E-PAPER
16 Nov 2026, 02:20:20 AM|
Gold₹13605/gGold24K ₹13,605/g - 22K ₹12,460/gTap for full details
Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEditorialEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಸ್ಪೂರ್ತಿದಾಯಕ ಮತ್ತು ಮಾದರಿ ಬದುಕು ನಮ್ಮದಾಗಬೇಕು; ಡಾ. ತೋಂಟದ ಸಿದ್ದರಾಮ ಶ್ರೀಗಳು

 

ಬೆಳಗಾವಿ; ನಮ್ಮ ಬದುಕು ಇತರರಿಗೆ ಪೂರ್ತಿದಾಯಕವಾಗುವಂತಿರಬೇಕು ಸಮಾಜಕ್ಕೆ ಮಾದರಿಯಾಗುವಂತಿರಬೇಕು ಎಂದು ಗದುಗಿನ ತೋಂಟದಾರ್ಯ ಮಠದ ಜಗದ್ಗುರು ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು ನುಡಿದರು.
ಅವರು ಬೆಳಗಾವಿಯಲ್ಲಿ ಲಿಂಗೈಕ್ಯ.ಪದ್ಮಾವತಿ ಷಣ್ಮುಖಪ್ಪ ಅಂಗಡಿ ಅವರ ಸ್ಮರಣಾರ್ಥ ಜಿಲ್ಲಾ ಪಂಚಾಯತ ಮಾಜಿ ಸದಸ್ಯೆ ನೇಗಿನಹಾಳದ ಶ್ರೀಮತಿ. ರೋಹಿಣಿ ಬಾಬಾ ಸಾಹೇಬ್ ಪಾಟೀಲ್ ಅವರಿಗೆ "ಮಹಿಳಾ ರತ್ನ " ಮತ್ತು ಬೆಳಗಾವಿ ಮಹಿಳಾ ಕಲ್ಯಾಣ ಸಂಸ್ಥೆಯ ಶ್ರೀ. ಎಂ.ಎಸ್. ಚೌಗುಲಾ ಮತ್ತು ಶ್ರೀಮತಿ. ವೈಜಯಂತಿ ಚೌಗುಲಾ ಅವರುಗಳಿಗೆ "ಆದರ್ಶ ದಂಪತಿ" ಪ್ರಶಸ್ತಿಗಳನ್ನು ಪ್ರದಾನ ಮಾಡಿ ಆಶೀರ್ವಚನ ನೀಡುತ್ತಿದ್ದರು.
65 ವರ್ಷಗಳ ಹಿಂದೆ ಲಿಂಗೈಕ್ಯರಾದ ಪದ್ಮಾವತಿ ಷಣ್ಮುಖಪ್ಪ ಅಂಗಡಿಯವರು ಅಭಿಜಾತ ಪ್ರತಿಭೆಯುಳ್ಳವರು ಅಂದಿನ ಕಾಲದಲ್ಲಿ ಕೇವಲ 6ನೇ ತರಗತಿವರೆಗೆ ಓದಿದ್ದ ಅವರು ಸಾಮಾಜಿಕ ಕಳಕಳಿ ಉಳ್ಳವರಾಗಿದ್ದರು ಬಡವರಿಗೆ ಸಹಾಯ ಮಾಡುವುದು ಸಮಾಜ ಸೇವೆ ಸಾಹಿತ್ಯ ಸೇವೆ ತಮ್ಮ ಜೀವನದ ಗುರಿಯಾಗಿಸಿಕೊಂಡಿದ್ದರು. ಕರ್ನಾಟಕ ವಿಶ್ವವಿದ್ಯಾಲಯದ ಸ್ಥಾಪನೆಯಲ್ಲಿ ವಿಶೇಷ ಪಾತ್ರವಹಿಸಿ ಸೀನೇಟ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರೌಢ ಶಿಕ್ಷಣ ಮಂಡಳಿಯ ಸದಸ್ಯರಾಗಿ ಬೆಳಗಾವಿ ಪರಿಸರದಲ್ಲಿ ಕನ್ನಡ ಶಾಲೆಗಳ ಸ್ಥಾಪನೆಗೆ ವಿಶೇಷ ಶ್ರಮ ವಹಿಸಿದವರು. ಮುಂಬೈ ಸರ್ಕಾರದಿಂದ ಗೌರವ ನ್ಯಾಯಾಧೀಶರಾಗಿ ನೇಮಕಗೊಂಡು ಕಾರ್ಯ ನಿರ್ವಹಿಸಿದ್ದು ಚಿರಸ್ಮರಣೀಯ ಎಂದರು.
