ಬಿಐಇಆರ್‍ಟಿ ಹುದ್ದೆಗೆ ಅರ್ಜಿ ಆಹ್ವಾನ
ಚಿತ್ರದುರ್ಗ: 2025-26ನೇ ಸಾಲಿಗೆ ಚಿತ್ರದುರ್ಗ ಜಿಲ್ಲೆಯಲ್ಲಿ ಖಾಲಿ ಇರುವ ಪ್ರಾಥಮಿಕ ಬಿಐಇಆರ್‍ಟಿ ಹುದ್ದೆಗೆ ಸ್ಪೆಷಲ್ ಡಿ.ಇಡಿ ಜೊತೆಗೆ ವ್ಯಾಲಿಡ್ ಆರ್‍ಸಿಐ ಸಿಆರ್‍ರ್ ನಂಬರ್ ಮತ್ತು ಪ್ರೌಢ ಬಿಐಇಆರ್‍ಟಿ ಹುದ್ದೆಗೆ ಬಿ.ಇಡಿ ಇನ್ ಸ್ಪೆಷಲ್ ಎಜುಕೇಷನ್ ಜೊತೆಗೆ ವ್ಯಾಲಿಡ್ ಆರ್‍ಸಿಐ ಸಿಆರ್‍ರ್ ನಂಬರ್ ಹೊಂದಿರುವ ಅರ್ಹ ಅಭ್ಯರ್ಥಿಗಳಿಂದ ನೇರಗುತ್ತಿಗೆ ಮೂಲಕ ತಾತ್ಕಾಲಿಕವಾಗಿ ಸೇವೆ ಪಡೆಯಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು ಇದೇ ಜೂನ್ 16ರ ಸಂಜೆ 5 ಗಂಟೆ ಒಳಗೆ ಭರ್ತಿ ಮಾಡಿದ ದೃಢೀಕೃತ ದಾಖಲೆಗಳೊಂದಿಗೆ ಅರ್ಜಿಗಳನ್ನು ಮುದ್ದಾಂ ಉಪನಿರ್ದೇಶಕರು (ಆಡಳಿತ) ಹಾಗೂ ಪದನಿಮಿತ್ತ ಜಿಲ್ಲಾ ಯೋಜನಾಧಿಕಾರಿ, ಸಮಗ್ರ ಶಿಕ್ಷಣ ಕರ್ನಾಟಕ, ಶಾಲಾ ಶಿಕ್ಷಣ ಇಲಾಖೆ, ಚಿತ್ರದುರ್ಗ ಈ ಕಚೇರಿಗೆ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.