ರಾಜ್ಯ ಹಾಗೂ ದೇಶಕ್ಕೆ ಮತ್ತೊಂದು ಗಂಡಾಂತರ.! ಕೋಡಿಮಠದ ಶ್ರೀ ಭವಿಷ್ಯ.!
ಹಾಸನ: ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ಯಾರೂ ಊಹಿಸಿದ ದು:ಖ ಬರಲಿದೆ. ಜನವರಿಯೊಳಗೆ ರಾಜ್ಯ ಹಾಗೂ ದೇಶಕ್ಕೆ ಮತ್ತೊಂದು ಗಂಡಾಂತರ ಕಾದಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಮೇಘಸ್ಫೋಟ, ಜಲಪ್ರಳಯ, ವಾಯುವಿನಿಂದ ಆಪತ್ತು ಎದುರಾಗಲಿದೆ ಎಂದು ಮೊದಲೇ ಹೇಳಿದ್ದೆ. ವಿಮಾನ ಆಪತ್ತು ಸೇರಿದಂತೆ ಕೆಲ ಆಪತ್ತುಗಳು ಸಂಭವಿಸಲಿವೆ. ಮುಂದೆ ಇನ್ನೊಂದು ದೊಡ್ದ ಮೇಘಸ್ಫೋಟವಾಗಲಿದೆ. ನಿರೀಕ್ಷೆಗೂ ಮೀರಿದ ದು:ಖ ಎದುರಾಗಲಿದೆ ಎಂದು ಹೇಳಿದ್ದಾರೆ.
ಈಗ ಕಂಡುಬರುತ್ತಿರುವ ಅಸ್ಥಿರತೆ ಇನ್ನೂ ಹೆಚ್ಚಾಗಲಿದೆ. ಮನುಷ್ಯ ಓಡಾಡುತ್ತಲೆ ಸಾಯುತ್ತಾನೆ ಎಂದು ಹೇಳಿದ್ದೆ. ಅದು ಮುಂದುವರೆಯಲಿದೆ ಎಂದಿದ್ದಾರೆ. ಸೂಳೆಯ ಮಗನುಟ್ಟಿ ಆಳುವನು ಮುನಿಪುರವ ಯುದ್ಧವಿಲ್ಲದ ಮಡಿಯೇ ಪುರವೆಲ್ಲ ಕೂಳಾದೀತು ಎಂದು ಮಾರ್ಮಿಕವಾಗಿ ಸ್ವಾಮೀಜಿ ಹೇಳಿದ್ದಾರೆ. ಇದನ್ನು ಬರೆದಿಟ್ಟುಕೊಳ್ಳಿ. ಇದಕ್ಕೆ ಪರಿಹಾರ ಆಮೇಲೆ ಸೂಚಿಸುತ್ತೇನೆ ಎಂದಿದ್ದಾರೆ.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.