ಮಹಿಳಾ ಕಲ್ಯಾಣ ಸಂಸ್ಥೆ ಸ್ಥಾಪಿಸಿದ ಎಂ.ಎಸ್. ಚೌಗುಲಾ ಮತ್ತು ಅವರ ಪತ್ನಿ ಶ್ರೀಮತಿ. ವೈಜಯಂತಿ ಚೌಗುಲಾ ಅಲ್ಲದೆ ಅವರ ಸಂಪೂರ್ಣ ಕುಟುಂಬ ಮಹಿಳಾ ಕಲ್ಯಾಣಕ್ಕಾಗಿ ಸಲ್ಲಿಸಿದ ಸೇವೆ ಅಪಾರವಾಗಿದೆ. ಇದಲ್ಲದೆ ನಾಗನೂರು ಶ್ರೀಮಠದಿಂದ ನಡೆಸಲ್ಪಡುವ ವೃದ್ಧಾಶ್ರಮದ ಸಂಪೂರ್ಣ ಜವಾಬ್ದಾರಿ ಹೊಂದಿರುವ ಇವರಿಗೆ ರಾಜ್ಯ ಪ್ರಶಸ್ತಿ, ರಾಷ್ಟ್ರೀಯ ಪ್ರಶಸ್ತಿ, ಸಂಘ ಸಂಸ್ಥೆಗಳ 10 ಹಲವು ಪ್ರಶಸ್ತಿಗಳನ್ನು ಪಡೆದ ಇವರು ಸಂಗಾತಿ ಮತ್ತು ಸಾಂತ್ವನ ಕೇಂದ್ರಗಳ ಮೂಲಕ ಮಾಡಿದ ಸಮಾಜ ಸೇವೆ ವರ್ಣನೆಗೆ ಮೀರಿದ್ದು ಎಂದು ಅಭಿಪ್ರಾಯ ಪಟ್ಟರು.
ಮಹಿಳಾ ರತ್ನ ಪ್ರಶಸ್ತಿ ಪಡೆದ ಜಿಲ್ಲಾ ಪಂಚಾಯತ್ ಸದಸ್ಯರಾಗಿ ಕಿತ್ತೂರು ಭಾಗದಲ್ಲಿ ಅಪಾರ ಸೇವೆ ಸಲ್ಲಿಸಿದ ಶ್ರೀಮತಿ. ರೋಹಿಣಿ ಬಾಬಾ ಸಾಹೇಬ್ ಪಾಟೀಲ್ ಅವರ ಸಾಮಾಜಿಕ ಸೇವೆಯ ಫಲವೇ ಮುಂದೆ ಅವರ ಪತಿ ಬಾಬಾಸಾಹೇಬ್ ಪಾಟೀಲರು ಶಾಸಕರಾಗಿ ಆಯ್ಕೆಯಾಗಲು ಸಹಾಯವಾಯಿತು ಎಂದರೆ ತಪ್ಪಾಗಲಾರದು ಎಂದರು.
