Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಸರ್ಕಾರಿ ಕಟ್ಟಡವಿದ್ದರೂ ಬಾಡಿಗೆಯಲ್ಲಿರುವ ಇಲಾಖಾ ಕಚೇರಿಗಳು

ಸುದ್ದಿಮೂಲ ವಾರ್ತೆ

ತಿಪಟೂರು, ಜೂ 14 : ಯಾವುದೇ ವಸ್ತುಗಳನ್ನು ಬಳಕೆ ಮಾಡುತ್ತಿದ್ದರೆ ಮಾತ್ರ ಅವುಗಳು ಉಪಯೋಗಕ್ಕೆ ಬರುತ್ತವೆ. ಹಾಗೆಯೇ ಅದರ ಮೌಲ್ಯವು ಸಹ ಹೆಚ್ಚಾಗುತ್ತಾ ಹೋಗುತ್ತದೆ. ಆದರೆ, ಸರ್ಕಾರಿ ವಸ್ತುಗಳು, ವಾಹನಗಳು, ಕಚೇರಿಗಳನ್ನು ಪ್ರತಿ ನಿತ್ಯ, ಪ್ರತಿ ಕ್ಷಣ ಉಪಯೋಗಿಸಿದರೂ ವ್ಯವಸ್ಥಿತವಾಗಿರುವುದು ಬೆರಳಣಿಕೆಯಷ್ಟು. ಆದರೆ, ಇಲ್ಲಿನ ಕಟ್ಟಡಗಳು ಉಪಯೋಗವಾಗದೇ ದುಸ್ಥಿತಿಗೆ ತಲುಪಿರುವುದು ತಾಲ್ಲೂಕಿನ ಹಳೆಯ ಉಪವಿಭಾಗಧಿಕಾರಿ ಕಚೇರಿ ಹಾಗೂ ಹಳೆಯ ತಾಲ್ಲೂಕು ಕಚೇರಿ ಕಟ್ಟಡಗಳು.



ತಾಲ್ಲೂಕಿನ ಹಳೆಯ ಉಪವಿಭಾಗಧಿಕಾರಿ ಕಚೇರಿ ಹಾಗೂ ಹಳೆಯ ತಾಲ್ಲೂಕು ಕಚೇರಿಯ ಆವರಣದ ಒಳಗೆ ಸುಮಾರು ಹತ್ತಕ್ಕೂ ಹೆಚ್ಚು ಕೊಠಡಿಗಳಿವೆ. ಸುಸ್ಥಿತಿಯಲ್ಲಿರುವ ಕಟ್ಟಡಗಳು ದುಸ್ಥಿತಿಗೆ ತಲುಪಿವೆ. ಕಚೇರಿಯ ಆವರಣದ ಒಳಗೆ ಗಿಡಗಂಟೆಗಳು ಬೆಳೆದು, ಕಸಕಡ್ಡಿಯಿಂದ ಆವರಿಸಿದ್ದು, ಸಾರ್ವಜನಿಕ ಸೇವೆಗೆ ಬಳಕೆಯಾಗಬೇಕಿದ್ದ ಕಚೇರಿಯು ಪುಂಡರ ಅಡ್ಡವಾಗಿದ್ದು, ಅನೈತಿಕ ಚಟುವಟಿಕೆಗಳ ತಾಣಕ್ಕೆ ದಾರಿಯಾಗಿದೆ.

ತಾಲ್ಲೂಕಿನ ಅಬಕಾರಿ ಇಲಾಖೆ, ಸಣ್ಣನೀರಾವರಿ ಇಲಾಖೆ, ಕಾರ್ಮಿಕ ಇಲಾಖೆ, ಟೂಡಾ ಕಚೇರಿ,

ಕಾನೂನು ಮಾಪನ ಶಾಸ್ತ್ರ ನಿರೀಕ್ಷಕರ ಕಚೇರಿ, ಪಿಎಮ್‌ಜಿಎಸ್‌ವೈ ಇಲಾಖೆ ಸೇರಿದಂತೆ ಹಲವಾರು ಸರ್ಕಾರಿ ಕಚೇರಿಗಳು ಬಾಡಿಗೆ ಕಟ್ಟಡದಲ್ಲಿದ್ದರೂ ಅವುಗಳ ಉಪಯೋಗಕ್ಕೆ ನೀಡಬಹುದಾಗಿತ್ತು.

