LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

DSS ನಿಂದ ಅಂಬೇಡ್ಕರ್ ಅವರ 69ನೇ ಪರಿನಿಬ್ಬಾಣ ದಿನ ಆಚರಣೆ

ಬೆಂಗಳೂರು: ಶಿಕ್ಷಣ, ಹೋರಾಟ ಮತ್ತು ಸಂಘಟನೆ ಎನ್ನುವ ಮೂರು ಸೂತ್ರಗಳನ್ನು ಕೊಡುವುದರ ಮೂಲಕ ದಲಿತ, ಅಲೆಮಾರಿ ಬುಡಕಟ್ಟು, ಹಿಂದುಳಿದ ಮತ್ತು ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಗಳು ಸಂಘಟಿತರಾಗಿ ಸಬಲೀಕರಣಗೊಳ್ಳಲು ಕಾರಣರಾದವರು ಯುಗಪುರುಷ ಡಾ.ಬಾಬಾಸಹೇಬ್ ಅಂಬೇಡ್ಕರ್ ಎಂದು ದಲಿತ ಸಂರಕ್ಷ ಸಮಿತಿ( ಕರ್ನಾಟಕ) ರಾಜ್ಯಾಧ್ಯಕ್ಷ  ಲಯನ್ ಬಾಲಕೃಷ್ಣ ತಿಳಿಸಿದರು.


ಬೆಂಗಳೂರಿನ ಟೌನ್ ಹಾಲ್ ನ ಭವ್ಯ ಮೆಟ್ಟಿಲುಗಳ ಮೇಲೆ ಅಂಬೇಡ್ಕರ್ ಅವರ  69ನೇ ಪರಿನಿಬ್ಬಾಣದ (ಪುಣ್ಯ ಸ್ಮರಣೆ) ಕಾರ್ಯಕ್ರಮ ಹಾಗೂ 4 ದಲಿತ ಚಳುವಳಿಯ ಸಂಘಟನೆಗಳಿಗೆ 50ನೇ ವರ್ಷದ ಸಂಭ್ರಮವನ್ನು ಆಚರಿಸಿ ಮಾತನಾಡಿದರು,


ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಪ್ರಯೋಜನಗಳು ಹಾಗೂ ವಿಚಾರದಾರೆಗಳು ಪ್ರತಿಯೊಬ್ಬರಿಗೂ ಸಮಾನ ಅವಕಾಶಗಳು ಸಿಗುವಂತಹ ಸಮಾಜವನ್ನು ನಿರ್ಮಿಸಬೇಕೆನ್ನುವುದೇ ನನ್ನ ಬಯಕೆ. ಎಲ್ಲರಲ್ಲಿಯೂ ಸಾಮಾಜಿಕ ಮತ್ತು ರಾಜಕೀಯ ಜಾಗೃತಿ ಇದ್ದರೆ ಮಾತ್ರ ಇದು ಸಾಧ್ಯವಾಗುತ್ತದೆ. ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತೆಯ ತಳಹದಿಯ ಮೇಲೆ ಕಟ್ಟಲ್ಪಟ್ಟ ಸಮಾಜವೇ ನನ್ನ ಆದರ್ಶ ಸಮಾಜ” ಎಂದು ಆಧುನಿಕ ಭಾರತದ ನಿರ್ಮಾಣಕ್ಕೆ ಸಂವಿಧಾನದ ಮೂಲಕ ಮುನ್ನುಡಿ ಬರೆದ ಆಧುನಿಕ ಭಾರತದ ಪಿತಾಮಹ ಡಾ.ಬಾಬಾಸಾಹೇಬ್ ಅಂಬೇಡ್ಕ‌ರ್ ಎಂದರು.


ಅಂಬೇಡ್ಕರ್ ಅವರ ಪುತ್ತಳಿಯ ಕೈ ಕತ್ತಿರಿಸಿರುವ ಘಟನೆಗಳು ರಾಜ್ಯ,ರಾಷ್ಟ್ರಮಟ್ಟದಲ್ಲಿ ನಡೆದಿವೆ, ಅದಕ್ಕೆಲ್ಲ ಉತ್ತರ ನಾವು ಹೋರಾಟಗಳ ಮೂಲಕ, ಕಾರ್ಯಕ್ರಮಗಲಕ ಮೂಲಕ ಸಂದೇಶ ರವಾನಿಸುತ್ತೇವೆ, ಕೇವಲ ಒಬ್ಬ ಅಂಬೇಡ್ಕರ್ ಕೈ ಕತ್ತರಿಸಿರಬಹುದು, ಅದಕ್ಕೆ ನೂರು ಅಂಬೇಡ್ಕರ್ ಹುಟ್ಟಿಕೊಳ್ಳುತ್ತಾರೆ ಎಂದು ಅಂಬೇಡ್ಕರ್ ವಿರೋಧಿಗಳಿಗೆ ತಕ್ಕ ಉತ್ತರ ನೀಡಿದರು.


