ಮಾಜಿ ಸೈನಿಕರ ಕೋಟಾದಡಿ ಸರ್ಕಾರಿ ಜಮೀನು, ನಿವೇಶನಕ್ಕೆ ಅರ್ಜಿ ಆಹ್ವಾನ
ದಾವಣಗೆರೆ : ದಾವಣಗೆರೆ ತಾಲ್ಲೂಕು ವ್ಯಾಪ್ತಿಯ ಸೈನಿಕರು, ಮಾಜಿ ಸೈನಿಕರು ಸೈನಿಕರ ಕೋಟಾದಡಿ ಸರ್ಕಾರಿ ಜಮೀನು, ನಿವೇಶನ ಕೋರಿ ಫೆಬ್ರವರಿ 16 ವರೆಗೆ ತಾಲ್ಲೂಕು ಕಚೇರಿಯಲ್ಲಿ ಅರ್ಜಿ ಸಲ್ಲಿಸಬಹುದು.
ಮಾನದಂಡ: ಸೈನಿಕ ಸೇವೆಗೆ ನೇಮಕಾತಿಗೊಂಡಿರುವ ಬಗ್ಗೆ ದಾಖಲೆಗಳು ಸೈನಿಕ ಸೇವೆಯಿಂದ ನಿವೃತ್ತಿ ಹೊಂದಿದ್ದಲ್ಲಿ ಡಿಸ್ಟಾರ್ಜ್ ಸರ್ಟಿಫಿಕೆಟ್ ಹಾಗೂ ಈ ಹಿಂದಿನ ತಿಂಗಳ ಪಿಂಚಣಿ ವೇತನ ಪ್ರಮಾಣ ಪತ್ರ ಹಾಲಿ ಸೇವಾ ಸೈನಿಕರು ಈ ಹಿಂದಿನ ತಿಂಗಳ ವೇತನ ಪ್ರಮಾಣ ಪತ್ರ. ಸೈನಿಕ ಸೇವಾ ಅವಧಿಯಲ್ಲಿ ಅಂಗವಿಕಲತೆ ಆಗಿದ್ದಲ್ಲಿ, ಸಂಬAಧಿಸಿದ ಪ್ರಾಧಿಕಾರದಿಂದ ಪ್ರಮಾಣ ಪತ್ರ. ಸೈನಿಕ ಸೇವೆಯಲ್ಲಿ ಸೇವೆ ಸಲ್ಲಿಸಿದ ಕುರಿತು ಸಂಬAಧಿಸಿದ ಪ್ರಾಧಿಕಾರದಿಂದ ಸೇವಾ ಅವಧಿಯ ಕುರಿತು ದೃಢೀಕೃತ ಪತ್ರ,. ಸೇವಾ ಅವಧಿಯಲ್ಲಿ ಪಡೆದಿರುವ ಪದಕಗಳ ಹಾಗೂ ಇತ್ಯಾದಿ ದಾಖಲೆ. ಸರ್ಕಾರದಿಂದ ನಿಗಧಿಪಡಿಸಿರುವ ನಿಗದಿತ ನಮೂನೆ-14 ರಲ್ಲಿ ಎಲ್ಲಾ ಅಂಶಗಳ ಕುರಿತು ಮಾಹಿತಿಯನ್ನು ಭರ್ತಿ ಮಾಡಿ ಪಾಸ್‌ಪೋರ್ಟ್ ಫೋಟೋದೊಂದಿಗೆ ಸಲ್ಲಿಸಬೇಕು.
ಅರ್ಜಿದಾರರ ಕುಟುಂಬ ಈಗಾಗಲೇ ಜಮೀನು, ನಿವೇಶನ ಹೊಂದಿದ್ದಲ್ಲಿ ಸದರಿ ಜಮೀನುಗಳ, ನಿವೇಶನಗಳ ಮಾಹಿತಿಯನ್ನು ಒದಗಿಸುವುದು, ಇಲ್ಲದಿದ್ದಲ್ಲಿ ಯಾವುದೇ ಜಮೀನು, ನಿವೇಶನ ಇಲ್ಲವೆಂದು ರೂ. 100/- ಮುಚ್ಚಳಿಕೆ ಪತ್ರ ನೀಡುವುದು. ಮಾಜಿ ಸೈನಿಕರು ಈಗಾಗಲೇ ಸೈನಿಕ ಹುದ್ದೆಯಿಂದ ನಿವೃತ್ತಿ ಹೊಂದಿ ರಾಜ್ಯ ಸರ್ಕಾರದ, ಕೇಂದ್ರ ಸರ್ಕಾರದ ಸ್ವಾಮ್ಯಕ್ಕೆ ಒಳಪಟ್ಟ ಸರ್ಕಾರಿ ಹುದ್ದೆಯಲ್ಲಿದ್ದಲ್ಲಿ ವಿವರ ನೀಡುವುದು. ಹಾಗೂ ಆದಾಯ ಪ್ರಮಾಣ ಪತ್ರ. ಕುಟುಂಬದ ಸದಸ್ಯರೆಲ್ಲರ ಅಧಾರ್ ಕಾರ್ಡ್ ಸ್ವಯಂ ದೃಢೀಕೃತ ಪ್ರತಿ, ಕುಟುಂಬದ ರೇಷನ್ ಕಾರ್ಡ್ ಸ್ವಯಂ ದೃಢೀಕೃತ ಪ್ರತಿ, ಹಾಲಿ ವಾಸದ ವಿಳಾಸದ ಪುರಾವೆ ದಾಖಲೆ, ಅರ್ಜಿದಾರರು ಸೇರಿದಂತೆ ಕುಟುಂಬದ ಸದಸ್ಯರ ಆದಾಯ ತೆರಿಗೆ ಘೋಷಣಾ ಪ್ರತಿ ಅರ್ಜಿದಾರರ ಆದಾಯ ದೃಢೀಕರಣ ಪತ್ರ ಸಲ್ಲಿಸಬೇಕೆಂದು ತಹಶೀಲ್ದಾರ್ ಡಾ.ಅಶ್ವಥ್.ಎಂ.ಬಿ ತಿಳಿಸಿದ್ದಾರೆ.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.