LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬೆಲೆ ಏರಿಕೆಯಿಂದ ತತ್ತರಿಸಿದ ಜನಸಾಮಾನ್ಯರಿಗೆ ಮತ್ತೊಂದು ಶಾಕ್: ಹೋಟೆಲ್ ತಿಂಡಿ, ಊಟ ದರ ಭಾರೀ ಹೆಚ್ಚಳ

ಬೆಂಗಳೂರು: ಗ್ಯಾಸ್ ದರ ಏರಿಕೆ, ಕಾರ್ಮಿಕರ ಕನಿಷ್ಠ ವೇತನ ಹೆಚ್ಚಳ ಹಿನ್ನೆಲೆಯಲ್ಲಿ ಹೋಟೆಲ್ ಗಳಲ್ಲಿ ತಿಂಡಿ, ಊಟದ ದರ ಹೆಚ್ಚಿಸಲು ರಾಜ್ಯ ಹೋಟೆಲ್ ಮಾಲೀಕರ ಸಂಘ ಚಿಂತನೆ ನಡೆಸಿದೆ.

ಕಾರ್ಮಿಕರ ಕನಿಷ್ಠ ವೇತನವನ್ನು ಒಮ್ಮೆಲೇ ಶೇಕಡ 60 ರಷ್ಟು ಏರಿಸಿದರೆ ಹೋಟೆಲ್ ಗಳಲ್ಲಿ ಊಟ ತಿಂಡಿ ದರ ಒಂದೂವರೆಯಿಂದ ಎರಡು ಪಟ್ಟು ಹೆಚ್ಚಳ ಮಾಡುವುದು ಅನಿವಾರ್ಯವಾಗಿದೆ. ಸಾಮಾನ್ಯ ಹೋಟೆಲ್ ಗಳಲ್ಲಿ ಒಂದು ಪ್ಲೇಟ್ ಇಡ್ಲಿ ದರ 40 ರಿಂದ 45 ರೂ. ಇದ್ದು, ಅದು 90 ರೂ.ಗೆ ಏರಿಕೆಯಾಗಲಿದೆ. 150 ರೂಪಾಯಿ ಇರುವ ಊಟದ ದರ 250 ರಿಂದ 350 ರೂಪಾಯಿಗೆ ಏರಿಕೆ ಮಾಡುವುದು ಅನಿವಾರ್ಯ ಎಂದು ರಾಜ್ಯ ಹೋಟೆಲ್ ಮಾಲೀಕರ ಸಂಘ ಎಚ್ಚರಿಕೆ ನೀಡಿದೆ.

ಅಡುಗೆ ಅನಿಲ, ಡೀಸೆಲ್, ಪೆಟ್ರೋಲ್ ಬೆಲೆ ಏರಿಕೆಯಿಂದ ಹೋಟೆಲ್ ಮಾಲೀಕರು ಸಂಕಷ್ಟದಲ್ಲಿದ್ದಾರೆ. ಈಗ ಕಾರ್ಮಿಕ ಇಲಾಖೆ ಕಾರ್ಮಿಕರ ಕನಿಷ್ಠ ವೇತನವನ್ನು 60% ರಷ್ಟು ಹೆಚ್ಚಳ ಮಾಡಿರುವುದರಿಂದ ಹೋಟೆಲ್ ಮಾಲೀಕರಿಗೆ ಸಂಕಷ್ಟ ಎದುರಾಗಿದೆ. ಕಾರ್ಮಿಕರಿಗೆ ಪರಿಷ್ಕೃತ ವೇತನ ಜಾರಿಯಾದರೆ 23,000 ರೂ. ವೇತನ ಕೊಡಬೇಕು. ಇದರೊಂದಿಗೆ ಅವರಿಗೆ ಪಿಎಫ್, ಊಟ, ತಿಂಡಿ, ವಸತಿ ವ್ಯವಸ್ಥೆ ಸೇರಿ ಸುಮಾರು 30 ರಿಂದ 35 ಸಾವಿರ ರೂಪಾಯಿವರೆಗೆ ವೆಚ್ಚವಾಗುತ್ತದೆ. ಪ್ರತಿ ಹೋಟೆಲ್ ನಲ್ಲಿ ಐದರಿಂದ ಆರು ಕಾರ್ಮಿಕರು ಇರುತ್ತಾರೆ. ಇಷ್ಟು ವೇತನ ನೀಡಿದರೆ ಹೋಟೆಲ್ ಕಟ್ಟಡದ ಬಾಡಿಗೆ, ನೀರು, ವಿದ್ಯುತ್, ತೆರಿಗೆ ಪಾವತಿ ಮೊದಲಾದವುಗಳನ್ನು ಭರಿಸುವುದು ಕಷ್ಟವಾಗುತ್ತದೆ. ಸರ್ಕಾರ ಅವೈಜ್ಞಾನಿಕವಾಗಿ ಕನಿಷ್ಠ ವೇತನ ಹೆಚ್ಚಳ ಮಾಡಿದೆ ಎಂಬ ಆರೋಪ ಕೇಳಿ ಬಂದಿದೆ.

ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪರಿಷ್ಕೃತ ಕಾರ್ಮಿಕರ ಕನಿಷ್ಠ ವೇತನ ಏರಿಕೆಯಿಂದ ಹೋಟೆಲ್ ಉದ್ಯಮದ ಮೇಲೆ ಗಂಭೀರ ಪರಿಣಾಮ ಬೀರಲಿದ್ದು, ಒಂದು ಪ್ಲೇಟ್ ಇಡ್ಲಿ ಬೆಲೆ 80 ರಿಂದ 90 ರೂಪಾಯಿ, ಮಸಾಲೆ ದೋಸೆ 150 ರೂಪಾಯಿ, ಸಸ್ಯಹಾರಿ ಊಟದ ಬೆಲೆ ರೂ.250 ರಿಂದ 300 ರೂ., ಬಿರಿಯಾನಿ ಬೆಲೆ 500 ರೂಪಾಯಿಗೆ ಏರಿಕೆಯಾಗಬಹುದು ಎಂದು ರಾಜ್ಯ ಹೋಟೆಲ್ ಗಳ ಮಾಲೀಕರ ಸಂಘದ ಅಧ್ಯಕ್ಷ ಜಿ.ಕೆ. ಶೆಟ್ಟಿ ಎಚ್ಚರಿಸಿದ್ದಾರೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯದಲ್ಲಿ ಟೊಯೋಟಾ ಕಿರ್ಲೋಸ್ಕರ್ ನಿಂದ 1,200 ಕೋಟಿ ರೂಪಾಯಿ ಹೂಡಿಕೆ: ಮಹತ್ವದ ಒಪ್ಪಂದಕ್ಕೆ ಸಿಎಂ ಸಿದ್ಧರಾಮಯ್ಯ ಸಮ್ಮುಖದಲ್ಲಿ ಸಹಿಅರಣ್ಯ ಇಲಾಖೆಯಲ್ಲಿ ಮೇಜರ್ ಸರ್ಜರಿ: ರಾಜ್ಯದ 5 ಹಿರಿಯ ಐಎಫ್‌ಎಸ್ ಅಧಿಕಾರಿಗಳ ದಿಢೀರ್ ವರ್ಗಾವಣೆಭಟ್ಕಳ ಮುರಿನಕಟ್ಟೆ ವಿವಾದ: ಪೊಲೀಸರಿಂದ 4 ಕೇಸ್ ದಾಖಲು, 6 ಜನ ಅರೆಸ್ಟ್ಮೇ 28 ರಂದು ಮದ್ಯ ಮಾರಾಟ ನಿಷೇಧಬೈಕ್ ಗೆ ಗೂಡ್ಸ್ ಆಟೋ ಡಿಕ್ಕಿ: ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಸಾವುಸಾಲ ನೀಡಿದ ಹಣ ವಾಪಸ್ ಕೇಳಿದ್ದಕ್ಕೆ ಸ್ನೇಹಿತನ ಬರ್ಬರ ಹತ್ಯೆ: ಕೆರೆ ಬಳಿ ಶವ ಎಸೆದು ಪರಾರಿSHOCKING: ಹುಚ್ಚು ನಾಯಿ ಕಡಿದು ಗಾಯಗೊಂಡಿದ್ದ ಯುವಕ ಸಾವುಸೊಸೆ ಮೇಲೆ ಪದೇ ಪದೇ ಲೈಂಗಿಕ ದೌರ್ಜನ್ಯ: ಮಾವನಿಗೆ ಜಾಮೀನುಗೃಹಲಕ್ಷ್ಮಿ ಯೋಜನೆಯಲ್ಲಿ ಭಾರಿ ಬದಲಾವಣೆ: ಇನ್ಮುಂದೆ ಒನ್‌-ಟೈಮ್‌ ಬಯೋಮೆಟ್ರಿಕ್‌ ಕಡ್ಡಾಯ: ನಿಯಮ ಉಲ್ಲಂಘಿಸಿದರೆ ₹2,000 ಹಣ ಕಟ್‌BREAKING: ಬೆಂಗಳೂರಲ್ಲಿ ಮತ್ತೊಂದು ಕಾಂಪೌಂಡ್ ಗೋಡೆ ಕುಸಿತ ದುರಂತ: ಬಾಲಕ ಸಾವು, ಇಬ್ಬರು ಕಾರ್ಮಿಕರಿಗೆ ಗಾಯ