LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ನಟ ಗೋವಿಂದ್ ದಂಪತಿಗಳ 37 ವರ್ಷ ದಾಂಪತ್ಯ ಜೀವನ ಅಂತ್ಯ?

ಬಾಲಿವುಡ್​ನ ಖ್ಯಾತ ನಟ ಗೋವಿಂದ್‌ ಸಂಸಾರದ ಬಗ್ಗೆ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಗೋವಿಂದ ಹಾಗೂ ಪತ್ನಿ ಸುನೀತಾ ಅಹುಜಾ ನಡುವೆ ಬಿರುಕು ಮೂಡಿದ್ದು ಹೀಗಾಗಿ ೩೭ ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಲು ಸೆಲೆಬ್ರಿಟಿ ಜೋಡಿ ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಆದರೆ ದಂಪತಿ ಕಡೆಯಿಂದ ಈ ಬಗ್ಗೆ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ.

ಸುನೀತಾ ಮತ್ತು ಗೋವಿಂದ ಅವರ ಜೀವನ ಶೈಲಿ ನಡುವೆ ಸಾಕಷ್ಟು ವ್ಯತ್ಯಾಸ ಉಂಟಾಗಿದೆ ಎನ್ನಲಾಗಿದೆ. ಹಾಗಾಗಿ ಒಂದಷ್ಟು ಸಮಯದಿಂದ ಅವರು ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ಈ ನಡುವೆ ಇನ್ನೊಂದು ಗಾಸಿಪ್ ಕೂಡ ಹಬ್ಬಿದೆ. ಗೋವಿಂದ ಅವರು ಮರಾಠಿ ನಟಿಯೊಬ್ಬರ ಜೊತೆ ಆತ್ಮೀಯತೆ ಬೆಳೆಸಿಕೊಂಡಿದ್ದು ಇದೇ ಕಾರಣಕ್ಕೆ ಇಬ್ಬರು ದೂರ ದೂರವಾಗುತ್ತಿದ್ದಾರೆ ಎನ್ನಲಾಗುತ್ತಿದೆ.

ಸುನೀತಾ ಅಹುಜಾ ಅವರು ಇತ್ತೀಚೆಗೆ ಮಾಧ್ಯಮವೊಂದರ ಮುಂದೆ, ಗೋವಿಂದ ಅವರು ಸಭೆಗಳು ಮತ್ತು ಔತಣಕೂಟಗಳ ನಂತರ ತಡವಾಗುವುದರಿಂದ ಹೆಚ್ಚಾಗಿ ಪ್ರತ್ಯೇಕವಾಗಿ ವಾಸಿಸುತ್ತಾರೆ ಎಂದು ಹೇಳಿಕೊಂಡಿದ್ದರು. ನಮಗೆ ಎರಡು ಮನೆಗಳಿವೆ, ನಮ್ಮ ಅಪಾರ್ಟ್ಮೆಂಟ್ ಎದುರು ನಮಗೆ ಬಂಗಲೆ ಇದೆ. ನಾನು ಮಕ್ಕಳು ಫ್ಲಾಟ್‌ನಲ್ಲಿ ವಾಸಿಸುತ್ತೇವೆ ಎಂದಿದ್ದರು.

‘ಮುಂದಿನ ಜನ್ಮದಲ್ಲಿ ಅವರು ನನ್ನ ಗಂಡ ಆಗಬಾರದು. ಅವರಿಗೆ ಹೊರಗೆ ಹೋಗುವುದು ಎಂದರೆ ಇಷ್ಟ ಇಲ್ಲ. ನಾನು ಸುತ್ತಾಡಲು ಬಯಸುತ್ತೇನೆ. ಅವರು ಯಾವಾಗಲೂ ಕೆಲಸದಲ್ಲಿ ಮುಳುಗಿರುತ್ತಾರೆ. ನಾವಿಬ್ಬರು ಜೊತೆಯಾಗಿ ಸಿನಿಮಾಗೆ ಹೋಗಿದ್ದೇ ನನಗೆ ನೆನಪಿಲ್ಲ’ ಎಂದು ಸುನೀತಾ ಅವರು ಈ ಮೊದಲಿನ ಸಂದರ್ಶನವೊಂದರಲ್ಲಿ ಹೇಳಿದ್ದರು.

