LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಬೆಳಗಾವಿ : ಅನಧಿಕೃತ ಔಷಧ ಅಂಗಡಿಗಳ ವಿರುದ್ದ ಕ್ರಮ - ದಿನೇಶ್ ಗುಂಡೂರಾವ್

ಬೆಳಗಾವಿ : ರಾಜ್ಯದಲ್ಲಿ ಔಷಧ ಪರವಾನಗಿ ಇಲ್ಲದೆ ಅನಧಿಕೃತವಾಗಿ ಔಷಧ ಅಂಗಡಿಗಳನ್ನು ನಡೆಸುತ್ತಿರುವುದು ಕಂಡು ಬಂದಲ್ಲಿ ಅಂತವರ ವಿರುದ್ಧ ಔಷಧ ಮತ್ತು ಕಾಂತಿವರ್ಧಕ ಅಧಿನಿಯಮ ಮತ್ತು ನಿಯಮಾವಳಿಗಳನ್ವಯ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ವಿಧಾನ ಪರಿಷತ್‌ನಲ್ಲಿ ಸದಸ್ಯ ಗೋವಿಂದ ರಾಜು ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಪ್ರಸ್ತುತ 37,130 ಖಾಸಗಿ ಔಷಧ ಮಳಿಗೆಗಳು ಕಾರ್ಯನಿರ್ವಹಿಸುತ್ತಿದ್ದು, ಸರ್ಕಾರಿ ಆಸ್ಪತ್ರೆ ಆವರಣದಲ್ಲಿ 07 ಜತನಾ ಬಜಾರ್‌ಗಳು, 23 ಜನ ಸಂಜೀವಿನಿ ಕೇಂದ್ರಗಳು ಹಾಗೂ 178 ಜನೌಷಧಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ ಎಂದರು.

2023-24 ರಲ್ಲಿ ದೈನಂದಿನ ಪರಿವೀಕ್ಷಣೆಯಲ್ಲಿ ಇಲಾಖೆಯ ಅಧಿಕಾರಿಗಳು ನಿಯಮಗಳನ್ನು ಉಲ್ಲಂಘಿಸಿದ 1245 ಪರವಾನಿಗೆಗಳನ್ನು ಅಮಾನತ್ತುಗೊಳಿಸಿದ್ದು, 292 ಪರವಾನಿಗೆಗಳನ್ನು ರದ್ದುಗೊಳಿಸಲಾಗಿದೆ. ಇಲಾಖೆಯ ಅಧಿಕಾರಿಗಳು ಮಾದಕ ಔಷಧಿಗಳ ದಾಸ್ತಾನು ಮತ್ತು ಮಾರಾಟಗಳ ಬಗ್ಗೆ ನಿಗಾವಹಿಸುತ್ತಿದ್ದು ಮತ್ತು ಖಾಸಗಿ ಔಷಧ ಇದು ಮಳಿಗೆಗಳಲ್ಲಿ ಮಾದಕ ವಸ್ತುಗಳು ನಿಯಾಮಬಾಹಿರ ಮಾರಾಟಗಳ ಬಗ್ಗೆ ಪರಿವೀಕ್ಷಣೆಗಳನ್ನು ಕೈಗೊಂಡು ಉಲ್ಲಂಘನೆಗಳು ಕಂಡು ಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ಇದಲ್ಲದೆ ಇಲಾಖೆಯಲ್ಲಿ ಪ್ರತಿ ವರ್ಷ ಮಾದಕ ವಸ್ತುಗಳ ದುರ್ಬಳಕೆಯನ್ನು ತಡೆಗಟ್ಟಲು 3 ದಿನ ವಿಶೇಷ ಪರೀಕ್ಷಾರ್ಥ ಪರಿವೀಕ್ಷಣೆ ಕೈಗೊಂಡು ಉಲ್ಲಂಘನೆ ಕಂಡುಬಂದ ಸಂಸ್ಥೆಗಳ ವಿರುದ್ಧ ಕ್ರಮ ಜರುಗಿಸಲಾಗುತ್ತಿದೆ ಎಂದರು. ಔಷಧ ನಿಯಂತ್ರಣ ಇಲಾಖೆಯಲ್ಲಿ ಒಟ್ಟು 112 ಔಷಧ ಪರಿವೀಕ್ಷಕರ ಹುದ್ದೆಗಳಲ್ಲಿ 08 ಹುದ್ದೆಗಳು ಮಾತ್ರ ಭರ್ತಿಯಾಗಿರುತ್ತದೆ.