ಶ್ರೀಮತಿ .ಪ್ರೇಮಕ್ಕಾ ಅಂಗಡಿ ಮಾತನಾಡಿ 15ನೇ ವಯಸ್ಸಿಗೆ ಮದುವೆಯಾಗಿ 37ನೇ ವಯಸ್ಸಿಗೆ 11 ಮಕ್ಕಳ ತಾಯಿಯಾಗಿ 54ನೇ ವಯಸ್ಸಿಗೆ ಜೀವನ ಯಾತ್ರೆ ಮುಗಿಸಿ ಪದ್ಮಾವತಿ ಅಂಗಡಿಯವರ ಸಾಧನೆ ಅಪಾರ ಎಂದು ಬಣ್ಣಿಸಿದರು.
ನಾಗನೂರು ರುದ್ರಾಕ್ಷಿ ಮಠದ ಪೀಠಾಧಿಕಾರಿ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ಕಾರ್ಯಕ್ರಮದ ನೇತೃತ್ವದಲ್ಲಿ ಉಪಸ್ಥಿತರಿದ್ದರು.
ಸನ್ಮಾನಕ್ಕೆ ಉತ್ತರಿಸಿದ ಶ್ರೀ.ಎಮ್.ಎಸ್. ಚೌಗುಲಾ ಜೀವನದುದ್ದಕ್ಕೂ ತಮ್ಮ ಬೆಂಗಾವಲಾಗಿ ನಿಂತ ಶ್ರೀಮಠದ ಎಲ್ಲಾ ಶ್ರೀಗಳಿಗೆ ಕೃತಜ್ಞತೆಗಳನ್ನು ತಿಳಿಸಿದರಲ್ಲದೆ ತಾವು ನಡೆದು ಬಂದ ದಾರಿಯನ್ನು ನೆನಪಿಸಿಕೊಂಡರು.
ಶ್ರೀಮತಿ.ರೋಹಿಣಿ ಪಾಟೀಲ್ ಮಾತನಾಡಿ ತಮ್ಮೆಲ್ಲ ಸಾಧನೆಗೆ ಪತಿ ಶ್ರೀ.ಬಾಬಾಸಾಹೇಬ್ ಪಾಟೀಲರ ಸಂಪೂರ್ಣ ಬೆಂಬಲ ಮತ್ತು ಸಹಕಾರ ಅಲ್ಲದೆ ಕ್ಷೇತ್ರದ ಜನರ ಪ್ರೀತಿ, ಬೆಂಬಲ ಮತ್ತು ವಿಶ್ವಾಸವೇ ಕಾರಣ ಎಂದರು.
ಪದ್ಮಾವತಿ ಅಂಗಡಿಯವರ ಪುತ್ರಿ ಶ್ರೀಮತಿ.ಉಜ್ವಲಾ ಹಿರೇಮಠ ಪ್ರಸ್ತಾವಿಕವಾಗಿ ಮಾತನಾಡಿದರು, ಮಹಾಪೌರ ಶ್ರೀಮತಿ. ಪ್ರೀತಿ ಕಾಮಕರ, ಉಪಮಹಪೌರ ಶ್ರೀ.ಹಣಮಂತ ಕೊಂಗಾಲಿ, ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಸಿದ್ದರಾಮೇಶ್ವರ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಎಸ್.ಪಿ.ಹಿರೇಮಠ, ಜಾಗತಿಕ ಲಿಂಗಾಯಿತ ಮಹಾಸಭೆಯ ಬಸವರಾಜ ರೊಟ್ಟಿ, ಅಶೋಕ್ ಮಳಗಲಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸಿದ್ರಾಮೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಹೆಚ್ಚು ಅಂಕಗಳಿಸಿ ವಿಶೇಷ ಸಾಧನೆ ಮಾಡಿದ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಿದ್ಯಾರ್ಥಿನಿಯರಾದ ಸಂಜನಾ ನಡುವಿನಮನಿ, ನಿಹಾರಿಕಾ ಈಟಿ, ಪ್ರತಿಕ್ಷ ಪುಜಾರಿ, ಚೈತನ್ಯಾ ಕೇದಾರ, ಶ್ರೇಯಾ ಅಮಾತೆ, ಅಂಜನಾ ಜಾಯಿ ಮತ್ತು ರಾಧಿಕಾ ಲಮಾಣಿ ಇವರುಗಳಿಗೆ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಡಾ. ಅನಿತಾ ಪಾಟೀಲ್ ಸ್ವಾಗತಿಸಿದರು, ಶ್ರೀ. ರಾಜಶೇಖರ ಪಾಟೀಲ್ ಕಾರ್ಯಕ್ರಮ ನಿರ್ವಹಿಸಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಡಾ ಜಿನದತ್ತ ದೇಸಾಯಿಯವರ ಬದುಕು ಬರಹ ನಮಗೆಲ್ಲ ಮಾದರಿ- ಪ್ರಾ ಬಿ ಎಸ್ ಗವಿಮಠ CCEA ಮತ್ತು ಜೈನ್ ಕಾಲೇಜ್ ಆಫ್ ಎಂಜಿನಿಯರಿಂಗ್ ನಡುವೆ ಮಹತ್ವದ ಒಪ್ಪಂದಕ್ಕೆ ಸಹಿಅಂಜುಮನ್ ಪದವಿ ಕಾಲೇಜಿಗೆ ಚಾಂಪಿಯನಶಿಪ್‌ ಪ್ರಶಸ್ತಿಉತ್ತರ ಕರ್ನಾಟಕದ ಹಿರಿಯ ರಾಜಕೀಯ ಮುತ್ಸದ್ದಿ , ಮಾಜಿ ಸಚಿವ, ಶಿವಾನಂದ ಕೌಜಲಗಿ ಲಿಂಗೈಕ್ಯರಾಗಾಆವಿವಿ, ವಿಧಾನಸೌಧ ಸೇರಿದಂತೆ ಪ್ರಮುಖ ಸರ್ಕಾರಿ ಹಾಗೂ ಐತಿಹಾಸಿಕ ಕಟ್ಟಡಗಳಿಗೆ ಪಿಂಕ್ ಲೈಟಿಂಗ್ : ಕುಲಪತಿ ಡಾ.ಭಗವಾನ್ ಬಿ.ಸಿಬೆಳಗಾವಿಯಲ್ಲಿ ಹೊಸ ಶೋರೂಮ್ ಮೂಲಕ ಕರ್ನಾಟಕದಲ್ಲಿ ತನ್ನ ಅಸ್ತಿತ್ವ ವಿಸ್ತರಿಸಿದ PuREPowerರಾಜಾ ಲಖಮಗೌಡರು, ಶಿರಸಂಗಿ ಲಿಂಗರಾಜರು ಮತ್ತು  ಪಾಟೀಲ ಪುಟ್ಟಪ್ಪ ಭಾವ ಚಿತ್ರಗಳನ್ನು ಆಹ್ವಾನ ಪತ್ರಿಕೆಗಳಲ್ಲಿ ಮುದ್ರಿಸಬೇಕು ; ಡಾ.ಸರಜೂ ಕಾಟ್ಕರಭ್ರಷ್ಟಾಚಾರ ರಹಿತ ಸಮ ಸಮಾಜ ನಿರ್ಮಾಣ ಶರಣರ ತತ್ವಗಳಿಂದ ಮಾತ್ರ ಸಾಧ್ಯ ; ಡಾ.ಬಸವರಾಜ ಹುಲಮನಿನಿಯಮ ಉಲ್ಲಂಘಿಸುವ ಹೋಟೆಲ್, ಪಬ್, ಡಾಬಾಗಳ ವಿರುದ್ಧ ಕಠಿಣ ಕ್ರಮ: ಪೊಲೀಸ್ ಕಮಿಷನರ್ ನಿಕ್ಕಂ ಎಚ್ಚರಿಕೆಜೆಎಲ್ಎಂ ಕಚೇರಿಯಲ್ಲಿ ಗಾಂಧಿ ಹಾಗೂ ಶಾಸ್ತ್ರಿ ಜಯಂತಿ ಆಚರಣೆ