LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

UPSC ಪರೀಕ್ಷೆಯಲ್ಲಿ 386 ನೇ ರ್ಯಾಂಕ್ ನೊಂದಿಗೆ IAS ಅಧಿಕಾರಿಯಾದ ಅನುಪಮಾ ಅಂಜಲಿ

ನವದೆಹಲಿ : ಯುಪಿಎಸ್ ಸಿ ಪರೀಕ್ಷಾ ಸಾಧಕಿಯಾದ ಐಎಎಸ್ ಅಧಿಕಾರಿ ಅನುಪಮಾ ಅಂಜಲಿ. ಇವರ ತಂದೆ ಐಪಿಎಸ್ ಅಧಿಕಾರಿಯಾಗಿದ್ದು, ಪತಿ ಕೂಡ ಐಎಎಸ್ ಆಫೀಸರ್ ಆಗಿದ್ದಾರೆ. ಅನುಪಮಾ ಅವರ ಜರ್ನಿಯ ಬಗ್ಗೆ ತಿಳಿಯೋಣ ಬನ್ನಿ.

ಅನುಪಮಾ ಅಂಜಲಿ ದೆಹಲಿ ನಿವಾಸಿ. ದೆಹಲಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮಾಡಿದ ನಂತರ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದರು. 2018ರ ಬ್ಯಾಚ್ ನ ಐಎಎಸ್ ಅಧಿಕಾರಿಯಾಗಿರುವ ಅನುಪಮಾ ಅಂಜಲಿ ಎಂಜಿನಿಯರಿಂಗ್ ಪದವಿ ಮುಗಿಸಿದ ಬಳಿಕ ಯುಪಿಎಸ್ ಸಿ ಪರೀಕ್ಷೆಗೆ ತಯಾರಿ ಆರಂಭಿಸಿದ್ದರು.ಅನುಪಮಾ ಎರಡು ಬಾರಿ ಯುಪಿಎಸ್ ಸಿ ಪರೀಕ್ಷೆ ಬರೆದಿದ್ದರು. ಆಕೆ ತನ್ನ ಮೊದಲ ಪ್ರಯತ್ನದಲ್ಲಿ ವಿಫಲಳಾಗಿದ್ದರು. ಆದರೆ ಛಲ ಬಿಡದೆ ನಂತರ ಎರಡನೆ ಪ್ರಯತ್ನಕ್ಕೆ ಯಶಸ್ಸು ಪಡೆದರು.

ಅನುಪಮಾ ಅಂಜಲಿ ಅವರ ತಂದೆ ಐಪಿಎಸ್ ಅಧಿಕಾರಿ. ಅವರು ಸರ್ಕಾರಿ ನೌಕರಿಯಲ್ಲಿ 37 ವರ್ಷಗಳನ್ನು ಪೂರೈಸಿದ್ದಾರೆ. ಅನುಪಮಾ ಅಂಜಲಿ 2017 ರ UPSC ಪರೀಕ್ಷೆಯಲ್ಲಿ 386 ನೇ ರ್ಯಾಂಕ್ ನೊಂದಿಗೆ IAS ಅಧಿಕಾರಿಯಾದರು.

LBSNAA ನಲ್ಲಿ ತರಬೇತಿ ಪಡೆದ ನಂತರ, ಅವರಿಗೆ ಆಂಧ್ರ ಪ್ರದೇಶ ಕೇಡರ್ ನೀಡಲಾಯಿತು. ಅವರ ಮೊದಲ ಪೋಸ್ಟಿಂಗ್ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ಜಂಟಿ ಕಲೆಕ್ಟರ್ ಆಗಿತ್ತು.

ಅನುಪಮಾ ಅಂಜಲಿ 2020 ರ ಬ್ಯಾಚ್ ನ ಐಎಎಸ್ ಅಧಿಕಾರಿ ಹರ್ಷಿತ್ ಕುಮಾರ್ ಅವರನ್ನು 2023 ರ ಆರಂಭದಲ್ಲಿ ಮದುವೆಯಾಗಿದ್ದಾರೆ. ಐಎಎಸ್ ಹರ್ಷಿತ್ ಮತ್ತು ಅನುಪಮಾ ಉತ್ತರ ಭಾರತ ಮತ್ತು ದಕ್ಷಿಣ ಭಾರತದ ಎರಡೂ ಪದ್ಧತಿಗಳ ಪ್ರಕಾರ ವಿವಾಹವಾದರು.

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಡೆನೂರು ಮನು ವಿರುದ್ಧದ ಪ್ರಕರಣ ಹಿಂಪಡೆದ ‌ನಟಿಕಂತೆ ಕಂತೆ ಹಣ ಪತ್ತೆ ಕೇಸ್: ಯಶವಂತ್ ವರ್ಮಾ ಸಲ್ಲಿಸಿದ್ದ ಅರ್ಜಿ ವಜಾಸಾವಿಗೆ ಸಂಸದ ಡಾ. ಕೆ ಸುಧಾಕರ್ ಕಾರಣ ಎಂದು ಡೆತ್ ನೋಟ್ ಬರೆದಿಟ್ಟು ಕಾರು ಚಾಲಕ ಆತ್ಮಹತ್ಯೆಯಮುನಾ ನದಿಯಲ್ಲಿ ನೀರಿನ ಮಟ್ಟ ಏರಿಕೆ - ದೆಹಲಿ ಸರ್ಕಾರದಿಂದ ಎಚ್ಚರಿಕೆಉತ್ತರಾಖಂಡ ಮೇಘಸ್ಫೋಟ - ನಾಪತ್ತೆಯಾಗಿದ್ದ ಕೇರಳ ಮೂಲದ 28 ಪ್ರವಾಸಿಗರ ತಂಡ ಸುರಕ್ಷಿತಮೃತಪಟ್ಟ ತಾಯಿ ಖಾತೆಯಲ್ಲಿದ್ದ ಹಣ ಕಂಡು ಮೂರ್ಛೆ ಹೋದ ಮಗ!! ಶಾರುಖ್ ಖಾನ್ ಆಸ್ತಿಗೂ ಮೀರಿದ ಮೊತ್ತಕಂದಕಕ್ಕೆ ಉರುಳಿದ ಸಿಆರ್‌ಪಿಎಫ್ ಸಿಬ್ಬಂದಿಯನ್ನ ಹೊತ್ತೊಯ್ಯುತ್ತಿದ್ದ ವಾಹನ; ಮೂವರು ಸಾವುಧರ್ಮಸ್ಥಳ: ಯುವತಿ ನೇಣು ಬಿಗಿದು ಆತ್ಮಹತ್ಯೆ..!!'ಭಾರತ ಎಂದಿಗೂ ರಾಜಿಯಾಗಲ್ಲ, ನನಗೆ ರೈತರ ಹಿತವೇ ಮುಖ್ಯ'- ಟ್ರಂಪ್‌ಗೆ ಮೋದಿ ತಿರುಗೇಟುಸ್ಟೇಟ್‌ಬ್ಯಾಂಕ್ ಆಫ್‌ ಇಂಡಿಯಾದಲ್ಲಿ 5180 ಹುದ್ದೆ- ಈಗಲೇ ಅರ್ಜಿ ಸಲ್ಲಿಸಿ