LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಭಗವದ್ಗೀತೆ ಮೇಲೆ ಕೈಯಿಟ್ಟು ಪ್ರಮಾಣ ವಚನ ಸ್ವೀಕರಿಸಿದ ಅಮೆರಿಕ FBI ನಿರ್ದೇಶಕ ಕಾಶ್ ಪಟೇಲ್

ವಾಷಿಂಗ್ ಟನ್: ಭಾರತೀಯ ಮೂಲದ ಅಮೆರಿಕನ್ ಕಾಶ್ ಪಟೇಲ್ ಅವರು  ಶುಕ್ರವಾರ(ಫೆ.21) ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (FBI) ನ ನೂತನ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದರು. ಈ ಸಂದರ್ಭ ಅವರು ಭಗವದ್ಗೀತೆಯ ಮೇಲೆ ಪ್ರಮಾಣ ವಚನ ಸ್ವೀಕರಿಸಿದ್ದು ವಿಶೇಷವಾಗಿತ್ತು.

ಸಾಮಾನ್ಯವಾಗಿ ಬೈಬಲ್ ಮೇಲೆ ಪ್ರಮಾಣ ವಚನ ಸ್ವೀಕರಿಸುವ ಪದ್ಧತಿ ಇದ್ದರೂ, ಪಟೇಲ್ ಅವರು ಭಗವದ್ಗೀತೆಯ ಮೇಲೆ ಕೈಯಿರಿಸಿ ಪ್ರಮಾಣ ವಚನ ಸ್ವೀಕರಿಸಿದರು.

ಅಟಾರ್ನಿ ಜನರಲ್ ಪಾಮ್ ಬೋಂಡಿ ಅವರು ಪಟೇಲ್ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಗೀತೆಯ ಮೇಲೆ ನಿಮ್ಮ ಕೈಯನ್ನು ಇರಿಸಿ ಮತ್ತು ನಿಮ್ಮ ಬಲಗೈಯನ್ನು ಮೇಲಕ್ಕೆತ್ತಿ ಎಂದು ಬೋಂಡಿ ಹೇಳಿದರು.
ಪ್ರಮಾಣ ವಚನ ಸ್ವೀಕರಿಸುವ ವೇಳೆ ಕಾಶ್ ಪಟೇಲ್ ಪಕ್ಕದಲ್ಲಿ ಅವರ ಗೆಳತಿ ಮತ್ತು ಕುಟುಂಬ ಸದಸ್ಯರು ನಿಂತಿದ್ದರು. ಇತರೆ ಕುಟುಂಬ ಸದಸ್ಯರು ಮುಂದಿನ ಸಾಲಿನಲ್ಲಿ ಕುಳಿತಿದ್ದರು. ಎಫ್‌ಬಿಐನ 9ನೇ ನಿರ್ದೇಶಕರಾಗಿ ಕಾಶ್ ಪಟೇಲ್ ನೇಮಕಗೊಂಡಿದ್ದು, ಎಫ್‌ಬಿಐ ಮುಖ್ಯಸ್ಥರಾಗಿದ್ದ ಕ್ರಿಸ್ಟೋಫರ್ ವ್ರೇ ಅವರ ಜಾಗಕ್ಕೆ ಪಟೇಲ್ ನೇಮಕವಾಗಿದ್ದಾರೆ. ಅಂದ್ಹಾಗೆ ಅಮೆರಿಕಾದ ಎಫ್‌ಬಿಐನ ಮೊದಲ ಭಾರತೀಯ ಮೂಲದ ನಿರ್ದೇಶಕ ಎಂಬ ಹಿರಿಮೆ ಕಾಶ್ ಪಟೇಲ್‌ರದ್ದು. ಅಲ್ಲದೇ ಮೊದಲ ಏಷ್ಯನ್ ಎಂಬ ಹೆಗ್ಗಳಿಕೆ ಇದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದಿನ ವಚನ: -ನೀಲಮ್ಮ ಅವರ ವಚನ..!ಸಾಮರಸ್ಯ ಸಾರುವ- ಸಂಕ್ರಾಂತಿ ಹಬ್ಬ: ಬೇರೆ ರಾಜ್ಯಗಳಲ್ಲಿನ ವಿಶೇಷತೆ ಏನು.?ಮೆಕ್ಕೆಜೋಳ ಪ್ರತಿ ಕ್ವಿಂಟಾಲ್‍ಗೆ ರೂ.2,150 ನಿಗದಿ  -ಜಿಲ್ಲಾಧಿಕಾರಿ ಟಿ.ವೆಂಕಟೇಶ್..!ಪ್ರೋತ್ಸಾಹಧನಕ್ಕಾಗಿ ಕ್ರೀಡಾಪಟುಗಳಿಂದ ಅರ್ಜಿ ಆಹ್ವಾನವಿದ್ಯಾರ್ಥಿನಿಯರಿಗಾಗಿ ದೀಪಿಕಾ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನನಗರದೇವತೆ ಶ್ರೀ ದುರ್ಗಾಂಭಿಕ ದೇವಿ ಜಾತ್ರೆ - ಪ್ರಾಣಿಬಲಿ ನಿಷೇಧ: ಜಿಲ್ಲಾಧಿಕಾರಿ ಗಂಗಾಧರಸ್ವಾಮಿಮದುವೆಯಾಗಿ ವರ್ಷ ಗಟ್ಟಲೆ ಸಂತಾನವಿಲ್ಲದೆ ನರಳುತ್ತಿದ್ದರೆ ಈ ರೀತಿಯಾದ ಶ್ರೀಕೃಷ್ಣನ ಮೂರ್ತಿ ಇಟ್ಟು ಪೂಜಿಸಿ ನೋಡಿ ಸಂತಾನ ಪ್ರಾಪ್ತಿ ಗ್ಯಾರಂಟಿ?ಇಂದಿನ ವಚನ: - --ಸಿದ್ಧರಾಮೇಶ್ವರ   ಅವರ ವಚನ..!ಟಾಕ್ಸಿಕ್ ಸಿನಿಮಾದ ಫ್ಲೆಕ್ಸ್ ಅಳವಡಿಕೆ ನಟ ಯಶ್ ವಿರುದ್ಧ FIR.!ಶ್ರೀ ಅಯ್ಯಪ್ಪಸ್ವಾಮಿ ಸೇವಾ ಟ್ರಸ್ಟ್ ವತಿಯಿಂದ 26ನೇ ವರ್ಷದ ದೀಪೋತ್ಸವ