LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಅರಬ್ಬಿ ಸಮುದ್ರದಲ್ಲಿ ಮೀನುಗಾರರ ಬೋಟ್ ವಶಕ್ಕೆ - ಆರು ಮೀನುಗಾರರ ಬಂಧನ

ಕಾರವಾರ : ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಎರಡು ಬೋಟುಗಳು ಅಲೆಯ ಅಬ್ಬರಕ್ಕೆ ನೌಕಾದಳದ ವ್ಯಾಪ್ತಿ ಪ್ರದೇಶಕ್ಕೆ ಹೋಗಿದ್ದು, ನೌಕಾದಳದವರು ಎರಡು ಬೋಟುಗಳನ್ನು ವಶಕ್ಕೆ ಪಡೆದು ಆರು ಜನ ಮೀನುಗಾರರನ್ನು ಬಂಧಿಸಿದ್ದಾರೆ.

ಕಾರವಾರದ ಅರಗಾ ಬಳಿಯ ಸಮುದ್ರ ಭಾಗದಲ್ಲಿ ಘಟನೆ ನಡೆದಿದೆ. ಕಾರವಾರದ ಬೈತಕೋಲಿನ ರವಿ ನಾರಾಯಣ್ ಹರಿಕಾಂತ್ ಎಂಬವರಿಗೆ ಸೇರಿದ ಅರ್ಯಪರಮ್ ಎಂಬ ಬೋಟ್ ಹಾಗೂ ರಾಜು ವಾಮಂತ್ ತಾಂಡೇಲ್ ಎಂಬವರಿಗೆ ಸೇರಿದ ಓಂ ಶ್ರೀ ಆರ್ಯದುರ್ಗ ಎಂಬ ಹೆಸರಿನ ಬೋಟನ್ನು ನೌಕಾದಳದವರು ವಶಕ್ಕೆ ಪಡೆದಿದ್ದು, ಆರು ಜನ ಮೀನುಗಾರರನ್ನು ಬಂಧಿಸಿ ಕಾರವಾರ ಗ್ರಾಮೀಣ ಠಾಣೆ ಪೊಲೀಸರ ವಶಕ್ಕೆ ನೀಡಿದ್ದಾರೆ.

ತಮ್ಮ ಬೋಟುಗಳು ಅಲೆಗಳ ಅಬ್ಬರಕ್ಕೆ ತೇಲೆ ನೌಕಾದಳದ ಸುಪರ್ಧಿಗೆ ಹೋಗಿದೆ. ಇದೀಗ ಬೋಟುಗಳು ಹಾಗೂ ಲಕ್ಷಾಂತರ ಮೌಲ್ಯದ ಬಲೆಗಳನ್ನು ನೌಕಾದಳದ ಅಧಿಕಾರಿಗಳು ವಶದಲ್ಲಿ ಇಟ್ಟುಕೊಂಡಿದ್ದಾರೆ. ಇದರಿಂದ ನಮಗೆ ತೊಂದರೆಯಾಗುತ್ತಿದ್ದು, ಬೋಟುಗಳನ್ನು ಹಾಗೂ ಬಂಧಿಸಿದ ಮೀನುಗಾರರನ್ನು ಬಿಡುಗಡೆಗೊಳಿಸಬೇಕು ಎಂದು ಮೀನುಗಾರರು ಮನವಿ ಮಾಡಿದ್ದಾರೆ.

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭದ್ರಾ ಜಲಾಶಯ ರೈತರಿಗೆ ಮುಖ್ಯ ಮಾಹಿತಿ ಬೇಸಿಗೆ ಹಂಗಾಮಿನ ಬೆಳೆಗಳಿಗೆ ನೀರು.!ನಾಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಜಾಮೀನು ಅರ್ಜಿ ವಿಚಾರಣೆ.!ಕನ್ನಡದ ಖ್ಯಾತ ಹಿರಿಯ ಕಲಾವಿದ ಇನ್ನಿಲ್ಲ.!ಕಗಂಟಾಗಿದ್ದ ಕೇರಳ ಮುಖ್ಯಂತ್ರಿ ಸ್ಥಾನ ಕುತೂಹಲಕ್ಕೆ ತೆರೆ.!ಕೈ ಮುಷ್ಟಿಯಷ್ಟು ಕಲ್ಲುಪ್ಪನ್ನು ತೆಗೆದುಕೊಂಡು ವಾರಕ್ಕೆ ಒಂದು ಬಾರಿಯಾದರೂ ಮನೆಯಲ್ಲಿ ಹೀಗೆ ಮಾಡಿದರೆ ಧನ ಪ್ರವಾಹ ಖಚಿತ.!ಪ್ರಥಮ ದರ್ಜೆ ಕಾಲೇಜುಗಳ ಬೋಧಕರ ವರ್ಗಾವಣೆ ಕೌನ್ಸೆಲಿಂಗ್ ತಾತ್ಕಾಲಿಕ ವೇಳಾಪಟ್ಟಿ.!ಎಲ್ಲಾ ಶಾಲಾ-ಕಾಲೇಜುಗಳಲ್ಲಿ ‘ಹಿಜಾಬ್’ ನಿಷೇಧ ರದ್ದು.!ಪ್ರಥಮ ವರ್ಷದ ಡಿಪಿಎಸ್‍ಇ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಗಂಜಿಗಟ್ಟೆ ಲಂಬಾಣಿಹಟ್ಟಿಯಲ್ಲಿ ಪ್ರತ್ಯೇಕ ಚುನಾವಣಾ ಬೂತ್ಗೆ ಆಗ್ರಹದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 14-05-2026