LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಮಾನಸಿಕ ಆರೋಗ್ಯ ಕಾಯ್ದೆ ಕುರಿತು ಅರಿವು ಅಗತ್ಯ ಸತ್ರ ನ್ಯಾಯಾಧೀಶ ರೋಣ ವಾಸುದೇವ.!

 

ಚಿತ್ರದುರ್ಗ: ವಕೀಲರು ಹಾಗೂ ಅಧಿಕಾರಿಗಳು ಮಾನಸಿಕ ಆರೋಗ್ಯ ಕಾಯ್ದೆ ಕುರಿತು ಅರಿವು ಹೊಂದುವುದು ಅಗತ್ಯವಾಗಿದೆ. ಪ್ರತಿ ಕಾಯ್ದೆಗಳಿಗೂ ತನ್ನದೇ ಆದ ಮಹತ್ವವಿದೆ. ಅವುಗಳನ್ನು ಸಮಯ ಸಂದರ್ಭಕ್ಕೆ ತಕ್ಕಹಾಗೆ ಬಳಸುವುದರಿಂದ ನೊಂದವರಿಗೆ ನ್ಯಾಯ ದೊರಕಿಸಿಕೊಡಬಹುದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ರೋಣ ವಾಸುದೇವ ಹೇಳಿದರು.

ನಗರದ ಜಿಲ್ಲಾ ನ್ಯಾಯಾಲಯದ ಮಧ್ಯಸ್ಥಿಕೆ ಸಭಾಂಗಣದಲ್ಲಿ ಗುರುವಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ವತಿಯಿಂದ ಆಯೋಜಿಸಲಾದ ‘ಮನೋನ್ಯಾಯ್’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರಾಷ್ಟ್ರೀಯ ಕಾನೂನು ಸೇವಗಳ ಪ್ರಾಧಿಕಾರದ ಅಡಿಯಲ್ಲಿ ಮಾನಸಿಕ ಅಸ್ವಸ್ಥರು ಹಾಗೂ ಬೌದ್ದಿಕ ವೈಕಲ್ಯ ಹೊಂದಿರುವರಿಗೆ ಉಚಿತವಾಗಿ ಕಾನೂನು ಸಹಾಯ ಒದಗಿಸಲು ಯೋಜನೆ ರೂಪಿಸಲಾಗಿದೆ. ಇದರ ಅನ್ವಯ ನ್ಯಾಯಾಲಯವೇ ಇವರ ಹಕ್ಕುಗಳನ್ನು ರಕ್ಷಣೆ ಮಾಡುವ ಜವಬ್ದಾರಿ ಹೊಂದಿದೆ. ವೈದ್ಯರಿಂದ ಚಿಕಿತ್ಸೆ, ವಕೀಲರ ನೇಮಕ, ಪೋಷಕರಿಗೆ ಹಸ್ತಾಂತರಿಸುವುದು ಸೇರಿದಂತೆ ಎಲ್ಲ ರೀತಿಯ ಸವಲತ್ತುಗಳನ್ನು ದೊರಕಿಸಿಕೊಡುವ ಕೆಲಸವನ್ನು ನ್ಯಾಯಾಧೀಶರು ಮುತವರ್ಜಿಯಿಂದ ನಿರ್ವಹಿಸಬೇಕಾಗುತ್ತದೆ. ಇದಕ್ಕಾಗಿ ಸಂಬAಧ ಪಟ್ಟ ಇಲಾಖೆಗಳ ಅಧಿಕಾರಿಗಳ ಸಹಾಯವನ್ನು ನ್ಯಾಯಧೀಶರು ಪಡೆಯುತ್ತಾರೆ. ಮಾನಸಿಕ ಅಸ್ವಸ್ಥರು ಹಾಗೂ ಬೌದ್ದಿಕ ವೈಕಲ್ಯ ಹೊಂದಿರುವರಿಗೆ ಎಲ್ಲಾ ರೀತಿಯ ಕಾನೂನು ಬದ್ದ ಹಕ್ಕುಗಳು ಲಭಿಸುತ್ತವೆ. ಇವರನ್ನು ತಾರತಮ್ಯದಿಂದ ನೋಡುವುದು ಸಮಾನತೆ ಹಕ್ಕಿನ ಉಲ್ಲಂಘನೆಯಾಗುತ್ತದೆ ಎಂದು ನ್ಯಾಯಾಧೀಶ ರೋಣ ವಾಸುದೇವ ತಿಳಿಸಿದರು.

ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಹಾಗೂ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ವಿಜಯ್ ಮಾತನಾಡಿ, ರಾಷ್ಟಿçಯ ಕಾನೂನು ಸೇವಗಳ ಪ್ರಾಧಿಕಾರದ ಅಡಿ, ಮಾನಸಿಕ ಅಸ್ವಸ್ಥರು ಹಾಗೂ ಬೌದ್ದಿಕ ವೈಕಲ್ಯ ಹೊಂದಿರುವರಿಗೆ ಉಚಿತವಾಗಿ ಕಾನೂನು ಸಹಾಯ ಒದಗಿಸಲು 2024ರಲ್ಲಿ ಯೋಜನೆ ರೂಪಿಸಲಾಗಿದೆ. ಸರ್ವೋಚ್ಛ ನ್ಯಾಯಾಲಯದ ಎರಡನೇ ಮುಖ್ಯ ನ್ಯಾಯಾಮೂರ್ತಿಗಳು ಈ ಯೋಜನೆ ಅನುಷ್ಠಾನದ ನಿರ್ವಹಣೆ ಹಾಗೂ ಮೇಲುಸ್ತುವಾರಿ ನೋಡಿಕೊಳ್ಳುತ್ತಾರೆ. 2017 ರಲ್ಲಿ ಕೇಂದ್ರ ಸರ್ಕಾರ ವಿಕಲಚೇತನರ ಹಕ್ಕುಗಳ ರಕ್ಷಣಾ ಕಾಯ್ದೆ ಹಾಗೂ ಮಾನಸಿಕ ಆರೋಗ್ಯ ರಕ್ಷಣೆ ಕಾಯ್ದೆಗಳನ್ನು ಜಾರಿ ಮಾಡಿದೆ. ಈ ಹಿನ್ನಲೆಯಲ್ಲಿ 2015 ರಲ್ಲಿ ಜಾರಿಯಲ್ಲಿದ್ದ ಮಾನಸಿಕ ಅಸ್ವಸ್ಥರು ಹಾಗೂ ಬೌದ್ದಿಕ ವೈಕಲ್ಯ ಹೊಂದಿವರಿಗೆ ನೀಡುತ್ತಿದ್ದ ಕಾನೂನು ಸಹಾಯಗಳ ನಿಯಮಗಳನ್ನು ಪುನರ್ ರೂಪಿಸಿ ಸಂಯೋಜಿಸಲಾಗಿದೆ. ಸಂಬAಧ ಪಟ್ಟ ಇಲಾಖೆಗಳನ್ನು ಸಹ ಹೊಸ ಯೋಜನೆಯಲ್ಲಿ ಭಾಗೀದರರನ್ನಾಗಿಸಲಾಗಿದೆ ಎಂದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿಯಾದವರು ಜಿಲ್ಲಾ ಮಟ್ಟದ ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ನಿವೃತ್ತ ಜಿಲ್ಲಾ ನ್ಯಾಯಧೀಶರು, ವಕೀಲರು, ಕಾನೂನು ಸಹಾಯಕರು, ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ, ಮಕ್ಕಳ ರಕ್ಷಣಾಧಿಕಾರಿ, ಜಿಲ್ಲಾ ಮಾನಸಿಕ ಆರೋಗ್ಯಾಧಿಕಾರಿಗಳನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ. ಮಾನಸಿಕ ಅಸ್ವಸ್ಥರು ಹಾಗೂ ಬೌದ್ದಿಕ ವೈಕಲ್ಯ ಇರುವವರು ಉಚಿತ ಕಾನೂನು ಸೇವೆ ಪಡೆಯಲು ಅರ್ಹರಾಗಿರುತ್ತಾರೆ. ಸಂವಿಧಾನ 14, 21 ಹಾಗೂ 22 ವಿಧಿಗಳು ಮಾನಸಿಕ ಅಸ್ವಸ್ಥರು ಹಾಗೂ ಬೌದ್ದಿಕ ವೈಕಲ್ಯ ಹೊಂದಿದವರ ಹಕ್ಕುಗಳ ರಕ್ಷಣೆ ಬಗ್ಗೆ ತಿಳಿಸುತ್ತವೆ. ಸಂವಿಧಾನದ ವಿಧಿ 22 ಪ್ರಕಾರ ಮಾನಸಿಕ ಅಸ್ವಸ್ಥರು ಹಾಗೂ ಬೌದ್ದಿಕ ವೈಕಲ್ಯ ಹೊಂದಿವರು ಕಡ್ಡಾಯವಾಗಿ ವಕೀಲರ ಮೂಲಕವೇ ನ್ಯಾಯಾಲಯದಲ್ಲಿ ವಿಚಾರಣೆ ಹಾಜರಾಗಬೇಕು. ಇದಕ್ಕಾಗಿ ನ್ಯಾಯಾಲಯವೇ ವಕೀಲರನ್ನು ನೇಮಿಸುತ್ತದೆ. ಮಾನಸಿಕ ಅಸ್ವಸ್ಥರು ಹಾಗೂ ಬೌದ್ದಿಕ ವೈಕಲ್ಯ ಹೊಂದಿದವರ 27 ವಿವಿಧ ಹಕ್ಕುಗಳ ರಕ್ಷಣೆಯನ್ನು ಈ ಯೋಜನೆ ಮೂಲಕ ಮಾಡಲಾಗುತ್ತದೆ ಎಂದು ನ್ಯಾ.ಎಂ.ವಿಜಯ್ ಹೇಳಿದರು.

ನಿವೃತ್ತ ನ್ಯಾಯಾಧೀಶ ನಾಡಿಗ ಜಯಸ್ವಾಮಿ ಕಾಯ್ದೆಗಳು ಹಾಗೂ ಯೋಜನೆ ಕುರಿತು ಉಪನ್ಯಾಸ ನೀಡಿದರು. ಜಿಲ್ಲಾ ಅಂಗವಿಕಲ ಕಲ್ಯಾಣಧಿಕಾರಿ ವೈಶಾಲಿ.ಜೆ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸವಿತಾ ಸೇರಿದಂತೆ ಮತ್ತಿರರು ಉಪಸ್ಥಿತರಿದ್ದರು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST