LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸಿರಿಯಾದಲ್ಲೂ ಅಮೆರಿಕ - ರಷ್ಯಾ ಜಿದ್ದಾಜಿದ್ದಿ,ಯಾವ   ದೇಶ ಯಾರಪರ

ಯುದ್ದ ಹಾಗೂ ಮಾರಣಹೋಮದ ನಂತರ ಇದೀಗ ಸಿರಿಯಾ ದೇಶವು ಇದೀಗ ಶಾಂತಿಯನ್ನು ಎದುರು ನೋಡುತ್ತಿದೆ. ದೇಶವನ್ನು ತೊರೆದು ನೆರೆಯ ರಾಷ್ಟ್ರಗಳಿಗೆ ಓಡಿ ಹೋಗಿದ್ದ ಜನ ಇದೀಗ ಮತ್ತೆ ಅವರ ತವರು ಮನೆಗೆ ಬರುವುದಕ್ಕೆ ಎದುರು ನೋಡುತ್ತಿದ್ದಾರೆ. ಸಿರಿಯಾದ ಗಡಿಯಲ್ಲಿ ಸಾವಿರಾರು ಜನ ಜಮಾಯಿಸಿದ್ದಾರೆ ಎಂದು ವಿದೇಶಿ ಮಾಧ್ಯಮಗಳು ವರದಿ ಮಾಡುತ್ತಿವೆ.

ಸಿರಿಯಾದಲ್ಲಿ ಸಿರಿಯಾದ ಅಧ್ಯಕ್ಷ ಹಾಗೂ ಸರ್ವಾಧಿಕಾರಿ ಬಶರ್ ಅಸಾದ್ ಅವನ ಯುಗಾಂತ್ಯವಾಗಿದೆ. ಬಶರ್ ಇಲ್ಲಿ ಸುದೀರ್ಘ 24 ವರ್ಷಗಳ ಕಾಲ ಆಡಳಿತ ನಡೆಸಿದ್ದ ಆತನ ಆಡಳಿತ ಅವಧಿಯಲ್ಲಿ ಸಿರಿಯಾದಲ್ಲಿ ನಡೆದದ್ದೆಲ್ಲ ರಕ್ತಪಾತವೇ. ಬಂಡುಕೋರರು ಇಲ್ಲಿನ ರಾಜಧಾನಿಯನ್ನು ವಶಪಡಿಸಿಕೊಂಡ ಮೇಲೆ ಬಶರ್‌ ಪರಾರಿಯಾಗಿದ್ದಾನೆ. ಆದರೆ, ಈ ಯುದ್ಧದಲ್ಲಿ ಘಾಟನುಘಟಿ ದೇಶಗಳೇ ಭಾಗಿಯಾಗಿದ್ದವು.
ಸಿರಿಯಾ ಇದೀಗ ಸರ್ವಾಧಿಕಾರಿ ಆಡಳಿತದಿಂದ ಮುಕ್ತಿಯೊಂದಿದ್ದು, ಇಲ್ಲಿನ ಜನ ನೆಮ್ಮದಿಯ ದಿನಗಳನ್ನು ನೋಡಲು ಇಚ್ಛಿಸುತ್ತಿದ್ದಾರೆ. ಇದರ ನಡುವೆಯೇ ಇಸ್ರೇಲ್‌ ಈ ದೇಶದ ಕೆಲವು ಭಾಗಗಳಲ್ಲಿ ಬಾಂಬ್‌ಗಳ ಸುರಿಮಳೆಯನ್ನೇ ಸುರಿಸಿದೆ. ಈ ದೇಶದಲ್ಲಿ ಸುದೀರ್ಘ 13 ವರ್ಷಗಳ ಅಂತರ್ಯುದ್ಧ ನಡೆದಿತ್ತು. ದೇಶದಲ್ಲಿ ಪ್ರಜಾಪ್ರಭುತ್ವ ಪರವಾದ ಹೋರಾಟಗಳನ್ನು ಬಶರ್ ಅಸಾದ್ ತಡೆದಾಗ ಈ ಅಂತರ್ಯುದ್ಧ ಶುರುವಾಗಿತ್ತು. ಇದರಲ್ಲಿ ಸಾವಿರಾರು ಜನ ತಮ್ಮ ಜೀವವನ್ನೇ ಕಳೆದುಕೊಂಡಿದ್ದರೆ, ಲಕ್ಷಾಂತರ ಜನ ಸ್ಥಳಾಂತರಗೊಂಡಿದ್ದರು. ದೇಶಾಂತರಗೊಂಡವರು ಇದೀಗ ಸಿರಿಯಾಗೆ ಹಿಂದಿರುಗಲು ಎದುರು ನೋಡುತ್ತಿದ್ದಾರೆ.
