LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ನಟ ಶ್ರೀಧರ್‌ಗೆ ಏಡ್ಸ್‌, ಕ್ಯಾನ್ಸರ್ ಇತ್ತು! ಆಡಿಯೋ ಮೂಲಕ ಶಾಕ್‌ ಕೊಟ್ಟ ಪತ್ನಿ

ಬೆಂಗಳೂರು: ನಟ ಶ್ರೀಧರ್ ನಾಯಕ್ (Actor Sridhar) ಅವರ ನಿಧನದ ಬಳಿಕ ಅವರ ಪತ್ನಿ ಜ್ಯೋತಿ ಅವರ ಹಳೆಯ ಆಡಿಯೋ ವೈರಲ್ (viral audio) ಆಗಿದೆ. ಈ ಆಡಿಯೋದಲ್ಲಿ ಅವರು ಶ್ರೀಧರ್ ಅವರಿಗೆ ಏಡ್ಸ್ (AIDS) ಮತ್ತು ಕ್ಯಾನ್ಸರ್ (Cancer) ಇತ್ತು ಎಂದು ಹೇಳಿದ್ದಾರೆ. ಅವರ ವೈವಾಹಿಕ ಜೀವನದಲ್ಲಿನ ಸಮಸ್ಯೆಗಳು ಮತ್ತು ಶ್ರೀಧರ್ ಅವರ ವರ್ತನೆಯ ಬಗ್ಗೆಯೂ ಮಾತನಾಡಿದ್ದಾರೆ. ತಾವು ಯಾರೊಂದಿಗೂ ಓಡಿ ಹೋಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.



ಆಸ್ಪತ್ರೆಯಲ್ಲಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಶ್ರೀಧರ್‌ ನಾಯಕ್‌ ಇಹಲೋಕ ತ್ಯಜಿಸಿದ್ದಾರೆ. ಅವರ ಸಾವಿನ ವಿಚಾರ ಸಾಕಷ್ಟು ಚರ್ಚೆಗಳಿಗೆ ಕಾರಣವಾಗಿದೆ. ಅವರ ನಿಧನದಿಂದ ಕಿರುತೆರೆ ಲೋಕದಲ್ಲಿ ಸೂತಕದ ಛಾಯೆ ಮೂಡಿದೆ. ಕಲಾವಿದನಾಗಿ, ನಟನಾ ತರಬೇತುದಾರನಾಗಿ ಶ್ರೀಧರ್ ಸಾಕಷ್ಟು ಹೆಸರು ಮಾಡಿದ್ದರು. ಆದರೆ, ಅವರ ಕುಟುಂಬದಲ್ಲಿ ಸಾಕಷ್ಟು ಒಡಕು ಇತ್ತು. ಈ ಬಗ್ಗೆ ಶ್ರೀಧರ್ ಪತ್ನಿಯದ್ದು ಎನ್ನಲಾದ ಹಳೆಯ ಆಡಿಯೋ ಇದೀಗ ವೈರಲ್ ಆಗಿದೆ. ಈ ಆಡಿಯೋದಲ್ಲಿ ಅವರು ಪತಿಗೆ ಏಡ್ಸ್ ಇತ್ತು ಎಂಬುದನ್ನು ರಿವೀಲ್ ಮಾಡಿದ್ದಾರೆ.



