LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

‘ಯಾವುದೇ ಸಮಯದಲ್ಲೂ, ಎಲ್ಲಿಯೂ ಸಮರಕ್ಕೆ ಸನ್ನದ್ಧ’: ಭಾರತೀಯ ನೌಕಾಪಡೆಯಿಂದ ಕ್ಷಿಪಣಿ ಪರೀಕ್ಷೆ!

ಇಂಫಾಲ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಭಾರತ ಹಾಗೂ ಪಾಕಿಸ್ತಾನ ಮಧ್ಯೆ ಉದ್ವಿಗ್ನತೆ ಉಂಟಾಗಿರುವ ನಡುವೆಯೇ ಭಾರತೀಯ ನೌಕಾಪಡೆಯು ತಾನು ಆರಬ್ಬಿ ಸಮುದ್ರದಲ್ಲಿ ಹಡಗು ವಿಧ್ವಂಸಕ ಕ್ಷಿಪಣಿಗಳನ್ನು ಪರೀಕ್ಷಿಸಿದ ದೃಶ್ಯಾವಳಿಗಳನ್ನು ರವಿವಾರ ಪ್ರಸಾರ ಮಾಡಿದೆ. ಆ ಮೂಲಕ ಅದು ಯಾವುದೇ ಸಮರ ಸನ್ನದ್ಧವಾಗಿರುವುದನ್ನು ದೃಢಪಡಿಸಿದೆ.

ಭಾರತೀಯ ನೌಕಾಪಡೆಯು ಬ್ರಹ್ಮೋಸ್ ಹಡಗು ವಿಧ್ವಂಸಕ ಹಾಗೂ ಮೇಲ್ಮೈನಲ್ಲಿರುವ ಗುರಿಗಳನ್ನು ನಾಶಪಡಿಸುವ ಕ್ರೂಸ್ ಕ್ಷಿಪಣಿಗಳ ಪರೀಕ್ಷೆಯ ದೃಶ್ಯಾವಳಿಗಳನ್ನು ನೌಕಾಪಡೆ ಹಂಚಿಕೊಂಡಿದೆ. ‘ಕೋಲ್ಕತಾ ಕ್ಲಾಸ್ ಡಿಸ್ಟ್ರಾಯರ್’ , ‘ನೀಲಗಿರಿ’ ಮತ್ತು ‘ಕ್ರಿವಾಕ್’ ದರ್ಜೆಯ ಕ್ಷಿಪಣಿಗಳನ್ನು ಉಡಾವಣೆ ಗೊಳಿಸಿದ ದೃಶ್ಯಾವಳಿಗಳನ್ನು ಕೂಡಾ ಅದು ಪ್ರದರ್ಶಿಸಿದೆ.

ಪಾಕಿಸ್ತಾನವು ನೂತನ ಕ್ಷಿಪಣಿಯ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದೆಯೆಂಬ ವರದಿಗಳ ನಡುವೆಯೇ ಆ ದೇಶವು ಆರಬ್ಬಿ ಸಮುದ್ರದಲ್ಲಿ ತನ್ನ ವ್ಯಾಪ್ತಿಯ ಬರುವ ಪ್ರದೇಶವನ್ನು ಹಾರಾಟ ನಿಷೇಧ ವಲಯವಾಗಿ ಘೋಷಿಸಿದೆ.

ಭಾರತೀಯ ನೌಕಾಪಡೆಯ ಹಡಗುಗಳು ದೀರ್ಘವ್ಯಾಪ್ತಿಯ ನಿಖರ ಆಕ್ರಮಣಾತ್ಮಕ ದಾಳಿಗಳಿಗಾಗಿ ತನ್ನ ವೇದಿಕೆಗಳು, ವ್ಯವಸ್ಥೆಗಳು ಹಾಗೂ ಸಿಬ್ಬಂದಿ ಸನ್ನದ್ಧವಾಗಿರುವುದನ್ನು ಪ್ರದರ್ಶಿಸಲು ಭಾರತೀಯ ನೌಕಾಪಡೆಯ ಹಡಗುಗಳು ಯಶಸ್ವಿಯಾಗಿ ವಿವಿಧ ಹಡಗು ವಿಧ್ವಂಸಕ ಕ್ಷಿಪಣಿಗಳ ಉಡಾವಣೆಯನ್ನು ನಡೆಸಿದೆ ಎಂದು ನೌಕಾಪಡೆಯ ಮೂಲಗಳು ತಿಳಿಸಿವೆ.

ಭಾರತೀಯ ನೌಕಾಪಡೆಯು ಯುದ್ಧ ಸನ್ನದ್ಧವಾಗಿವೆ, ಭವಿಷ್ಯದಲ್ಲಿ ಯಾವುದೇ ಸಮಯದಲ್ಲಿ, ಯಾವುದೇ ರೀತಿಯಲ್ಲಿ ಭಾರತೀಯ ಸಾಗರ ಪ್ರದೇಶದ ಹಿತಾಸಕ್ತಿಗಳನ್ನು ರಕ್ಷಿಸಲು ಸಿದ್ಧವಾಗಿವೆ’’ ಎಂದು ಭಾರತೀಯ ನೌಕಾಪಡೆ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದೆ.

ಎಪ್ರಿಲ್ 22ರಂದು ಕಾಶ್ಮೀರದ ಪಹಲ್ಗಾಂವ್ನಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಮಂದಿ ಮೃತಪಟ್ಟ ಘಟನೆಯ ಬೆನ್ನಲ್ಲೇ ಭಾರತೀಯ ನೌಕಾಪಡೆ ತನ್ನ ಸಮರ ಸನ್ನದ್ಧತೆಯನ್ನು ಬಹಿರಂಗವಾಗಿ ಘೋಷಿಸಿದೆ. ಈ ದಾಳಿಯ ಹಿಂದೆ ಪಾಕಿಸ್ತಾನದ ಕೈವಾಡವಿದೆಯೆಂದು ಭಾರತ ಸರಕಾರ ಆಪಾದಿಸಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಲಕ್ಷ್ಮಿ ವಾರ.. ಪ್ರೇಮ-ಕೌಟುಂಬಿಕ ಜೀವನ ಎರಡಕ್ಕೂ ಶುಭಕರ! ಪ್ರೇಮ ಪ್ರಸ್ತಾವನೆ ಸಾಧ್ಯತೆಇಂದಿನ ವಚನ: -ನೀಲಮ್ಮ ಅವರ ವಚನ..!ಸಾಮರಸ್ಯ ಸಾರುವ- ಸಂಕ್ರಾಂತಿ ಹಬ್ಬ: ಬೇರೆ ರಾಜ್ಯಗಳಲ್ಲಿನ ವಿಶೇಷತೆ ಏನು.?ಮೆಕ್ಕೆಜೋಳ ಪ್ರತಿ ಕ್ವಿಂಟಾಲ್‍ಗೆ ರೂ.2,150 ನಿಗದಿ  -ಜಿಲ್ಲಾಧಿಕಾರಿ ಟಿ.ವೆಂಕಟೇಶ್..!ಪ್ರೋತ್ಸಾಹಧನಕ್ಕಾಗಿ ಕ್ರೀಡಾಪಟುಗಳಿಂದ ಅರ್ಜಿ ಆಹ್ವಾನವಿದ್ಯಾರ್ಥಿನಿಯರಿಗಾಗಿ ದೀಪಿಕಾ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನನಗರದೇವತೆ ಶ್ರೀ ದುರ್ಗಾಂಭಿಕ ದೇವಿ ಜಾತ್ರೆ - ಪ್ರಾಣಿಬಲಿ ನಿಷೇಧ: ಜಿಲ್ಲಾಧಿಕಾರಿ ಗಂಗಾಧರಸ್ವಾಮಿಮದುವೆಯಾಗಿ ವರ್ಷ ಗಟ್ಟಲೆ ಸಂತಾನವಿಲ್ಲದೆ ನರಳುತ್ತಿದ್ದರೆ ಈ ರೀತಿಯಾದ ಶ್ರೀಕೃಷ್ಣನ ಮೂರ್ತಿ ಇಟ್ಟು ಪೂಜಿಸಿ ನೋಡಿ ಸಂತಾನ ಪ್ರಾಪ್ತಿ ಗ್ಯಾರಂಟಿ?ಇಂದಿನ ವಚನ: - --ಸಿದ್ಧರಾಮೇಶ್ವರ   ಅವರ ವಚನ..!ಟಾಕ್ಸಿಕ್ ಸಿನಿಮಾದ ಫ್ಲೆಕ್ಸ್ ಅಳವಡಿಕೆ ನಟ ಯಶ್ ವಿರುದ್ಧ FIR.!