LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕೆಡಿಪಿ ಸಭೆಯಲ್ಲಿ ತನಗೆ ಅಗೌರವ ತೋರಿಸಲಾಗಿದೆ : ಶಾಸಕ ಚನ್ನಬಸಪ್ಪ ಹೇಳಿಕೆ

ಶಿವಮೊಗ್ಗ,29 : ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ನಡೆದ ತ್ರೈಮಾಸಿಕ ಕೆ.ಡಿ.ಪಿ. ಪ್ರಗತಿ ಪರಿಶೀಲನಾ ಸಭೆಯಲ್ಲಿ ಸೂಕ್ತ ಮಾಹಿತಿ ತಿಳಿಯದೆ ಜನಪ್ರತಿನಿಧಿಯಾದ ತನಗೆ ಮನಸ್ಸಿಗೆ ಬಂದಂತೆ ನುಡಿದು ಅಗೌರವ ತೋರಿಸಲಾಗಿದೆ ಎಂದು ಶಾಸಕ ಎಸ್. ಎನ್ ಚನ್ನಬಸಪ್ಪ ಹೇಳಿದ್ದಾರೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ನಾನು ಯಾರದೋ ಕೃಪೆಯಿಂದ ಎಂ.ಎಲ್.ಸಿ ಆದವನಲ್ಲ. ಜನರ ಭರವಸೆಯಿಂದ, ವಿಶ್ವಾಸದಿಂದ, ಅವರು ನನಗೆ ನೀಡಿದ ಮತಗಳ ಪವಿತ್ರತೆಯಿಂದ ನಾನು ಈ ಸ್ಥಾನಕ್ಕೆ ಎಂ.ಎಲ್.ಎ ಆಗಿದ್ದೇನೆ. ಆದರೆ ಕೆಡಿಪಿ ಸಭೆಯಲ್ಲಿ ನಡೆದ ಘಟನೆ ಜನಪ್ರತಿನಿಧಿಗಳ ಪ್ರತಿಷ್ಠೆಗೆ ಧಕ್ಕೆ ತರುವಂತದ್ದು, ಸಭೆಯಲ್ಲಿ ಭಾಗವಹಿಸಿದ್ದ ಎಂ.ಎಲ್.ಸಿ ಬಲ್ಕೀಶ್ ಬಾನು, ಚುನಾವಣೆಯ ಮೂಲಕ ಆಯ್ಕೆಯಾಗಿರುವ ಜನಪ್ರತಿನಿಧಿಗೆ ತೋರಿದ ಅಗೌರವ ದುರದೃಷ್ಟಕರ. ಇದು ಕೇವಲ ವೈಯಕ್ತಿಕ ಸ್ಥರದ ಪ್ರಶ್ನೆಯಲ್ಲ, ಇದು ಪ್ರಜಾಪ್ರಭುತ್ವದ ಗೌರವವನ್ನೇ ಕುಗ್ಗಿಸುವ ಪ್ರಯತ್ನವಾಗಿದೆ ಎಂದು ಹೇಳಿದರು.

ವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮಾವಳಿಯ ನಿಯಮ ೩೪೮ರ ಪ್ರಕಾರ ೬ ತಿಂಗಳ ಕಾಲ ಸದನಕ್ಕೆ ಬಾರದಂತೆ ತಡೆಹಿಡಿದು ಅಮಾನತುಗೊಳಿಸಲಾಗಿದೆ. ಆದರೆ ಈ ನಿಯಮಗಳ ಬಗ್ಗೆ ಪೂರ್ಣ ಜ್ಞಾನವಿಲ್ಲದ ಸ್ಥಿತಿಯಲ್ಲಿ ಬಲ್ಕೀಶ್ ಬಾನು ಮಾತನಾಡುವುದು, ಓರ್ವ ಚುನಾಯಿತ ಪ್ರತಿನಿಧಿಯ ಹಕ್ಕನ್ನು ಮೊಟಕುಗೊಳಿಸುವ ಪ್ರಯತ್ನ ಮಾಡಿದ್ದಾರೆ. ಜೊತೆಗೆ ಇದಕ್ಕೆ ಕುಮ್ಮಕ್ಕು ನೀಡಿರುವ ಸಚಿವ ಮಧು ಬಂಗಾರಪ್ಪ ಹಾಗೂ ಶಾಸಕ ಬೇಳೂರು ಗೋಪಾಲಕೃಷ್ಣ ಅವರದ್ದು ಮೂರ್ಖತನದ ಪರಮಾವಧಿಯಾಗಿದೆ ಎಂದು ಕಿಡಿಕಾರಿದ್ದಾರೆ.

ಪ್ರತಿನಿಧಿತ್ವ ಎನ್ನುವುದು ಕೇವಲ ಸ್ಥಾನ ಅಥವಾ ಅಧಿಕಾರವಲ್ಲ. ಅದು ಜನರ ಆಶಯಗಳ ಪ್ರತಿಬಿಂಬವಾಗಿದೆ. ಎಲ್ಲಿ ಒಂದು ಚುನಾವಣೆಯ ಮೂಲಕ ಆಯ್ಕೆಯಾದ ಪ್ರತಿನಿಧಿಯನ್ನು ನಿರ್ಲಕ್ಷಿಸಲಾಗುತ್ತದೋ, ಅಲ್ಲಿಗೆ ಪ್ರಜಾಪ್ರಭುತ್ವದ ಮೌಲ್ಯಗಳು ನಿರ್ಲಕ್ಷಿಸಿದಂತೆ. ಇಂತಹ ಸಾಮಾನ್ಯ ಜ್ಞಾನವಿಲ್ಲದ ಹೇಳಿಕೆಗಳು ತಡೆ ಇಲ್ಲದೆ ಬಿಡುವಂತಿಲ್ಲ. ಜನಪ್ರತಿನಿಧಿಗಳ ಸ್ಥಾನಮಾನ ಹಾಗೂ ಪ್ರಜಾಪ್ರಭುತ್ವದ ಗೌರವ ಉಳಿಸಿಕೊಳ್ಳುವುದು ನನ್ನ ಮತ್ತು ಎಲ್ಲರ ಕರ್ತವ್ಯ ಆಗಿದೆ ಎಂದಿದ್ದಾರೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST