LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಇಂದಿನಿಂದ ವಾಡಿಯಾ ಗ್ಯಾಲರಿಯಲ್ಲಿ ವಾರ್ಷಿಕ ವ್ಯಂಗ್ಯಚಿತ್ರ ಪ್ರದರ್ಶನ.!

 

ಬೆಂಗಳೂರು: ಕರ್ನಾಟಕ ವ್ಯಂಗ್ಯಚಿತ್ರಕಾರರ ಸಂಘದವರು ಇದೇ ಫೆಬ್ರವರಿ 7 8 ಹಾಗೂ 9 ರಂದು ಮೂರು ದಿನಗಳ ಕಾಲ ವಾರ್ಷಿಕ ವ್ಯಂಗ್ಯಚಿತ್ರ ಪ್ರದರ್ಶನ-೨೦೨೬ ಅನ್ನು ಏರ್ಪಡಿಸಿದ್ದೇವೆ. ಇದು ಫೆಬ್ರವರಿ ೭ನೇ ತಾರೀಕು ಶನಿವಾರ, ಬೆಳಿಗ್ಗೆ 11 ಗಂಟೆಗೆ ಉದ್ಘಾಟನೆಯಾಗಲಿದೆ.

ಈ ವ್ಯಂಗ್ಯಚಿತ್ರ ಪ್ರದರ್ಶನವನ್ನು ರಾಜ್ಯದ ಹಿರಿಯ ವ್ಯಂಗ್ಯಚಿತ್ರಕಾರರಾದ ಬಿ ವಿ ಪಾಂಡುರಂಗರಾವ್ ಅವರು ಉದ್ಘಾಟಿಸಲಿದ್ದು, ಹಿರಿಯ ಪತ್ರಕರ್ತರಾದ ಜಿ ಎನ್ ಮೋಹನ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಮ್ಮ ಕರ್ನಾಟಕ ವ್ಯಂಗ್ಯಚಿತ್ರಕಾರರ ಸಂಘ ಅಧ್ಯಕ್ಷರಾದ ವೈ ಎಸ್ ನಂಜುಂಡಸ್ವಾಮಿ ವಹಿಸಲಿದ್ದಾರೆ.

ಇದೇ ಸಂದರ್ಭದಲ್ಲಿ ಕರ್ನಾಟಕ ವ್ಯಂಗ್ಯಚಿತ್ರಕಾರರ ಸಂಘದ ನಿಕಟ ಪೂರ್ವ ಅಧ್ಯಕ್ಷರಾದ ವಿ ಆರ್ ಸಿ ಶೇಖರ್ ಮತ್ತು ಹಾಲಭಾವಿ ರಾಷ್ಟ್ರೀಯ ಕಲಾ ಪ್ರಶಸ್ತಿ ಪುರಸ್ಕೃತರು ಹಾಗೂ ಪ್ರಸಿದ್ಧ ವ್ಯಂಗ್ಯಚಿತ್ರಕಾರರೂ ಆದ ಬಿ. ಜಿ. ಗುಜ್ಜಾರಪ್ಪ ಅವರಿಗೆ ಗೌರವ ಸಮರ್ಪಣೆ ಮಾಡಲಾಗುತ್ತದೆ.

ವಿಶೇಷ ಆಹ್ವಾನಿತ ವ್ಯಂಗ್ಯಚಿತ್ರಕಾರರಾಗಿ ದಾವಣಗೆರೆಯ ಡಾ. ಎಚ್ ಬಿ ಮಂಜುನಾಥ, ಧಾರವಾಡದ ಅಶೋಕ ಜೋಶಿ, ಮಣಿಪಾಲದ ಜೇಮ್ಸ್ ವಾಜ್ ಹಾಗೂ ಶಿವಮೊಗ್ಗದ ರಾಮಧ್ಯಾನಿ ಅವರು ತಮ್ಮ ವ್ಯಂಗ್ಯಚಿತ್ರ ರಚನೆಯ ವೈವಿಧ್ಯಮಯ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ.

ಈ ಪ್ರದರ್ಶನದಲ್ಲಿ ಕರ್ನಾಟಕ ರಾಜ್ಯದ ವ್ಯಂಗ್ಯಚಿತ್ರಕಾರರ ಸಂಘದ ಸದಸ್ಯರ ವ್ಯಂಗ್ಯಚಿತ್ರಗಳು ಪ್ರದರ್ಶನಗೊಳ್ಳಲಿದ್ದು ಸುಮಾರು 88 ವ್ಯಂಗ್ಯಚಿತ್ರಗಳಿವೆ.

