ಯುಜಿಸಿಇಟಿ – 2026ರ ಕೃಷಿಕರ ಕೋಟಾದ ಅಭ್ಯರ್ಥಿಗಳಿಗೆ ಕೃಷಿ ಪ್ರಾಯೋಗಿಕ ಪರೀಕ್ಷೆಯನ್ನು ತೋಟಗಾರಿಕೆ ಮಹಾವಿದ್ಯಾಲಯ, ಹಿರಿಯೂರು ಕೇಂದ್ರದಲ್ಲಿ ಮೇ 26 ರಂದು ಮರು ನಿಗದಿ ಮಾಡಿ ನಡೆಸಲಾಗುವುದು.
ದಿನಾಂಕ: 10-05-2026 ರಂದು ಹಾಜರಾದ ಅರ್ಹ ಅಭ್ಯರ್ಥಿಗಳು ಕೃಷಿ ಪ್ರಾಯೋಗಿಕ ಪರೀಕ್ಷೆಗೆ ಹಾಜರಾಗಬಹುದು. ಈ ಕೃಷಿ ಪ್ರಾಯೋಗಿಕ ಪರೀಕ್ಷೆಯ ಪರೀಕ್ಷಾ ವೇಳಾ ಪಟ್ಟಿ ಈ ಕೆಳಕಂಡಂತಿವೆ.
ದಿನಾಂಕ: 23-05-2026 ರಿಂದ 26-05-2026ರ ಬೆಳಗ್ಗೆ 7 ಗಂಟೆಯವರೆಗೆ ಹಾಲ್ ಟಿಕೆಟ್ ಡೌನ್ಲೋಡ್ ಮಾಡಿಕೊಳ್ಳುವುದು. 26-05-2026ರಂದು ಬೆಳಗ್ಗೆ 8 ಗಂಟೆಗೆ ಅಭ್ಯರ್ಥಿಗಳು ಪ್ರಾಯೋಗಿಕ ಪರೀಕ್ಷಾ ಕೇಂದ್ರದಲ್ಲಿ ವರದಿ ಮಾಡಿಕೊಳ್ಳುವುದು.
ದಿನಾಂಕ: 26-05-2026 ರಂದು ಪ್ರಾಯೋಗಿಕ ಪರೀಕ್ಷೆಯ ಕೀ-ಉತ್ತರಗಳ ಪ್ರಕಟಣೆ, ದಿನಾಂಕ: 27-05-2026 ರಂದು ಪ್ರಾಯೋಗಿಕ ಪರೀಕ್ಷೆಯ ಫಲಿತಾಂಶವನ್ನು, ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು ಮತ್ತು ಕೆ.ಇ.ಎ.ಗೆ ಸಲ್ಲಿಸುವುದು. ಅಭ್ಯರ್ಥಿಗಳು ಬದಲಾದ ದಿನಾಂಕಗಳ ಗಮನಕ್ಕಾಗಿ ಹಾಗೂ ಮಾಹಿತಿಗಾಗಿ www.uahs.edu.in, http//kea.kar.nic.in,http//pgadmission.kar.nic.in/ugcet/UG_Home.aspx ಅಂತರಜಾಲ ತಾಣಗಳಿಗೂ ಭೇಟಿ ನೀಡಬಹುದಾಗಿದೆ.