ಜಿಲ್ಲೆ ಆಗಲೇಬೇಕಾದ ಎಲ್ಲಾ ಅಂಶಗಳು ತೆಂಗು ಸೀಮೆಯ ತಿಪಟೂರು

ತಾಲ್ಲೂಕಿಗಿದ್ದು, ಹಲವಾರು ಸರ್ಕಾರೇತರ ಸಂಘ ಸಂಸ್ಥೆಗಳಿಗೆ ತನ್ನದೇ ಆದ ಸ್ವಂತ ಕಟ್ಟಡಗಳು ಇಲ್ಲದಿರುವುದು ವಿಪರ್ಯಾಸ.

ಅಬಕಾರಿ ಉಪಧೀಕ್ಷಕರ ಕಚೇರಿಯ ಬಾಡಿಗೆ 19,950 ರೂಗಳು, ಅಬಕಾರಿ ನಿರೀಕ್ಷಕರ ಕಚೇರಿಗೆ 19,950, ಸಣ್ಣ ನೀರಾವರಿ ಇಲಾಖೆ ಕಚೇರಿಗೆ 3,300 ರೂ., ಪಿಎಮ್‌ಜಿಎಸ್‌ವೈ ಇಲಾಖೆಯ ಕಟ್ಟಡಕ್ಕೆ 12,000

ರೂ.ಕಾನೂನು ಮಾಪನ ಶಾಸ್ತ್ರ ನಿರೀಕ್ಷಕರ ಕಚೇರಿಯ ಬಾಡಿಗೆ 1733 ರೂ. ನಷ್ಟು ಪ್ರತಿ ಮಾಹೆಗೆ ಬಾಡಿಗೆ ನೀಡುತ್ತಿದ್ದಾರೆ.

ಹಿಂದಿನ ಸರ್ಕಾರದಲ್ಲಿ ಶಿಕ್ಷಣ ಸಚಿವರಾಗಿದ್ದ ಬಿ.ಸಿ ನಾಗೇಶ್ ಆಡಳಿತಾವಧಿಯಲ್ಲಿ

ಸುಸ್ಥಿತಿಯಲ್ಲಿದ್ದ ಹಳೆಯ ಉಪವಿಭಾಗಧಿಕಾರಿ ಕಚೇರಿ ಹಾಗೂ ಹಳೆಯ ತಾಲ್ಲೂಕು ಕಚೇರಿಯನ್ನು ನೂತನ ಆಡಳಿತ ಸೌಧ ಸರ್ಕಾರಿ ಕಟ್ಟಡಕ್ಕೆ ಸ್ಥಳಾಂತರಗೊಳಿಸಲಾಯಿತು. ಅದೇ ರೀತಿ ಬಾಡಿಗೆ ನೀಡುತ್ತಿರುವ ಕಚೇರಿಗಳನ್ನು ಸ್ಥಳಾಂತರಿಸಬಹುದಿತ್ತು.

ಎರಡು ವರ್ಷ ಕಳೆದರೂ ಸರ್ಕಾರಿ ಕಟ್ಟಡವನ್ನು ಖಾಲಿಯೇ ಬಿಡಲಾಗಿದೆ. ಶಾಸಕರಾದ ಕೆ.ಷಡಕ್ಷರಿ ಅವರು ಇದರ ಬಗ್ಗೆ ಗಮನಹರಿಸಿ ಕಚೇರಿಗಳನ್ನು ಒಂದೇ ಕಟ್ಟಡಕ್ಕೆ ಸ್ಥಳಾಂತರಿಸಬೇಕು. ಇದರಿಂದ ಸಾರ್ವಜನಿಕರಿಗೂ ಅನುಕೂಲವಾಗಲಿದೆ ಎಂಬುದು ಸಾರ್ವಜನಿಕರ ವಲಯದಲ್ಲಿ ಕೇಳಿಬರುತ್ತಿರುವ ಮಾತು.

ಬಾಡಿಗೆಯಲ್ಲಿರುವ ಇಲಾಖೆಗಳ ಮಾಹಿತಿ ಪಡೆದು ಅವುಗಳನ್ನು ಇಲ್ಲಿಗೆ

ಸ್ಥಳಾಂತರ ಮಾಡಲು ಅನುಮೋದನೆಯನ್ನು ಪಡೆದಿದ್ದು ಸರ್ಕಾರದ ಆದೇಶವು ಬಾಕಿಯಿದೆ. ಪವನ್‌ಕುಮಾರ್, ತಹಶೀಲ್ದಾರ್.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