ಕರ್ನಾಟಕ ಲೋಕ ಸೇವಾ ಆಯೋಗಕ್ಕೆ ಒಟ್ಟು 83 ಹುದ್ದೆಗಳನ್ನು ಭರ್ತಿ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದ್ದು, ನೇಮಕಾತಿ ಸಂಬಂಧಿಸಿದ ಪ್ರಕರಣವು ಸರ್ವೋಚ್ಚ ನ್ಯಾಯಾಲಯದಲ್ಲಿ ದಾಖಲಾಗಿರುತ್ತದೆ. ಪ್ರಕರಣದ ಇತ್ಯರ್ಥವಾದ ನಂತರ ಭರ್ತಿ ಮಾಡಲಾಗುವುದು ಎಂದರು. ಔಷಧಗಳ - ಕಾಂತಿವರ್ಧಕ ತಯಾರಕರು ಔಷಧ ಮತ್ತು ಅಧಿನಿಯಮ ಮತ್ತು ನಿಯಮಾವಳಿಗಳ ಪ್ರಕಾರ ಔಷಧಗಳನ್ನು ತಯಾರಿಸಿ ಮಾರುಕಟ್ಟೆಗೆ ಸರಬರಾಜು ಮಾಡುವ ಮುಂಚಿತವಾಗಿ ಎಲ್ಲಾ ಔಷಧಗಳ ಗುಣಮಟ್ಟವನ್ನು ಖಾತ್ರಿಪಡಿಸಿಕೊಂಡ ನಂತರವೇ ಮಾರುಕಟ್ಟೆಗೆ ಸರಬರಾಜು ಮಾಡಬೇಕು. ಇದಲ್ಲದೆ ಇಲಾಖಾ ಅಧಿಕಾರಿಗಳು ಮಾರುಕಟ್ಟೆಯಲ್ಲಿ ಲಭ್ಯವಿರುವ ಔಷಧಗಳ ಗುಣಮಟ್ಟದ ಬಗ್ಗೆ ನಿಗಾವಹಿಸಿ ಮತ್ತು ನಿಯಮಿತವಾಗಿ ನರ್ಸಿಂಗ್ ಹೋಂಗಳು, ಆಸ್ಪತ್ರೆಗಳು ಮತ್ತು ಕ್ಲಿನಿಕ್‌ಗಳನ್ನು ಒಳಗೊಂಡು ಮಾರುಕಟ್ಟೆಯಲ್ಲಿ ಲಭ್ಯವಿರುವ ಔಷಧಿಗಳನ್ನು ಮಾದರಿಗಳನ್ನಾಗಿ ಪಡೆದು ರಾಜ್ಯದ ಔಷಧ ಪರೀಕ್ಷಾ ಪ್ರಯೋಗಾಲಯಗಳಿಗೆ ಕಳುಹಿಸಿ ಗುಣಮಟ್ಟವನ್ನು ಖಾತರಿಪಡಿಸಿಕೊಳ್ಳುವ ಮೂಲಕ ಆಸ್ಪತ್ರೆ, ನರ್ಸಿಂಗ್ ಹೋಂ ಮತ್ತು ಕ್ಲಿನಿಕ್‌ಗಳಲ್ಲಿ ಲಭ್ಯವಿರುವ ಔಷಧಗಳ ಗುಣಮಟ್ಟವನ್ನು ಪರಿಶೀಲಿಸಲಾಗುತ್ತಿದೆ ಎಂದರು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಿ.ಎಸ್ಸಿ. ಪದವಿ ಪಠ್ಯದಲ್ಲಿ ಸಾಹಿತಿ ಡಾ.ಬಿ.ಎಲ್.ವೇಣುರವರ ಕಥೆ ಸೇರ್ಪಡೆ.!ದಿನದ ಮಂಡಕ್ಕಿ ಒಗ್ಗರಣೆ –ಮಿರ್ಚಿ 05-08-2025.!!ಪುತ್ರದಾ ಏಕಾದಶಿ ದಿನ ದಂಪತಿಗಳು ಹೀಗೆ ಮಾಡಿದರೆ ಸಂತಾನ ಪ್ರಾಪ್ತಿ.!ವಚನ: -ಮನಸಂದ ಮಾರಿತಂದೆ .!'ಮತಗಳ್ಳತನದ ಬಗ್ಗೆ ರಾಹುಲ್ ಗಾಂಧಿ ದಾಖಲಾತಿ ಬಿಡುಗಡೆ ಮಾಡುತ್ತಾರೆ'- ಪ್ರಿಯಾಂಕ ಖರ್ಗೆಸಾರಿಗೆ ನೌಕರರ ರಜೆ ರದ್ದು ಮಾಡಿ ಸಾರಿಗೆ ಇಲಾಖೆ ಆದೇಶ'ಆ.8ಕ್ಕೆ ರಾಹುಲ್‌ ಗಾಂಧಿ ಪ್ರತಿಭಟನಾ ರ‍್ಯಾಲಿ ಮುಂದೂಡಿಕೆ'- ಡಿಕೆಶಿ71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ; ಕನ್ನಡದಲ್ಲಿ ‘ಕಂದೀಲು’ ಅತ್ಯುತ್ತಮ ಚಿತ್ರ'ದೇಶದಲ್ಲಿ ಗೊಂದಲ ಸೃಷ್ಟಿಸಲು ಹೊರಟ ಕಾಂಗ್ರೆಸ್ ಪಕ್ಷ'- ವಿಜಯೇಂದ್ರ ಆಕ್ಷೇಪ'ನಿಜವಾದ ಭಾರತೀಯರು ಈ ರೀತಿ ಮಾತನಾಡುವುದಿಲ್ಲ'- ಸೇನಾ ಹೇಳಿಕೆಗೆ ರಾಹುಲ್‌ ಗಾಂಧಿಗೆ ಸುಪ್ರೀಂ ಛೀಮಾರಿ