LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಆಸ್ತಿ ನೋಂದಣಿಗೆ ಆಧಾರ್ ಕಡ್ಡಾಯ ಇಲ್ಲ?: ಕಾಯ್ದೆ ತಿದ್ದುಪಡಿಗೆ ಕೇಂದ್ರ ಸರಕಾರ ಸಜ್ಜು!

ಆಸ್ತಿಯ ದಾಖಲೆಪತ್ರಗಳು, ಭೂ ದಾಖಲೆಗಳು ಮತ್ತು ಇತರೆ ಆಸ್ತಿ ವಹಿವಾಟುಗಳ ನೋಂದಣಿ ವೇಳೆ ಆಧಾರಿತ ದೃಢೀಕರಣವನ್ನು ಐಚ್ಛಿಕ ಆಯ್ಕೆಯನ್ನಾಗಿ ಮಾಡಲು ಕೇಂದ್ರ ಸರಕಾರ ಮುಂದಾಗಿದೆ. 117 ವರ್ಷ ಹಿಂದಿನ ನೋಂದಣಿ ಕಾಯ್ದೆ 1908 ಇದಕ್ಕೆ ತಿದ್ದುಪಡಿ ತರಲು ಕೇಂದ್ರ ಸರಕಾರ ಮುಂದಾಗಿದೆ. ಭೂ ಸಂಪನ್ಮೂಲ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಗಳು ಈ ಕುರಿತ ಕರಡು ವಿಧೇಯಕವನ್ನು ಸಿದ್ಧಪಡಿಸಿದೆ.

ಈ ಕರಡು ವಿಧೇಯಕ ಆನ್‌ಲೈನ್ ಮೂಲಕ ಆಸ್ತಿ ನೋಂದಣಿಗೆ ಅವಕಾಶ ಕಲ್ಪಿಸಿದೆ. ಆದರೆ ಆಧಾರ ಸಂಖ್ಯೆ ಆಧಾರಿತ ದೃಢೀಕರಣವನ್ನು ಕಡ್ಡಾಯಗೊಳಿಸಿಲ್ಲ

ಇದಕ್ಕೆ ಬದಲಾಗಿ, ಆಧಾರ್ ದೃಢೀಕರಣವನ್ನು ಐಚ್ಚಿಕ ಆಯ್ಕೆಯನ್ನಾಗಿ ಮಾಡಿದೆ. ಆಧಾರ ಬದಲಿಗೆ ಪರ್ಯಾಯ ದಾಖಲೆಗಳನ್ನು ದೃಢೀಕರಣಕ್ಕಾಗಿ ಬಳಸಲು ಅವಕಾಶ ಕಲ್ಪಿಸಲಾಗಿದೆ.

ಆಧಾರ ಸಂಖ್ಯೆ ಹೊಂದಿಲ್ಲದವರು ಅಥವಾ ಆಧಾರ್ ಮಾಹಿತಿಯನ್ನು ಹಂಚಿಕೊಳ್ಳಲು ಬಯಸದೆ ಇರುವವರಿಗೆ ಪರ್ಯಾಯ ಮಾರ್ಗ ಆಯ್ಕೆ ಮಾಡಿಕೊಳ್ಳಬಹುದು

ಹೊಸ ವಿಧೇಯಕ ಸಂಸತ್ತಿನಲ್ಲಿ ಅನುಮೋದನೆಗೊಂಡು ಕಾನೂನಾಗಿ ಜಾರಿಯಾದರೆ ಆನ್‌ಲೈನ್ ಮೂಲಕವೇ ದಾಖಲೆಗಳ ಸಲ್ಲಿಕೆ, ದಾಖಲೆಗಳ ಇ-ದೃಢೀಕರಣ, ಆನ್‌ಲೈನ್ ಮೂಲಕವೇ ನೋಂದಣಿ ಪ್ರಮಾಣ ಪತ್ರ ವಿತರಣೆಗೆ ಅವಕಾಶ ದೊರೆಯಲಿದೆ.