ಶ್ರೀಧರ್‌ ಪತ್ನಿ ಜ್ಯೋತಿ ಅವರದ್ದು ಎನ್ನಲಾದ ಆಡಿಯೋ ವೈರಲ್ ಆಗಿದೆ. ಈ ಮೊದಲು ಶ್ರೀಧರ್ ತಮ್ಮ ಪತ್ನಿ ವಿರುದ್ಧ ಆರೋಪ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಜ್ಯೋತಿ ಅವರು ಅಂದೇ ಈ ಆಡಿಯೋ ಹರಿಬಿಟ್ಟಿದ್ದರು ಎನ್ನಲಾಗಿದೆ. ‘ನಾನು ಸಿಂಗರ್ ಆಗಬೇಕು ಎಂದು ಬಂದವಳು. ನನಗೆ ಯಾರ ಮೇಲೂ ಅಟ್ರ್ಯಾಕ್ಷನ್ ಇರಲಿಲ್ಲ. ಈ ವೇಳೆ ಶ್ರೀಧರ್ ಪರಿಚಯ ಆಯ್ತು. ಆ ಬಳಿಕ ಗೆಳೆತನ ಮೂಡಿತು. ಆ ಬಳಿಕ ಪ್ರೀತಿ ಬೆಳೆಯಿತು. ಶ್ರೀಧರ್ ಪ್ರಪೋಸ್ ಮಾಡಿದ. ಮನೆಯಲ್ಲಿ ಬಂದು ಮಾತನಾಡಿದ. ಆದರೆ, ಜಾತಕ ಕೂಡಲಿಲ್ಲ. ಹೀಗಾಗಿ ಯಾರೂ ಮದುವೆಗೆ ಒಪ್ಪಲೇ ಇಲ್ಲ. ನಾನು ಇಷ್ಟಪಟ್ಟಿದ್ದೆ. ಹೀಗಾಗಿ ನಾವು ಮದುವೆ ಆದೆವು’ ಎಂದು ಜ್ಯೋತಿ ಮಾತು ಆರಂಭಿಸಿದ್ದಾರೆ.



‘ಒಂದೇ ತಿಂಗಳಿಗೆ ಶ್ರೀಧರ್ ಬದಲಾದ. ರಿಸ್ಟ್ರಿಕ್ಷನ್ ಹಾಕಲು ಆರಂಭಿಸಿದ. ಇದೆಲ್ಲವೂ ಅಬ್​ನಾರ್ಮಲ್ ಆಗಿತ್ತು. 11 ವರ್ಷಗಳ ಹಿಂದಿನ ಮಾತನ್ನು ಈಗ ಹೇಳಲು ಸಾಧ್ಯವಿಲ್ಲ. ಅವನು ನನ್ನನ್ನು ಪ್ರೀತಿಸುತ್ತಾನೆ ಎಂದುಕೊಂಡೆ. ಆದರೆ, ಪ್ರೀತಿಸಿಲ್ಲ. ಇದನ್ನು ಅವನೇ ಒಂದು ದಿನ ಹೇಳಿದ್ದ. ಹೀಗೆಲ್ಲ ಆಯ್ತಾ ಎಂದು ಹೇಳಿದರೆ ಯಾರೂ ನಂಬಲ್ಲ. ಅವನು ಸಾಕಷ್ಟು ಬಾರಿ ಹೊಡೆದಿದ್ದಾನೆ. ಆದರೆ, ನಾನು ಇದನ್ನು ಎಲ್ಲಿಯೂ ಹೇಳಿಕೊಂಡಿಲ್ಲ’ ಎಂದಿದ್ದಾರೆ ಜ್ಯೋತಿ.