ದಲಿತ ಪರ ಹೋರಾಟಗಾರ, ಚಿಂತಕ, ನೈಜ ಅಂಬೇಡ್ಕರ್ ವಾದಿ ಡಾ.ಎಂ ವೆಂಕಟಸ್ವಾಮಿ ಅವರು ಡಾ.ಅಂಬೇಡ್ಕರ್ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಅಂಬೇಡ್ಕರರು ಡಿಸೆಂಬರ್ 6, 1956ರಂದು ನಮ್ಮನ್ನು ದೈಹಿಕವಾಗಿ ಅಗಲಿದ್ದಾರೆಯೇ ಹೊರತು ಮಾನಸಿಕವಾಗಿ ಅಲ್ಲ. ಅವರು ತಮ್ಮ ತತ್ವ, ಸಿದ್ಧಾಂತ, ಹೋರಾಟ ಮತ್ತು ಸಂವಿಧಾನದ ರೂಪದಲ್ಲಿ ನಮ್ಮ ಉಸಿರಿನಲ್ಲಿ ಬೆರೆತು ಹೋಗಿದ್ದಾರೆ. ದಮನಿತ ಸಮುದಾಯಗಳ ವಿಮೋಚನೆಗಾಗಿ ಜಾಗತಿಕ ಮಟ್ಟದಲ್ಲಿ ಹೋರಾಡಿದ ವಿಮೋಚನಾಕಾರರ ಸಾಲಿನಲ್ಲಿ ಅಗ್ರಗಣ್ಯರಾಗಿದ್ದಾರೆ. ಹೀಗಾಗಿ ಪ್ರತಿಯೊಬ್ಬರು ಬೇದಬಾವ ಇಲ್ಲದೆ ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸಬೇಕು ಅವರ ವಿಚಾರಧಾರೆಗಳನ್ನು ತಿಳಿಯಬೇಕಾಗಿದೆ ಎಂದರು.


ಅಂವೇಡ್ಕರ್ ಅವರಿಗೆ Inte Exelence ಪ್ರಶಸ್ತಿಯನ್ನು ನಮ್ಮದೇಶದಲ್ಲಿನ ಯಾವ ವಿಶ್ವವಿಧ್ಯಾಲಯಗಳು ನೀಡಿಲ್ಲ ಬದಲಾಗಿ ವಿದೇಶದಲ್ಲಿ ನೀಡಿ ಗೌರವಿಸಿದ್ದಾರೆ.  ಭಾರತದಲ್ಲಿ ಮೇಲ್ವರ್ಗದವರು ಅವರನ್ನು ತುಳಿಯುವ ಪ್ರಯತ್ನ ಮಾಡಿದರೆ ಹೊರತು ಗೌರವಿಸುವ ಕೆಲಸ ಮಾಡಿಲ್ಲ. ಅವರ ಬಗ್ಗೆ ಅವಹೇಳನ ಮಾಡುವ ಪ್ರತಿಯೊಬ್ಬರಿಗೂ ಕಾನೂನಿನ ಅಡಿಯಲ್ಲಿ ಪಾಠಕಲಿಸುವ ಕೆಲಸವಾಗಬೇಕು ಎಂದರು.


ವಿಶೇಷ ಕಾರ್ಯಕ್ರಮದಲ್ಲಿ ಸಂಘಟನೆ ವತಿಯಿಂದ 13ನೇ ಸ್ವಾಭಿಮಾನದ ಗೌರವ ನಮನ, ಮೇಣದ ಬತ್ತಿ ಬೆಳಗುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಭೂಮಿತಾಯಿ ಬಳಗದ ವತಿಯಿಂದ ಕ್ರಾಂತಿ ಗೀತೆಗಳು ಮೊಳಗಿದವು. ಡಾ.ಅಂಬೇಡ್ಕರ್ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸುವ ಮೂಲಕ ಪುಣ್ಯ ಸ್ಮರಣೆಯನ್ನು ವಿಭಿನ್ನವಾಗಿ ಆಚರಿಸಿದರು.


