LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಕಿಂಗ್ ಚಿತ್ರದ ಶೂಟಿಂಗ್ ವೇಳೆ ನಟ ಶಾರುಖ್ ಖಾನ್‌ಗೆ ಗಾಯ

ಮುಂಬೈ : ಕಿಂಗ್ ಸಿನಿಮಾ ಶೂಟಿಂಗ್ ವೇಳೆ ಬಾಲಿವುಡ್ ನಟ ಶಾರುಖ್ ಖಾನ್ ಗಾಯಗೊಂಡಿದ್ದು, ಅವರ ಬೆನ್ನಿಗೆ ಪೆಟ್ಟಾಗಿದ್ದು, ವಿಶ್ರಾಂತಿಗೆ ವೈದ್ಯರು ತಿಳಿಸಿದ್ದಾರೆ.

ಸಾಹಸ ಸನ್ನಿವೇಶ ಚಿತ್ರೀಕರಣ ಮಾಡುವಾಗ ಶಾರುಖ್ ಖಾನ್ ಗಾಯಗೊಂಡಿದ್ದಾರೆ. ಮುಂಬೈನ ಚಿತ್ರೀಕರಣದ ಸ್ಟುಡಿಯೋದಲ್ಲಿ ಈ ಅವಘಡ ನಡೆದಿದ್ದು, ಈ ಸಿನಿಮಾ ಚಿತ್ರೀಕರಣದ ವೇಳೆ ಮಗಳು ಕೂಡ ಭಾಗಿಯಾಗಿದ್ದರು ಎಂದು ವರದಿಯಾಗಿದೆ.

ಗಾಯದ ಕಾರಣಕ್ಕೆ ಶಾರುಖ್ ಅಮೆರಿಕಕ್ಕೆ ಪ್ರಯಾಣ ಬೆಳೆಸಬಹುದು. ನಂತರ ಯುಕೆಗೆ ಪ್ರವಾಸ ಮಾಡಲಿದ್ದಾರೆ. ಅಲ್ಲಿ ಕುಟುಂಬದವರೊಟ್ಟಿಗೆ ಇದ್ದು ಚೇತರಿಸಿಕೊಳ್ಳಲಿದ್ದಾರೆ. ವಿಶ್ರಾಂತಿ ಕಾರಣಕ್ಕಾಗಿ ಶ್ರೀಲಂಕಾಗೆ ಯೋಜಿಸಿದ್ದ ಪ್ರವಾಸವನ್ನು ಮುಂದೂಡಲಾಗಿದೆ ಎನ್ನಲಾಗಿದೆ.

ಇನ್ನು ಶಾರುಖ್ ಖಾನ್‌ಗೆ ಗಂಭೀರ ಪೆಟ್ಟಾಗಿಲ್ಲ. ಚೇತರಿಸಿಕೊಳ್ಳುತ್ತಿದ್ದಾರೆ. ಕಿಂಗ್ ಖಾನ್ ಗಾಯಗೊಂಡಿರುವುದರಿಂದ ಸಿನಿಮಾ ಚಿತ್ರೀಕರಣದಲ್ಲಿ ವಿಳಂಬವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಸಿದ್ಧಾರ್ಥ್ ಆನಂದ್ ನಿರ್ದೇಶಿಸುತ್ತಿರುವ 'ಕಿಂಗ್' ಚಿತ್ರದಲ್ಲಿ ಶಾರುಖ್ ಖಾನ್ ದೀಪಿಕಾ ಪಡುಕೋಣೆ, ಅಭಿಷೇಕ್ ಬಚ್ಚನ್, ಜೈದೀಪ್ ಅಹ್ಲಾವತ್, ಅನಿಲ್ ಕಪೂರ್ ಮತ್ತು ಅಭಯ್ ವರ್ಮಾ ಕೂಡ ಅಭಿನಯಿಸಿದ್ದಾರೆ.

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭದ್ರಾ ಜಲಾಶಯ ರೈತರಿಗೆ ಮುಖ್ಯ ಮಾಹಿತಿ ಬೇಸಿಗೆ ಹಂಗಾಮಿನ ಬೆಳೆಗಳಿಗೆ ನೀರು.!ನಾಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಜಾಮೀನು ಅರ್ಜಿ ವಿಚಾರಣೆ.!ಕನ್ನಡದ ಖ್ಯಾತ ಹಿರಿಯ ಕಲಾವಿದ ಇನ್ನಿಲ್ಲ.!ಕಗಂಟಾಗಿದ್ದ ಕೇರಳ ಮುಖ್ಯಂತ್ರಿ ಸ್ಥಾನ ಕುತೂಹಲಕ್ಕೆ ತೆರೆ.!ಕೈ ಮುಷ್ಟಿಯಷ್ಟು ಕಲ್ಲುಪ್ಪನ್ನು ತೆಗೆದುಕೊಂಡು ವಾರಕ್ಕೆ ಒಂದು ಬಾರಿಯಾದರೂ ಮನೆಯಲ್ಲಿ ಹೀಗೆ ಮಾಡಿದರೆ ಧನ ಪ್ರವಾಹ ಖಚಿತ.!ಪ್ರಥಮ ದರ್ಜೆ ಕಾಲೇಜುಗಳ ಬೋಧಕರ ವರ್ಗಾವಣೆ ಕೌನ್ಸೆಲಿಂಗ್ ತಾತ್ಕಾಲಿಕ ವೇಳಾಪಟ್ಟಿ.!ಎಲ್ಲಾ ಶಾಲಾ-ಕಾಲೇಜುಗಳಲ್ಲಿ ‘ಹಿಜಾಬ್’ ನಿಷೇಧ ರದ್ದು.!ಪ್ರಥಮ ವರ್ಷದ ಡಿಪಿಎಸ್‍ಇ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಗಂಜಿಗಟ್ಟೆ ಲಂಬಾಣಿಹಟ್ಟಿಯಲ್ಲಿ ಪ್ರತ್ಯೇಕ ಚುನಾವಣಾ ಬೂತ್ಗೆ ಆಗ್ರಹದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 14-05-2026