ಇದೀಗ ಇಡೀ ವಿಶ್ವವೇ ಮುಂದಿನ ದಿನಗಳಲ್ಲಿ ಸಿರಿಯಾ ರಾಜಕೀಯ ಯಾವ ರೀತಿ ಬದಲಾಗಬಹುದು ಎಂದು ಎದುರು ನೋಡುತ್ತಿದೆ. ಇದೀಗ ಸಿರಿಯಾದಲ್ಲಿ ಬಂಡುಕೋರರಿಗೆ ಅಧಿಕಾರ ಹಸ್ತಾಂತರ ಮಾಡುವುದಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಗಳು ನಡೆದಿವೆ. ಪರ - ವಿರೋಧಗಳ ಬೆಂಬಲ ಇನ್ನು ಸಿರಿಯಾದ ಯುದ್ಧದಲ್ಲಿ ಪರ - ವಿರೋಧ ಹಿತಾಸಕ್ತಿಗಳು ಮೊದಲಿನಿಂದಲೂ ಇವೆ. ಇದೇ ಕಾರಣಕ್ಕೆ ಈ ದೇಶದಲ್ಲಿ ಸಾವಿರಾರು ಜನ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ರಷ್ಯಾ ಮತ್ತು ಇರಾನ್ ದೇಶಗಳು ಬಶರ್ ಅಸಾದ್ ಪರವಾಗಿವೆ.

ಇನ್ನು ವಿವಿಧ ಬಂಡಾಯ ಗುಂಪುಗಳು ಮತ್ತು ಸೇನಾಪಡೆಗಳನ್ನು ಅಮೆರಿಕ ಹಾಗೂ ಟರ್ಕಿ ದೇಶಗಳು ಬೆಂಬಲಿಸಿವೆ. ಸಿರಿಯಾದಲ್ಲಿನ ಬೆಳವಣಿಗೆಗಳಿಗೆ ಇಸ್ರೇನ್‌ ಹಾಗೂ ಅಮೆರಿಕ ದೇಶಗಳು ಕಾರಣ ಎನ್ನುವುದು ಈಗ ಗುಟ್ಟಾಗಿ ಉಳಿದಿಲ್ಲ ಎಂದು ಇರಾನ್‌ ದೂರಿದೆ. ಈ ಮೂಲಕ ಇದರಲ್ಲಿ ಇಸ್ರೇನ್‌ನ ಪಾತ್ರವೂ ಇರುವುದು ಚರ್ಚೆಗೆ ಕಾರಣವಾಗಿದೆ. ರಷ್ಯಾ ದೇಶವು ಸರ್ವಾಧಿಕಾರಿ ಅಸಾದ್ ಸರ್ಕಾರದೊಂದಿಗೆ ದಶಕಗಳ ಕಾಲ ಉತ್ತಮ ಸಂಬಂಧವನ್ನು ಹೊಂದಿದೆ. ಅಲ್ಲದೆ ಇಲ್ಲಿ ಅಂತರ್ಯುದ್ಧ ನಡೆಯುವುದಕ್ಕಿಂತ ಮುಂಚೆ ಇಲ್ಲಿ ಅಲ್ಲಿ ಮಿಲಿಟರಿ ನೆಲೆಗಳನ್ನು ಸಹ ಹೊಂದಿತ್ತು. ಇನ್ನು ಸಿರಿಯಾದ ಅಂತರ್ಯುದ್ಧದ ಸಮಯದಲ್ಲಿ ಟರ್ಕಿಯು ಬಂಡಾಯ ಬಣಗಳನ್ನು ಬೆಂಬಲಿಸಿತ್ತು. ಇನ್ನು ಈ ದೇಶದಲ್ಲಿ 2011ರಲ್ಲಿ ಪ್ರಜಾಪ್ರಭುತ್ವ ಪರವಾದ ಹೋರಾಟಗಳು ಪ್ರಾರಂಭವಾದ ಬೆನ್ನಲ್ಲೇ ಅಸಾದ್‌ ಸರ್ಕಾರ ವಿರುದ್ಧ ತನ್ನ ನಿಲುವನ್ನು ಪ್ರಕಟಿಸಿತ್ತು. ಇರಾನ್‌ ಹಾಗೂ ಸಿರಿಯಾ ಮೊದಲಿನಿಂದಲೂ ಉತ್ತಮ ಗೆಳೆಯರಂತೆ ಇದ್ದಾರೆ. ಇಸ್ರೇಲ್‌ ಸಹ ಈ ಬೆಳವಣಿಗೆಗಳಲ್ಲಿ ಪರೋಕ್ಷವಾಗಿ ಗುರುತಿಸಿಕೊಂಡಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪ್ರೀಪೇಡ್ ಮರಣಬಳ್ಳಾರಿ: ವಸತಿ ನಿಲಯಗಳ ನೋಂದಣಿಗೆ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಆದೇಶಕೈಮಗ್ಗ ನೇಕಾರರಿಗೆ ರಾಜ್ಯ ಮಟ್ಟದ ಪ್ರಶಸ್ತಿ: ಅರ್ಜಿ ಆಹ್ವಾನಕೈಮಗ್ಗ ತಂತ್ರಜ್ಞಾನದಲ್ಲಿ ಮೂರು ವರ್ಷಗಳ ಡಿಪ್ಲೋಮಾ ಕೋರ್ಸ್ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಬಳ್ಳಾರಿ: ಮೇ ಮತ್ತು ಜೂನ್ ತಿಂಗಳ ಪಡಿತರ ಹಂಚಿಕೆಬಳ್ಳಾರಿ: ಭೂ ರಹಿತ ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಜಮೀನು ಖರೀದಿ - ಸಾರ್ವಜನಿಕ ಆಕ್ಷೇಪಣೆಗೆ ಆಹ್ವಾನಕನಕಗಿರಿ ಉತ್ಸವದಲ್ಲಿ ಸಾರ್ವಜನಿಕರಿಗಾಗಿ ವೈವಿದ್ಯಮಯ ಕಾರ್ಯಕ್ರಮಗಳು: ಡಾ.ಸುರೇಶ ಬಿ ಇಟ್ನಾಳಅಂಜನಾದ್ರಿ ದೇವಸ್ಥಾನಕ್ಕೆ ಅರ್ಪಿಸಿದ ಚಿನ್ನದ ಆಭರಣದಲ್ಲಿ ತಾಮ್ರ ಪತ್ತೆ2.30 ಕೋಟಿ ಮೌಲ್ಯದ ಕಾಣಿಕೆಯಲ್ಲಿ ಅನುಮಾನ; ಮೌಲ್ಯಮಾಪನ ವೇಳೆ ಬಹಿರಂಗಸುಕ್ಷೇತ್ರ ಹುಲಿಗಿಯಲ್ಲಿ ಹಬ್ಬದ ಸಡಗರ * ಭಕ್ತಗಣದಿಂದ ಉದೋ ಉದೋ ಘೋಷ *ವಿಜ್ರಂಭಣೆಯಿಂದ ಜರುಗಿದ ಲೋಕಮಾತೆ ಕೊಪ್ಪಳ ಜಿಲ್ಲೆಯ ಐತಿಹಾಸಿಕ ಶ್ರೀ ಹುಲಿಗೆಮ್ಮ ದೇವಿ ರಥೋತ್ಸವ*ಅಂಜನಾದ್ರಿಗೆ ಹೈದ್ರಾಬಾದ್ ದಾನಿ ದೇಣಿಗೆ ನೀಡಿದ ಲೋಹಗಳ ಬಿಲ್, ದಾಖಲೆಗಳನ್ನು ಪುನಃ ಪರಿಶೀಲಿಸಲಾಗುವುದು: ಜಿಲ್ಲಾಧಿಕಾರಿಗಳು