ಗೋವಿಂದ ಅವರ ವ್ಯವಸ್ಥಾಪಕ ಶಶಿ ಸಿನ್ಹಾ ಪ್ರತಿಕ್ರಿಯಿಸಿ, ಕುಟುಂಬದ ಕೆಲವು ಸದಸ್ಯರು ನೀಡಿದ ಕೆಲವು ಹೇಳಿಕೆಗಳಿಂದಾಗಿ ದಂಪತಿಗಳ ನಡುವೆ ಸಮಸ್ಯೆಗಳಿವೆ. ಅಂತಹ ಸಮಸ್ಯೆ ಇಲ್ಲ ಮತ್ತು ಗೋವಿಂದ ಹೊಸ ಚಿತ್ರವನ್ನು ಪ್ರಾರಂಭಿಸುವ ಪ್ರಕ್ರಿಯೆಯಲ್ಲಿದ್ದಾರೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಗೋವಿಂದ ಮತ್ತು ಸುನೀತಾ ಅಹುಜಾ ಮಾರ್ಚ್ 1987 ರಲ್ಲಿ ಮದುವೆಯಾಗಿದ್ದರು.

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
-ಬಳ್ಳೇಶ ಮಲ್ಲಯ್ಯ ಅವರ  ವಚನ.!ದೆಹಲಿ ಸ್ಪೋಟ ಪ್ರಕರಣ: ಹರಿಯಾಣದ ವೈದ್ಯೆ ಪ್ರಿಯಾಂಕಾ ಶರ್ಮಾ ವಿಚಾರಣೆಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ಆದೇಶ ರದ್ದು..!! ಹೈಕೋರ್ಟ್ಬಾಂಗ್ಲಾದೇಶದಲ್ಲಿ ನಿರಾಯುಧ ಪ್ರತಿಭಟನಾಕಾರರ ಕೊಲೆ, ಶೇಖ್ ಹಸೀನಾಗೆ ಮರಣದಂಡನೆ..!ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜೀನಾಮೆಸೌದಿ ಅರೇಬಿಯಾ ಬಸ್ ದುರಂತ- ಸಂತಾಪ ಸೂಚಿಸಿದ ಪ್ರಧಾನಿ ಮೋದಿದೆಹಲಿ ಸ್ಪೋಟ ಪ್ರಕರಣ: ಯಾವುದೇ ಪುರಾವೆಗಳಿಲ್ಲ; ಮೂವರು ವೈದ್ಯರು ಸೇರಿ ನಾಲ್ವರನ್ನು ಬಿಡುಗಡೆ ಮಾಡಿದ NIAಮಕ್ಕಾದಲ್ಲಿ ಭೀಕರ ಅಪಘಾತ : 42 ಭಾರತೀಯ ಉಮ್ರಾ ಯಾತ್ರಿಕರು ದುರ್ಮರಣಮಂಗಳೂರು ಪೊಲೀಸರ ಭರ್ಜರಿ ಕಾರ್ಯಾಚರಣೆ!! 250 ಸಿಮ್ ಬಳಸಿ 300 ಬ್ಯಾಂಕ್ ಖಾತೆಗಳನ್ನು ಹ್ಯಾಕ್ ಮಾಡಿದ್ದ ಖದೀಮರು ಅರೆಸ್ಟ್ಚಲನಚಿತ್ರಗಳಲ್ಲಿ ಸಾಹಿತ್ಯದ ಸ್ಪರ್ಶ ಬಿ.ಎಲ್.ವೇಣು ಅವರ ಸೃಜನಶೀಲತೆ: ಡಾ. ಡಾ.ಬಂಜಗೆರೆ ಜಯಪ್ರಕಾಶ್