ಬೆಳಗಾವಿ : ಬಸವಣ ಕುಡಚಿಯಲ್ಲಿ ಸೋಮವಾರ ಅಂಬಲಿ ಬಂಡಿ ಊರೆಲ್ಲ ಅಂಬಲಿ ಹಂಚುತ್ತಾರೆ, ಮಂಗಳವಾರ ಕಿಚ್ಚಿಗಾಗಿ, ಇಂದು ಕುಡಚಿ ಜಾತ್ರೆಯ ಅಂಗವಾಗಿ ಸುಮಾರು ನೂರಾರು ವರ್ಷಗಳಿಂದ ಕಾಕತಿ ಗುಡ್ಡದಲ್ಲಿ ಕಟ್ಟಿಗೆ ತರುವುದು ವಾಡಿಕೆ ಹೀಗಾಗಿ ಕುಡಚಿಯ ಸುಮಾರು ಸಾವಿರಾರು ಜನರು ಬರಿಗಾಲಿನಲ್ಲಿ ನಡೆಯುತ್ತಾ, 51 ಜೋಡು ಎತ್ತಿನ ಬಂಡಿ ಹೂಡಿ ಕಟ್ಟಿಗೆ ತಂದು ಬಂಡಿಯಲ್ಲಿ ಹಾಕಿ ಪೂಜೆ ಮಾಡಿದ ಮೇಲೆ ವಿಶೇಷ ಭೋಜನ ರೊಟ್ಟಿ, ಜುನುಕದ ಪುಡಿ, ಏನಗಾಯ ಬದ್ನಿಕಾಯಿ, ಕೆಂಪು ಕಾರದ ಚಟ್ನಿ ಉಪ್ಪಿನಕಾಯಿ, ಕಡಲೆ ಬೆಲ್ಲ ಹೀಗೆ ಹಲವು ಬಗೆಯ ತರತರಹದ ಮೃಷ್ಟನ್ನ ಭೋಜನ ಮಾಡಿ ಮರಳಿ ಕುಡಚಿಗೆ ಬಂದು ಬಸವಣ ಕಿಚ್ಚಗೆ ಕಟ್ಟಿಗೆ ತರುವುದು ಒಂದು ವಿಶೇಷ, ಈ ಸಂದರ್ಭದಲ್ಲಿ ಕುಡಚಿಯ ಕರಡಿ ಕುಟುಂಬದ ವತಿಯಿಂದ ಪ್ರತಿವರ್ಷದಂತೆ ಬಂಡಿ ಹುಡಲಾಗಿತ್ತು ಕರವೇ ಉತ್ತರ ಕರ್ನಾಟಕ ಅಧ್ಯಕ್ಷರು ಆದ ಶ್ರೀ ಮಹಾಂತೇಶ ಬ ರಣಗಟ್ಟಿಮಠ, ಮಹಾವೀರ್ ಕರಡಿ ಶ್ರೀ ಸಿದ್ದಯ್ಯ ಮಾಸ್ತಮರಡಿ, ಶ್ರೀ ಪವಾಡಿ, ಬಸು ಪತ್ತಾರ್, ಕಿರಣ ಸುಣಗಾರ, ಕುಡಚಿಯ ಹಿರಿಯರು ಭಾಗವಹಿಸಿದ್ದರು