ಇದರೊಂದಿಗೆ ನಾಡಿನ ಖ್ಯಾತ ವ್ಯಂಗ್ಯಚಿತ್ರಕಾರರಾಗಿ ರಂಜಿಸಿ ಹೋಗಿರುವ `ಹತ್ತು ಪಂಚ್ ಪ್ರವೀಣ'ರ ವೈವಿಧ್ಯಮಯ ಕಾರ್ಟೂನ್‌ಗಳೂ ಮತ್ತೊಮ್ಮೆ ಇಲ್ಲಿ ರಂಜಿಸಲಿವೆ. ನೂರಕ್ಕೂ ಹೆಚ್ಚು ವ್ಯಂಗ್ಯಚಿತ್ರಕಾರರ ನೂರಾರು ಕಾರ್ಟೂನ್‌ಗಳನ್ನು ಒಂದೇ ಸೂರಿನಡಿಯಲ್ಲಿ ನೋಡಿ ನಕ್ಕು ನಲಿಯಬಹುದಾಗಿದೆ.

ಈ ಪ್ರದರ್ಶನವು ಬೆಂಗಳೂರಿನ ಬಸವನಗುಡಿಯಲ್ಲಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಆವರಣದ ಗ್ಯಾಲರಿಯಲ್ಲಿ ಫೆಬ್ರವರಿ ೦೭, ೦೮ ಮತ್ತು ೦೯ ರಂದು ಬೆಳಿಗ್ಗೆ ೧೦ ಗಂಟೆಯಿAದ ಸಂಜೆ ೦೬ ಗಂಟೆಯವರೆಗೆ ನಡೆಯಲಿದೆ. ನಕ್ಕು-ಹಗುರಾಗಲು ನೀವು ಬನ್ನಿ, ಹಾಗೇ ನಗಲು ಬಯಸುವವರನ್ನೂ ಜೊತೆಗೆ ಕರೆದು ತನ್ನಿ!!!

(ಸಾಂದರ್ಭಿಕ ಚಿತ್ರ)
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭದ್ರಾ ಜಲಾಶಯ ರೈತರಿಗೆ ಮುಖ್ಯ ಮಾಹಿತಿ ಬೇಸಿಗೆ ಹಂಗಾಮಿನ ಬೆಳೆಗಳಿಗೆ ನೀರು.!ನಾಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಜಾಮೀನು ಅರ್ಜಿ ವಿಚಾರಣೆ.!ಕನ್ನಡದ ಖ್ಯಾತ ಹಿರಿಯ ಕಲಾವಿದ ಇನ್ನಿಲ್ಲ.!ಕಗಂಟಾಗಿದ್ದ ಕೇರಳ ಮುಖ್ಯಂತ್ರಿ ಸ್ಥಾನ ಕುತೂಹಲಕ್ಕೆ ತೆರೆ.!ಕೈ ಮುಷ್ಟಿಯಷ್ಟು ಕಲ್ಲುಪ್ಪನ್ನು ತೆಗೆದುಕೊಂಡು ವಾರಕ್ಕೆ ಒಂದು ಬಾರಿಯಾದರೂ ಮನೆಯಲ್ಲಿ ಹೀಗೆ ಮಾಡಿದರೆ ಧನ ಪ್ರವಾಹ ಖಚಿತ.!ಪ್ರಥಮ ದರ್ಜೆ ಕಾಲೇಜುಗಳ ಬೋಧಕರ ವರ್ಗಾವಣೆ ಕೌನ್ಸೆಲಿಂಗ್ ತಾತ್ಕಾಲಿಕ ವೇಳಾಪಟ್ಟಿ.!ಎಲ್ಲಾ ಶಾಲಾ-ಕಾಲೇಜುಗಳಲ್ಲಿ ‘ಹಿಜಾಬ್’ ನಿಷೇಧ ರದ್ದು.!ಪ್ರಥಮ ವರ್ಷದ ಡಿಪಿಎಸ್‍ಇ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಗಂಜಿಗಟ್ಟೆ ಲಂಬಾಣಿಹಟ್ಟಿಯಲ್ಲಿ ಪ್ರತ್ಯೇಕ ಚುನಾವಣಾ ಬೂತ್ಗೆ ಆಗ್ರಹದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 14-05-2026