ಡಿಪ್ಲೋಮಾ ಪ್ರವೇಶಾತಿಗೆ ಅರ್ಜಿ ಆಹ್ವಾನ
ಚಿತ್ರದುರ್ಗ: ರಾಜ್ಯದ ಆಯ್ದ 31 ಸರ್ಕಾರಿ 13 ಖಾಸಗಿ ಪಾಲಿಟಿಕ್ನಿಕ್ ಕಾಲೇಜುಗಳಲ್ಲಿ 2026-27ನೇ ಶೈಕ್ಷಣಿ ಸಾಲಿಗೆ ಪ್ರಥಮ ಸೆಮಿಸ್ಟರ್ ಡಿಪ್ಲೋಮಾ ಪ್ರವೇಶ ಸ್ಥಾನಗಳನ್ನು ಮೆರಿಟ್ ಕಮ್ ರೊಸ್ಟರ್ ಪ್ರಕಾರ ರಾಜ್ಯಮಟ್ಟದಲ್ಲಿ ನಾನ್ ಇಂಟರ್ ಆಕ್ಟೀವ್ ಕೌನ್ಸೆಲಿಂಗ್, ಮೂಲಕ ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಮೇ 16 ಅರ್ಜಿ ಸಲ್ಲಿಸಲು ಕೊನೆಯ ದಿನ.
ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಇಲಾಖೆ ವೆಬ್ ಸೈಟ್ ತಿತಿತಿ.ಜಣeಞ.ಞಚಿಡಿಟಿಚಿಣಚಿಞ.gov.iಟಿ ಮೂಲಕ ಅರ್ಜಿ ಹಾಗೂ ಮಾಹಿತಿ ಪುಸ್ತಕ ಪಡೆಯಬಹುದಾಗಿದೆ. ಭರ್ತಿಮಾಡಿದ ಅರ್ಜಿಯನ್ನು ಮೇ.16 ರಂದು ಸಂಜೆ 5 ಗಂಟೆ ಒಳಗೆ ಪೂರಕ ದಾಖಲೆಗಳೊಂದಿಗೆ ಸಂಸ್ಥೆಯ ಕಂಪ್ಯೂಟರ್ ವಿಭಾಗದಲ್ಲಿ ಸಲ್ಲಿಸಿ ತಂತ್ರಾAಶದಲ್ಲಿ ಆನ್ ಲೈನ್ ಮೂಲಕ ದಾಖಲಿಸಿಕೊಂಡು, ಕೋರ್ಸುಗಳ ಅದ್ಯತಾ ಪಟ್ಟಿಯನ್ನು ದಾಖಲಿಸಿ ಸ್ವೀಕೃತಿ ಪಡೆಯಬೇಕು.
ಮೇ.16 ರಂದು ಸಂಜೆ 6 ಗಂಟೆಯ ನಂತರ ಅರ್ಹ ಅಭ್ಯರ್ಥಿಗಳ ತಾತ್ಕಾಲಿಕ ಮೆರಿಟ್ ಪಟ್ಟಿ ಪ್ರಕಟಣೆ ಮಾಡಲಾಗುವುದು. ಮೇ.18 ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಮೆರಿಟ್ ಪಟ್ಟಿಗೆ ಆಕ್ಷೇಪಣೆ ಮತ್ತು ತಿದ್ದುಪಡಿ ನಡೆಸಲಾಗುವುದು. ಮೇ.18 ಸಂಜೆ 6 ಗಂಟೆಯ ನಂತರ ಅಂತಿಮ ಮೆರಿಟ್ ಪಟ್ಟಿ ಪ್ರಕಟಣೆ ಮಾಡಲಾಗುವುದು. ಮೇ.22 ರಂದು ಸಂಜೆ 5.30 ಗಂಟೆಯ ನಂತರ ಸೀಟು ಹಂಚಿಕೆ ಮಾಡಲಾಗುವುದು. ಮೇ. 23 ರಿಂದ ಮೇ. 25 ರವರಗೆ ಸೀಟು ಆಯ್ಕೆ ಮಾಡಿಕೊಂಡ ಅಭ್ಯರ್ಥಿಗಳ ನಿಗದಿತ ಶುಲ್ಕದೊಂದಿಗೆ ಪ್ರವೇಶ ಪಡೆಯಬೇಕು. ಮೇ.26 ರಿಂದ ಮೇ.30 ರವರಗೆ ಸೀಟು ಹಂಚಿಕೆಯಾದ ನಂತರ ಭರ್ತಿ ಆಗದೆ ಉಳಿದ ಸೀಟುಗಳನ್ನು ಪ್ರಾಂಶುಪಾಲರ ಹಂತದಲ್ಲಿಯೇ ಆಫ್‌ಲೈನ್ ಮೂಲಕ ಮೆರಿಟ್ ಮತ್ತು ರೋಸ್ಟರ್ ಅನುಗುಣವಾಗಿ ಸೀಟು ಹಂಚಿಕೆ ಮಾಡಲಾಗುವುದು ಎಂದು ಚಿತ್ರದುರ್ಗ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಸಿ.ಆರ್.ವಿಶ್ವೇಶ್ವರ ತಿಳಿಸಿದ್ದಾರೆ.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.