‘ನಾನು ಯಾರ ಜೊತೆಯೂ ಓಡಿ ಹೋಗಿಲ್ಲ. ನಾನು ಹಾಗೂ ಮಗ ಇಬ್ಬರೇ ಜೀವನ ಮಾಡುತ್ತಿದ್ದೇವೆ. ಒಬ್ಬರ ಜೀವನದಲ್ಲಿ ಇಷ್ಟು ದೊಡ್ಡ ಟ್ರ್ಯಾಜಿಡಿ ನಡೆಯುತ್ತದೆ ಎಂದು ನಾನು ಊಹಿಸಿರಲಿಲ್ಲ. ಆದರೆ, ನಡೆದಿದೆ. ನಾನು ಅವರ ಕ್ಯಾರೆಕ್ಟರ್ ಮೇಲೆ ಎಂದಿಗೂ ಅನುಮಾನ ಪಟ್ಟಿಲ್ಲ. ಅವನಿಗೆ ಹಲವು ಜನರ ಸಹವಾಸದಿಂದ ಎಚ್​ಐವಿ ಬಂದಿದೆ. ಅಲ್ಲದೆ, ಕ್ಯಾನ್ಸರ್ ಕೂಡ ಬಂದಿದೆ. ಈ ಬಗ್ಗೆ ತುಂಬಾ ವೈದ್ಯರ ಬಳಿ ಏನಾದರೂ ಔಷಧ ಇದೆಯೇ? ಕ್ಯೂರ್ ಮಾಡಬಹುದೇ ಎಂದು ಕೇಳಿದ್ದೆ. ಆಗಲ್ಲ ಎಂದರು. ಅವನಿಗೆ ಸಿಕ್ಕಾಪಟ್ಟೆ ಅಹಂಕಾರ ಇತ್ತು. ದೇವರು ಕೊಟ್ಟ ಎಲ್ಲವನ್ನೂ ಕಳೆದುಕೊಂಡ. ಇದಕ್ಕೆ ಅವನೇ ಕಾರಣ. ನನ್ನ ಕಾರಣಕ್ಕೆ ಅವನಿಗೆ ಏಡ್ಸ್ ಬಂದಿಲ್ಲ’ ಎಂದು ಜ್ಯೋತಿ ಹೇಳಿರುವ ಆಡಿಯೋ ಇದೀಗ ಎಲ್ಲೆಡೆ ವೈರಲ್‌ ಆಗಿದೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭದ್ರಾ ಜಲಾಶಯ ರೈತರಿಗೆ ಮುಖ್ಯ ಮಾಹಿತಿ ಬೇಸಿಗೆ ಹಂಗಾಮಿನ ಬೆಳೆಗಳಿಗೆ ನೀರು.!ನಾಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಜಾಮೀನು ಅರ್ಜಿ ವಿಚಾರಣೆ.!ಕನ್ನಡದ ಖ್ಯಾತ ಹಿರಿಯ ಕಲಾವಿದ ಇನ್ನಿಲ್ಲ.!ಕಗಂಟಾಗಿದ್ದ ಕೇರಳ ಮುಖ್ಯಂತ್ರಿ ಸ್ಥಾನ ಕುತೂಹಲಕ್ಕೆ ತೆರೆ.!ಕೈ ಮುಷ್ಟಿಯಷ್ಟು ಕಲ್ಲುಪ್ಪನ್ನು ತೆಗೆದುಕೊಂಡು ವಾರಕ್ಕೆ ಒಂದು ಬಾರಿಯಾದರೂ ಮನೆಯಲ್ಲಿ ಹೀಗೆ ಮಾಡಿದರೆ ಧನ ಪ್ರವಾಹ ಖಚಿತ.!ಪ್ರಥಮ ದರ್ಜೆ ಕಾಲೇಜುಗಳ ಬೋಧಕರ ವರ್ಗಾವಣೆ ಕೌನ್ಸೆಲಿಂಗ್ ತಾತ್ಕಾಲಿಕ ವೇಳಾಪಟ್ಟಿ.!ಎಲ್ಲಾ ಶಾಲಾ-ಕಾಲೇಜುಗಳಲ್ಲಿ ‘ಹಿಜಾಬ್’ ನಿಷೇಧ ರದ್ದು.!ಪ್ರಥಮ ವರ್ಷದ ಡಿಪಿಎಸ್‍ಇ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಗಂಜಿಗಟ್ಟೆ ಲಂಬಾಣಿಹಟ್ಟಿಯಲ್ಲಿ ಪ್ರತ್ಯೇಕ ಚುನಾವಣಾ ಬೂತ್ಗೆ ಆಗ್ರಹದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 14-05-2026