ್ಲಿ, ಉದ್ಯಾನಗಳು, ಬೆಟ್ಟಗುಡ್ಡಗಳ ಮರಗಳಲ್ಲಿ ಪರಿತ ಹೂವುಗಳ ಜತೆಗೆ ಹೆಸರಿಲ್ಲದ ಎಷ್ಟೋ ಬಣ್ಣ ಬಣ್ಣದ ಹೂವುಗಳು ನಿರಾಡಂಬರ ಸುಂದರಿಯರಂತೆ ಅರಳಿ ನಳ ನಳಿಸುತ್ತಿವೆ. ಮನಸ್ಸಿಗೆ ಮುದ ನೀಡುತ್ತಿವೆ.

ಎಲೆಗಳೇ ಇಲ್ಲದ ಮರಗಳು, ಮೈತುಂಬಾ ಹೂವು ಒದ್ದು ಪಲ್ಲವಿಸಿವೆ. ನಿಸರ್ಗದ ಚೆಲು ವನ್ನು ಈ ಹೂವುಗಳು ಇಮ್ಮಡಿಸಿವೆ. ಅದರಲ್ಲಿ ಗುಲ್‌ಮೊಹರ್ ಎನ್ನುವುದು ಚೆಲುವಿನ ಅಕ್ಷಯ ಪಾತ್ರೆ. ಇಳೆಯ ಅತ್ಯಂತ ವರ್ಣ ರಂಜಿತ ಮರ ಎನಿಸಿಕೊಂಡಿದೆ. ಮುಂಗಾರು ಮಳೆ ಯ ಆರಂಭದ ದಿನಗಳವರೆಗೂ ಈ ಚೆಲು ವೆಯ ಮೆರವಣಿಗೆ ನಡೆದಿರುತ್ತದೆ. ನಿಸರ್ಗ ಪ್ರಿಯರಿಗೆ ರಸದೂಟ ದೊರೆಯುತ್ತದೆ.






Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