ಈ ಭಾರಿ ಡಾ.ಬಿ.ಆರ್ ಅಂಬೇಡ್ಕರ್ , ಸಂವಿಧಾನ ಪ್ರತಿ,ವೆಂಕಟಸ್ವಾಮಿ ಭಾವಚಿತ್ರ ಇರುವ ವಿಶೇಷತೆಯುಳ್ಳ ಗೋಡೆ ಗಡಿಯಾರ, ಕೈ ಗಡಿಯಾರವನ್ನು ದಲಿತ ನಾಯಕರು, ಸಂಘಟನೆಯ ಪದಾಧಿಕಾರಿಗಳು ಮುಖಂಡರುಗಳಿಗೆ  ನೀಡಿದರು.


ಕಾರ್ಯಕ್ರಮದಲ್ಲಿ ದಲಿತ ನಾಯಕ ಮುತ್ತಪ್ಪ, ನಮ್ಮ ಕರ್ನಾಟಕ ಸೇನೆ ರಾಜ್ಯಾಧ್ಯಕ್ಷ  ಬಸವರಾಜ ಪಡುಕೋಟೆ, ಆರ್ ರಾಜೇಶ್ (ಮಾಸ್ಟರ್),ಡಾ.ವೈ ಮರಿಸ್ವಾಮಿ, ಸಾಹಿತಿ ಒಡ್ಡಗೆರೆ ನಾಗರಾಜು, ಶಿವಕುಮಾರ್, ಸಂಘಟನೆಯ ಜಿಲ್ಲಾ ಅಧ್ಯಕ್ಷರು ಪದಾಧಿಕಾರಿಗಳು , ನೂರಾರು ಜನ ದಲಿತ ಹೋರಾಟಗಾರರು, ಕಾರ್ಯಕರ್ತರು ಇದೇ ವೇಳೆ ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಚುನಾವಣಾನಿರತ ಸಿಬ್ಬಂದಿಗಳು, ರಾಜಕೀಯ ಪಕ್ಷಗಳ ಸಮರ್ಪಕ ಸಮನ್ವಯತೆಯಿಂದ ಪಾರದರ್ಶಕ ಚುನಾವಣೆ ಸಾಧ್ಯ: ಪೊಮ್ಮಲ ಸುನೀಲ್ ಕುಮಾರ್ಬಾಗಲೂರು ಹಾರ್ಡ್‌ವೇರ್ ಪಾರ್ಕ್‌ನಲ್ಲಿ ಜೆಟ್ವರ್ಕ್ ಉತ್ಪಾದನಾ ಸ್ಥಾವರಕ್ಕೆ ಚಾಲನೆ260 ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಸ್ವಚ್ಛತೆ ಕಾರ್ಯದಲ್ಲಿ ಭಾಗಿಆನ್ ಲೈನ್ ಮೂಲಕ ಎಂಎಸ್ಐಎಲ್ ಚಿಟ್ ವ್ಯವಹಾರಕ್ಕೆ ಸಿಎಂ ಚಾಲನೆಬೆಂಗಳೂರು-ಮುಂಬೈ ಹೈಸ್ಪೀಡ್ ರೈಲು, ಬೆಂಗಳೂರು- ವಿಜಯಪುರ ವಂದೇ ಭಾರತ್ ರೈಲು ಮತ್ತು ದಿನವಹಿ ವಿಶೇಷ ರೈಲಿಗೆ ಕೋರಿಕೆಉಡಾನ್' ಯೋಜನೆ ಮೂಲಕ ಭಾರತದ ಭವಿಷ್ಯದ ವೈದ್ಯಕೀಯ ಕಾರ್ಯಪಡೆಯನ್ನು ನಿರ್ಮಿಸುವ ಬದ್ಧತೆಯನ್ನು ಸಾರಿದ ನಾರಾಯಣ ಹೆಲ್ತ್ಮೆಟ್ರೋ ಟಿಕೆಟ್ ದರ: ಕೇಂದ್ರದತ್ತ ಬೊಟ್ಟು ಮಾಡಿದ ರಾಜ್ಯ ಸರ್ಕಾರಕ್ಕೆ ದಾಖಲೆ ಸಮೇತ ಟಾಂಗ್ ಕೊಟ್ಟ ನಿಖಿಲ್ಬಿಜೆಪಿ ಜಾಹೀರಾತಿನ ವಿರುದ್ಧ ಎಎಪಿ ದೂರುಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣ, 20 ವರ್ಷ ಕಳೆದರೂ ರೈತರಿಗೆ ಸಿಗತ ಪರಿಹಾರಕಾಂಗ್ರೆಸ್ ಪಕ್ಷ ಪಾರ್ಕಿಂಗ್ ವಿಚಾರದಲ್ಲಿ ಅಂದಾ ದರ್ಬಾರ್ ಮಾಡಲು ಹೊರಟಿದೆ