LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಅಮಿತ್ ಶಾ ದತ್ತು ಪುತ್ರ ಎಂದು ಬಿಂಬಿಸಿ ವೈದ್ಯರಿಗೆ ಕೋಟಿ ವಂಚನೆ!

ಬೆಂಗಳೂರು : ತಾನು ಪ್ರಧಾನಮಂತ್ರಿ ಕಚೇರಿಯಲ್ಲಿ ಕೆಲಸ ಮಾಡುವ ಉನ್ನತ ಅಧಿಕಾರಿಯಂತೆ ಹೇಳಿಕೊಂಡು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ದತ್ತು ಪುತ್ರ ಎಂದು ಬಿಂಬಿಸಿ, ವೈದ್ಯರೊಬ್ಬರಿಗೆ 2.7 ಕೋಟಿ ರೂಪಾಯಿಗಳಷ್ಟು ವಂಚಿಸಿದ ಆರೋಪಿಯನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಯನ್ನು ವಿಜಯನಗರದ ನಿವಾಸಿ ಸುಜಯ್ ಅಲಿಯಾಸ್ ಸುಜಯೇಂದ್ರ ಎಂದು ಗುರುತಿಸಲಾಗಿದೆ.

ಸುಜಯೇಂದ್ರ, ಜಮ್ಮು ಕಾಶ್ಮೀರ ಮೂಲದ ವೈದ್ಯರನ್ನು ಸಂಪರ್ಕಿಸಿ, ತಾನು PMO ಅಧಿಕಾರಿ ಎಂದು ಹೇಳಿಕೊಂಡು ನಂಬಿಕೆ ಗಳಿಸಿಕೊಂಡಿದ್ದಾನೆ. ಜೊತೆಗೆ,ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಜೊತೆ ಸ್ಟೇಜ್ ಹಂಚಿಕೊಂಡಿದ್ದಂತೆ ಫೋಟೋಗಳನ್ನು ತೋರಿಸಿ ವೈದ್ಯರನ್ನು ಪ್ರಭಾವಿತಗೊಳಿಸಿ ವಂಚನೆ ನಡೆಸಿದ್ದಾನೆ.

ದೇವನಹಳ್ಳಿಯ ಬಳಿ ಅತಿ ಆಧುನಿಕ ವಿಲ್ಲಾ ಮಾದರಿಯಲ್ಲಿ ಆಯುರ್ವೇದ ಆಸ್ಪತ್ರೆ ತೆರೆಯಲು ಸರ್ಕಾರದಿಂದ ಅವಕಾಶ ನೀಡಲಾಗುತ್ತದೆ ಎಂದು ವೈದ್ಯರಿಗೆ ಭರವಸೆ ನೀಡುತ್ತಾ, ಹಂತ ಹಂತವಾಗಿ 2.7 ಕೋಟಿ ರೂಪಾಯಿ ವಸೂಲಿ ಮಾಡಿದ್ದ ಮಾಹಿತಿ ತಿಳಿದು ಬಂದಿದೆ.

ವಂಚನೆಗೆ ಒಳಗಾದ ವೈದ್ಯರು ದೂರು ನೀಡಿದ ಬಳಿಕ, ವಿಜಯನಗರ ಪೊಲೀಸರು ತನಿಖೆ ನಡೆಸಿ ಸುಜಯೇಂದ್ರನ ಕಳ್ಳಾಟವನ್ನು ಬಹಿರಂಗಪಡಿಸಿದ್ದಾರೆ. ವಿಚಾರಣೆಯಲ್ಲಿ, ಸುಜಯೇಂದ್ರನ ವಂಚನೆಯ ನಿಜವಾದ ವಿವರಗಳು ಬೆಳಕಿಗೆ ಬಂದಿವೆ.

ಆರೋಪಿಯ ಬಗ್ಗೆ ವಿಶೇಷ ವಿಷಯವೆಂದರೆ, ಸುಜಯೇಂದ್ರ ಎರಡು ಬಾರಿ ಜೈಲು ಪಾಳಾಗಿರುವ ಹಳೇ ಅಪರಾಧಿ ಮತ್ತುಈಗಾಗಲೇ ನಾಲ್ಕು ಚೆಕ್ ಬೌನ್ಸ್ ಪ್ರಕರಣಗಳು ದಾಖಲಾಗಿವೆ. ಇಷ್ಟಾದರೂ, ಉಪಮುಖ್ಯಮಂತ್ರಿ ಜೊತೆ ಸ್ಟೇಜ್ ಹಂಚಿಕೊಂಡಂತೆ ಫೋಟೋಗಳನ್ನು ತೋರಿಸಿ ವಂಚನೆ ನಡೆಸಿದುದೇ ಸ್ಫೋಟಕಾರಿ ಸಂಗತಿ. ಈ ಪ್ರಕರಣ ಸಂಬಂಧ ವಿಜಯನಗರ ಪೊಲೀಸರು ಹೆಚ್ಚಿನ ತನಿಖೆಯನ್ನು ಮುಂದುವರೆಸಿದ್ದಾರೆ.

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭದ್ರಾ ಜಲಾಶಯ ರೈತರಿಗೆ ಮುಖ್ಯ ಮಾಹಿತಿ ಬೇಸಿಗೆ ಹಂಗಾಮಿನ ಬೆಳೆಗಳಿಗೆ ನೀರು.!ನಾಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಜಾಮೀನು ಅರ್ಜಿ ವಿಚಾರಣೆ.!ಕನ್ನಡದ ಖ್ಯಾತ ಹಿರಿಯ ಕಲಾವಿದ ಇನ್ನಿಲ್ಲ.!ಕಗಂಟಾಗಿದ್ದ ಕೇರಳ ಮುಖ್ಯಂತ್ರಿ ಸ್ಥಾನ ಕುತೂಹಲಕ್ಕೆ ತೆರೆ.!ಕೈ ಮುಷ್ಟಿಯಷ್ಟು ಕಲ್ಲುಪ್ಪನ್ನು ತೆಗೆದುಕೊಂಡು ವಾರಕ್ಕೆ ಒಂದು ಬಾರಿಯಾದರೂ ಮನೆಯಲ್ಲಿ ಹೀಗೆ ಮಾಡಿದರೆ ಧನ ಪ್ರವಾಹ ಖಚಿತ.!ಪ್ರಥಮ ದರ್ಜೆ ಕಾಲೇಜುಗಳ ಬೋಧಕರ ವರ್ಗಾವಣೆ ಕೌನ್ಸೆಲಿಂಗ್ ತಾತ್ಕಾಲಿಕ ವೇಳಾಪಟ್ಟಿ.!ಎಲ್ಲಾ ಶಾಲಾ-ಕಾಲೇಜುಗಳಲ್ಲಿ ‘ಹಿಜಾಬ್’ ನಿಷೇಧ ರದ್ದು.!ಪ್ರಥಮ ವರ್ಷದ ಡಿಪಿಎಸ್‍ಇ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಗಂಜಿಗಟ್ಟೆ ಲಂಬಾಣಿಹಟ್ಟಿಯಲ್ಲಿ ಪ್ರತ್ಯೇಕ ಚುನಾವಣಾ ಬೂತ್ಗೆ ಆಗ್ರಹದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 14-05-2026