ಈ ಕರಡು ವಿಧೇಯಕವನ್ನು ಸಾರ್ವಜನಿಕರ ಅವಲೋಕನಕ್ಕೆ ಮುಕ್ತವಾಗಲಿಡಲಾಗಿದೆ. ಈ ಬಗ್ಗೆ ಸಾರ್ವಜನಿಕರ ಸಲಹೆ ಸೂಚನೆಗಳನ್ನು ಇಲಾಖೆ ಆಹ್ವಾನ ಮಾಡಿದೆ.

ಮತ್ತೊಂದೆಡೆ, ಕರ್ನಾಟಕ ಸರಕಾರ ತನ್ನ ರಾಜ್ಯದಲ್ಲಿ ಆಸ್ತಿ ವರ್ಗಾವಣೆಯಲ್ಲಿ ನಡೆಯುವ ಅಕ್ರಮ ತಡೆಯುವ ನಿಟ್ಟಿನಲ್ಲಿ ನೋಂದಣಿಗೆ ಆಧಾರ್ ಇ-ದೃಢೀಕರಣ ಕಡ್ಡಾಯ ಮಾಡಲು ನಿರ್ಧರಿಸಿದೆ. ಈ ಸಂಬಂಧ ಅದು ಕೇಂದ್ರ ಸರಕಾರಕ್ಕೂ ಪತ್ರ ಬರೆದಿದ್ದು, ಮಾಹಿತಿಯನ್ನು ಹಂಚಿಕೊಳ್ಳುವಂತೆ ಮನವಿ ಮಾಡಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭದ್ರಾ ಜಲಾಶಯ ರೈತರಿಗೆ ಮುಖ್ಯ ಮಾಹಿತಿ ಬೇಸಿಗೆ ಹಂಗಾಮಿನ ಬೆಳೆಗಳಿಗೆ ನೀರು.!ನಾಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಜಾಮೀನು ಅರ್ಜಿ ವಿಚಾರಣೆ.!ಕನ್ನಡದ ಖ್ಯಾತ ಹಿರಿಯ ಕಲಾವಿದ ಇನ್ನಿಲ್ಲ.!ಕಗಂಟಾಗಿದ್ದ ಕೇರಳ ಮುಖ್ಯಂತ್ರಿ ಸ್ಥಾನ ಕುತೂಹಲಕ್ಕೆ ತೆರೆ.!ಕೈ ಮುಷ್ಟಿಯಷ್ಟು ಕಲ್ಲುಪ್ಪನ್ನು ತೆಗೆದುಕೊಂಡು ವಾರಕ್ಕೆ ಒಂದು ಬಾರಿಯಾದರೂ ಮನೆಯಲ್ಲಿ ಹೀಗೆ ಮಾಡಿದರೆ ಧನ ಪ್ರವಾಹ ಖಚಿತ.!ಪ್ರಥಮ ದರ್ಜೆ ಕಾಲೇಜುಗಳ ಬೋಧಕರ ವರ್ಗಾವಣೆ ಕೌನ್ಸೆಲಿಂಗ್ ತಾತ್ಕಾಲಿಕ ವೇಳಾಪಟ್ಟಿ.!ಎಲ್ಲಾ ಶಾಲಾ-ಕಾಲೇಜುಗಳಲ್ಲಿ ‘ಹಿಜಾಬ್’ ನಿಷೇಧ ರದ್ದು.!ಪ್ರಥಮ ವರ್ಷದ ಡಿಪಿಎಸ್‍ಇ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಗಂಜಿಗಟ್ಟೆ ಲಂಬಾಣಿಹಟ್ಟಿಯಲ್ಲಿ ಪ್ರತ್ಯೇಕ ಚುನಾವಣಾ ಬೂತ್ಗೆ ಆಗ್ರಹದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 14-05-2026