Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಅಂಚೆ ಗ್ರಾಹಕರ ಗಮನಕ್ಕೆ : ಇಂದಿನಿಂದ ಅ.25ರವರೆಗೂ ಅಂಚೆ ಕಚೇರಿಗಳಲ್ಲಿ ಸೇವೆ ಅಲಭ್ಯ!

ಬೆಂಗಳೂರು: ಅಂಚೆ ಜೀವ ವಿಮೆ (PLI) ಮತ್ತು ಗ್ರಾಮೀಣ ಅಂಚೆ ಜೀವ ವಿಮೆ (RPLI) ಪಾಲಿಸಿದಾರರಿಗೆ ಮತ್ತಷ್ಟು ಉತ್ತಮ ಹಾಗೂ ವೇಗದ ಸೇವೆ ಒದಗಿಸುವ ಉದ್ದೇಶದಿಂದ ಬೆಂಗಳೂರು ಅಂಚೆ ಮಹಾ ಕಾರ್ಯಾಲಯವು (GPO) ಹೊಸ ತಂತ್ರಾಂಶವನ್ನು ಅಳವಡಿಸಿಕೊಳ್ಳುತ್ತಿದೆ. ಪ್ರಸ್ತುತ ಚಾಲ್ತಿಯಲ್ಲಿರುವ 'ಮ್ಯಾಕ್‌ಕ್ಯಾಮಿಷ್' ತಂತ್ರಾಂಶದ ಬದಲಾಗಿ 'ಇನ್ಶೂರೆನ್ಸ್ ಮ್ಯಾನೇಜ್‌ಮೆಂಟ್ ಸೊಲ್ಯೂಷನ್' (Insurance Management Solution) ಎಂಬ ನೂತನ ತಂತ್ರಾಂಶವನ್ನು ಜಾರಿಗೆ ತರಲಾಗುತ್ತಿದೆ. ಈ ಹೊಸ ವ್ಯವಸ್ಥೆಯು ಅಕ್ಟೋಬರ್ 26ರಿಂದ ಅಧಿಕೃತವಾಗಿ ಕಾರ್ಯಾರಂಭ ಮಾಡಲಿದೆ.

ಈ ತಾಂತ್ರಿಕ ಬದಲಾವಣೆ ಮತ್ತು ನವೀಕರಣ ಕಾರ್ಯಗಳ ಹಿನ್ನೆಲೆಯಲ್ಲಿ ಅಕ್ಟೋಬರ್ 22ರಿಂದ 25ರವರೆಗೆ ಬೆಂಗಳೂರು ಜಿಪಿಒ ಸೇರಿದಂತೆ ನಗರದ ವಿವಿಧ ಪ್ರಮುಖ ಅಂಚೆ ಕಚೇರಿಗಳಲ್ಲಿ ಪಿಎಲ್‌ಐ ಹಾಗೂ ಆರ್‌ಪಿಎಲ್‌ಐಗೆ ಸಂಬಂಧಿಸಿದ ಪ್ರೀಮಿಯಂ ಸಂಗ್ರಹಣೆ, ಸಾಲ ಮರುಪಾವತಿ ಪ್ರಕ್ರಿಯೆ ಮತ್ತು ಗ್ರಾಹಕ ಸೇವೆಗಳು ಲಭ್ಯವಿರುವುದಿಲ್ಲ ಎಂದು ಜಿಪಿಒ ಮುಖ್ಯ ಅಂಚೆಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅರೇಬಿಕ್ ಕಾಲೇಜು, ಬಾಣಸವಾಡಿ, ಫ್ರೇಸರ್ ಟೌನ್, ಹೈಕೋರ್ಟ್, ಕಲ್ಯಾಣ ನಗರ, ವಿಧಾನಸೌಧ, ರಾಜಭವನ, ವಸಂತನಗರ ಸೇರಿದಂತೆ ಸುತ್ತಮುತ್ತಲಿನ ಹಲವು ಅಂಚೆ ಕಚೇರಿಗಳಲ್ಲಿ ಈ ಸೇವೆಗಳು ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿವೆ.

