ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತದಲ್ಲಿ ಖಾಲಿ ಇರುವಂತ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಬಗ್ಗೆ ಬ್ಯಾಂಕ್ ನಿಂದ ನೇಮಕಾತಿ ಪ್ರಕಟಣೆ ಹೊರಡಿಸಲಾಗಿದ್ದು, ಚಿಕ್ಕಮಗಳೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತದಲ್ಲಿ ಖಾಲಿ ಇರುವಂತ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆನ್ ಲೈನ್ ಮುಖಾಂತರ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಆಸಕ್ತಿಯುಳ್ಳ ಅಭ್ಯರ್ಥಿಗಳು ಬ್ಯಾಂಕಿನ ಅಧಿಕೃತ ವೆಬ್ ಸೈಟ್ www.chikkamagalurudccbank.com ಗೆ ಭೇಟಿ ನೀಡಿ ಸಲ್ಲಿಸಬಹುದಾಗಿದೆ ಎಂದಿದೆ.
ಸಹಾಯಕ ವ್ಯವಸ್ಥಾಪಕರು – 4 ಹುದ್ದೆ
ಪ್ರಥಮ ದರ್ಜೆ ಸಹಾಯಕರು, ಮೇಲ್ವಿಚಾರಕರು – 18 ಹುದ್ದೆ
ಕಿರಿಯ ಸಹಾಯಕರು – 53 ಹುದ್ದೆ
ಡಿ ವೃಂದದ ಸಹಾಯಕರು, ಅಟೆಂಡರ್ – 10 ಹುದ್ದೆ
ವೇತನ
ಸಹಾಯಕ ವ್ಯವಸ್ಥಾಪಕರು – ರೂ.36,000ದಿಂದ 67,550.
ಪ್ರಥಮ ದರ್ಜೆ ಸಹಾಯಕರು, ಮೇಲ್ವಿಚಾರಕರು – ರೂ.27,650 ರಿಂದ ರೂ.52,650
ಕಿರಿಯ ಸಹಾಯಕರು – ರೂ.21,400 ರಿಂದ ರೂ.42,000
ಡಿ ವೃಂದದ ಸಹಾಯಕರು, ಅಟೆಂಡರ್ – ರೂ.18,600 ರಿಂದ 32,6000
ಶೈಕ್ಷಣಿಕ ವಿದ್ಯಾರ್ಹತೆ
ಸಹಾಯಕ ವ್ಯವಸ್ಥಾಪಕರು – ಅಂಗೀಕೃತ ವಿವಿಯಿಂದ ಸ್ನಾತಕೋತ್ತರ ಪದವಿ. ಕಂಪ್ಯೂಟರ್ ಆಪರೇಷನ್ಸ್ ಮತ್ತು ಅಪ್ಲಿಕೇಷನ್ ಜ್ಞಾನ ಕಡ್ಡಾಯ
ಪ್ರಥಮ ದರ್ಜೆ ಸಹಾಯಕರು, ಮೇಲ್ವಿಚಾರಕರು – ಅಂಗೀಕೃತ ವಿವಿಯಿಂದ ಪದವಿ, ಕಂಪ್ಯೂಟರ್ ಆಪರೇಷನ್ಸ್ ಮತ್ತು ಅಪ್ಲಿಕೇಷನ್ ಜ್ಞಾನ ಕಡ್ಡಾಯ
ಕಿರಿಯ ಸಹಾಯಕರು – ಅಂಗೀಕೃತ ವಿವಿಯಿಂದ ಪದವಿ, ಕಂಪ್ಯೂಟರ್ ಆಪರೇಷನ್ಸ್ ಮತ್ತು ಅಪ್ಲಿಕೇಷನ್ ಜ್ಞಾನ ಕಡ್ಡಾಯ
ಡಿ ವೃಂದದ ಸಹಾಯಕರು, ಅಟೆಂಡರ್ – ಎಸ್ ಎಸ್ ಎಲ್ ಸ್ಸಿ
ಅರ್ಜಿ ಶುಲ್ಕ
ಸಾಮಾನ್ಯ ಅರ್ಹತೆ, ಪ್ರವರ್ಗ 2ಎ, 2ಬಿ, 3ಎ, 3ಬಿಗೆ ಸೇರಿದ ಅಭ್ಯರ್ಥಿಗಳಿಗೆ ರೂ.1,500
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1, ಅಂಗವಿಕಲ ಮತ್ತು ಮಾಜಿ ಸೈನಿಕರಿಗೆ ರೂ.750.
ವಯೋಮಿತಿ
ಸಾಮಾನ್ಯ ವರ್ಗದವರಿಗೆ ಕನಿಷ್ಠ 18, ಗರಿಷ್ಠ 35. 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 38 ವರ್ಷ, ಎಸ್ಸಿ, ಎಸ್ಟಿ, ಪ್ರವರ್ಗ-1ಕ್ಕೆ 40 ವರ್ಷಗಳು.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆಯು ದಿನಾಂಕ 29-10-2024ರಿಂದ ಆರಂಭಗೊಂಡಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 27-11-2024
ಶುಲ್ಕ ಪಾವತಿಸಲು ಕೊನೆಯ ದನಾಂಕ 27-11-202
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.