ಬೆಳಗಾವಿ :
ಉಪ ಮುಖ್ಯಮಂತ್ರಿ ಹಾಗೂ ಅಥಣಿ ಶಾಸಕ ಲಕ್ಷ್ಮಣ ಸವದಿ ಅವರು ಇದೀಗ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೇ ಮೊದಲ ಬಾರಿಗೆ ಅವರು 'ದೇಸಾಯಿ' ಚಲನಚಿತ್ರದಲ್ಲಿನ ಅತಿಥಿ ಪಾತ್ರಕ್ಕಾಗಿ ಬಣ್ಣಹಚ್ಚಿದ್ದಾರೆ.
ರವಿವಾರದಂದು ಮಹಾಲಿಂಗಪುರ ಪಟ್ಟಣದ ಗೋಕಾಕ ರಸ್ತೆಯ ಸರಕಾರಿ ಪ್ರೌಢಶಾಲೆಯ ಆವರಣದ ಕುಸ್ತಿ ಮೈದಾನದಲ್ಲಿ ದೇಸಾಯಿ ಚಲನಚಿತ್ರದ ಚಿತ್ರೀಕರಣ ನಡೆದಿದೆ. ಲಕ್ಷ್ಮಣ ಸವದಿ ಅಭಿನಯದ ದೃಶ್ಯಗಳನ್ನು ಚಿತ್ರದ ನಿರ್ದೇಶಕರಾಗಿ ನಾಗಿ ರೆಡ್ಡಿ ಅವರು ಸೆರೆಹಿಡಿದಿದ್ದಾರೆ ಬಾಗಲಕೋಟೆಯ ಮಹಾಂತೇಶ್ ಚೋಳಚಗುಡ್ಡ ಅವರ ಕಥೆ- ನಿರ್ಮಾಣದ ದೇಸಾಯಿ ಚಿತ್ರ ಉತ್ತರ ಕರ್ನಾಟಕದ ಕಥಾ ಹಂದರ ಹೊಂದಿದೆ. ಡಾ ಪ್ರವೀಣ್ ಕುಮಾರ್ (ನಾಯಕ), ರಾಜಿಯಾ (ನಾಯಕಿ)ಆಗಿದ್ದಾರೆ.
ಮಹಾಲಿಂಗೇಶ್ವರ ಜಾತ್ರೆಯ ನಿಮಿತ್ತ ಶನಿವಾರ ನಡೆದ ಕುಸ್ತಿ ಮೈದಾನದಲ್ಲಿ ದೇಸಾಯಿ ಚಿತ್ರದ ಚಿತ್ರೀಕರಣ ನಡೆದಿದೆ. ಲಕ್ಷ್ಮಣ ಸವದಿ ಅವರು ಚಿತ್ರದಲ್ಲಿ ಬರುವ ಕುಸ್ತಿ ಪಂದ್ಯಾವಳಿಯಲ್ಲಿ ವಿಜೇತ ನಾಯಕನಿಗೆ ಪ್ರಶಸ್ತಿ ಪ್ರದಾನ ಮಾಡುವ ಅತಿಥಿ ಪಾತ್ರದಲ್ಲಿ ಅಭಿನಯಿಸಿರುವುದು ಗಮನ ಸೆಳೆದಿದೆ. ಈಗಾಗಲೇ ಸವದಿ ಅವರ ಪಾತ್ರವಿರುವ ಭಾಗದ ಚಿತ್ರೀಕರಣ ಮುಗಿದಿದೆ ಎಂದು ಕತೆಗಾರ ಹಾಗೂ ನಿರ್ಮಾಪಕ ಮಹಾಂತೇಶ ಚೋಳಚಗುಡ್ಡ ತಿಳಿಸಿದ್ದಾರೆ.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.