LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಕೊಲೆ ಕೇಸ್‌ನ ಆರೋಪಿ ದರ್ಶನ್ ಗನ್ ಲೈಸೆನ್ಸ್ ತಾತ್ಕಾಲಿಕ ರದ್ದು - ಆರ್‌ಆರ್ ನಗರ ಠಾಣೆಯಲ್ಲಿ ಗನ್ ಜಮೆ ಮಾಡಲು ಸೂಚನೆ

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ನಟ ದರ್ಶನ್ ಅವರ ಬಳಿಯಿರುವ ಗನ್ ಲೈಸೆನ್ಸ್ ತಾತ್ಕಾಲಿಕವಾಗಿ ರದ್ದುಗೊಳಿಸಿ ಬೆಂಗಳೂರು ಪೊಲೀಸ್ ಆಡಳಿತ ವಿಭಾಗ ಆದೇಶಿಸಿದೆ.

ಹತ್ಯೆ ಪ್ರಕರಣ ಮುಗಿಯುವವರೆಗೂ ಲೈಸೆನ್ಸ್ ರದ್ದುಗೊಳಿಸಲಾಗಿದೆ. ಗನ್ ವಶಕ್ಕೆ ಪಡೆದುಕೊಳ್ಳುವಂತೆ ರಾಜರಾಜೇಶ್ವರಿ ನಗರ ಠಾಣೆ ಪೊಲೀಸರಿಗೆ ಸೂಚಿಸಲಾಗಿದೆ. ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿ ಜಾಮೀನಿನ ಮೇಲೆ ಹೊರಗಿರುವ ನೀವು ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳಿವೆ.

ನಿಮ್ಮ ಬಳಿಯಿರುವ ಲೈಸೆನ್ಸ್ ಹೊಂದಿರುವ ಗನ್‌ ಬಳಸಿ ಸಾಕ್ಷಿಗಳನ್ನ ಬೆದರಿಸುವ ಬಗ್ಗೆ ಅನುಮಾನಗಳಿವೆ. ನಿಮ್ಮ ಗನ್ ಲೈಸೆನ್ಸ್ ರದ್ದು ಮಾಡದಿರಲು ಕಾರಣ ನೀಡಿ ಎಂದು ದರ್ಶನ್ ಅವರಿಗೆ ಈ ಹಿಂದೆ ಬೆಂಗಳೂರು ಪೊಲೀಸ್ ಆಡಳಿತ ವಿಭಾಗದ ಡಿಸಿಪಿ ಪದ್ಮಿನಿ ಸಾಹೂ ನೋಟಿಸ್ ನೀಡಿದ್ದರು. ನೋಟಿಸ್‌ಗೆ ಉತ್ತರಿಸಿದ್ದ ದರ್ಶನ್,ತಾವು ಓರ್ವ ಸೆಲೆಬ್ರಿಟಿ, ತಾವು ಹೋಗುವ ಕಡೆಗಳಲ್ಲಿ ಸಾಕಷ್ಟು ಜನ ಸೇರುತ್ತಾರೆ.

ಈ ವೇಳೆ ತಮ್ಮ ಆತ್ಮರಕ್ಷಣೆಗಾಗಿ ಗನ್ ಅವಶ್ಯಕತೆಯಿದೆ ಎಂದಿದ್ದರು. ದರ್ಶನ್ ನೀಡಿದ್ದ ಕಾರಣ ಪರಿಗಣಿಸದ ಬೆಂಗಳೂರು ಪೊಲೀಸ್ ಆಡಳಿತ ವಿಭಾಗ, ಮುನ್ನೆಚ್ಚರಿಕಾ ಕ್ರಮವಾಗಿ ದರ್ಶನ್ ಅವರ ಗನ್ ಲೈಸೆನ್ಸ್ ತಾತ್ಕಲಿಕ ರದ್ದುಗೊಳಿಸಿದ್ದಾರೆ. ಈ ಹಿನ್ನೆಲೆ ದರ್ಶನ್‌ಗೆ ಆರ್‌.ಆರ್ ನಗರ ಪೊಲೀಸ್ರು ಗನ್ ತಂದು ಠಾಣೆಗೆ ಜಮೆ ಮಾಡುವಂತೆ ನೋಟೀಸ್ ಜಾರಿ ಮಾಡಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವರ್ಕ್ ಫ್ರಂ ಹೋಂ ಕೆಲಸ: 12 ಕೋಟಿಗೂ ಅಧಿಕ ಹಣ ವಂಚನೆ.!ಪಿಎಸ್ಐ ಗಾದಿಲಿಂಗಪ್ಪ ವಿರುದ್ಧ ಅತ್ಯಾಚಾರ ಮತ್ತು ಅಟ್ರಾಸಿಟಿ ಕೇಸ್ ದಾಖಲು.!ಮೊಂಥಾ ಚಂಡಮಾರುತದ ಅಬ್ಬರ: ಇಂದಿನಿಂದ 5 ದಿನಗಳ ಕಾಲ ಶಾಲೆ, ಕಾಲೇಜುಗಳಿಗೆ ರಜೆ.!ಮತಾಂತರಕ್ಕೆ ಒಪ್ಪದ ಪ್ರಿಯತಮೆಗೆ ಕೈಕೊಟ್ಟ ಲವ್ ಜಿಹಾದ್ ಆರೋಪಿ ಅರೆಸ್ಟ್ಪ್ರಧಾನಿ ಮೋದಿ ವಿರುದ್ಧ ಹತ್ಯೆ ಸಂಚು? - ವೈರಲ್ ಆಗುತ್ತಿರುವ ನಿಗೂಢ ವರದಿಗಳು!ಐಎಎಸ್ ಆಯುಷಿ ದಬಾಸ್ ಯಶಸ್ಸಿನ ಕಥನನಿಮ್ಮ ಏಳಿಗೆ ಪ್ರಗತಿ ಸಹಿಸದ ಶತ್ರುಗಳಿಗೆ ಅಷ್ಟಮಂಡಲ ಹಾಕುವ ಕಪ್ಪು ಕವಡೆಗಳಿಂದ ಶತ್ರುನಾಶ ಸರಳ ತಂತ್ರ ಮಾಡಬಹುದು!ಕೆ.ಎಲ್.ಇ. ವಿಶ್ವವಿದ್ಯಾಲಯದ ಹಾಸ್ಟೆಲ್ ನಲ್ಲಿ ಆಹಾರ ಸೇವಿಸಿ 40 ವಿದ್ಯಾರ್ಥಿಗಳು ಅಸ್ವಸ್ಥ.!ಡಿಸೆಂಬರ್ ಅಥವಾ ಮಾರ್ಚ್‍ನಲ್ಲಿ ರಾಷ್ಟ್ರಮಟ್ಟದ: ಖೋ ಖೋ ಪಂದ್ಯಾವಳಿ: ದಿನೇಶ್ ಕೆ.ಶೆಟ್ಟಿವಚನ.: -ನಗೆಯ ಮಾರಿತಂದೆ