ಆದರೆ, ಬೆಂಗಳೂರು ಜಿಪಿಒ ಹೊರತುಪಡಿಸಿ ಇತರ ಅಂಚೆ ಕಚೇರಿಗಳಿಂದ ಪಾಲಿಸಿ ಪಡೆದಿರುವ ಗ್ರಾಹಕರಿಗೆ ಇದರಿಂದ ಯಾವುದೇ ತೊಂದರೆಯಾಗುವುದಿಲ್ಲ. ಅಂತಹ ಪಾಲಿಸಿದಾರರು ಈ ಅವಧಿಯಲ್ಲಿ ಆನ್‌ಲೈನ್ ಮೂಲಕ ಅಥವಾ ನಗರದ ಇತರ ಮುಖ್ಯ ಅಂಚೆ ಕಚೇರಿಗಳಿಗೆ ತೆರಳಿ ತಮ್ಮ ಪ್ರೀಮಿಯಂ ಅನ್ನು ಯಥಾರೀತಿ ಪಾವತಿಸಬಹುದು ಎಂದು ಅಂಚೆ ಇಲಾಖೆ ಸ್ಪಷ್ಟಪಡಿಸಿದೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಂಕಲಗಿ ಪಟ್ಟಣದಲ್ಲಿ ವಿಜಯ ದಶಮಿ ನಿಮಿsತ್ತ ಶ್ರೀ ಮಹಾಲಕ್ಷ್ಮೀ ದೇವಿ ಅಗ್ನಿ ಹಾಯುವ ಕಾರ್ಯಕ್ರಮ.BIG NEWS: ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳೋ ಭಕ್ತರಿಗೆ ಬಿಗ್ ಶಾಕ್: ಪ್ರಮುಖ ಸೇವಾ ದರ ಪರಿಷ್ಕರಣೆಪರಿಷತ್ ಚುನಾವಣೆ ಸಂಕನೂರು ಹೆಚ್ಚು ಲೀಡ್ ನಲ್ಲಿ ಗೆಲ್ಲುವ ವಿಶ್ವಾಸ: ಮಾಜಿ ಸಂಸದ ಬಸವರಾಜ ಬೊಮ್ಮಾಯಿಶಿವಮೊಗ್ಗ ದಸರಾ ಆನೆ ಘಟನೆ: ಸಿಸಿಎಫ್ ನೇತೃತ್ವದಲ್ಲಿ ತನಿಖೆಗೆ ಡಿಸಿ ಆದೇಶ!SCHOKING: ಬೆಂಗಳೂರಿನಲ್ಲಿ ಅಮಾನವೀಯ ಕೃತ್ಯ: ಮರಕ್ಕೆ ನೇತುಹಾಕಿ ನಾಯಿ ಕೊಂದ ದುರುಳರು, ಮೂವರು ಅರೆಸ್ಟ್!ರಾಜೀನಾಮೆ ಕೊಟ್ಟು ಹೊರಬನ್ನಿ; ಅಪಮಾನಿತ ಶಾಸಕರಿಗೆ ಜೆಡಿಎಸ್ ಕಿವಿಮಾತುಯಡಗಾದಲ್ಲಿ 13 ಎಕರೆ ಕಬ್ಬು ಭಸ್ಮ: ಜೆಸ್ಕಾಂ ವಿರುದ್ಧ ತೇಲ್ಕೂರ್ ಆಕ್ರೋಶಮಂಡ್ಯ ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪನೆಗೆ ಭೂಮಿ ಮಂಜೂರು ಮಾಡದ ರಾಜ್ಯ ಕಾಂಗ್ರೆಸ್ ಸರಕಾರ: ಸಿಎಂಗೆ HDK ಪತ್ರವಿದ್ಯಾರ್ಥಿವೇತನ, ಪ್ರೋತ್ಸಾಹಧನ ಮತ್ತು ವಿದ್ಯಾರ್ಥಿನಿಲಯ ಪ್ರವೇಶಾತಿಗೆ ಅರ್ಜಿ ಆಹ್ವಾನಖ್ಯಾತ ಕವಯತ್ರಿ ಗೊರೂರು ಪಂಕಜಗೆ ಪ್ರತಿಷ್ಠಿತ 'ಕೈಯ್ಯಾರ ಕಿಞ್ಞಣ್ಣ ರೈ ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿ' ಪ್ರದಾನ