LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ವಿದೇಶದಲ್ಲಿ ಬರ್ತ್​ಡೇ ಆಚರಿಸಿಕೊಂಡ ನಟಿ ರಮ್ಯಾ

ಅಭಿನಯದಿಂದ ದೂರ ಉಳಿದಿರುವ ಸ್ಯಾಂಡಲ್ವುಡ್‌ ಕ್ವಿನ್‌ ರಮ್ಯಾ ತಮ್ಮ ಜನ್ಮದಿನವನ್ನು ಕೀನ್ಯಾದ ರಾಷ್ಟ್ರೀಯ ಮೀಸಲು ಪ್ರದೇಶದಲ್ಲಿ ಆಚರಿಸಿಕೊಂಡಿದ್ದಾರೆ.

ಸದ್ಯ ಬರ್ಥ್‌ ಡೇ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ರಮ್ಯಾ ಗೆಳೆಯ ಸಂಜೀವ್ ಮೋಹನ್ ಅವರು ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ರಮ್ಯಾ ಕೀನ್ಯಾದ ಮಸಾಯಿ ಮಾರ ರಾಷ್ಟ್ರೀಯ ಮೀಸಲು ಭಾಗದಲ್ಲಿ ಗೆಳೆಯರ ಜೊತೆ ಈ ಭಾಗದಲ್ಲಿ ಸುತ್ತಾಟ ನಡೆಸಿ ಜನ್ಮದಿನ ಆಚರಿಸಿಕೊಂಡಿದ್ದಾರೆ. ಪ್ರತಿ ಬಾರಿ ಜನ್ಮದಿನಕ್ಕೆ ಅವರು ನಾನಾ ಕಡೆಗಳಲ್ಲಿ ಸುತ್ತಾಟ ನಡೆಸುತ್ತಾರೆ, ಫೋಟೋಗಳನ್ನು ಅವರು ಹಂಚಿಕೊಳ್ಳುತ್ತಾರೆ. ಇನ್ನೂ ಕೆಲವು ಸಂದರ್ಭಗಳಲ್ಲಿ ಅವರು ಫೋಟೋನ ಪೋಸ್ಟ್ ಮಾಡಲು ಇಚ್ಛಿಸುವುದಿಲ್ಲ. ಈಗಲೂ ರಮ್ಯಾ ಅವರು ಫೋಟೋನ ಪೋಸ್ಟ್ ಮಾಡಿಲ್ಲ. ಆದರೆ, ಅವರ ಗೆಳೆಯರಿಂದ ರಮ್ಯಾ ಅವರು ಕೀನ್ಯಾದಲ್ಲಿದ್ದಾರೆ ಎಂಬ ವಿಚಾರ ಗೊತ್ತಾಗಿದೆ.

ರಮ್ಯಾ ಅವರ ಆಪ್ತ ಸಂಜೀವ್ ಮೋಹನ್ ಎಂಬುವವರು ಅವರ ಫೋಟೋನ ಪೋಸ್ಟ್ ಮಾಡಿದ್ದಾರೆ. ರಮ್ಯಾ ಅವರಿಗೆ ಸಂಜೀವ್ ಜೊತೆ ಒಳ್ಳೆಯ ಗೆಳೆತನ ಇದೆ. ಈ ಮೊದಲಿನಿಂದಲೂ ಸಂಜೀವ್ ಅವರು ಇನ್​ಸ್ಟಾಗ್ರಾಮ್​ನಲ್ಲಿ ರಮ್ಯಾ ಫೋಟೋಗಳನ್ನು ಹಂಚಿಕೊಳ್ಳುತ್ತಾ ಬರುತ್ತಿದ್ದಾರೆ. ಈಗ ಹಂಚಿಕೊಂಡಿರೋ ಫೋಟೋ ಗಮನ ಸೆಳೆದಿದೆ. ‘ಹ್ಯಾಪಿ ಬರ್ತ್​ಡೇ ದಿವು. ಯಾವಾಗಲೂ ಪ್ರೀತಿಸುತ್ತೇನೆ. ನಿಮ್ಮ ಜೊತೆ ಇರೋದು ಯಾವಾಗಲೂ ಸುಂದರವಾಗಿರುತ್ತದೆ’ ಎಂದು ಸಂಜೀವ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್​ಗೆ ಮಸಾಯಿ ಮಾರ, ಕೀನ್ಯಾ ಎಂದು ಲೊಕೇಶನ್ ನೀಡಿದ್ದಾರೆ. ಸದ್ಯ ಸಂಜೀವ್ ಅವರು ಕೀನ್ಯಾದಲ್ಲಿಯೇ ಇದ್ದಾರೆ. ಮಸಾಯಿ ಮಾರದಲ್ಲಿರುವ ಫೋಟೋಗಳನ್ನು ಸ್ಟೇಟಸ್​ನಲ್ಲಿ ಹಂಚಿಕೊಳ್ಳುತ್ತಾ ಇದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಲಾಯರ್ ಜಗದೀಶ್ ವಿರುದ್ಧ ಎಫ್‌ಐಆರ್ ದಾಖಲುವಿದ್ಯಾರ್ಥಿನಿ ಮೇಲೆ ಅತ್ಯಾ*ಚಾರವೆಸಗಿ ಕೊ*ಲೆಗೈದು ಶವಕ್ಕೆ ಬೆಂಕಿ ಹಚ್ಚಿದ ಕ್ಯಾನ್ಸರ್ ರೋಗಿ'ಪುನರ್ವಸತಿ ಕಾರ್ಯಕರ್ತರ ಗೌರವಧನ 15,000 ದಿಂದ 16,000 ರೂ.ಗೆ ಹೆಚ್ಚಳ'- ಲಕ್ಷ್ಮಿ ಹೆಬ್ಬಾಳ್ಕರ್ತೆಂಗಿನ ತೋಟದಲ್ಲಿ ಎಳನೀರು ಮುಟ್ಟಿದ್ದಕ್ಕೆ ಕೊಂದೇ ಬಿಟ್ಟರುಪ್ರಧಾನಿ ಜೊತೆಗೂಡಿ ನಾಮಪತ್ರ ಸಲ್ಲಿಸಿದ ಎನ್‌ಡಿಎ ಅಭ್ಯರ್ಥಿ ಸಿಪಿ ರಾಧಾಕೃಷ್ಣನ್ಪ್ರತಿಷ್ಠಿತ ಅಪೋಲೋ ಫಾರ್ಮಸಿಗೆ ವಿವಿಧ ಹುದ್ದೆಗಳಿಗೆ ಅಭ್ಯರ್ಥಿಗಳು ಬೇಕಾಗಿದ್ದಾರೆ!ಅರೇ,‌ ಉರ್ಫಿಗೇನಾಯ್ತು? ನಟಿಯ‌ ಮುಖ ಪರಚಿದ್ದು ಯಾರು?CAG report ಗ್ಯಾರಂಟಿಗಳಿಂದಾಗಿ ರಾಜ್ಯ ಸರ್ಕಾರದ ವಿತ್ತೀಯ ಕೊರತೆ ಭಾರೀ ಹೆಚ್ಚಳ: CAG ವರದಿಯಲ್ಲಿ ಮಾಹಿತಿ; ಆದಾಯ ಶೇ.1.86, ಖರ್ಚು ಶೇ.12.54ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಮೇಲೆ ಹಲ್ಲೆಆನ್‌ಲೈನ್ ಗೇಮಿಂಗ್ ತಡೆ ಮಸೂದೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